ಶಿಡ್ಲಘಟ್ಟ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮನವಿ

ಶಿಡ್ಲಘಟ್ಟ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮನವಿ

ಶಿಡ್ಲಘಟ್ಟ:ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಎಬಿವಿಪಿ ಸಂಘಟನೆಯ ಆಶ್ರಯದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಶುಕ್ರವಾರ ನಗರದ ತಾಲ್ಲೂಕು ಕಚೇರಿಗೆ ತೆರಳಿದ ವಿದ್ಯಾರ್ಥಿನಿಯರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 300  ವಿದ್ಯಾರ್ಥಿನಿಯರು ವಿವಿಧ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಕಾಲೇಜಿನಲ್ಲಿ ಶೌಚಾಲಯವಿದ್ದರೂ ಬಾಗಿಲು, ಕಿಟಕಿಗಳಿಲ್ಲ, ನೀರಿನ ವ್ಯವಸ್ಥೆಯಿಲ್ಲ ಈ ಸಮಸ್ಯೆಯಿಂದಾಗಿ ತೀವ್ರ ತೊಂದರೆಯಾಗುತ್ತಿದೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟ ಪಡುವಂತಾಗಿದೆ ಎಂದು ದೂರಿದರು. […]

ಶಿಡ್ಲಘಟ್ಟ: ಅಕ್ರಮ ಮಧ್ಯ ಮಾರಾಟ ತಡೆಗಾಗಿ ಭಕ್ತರಹಳ್ಳಿ ಗ್ರಾಮಸ್ಥರಿಂದ ಅಬಕಾರಿ ಇಲಾಖೆಗೆ ಮುತ್ತಿಗೆ

ಶಿಡ್ಲಘಟ್ಟ: ಅಕ್ರಮ ಮಧ್ಯ ಮಾರಾಟ ತಡೆಗಾಗಿ ಭಕ್ತರಹಳ್ಳಿ ಗ್ರಾಮಸ್ಥರಿಂದ ಅಬಕಾರಿ ಇಲಾಖೆಗೆ ಮುತ್ತಿಗೆ

ಪ್ರತಿಭಟನೆಗೆ ತೆರಳುತ್ತಿದ್ದ ಮಹಳೆಯರ ಮೇಲೆ ಹಲ್ಲೆ ಬೆದರಿಕೆ ಶಿಡ್ಲಘಟ್ಟ: ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು ಮತ್ತು ಮಹಿಳೆಯರು ಅಬಕಾರಿ ಕಛೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಸುಮಾರು ಏಳೆಂಟು ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟವಾಗುತ್ತಿದೆ ಇದರಿಂದ 300-400 ಮಂದಿ ದಲಿತರು,ಹಿಂದುಳಿದ ವರ್ಗಗಳ ಕುಟುಂಬಗಳು ಬೀದಿಪಾಲಾಗಿದ್ದು ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಅಕ್ರಮ ಮದ್ಯಮಾರಾಟವನ್ನು ನಿಷೇಧಿಸಲು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. […]

ಗೃಹಿಣಿ ಬಾಯಿಗೆ ಬಟ್ಟೆ ಕಟ್ಟಿ ಗ್ರಾಪಂ ಸದಸ್ಯನಿಂದ ಅತ್ಯಾಚಾರ, ಕೊಲೆ ಬೆದರಿಕೆ

ಗೃಹಿಣಿ ಬಾಯಿಗೆ ಬಟ್ಟೆ ಕಟ್ಟಿ ಗ್ರಾಪಂ ಸದಸ್ಯನಿಂದ ಅತ್ಯಾಚಾರ, ಕೊಲೆ ಬೆದರಿಕೆ

ಚಿಕ್ಕಬಳ್ಳಾಪುರ: ಇಲ್ಲಿನ ತಿಮ್ಮಂಪಲ್ಲಿ ಗ್ರಾಮದ  ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಗೃಹಿಣಿಯ ಬಾಯಿಗೆ ಬಟ್ಟೆ ಕಟ್ಟಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ತಿಮ್ಮಂಪಲ್ಲಿ ಗ್ರಾಪಂ ಸದಸ್ಯ ಕೃಷ್ಣಪ್ಪ ಎಂಬಾತ ಅತ್ಯಾಚಾರ ಎಸಗಿರುವ ಆರೋಪಿ.  ಗೃಹಿಣಿಯೊಬ್ಬಳೇ ಮನೆಯಲ್ಲಿ ಇರುವುದನ್ನು ಗಮನಿಸಿದ ಈತ ಮನೆಗೆ ನುಗ್ಗಿ ಗೃಹಿಣಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಲ್ಲದೇ  ವಿಷಯ ಯಾರಿಗಾದರೂ ತಿಳಿಸಿದರೆ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಪತಿ ಮನೆಗೆ ಬಂದ ನಂತರ ಘಟನೆ ವಿವರಿಸಿದ ಮಹಿಳೆ. ಕೂಡಲೇ ಗಂಡನೊಂದಿಗೆ ತೆರಳಿ ಬಾಗೇಪಲ್ಲಿ ಪೊಲೀಸರಿಗೆ […]

ಗ್ರಾಪಂ ಮಟ್ಟದಲ್ಲಿ ಕೆರೆ ಸಂರಕ್ಷಣೆಗೆ ಸಮಿತಿ ರಚನೆಗೆ ಕ್ರಮ: ತಹಶೀಲ್ದಾರ್ ಅಜೀತ್‍ಕುಮಾರ್

ಗ್ರಾಪಂ ಮಟ್ಟದಲ್ಲಿ ಕೆರೆ ಸಂರಕ್ಷಣೆಗೆ ಸಮಿತಿ ರಚನೆಗೆ ಕ್ರಮ: ತಹಶೀಲ್ದಾರ್ ಅಜೀತ್‍ಕುಮಾರ್

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆರೆಗಳನ್ನು ಸಂರಕ್ಷಣೆ ಮಾಡಲು ಕಾವಲು ಸಮಿತಿಗಳನ್ನು ರಚಿಸಬೇಕೆಂದು ತಹಶೀಲ್ದಾರ್ ಅಜೀತ್‍ಕುಮಾರ್ ರೈ ಹೇಳಿದರು. ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃಧ್ಧಿ ಸಂಸ್ಥೆಯ ಆಶ್ರಯದಲ್ಲಿ 10 ಲಕ್ಷ ರೂಗಳ ವೆಚ್ಚದಲ್ಲಿ ಅಭಿವೃಧ್ಧಿಗೊಳಿಸಿರುವ ಕೆರೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಅಭಿವೃಧ್ಧಿಗಾಗಿ ಸರಕಾರದ ಮಾದರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸೇವಾ ಅಭಿವೃಧ್ಧಿ ಟ್ರಸ್ಟ್ ನ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವುದು […]

ಐತಿಹಾಸಿಕ ತಾಲೂಕಾ ಕಚೇರಿ ನವೀಕರಣ: ಮಧುವನಗಿತ್ತಿಯಂತೆ ಶೃಂಗಾರಗೊಂಡ ಕಚೇರಿ,ಉದ್ಘಾಟನೆಗೆ ಕ್ಷಣಗಣನೆ ಆರಂಭ

ಐತಿಹಾಸಿಕ ತಾಲೂಕಾ ಕಚೇರಿ ನವೀಕರಣ: ಮಧುವನಗಿತ್ತಿಯಂತೆ ಶೃಂಗಾರಗೊಂಡ ಕಚೇರಿ,ಉದ್ಘಾಟನೆಗೆ ಕ್ಷಣಗಣನೆ ಆರಂಭ

ಶಿಡ್ಲಘಟ್ಟ: ಇಲ್ಲಿನ ಐತಿಹಾಸಿಕ ಹಳೇ ತಾಲೂಕು ಕಚೇರಿ ಕಟ್ಟಡದ ಶತಮಾನೋತ್ಸವಕ್ಕೆ ಕ್ಷಣಗಣೆ ಆರಂಭವಾಗಿದ್ದು, ಕಚೇರಿಯು ಮಧುವನಗಿತ್ತಿಯಂತೆ  ಶೃಂಗಾರಗೊಂಡಿದೆ.  ಜುಲೈ01 ರಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕೇಂದ್ರ ಬಿಂದುವಾಗಿರುವ ಹಳೇ ತಾಲೂಕು ಕಚೇರಿ ಗತವೈಭವನ್ನು ಮರಕಳಿಸಲು ತಹಶೀಲ್ದಾರ್ ಅಜೀತ್‍ಕುಮಾರ್ ಆಸಕ್ತಿವಹಿಸಿ  ಹಳೇ ತಾಲೂಕು ಕಚೇರಿ ಶನಿವಾರದಿಂದ  ಕಂದಾಯ ಭವನವಾಗಿ ಕಾರ್ಯನಿರ್ವಹಿಸಲಿದೆ ನಗರದ ವಿವಿಧಡೆ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಿಗರ ಮತ್ತು ರಾಜಸ್ವ ನಿರೀಕ್ಷಕರಿಗೆ ಪ್ರತ್ಯೇಕವಾಗಿ ಕೊಠಡಿಗಳ ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದ ಸಾರ್ವಜನಿಕರು […]

ರೈತರ ಮೇಲೆ ಹಲ್ಲೆ ಖಂಡಿಸಿ, ಕಾಂಗ್ರೆಸ್‍ ಕಾರ್ಯಕರ್ತರಿಂದ ಪ್ರತಿಭಟನೆ

ರೈತರ ಮೇಲೆ ಹಲ್ಲೆ ಖಂಡಿಸಿ, ಕಾಂಗ್ರೆಸ್‍ ಕಾರ್ಯಕರ್ತರಿಂದ ಪ್ರತಿಭಟನೆ

ಶಿಡ್ಲಘಟ್ಟ: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ಗುಂಡು ಹಾರಿಸಿದ ಮಧ್ಯಪ್ರದೇಶದ ಸರಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತರಿಗೆ ನ್ಯಾಯ ಒದಗಿಸಲು ತೆರಳಿದ್ದ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ದೇಶದ ಬೆನ್ನೆಲುಬುಗಳಾದ ರೈತರು ಹಗಲಿರುಳು ಬೆವರು ಸುರಿಸಿ ದುಡಿದು ಆಹಾರ ಉತ್ಪಾದಿಸುವ ಮೂಲಕ ಪ್ರತಿಯೊಬ್ಬರ ಪಾಲಿಗೆ ಅನ್ನದಾತರಾಗಿದ್ದಾರೆ ಅವರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಹೋರಾಟ […]

ಅಪರಿಚಿತ ವಾಹನ ಡಿಕ್ಕಿ, ಬೈಕ ಸವಾರರು ಸ್ಥಳದಲ್ಲೆ ಸಾವು

ಅಪರಿಚಿತ ವಾಹನ ಡಿಕ್ಕಿ, ಬೈಕ ಸವಾರರು ಸ್ಥಳದಲ್ಲೆ ಸಾವು

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ನಗರದ ಹೊರವಲಯದ ಗಂಗೋತ್ರಿ ಪೆಟ್ಟೋಲ್ ಬಂಕ್ ಬಳಿ ಅಪರಿಚಿತ ವಾಹನವೊಂದು ಬೈಕ್‍ಗೆ ಬಡಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಮೂಲತ ದೇವರೆಡ್ಡಿಪಲ್ಲಿ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ (60), ವೆಂಕಟರಾಯಪ್ಪ (55) ಮೃತ ದುರ್ದೈವಿಗಳು ತಡರಾತ್ರಿ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ  ಗ್ರಾಮಕ್ಕೆ ಹೋಗುತ್ತಿರುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಬಗ್ಗೆ  ಬಾಗೇಪಲ್ಲಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. Munna Bagwanhttp://udayanadu.com

ಆರ್ಥಿಕ ಅಭಿವೃದ್ಧಿ ಹೊಂದಲು ಬ್ಯಾಂಕ್‍ಗಳು ಸಹಾಯಕವಾಗಿವೆ: ಬಸವರಾಜ

ಶಿಡ್ಲಘಟ್ಟ: ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರಕಾರ ಬ್ಯಾಂಕ್ ಮತ್ತು ನಿಗಮಗಳಿಂದ ಸಹಾಯಧನ, ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಡಿ.ದೇವರಾಜ್ ಅರಸು ಹಿಂದುಳಿದ ಅಭಿವೃಧ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಬಸವರಾಜ ಹೇಳಿದರು. ನಗರದ ಸ್ತ್ರೀಶಕ್ತಿ ಭವನದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃಧ್ಧಿ ಕೇಂದ್ರ(ಸಿಡಾಕ್) ಸಂಸ್ಥೆ ಧಾರವಾಡ್ ಹಾಗೂ ಡಿ.ದೇವರಾಜ್ ಅರಸು ಹಿಂದುಳಿದ ಅಭಿವೃಧ್ಧಿ ನಿಗಮದ ವತಿಯಿಂದ  ನಡೆದ 3 ದಿನಗಳ ಉದ್ಯಮಶೀಲತಾ ಅಭಿವೃಧ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಥಿಕ ಅಭಿವೃದ್ಧಿ ಹೊಂದಲು ಬ್ಯಾಂಕ್‍ಗಳು ತುಂಬ ಸಹಾಯಕವಾಗಿವೆ ಮತ್ತು ನಿಗಮದ […]

ಕೌಶಲ್ಯ ಅಭಿವೃಧ್ಧಿ ಯೋಜನೆ ಪಡೆಯಲು ನೊಂದಣಿ ಕಡ್ಡಾಯ: ತಹಸೀಲ್ದಾರ್ ಅಜೀತ್‍ಕುಮಾರ್

ಕೌಶಲ್ಯ ಅಭಿವೃಧ್ಧಿ ಯೋಜನೆ ಪಡೆಯಲು ನೊಂದಣಿ ಕಡ್ಡಾಯ: ತಹಸೀಲ್ದಾರ್ ಅಜೀತ್‍ಕುಮಾರ್

ಶಿಡ್ಲಘಟ್ಟ:  ನಿರುದ್ಯೋಗವನ್ನು ಹೋಗಲಾಡಿಸಲು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ  ಮುಖ್ಯಮಂತ್ರಿ  ಕೌಶಲ್ಯ ಅಭಿವೃಧ್ಧಿ ಯೋಜನೆ ಜಾರಿಗೆ ತಂದಿದ್ದು, ನಿರುದ್ಯೋಗ  ಯುವಕ,ಯುವತಿಯರು ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಅಜೀತ್‍ಕುಮಾರ್ ರೈ ತಿಳಿಸಿದರು. ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ 18 ರಿಂದ 35 ವರ್ಷದೊಳಗಿನ ಎಲ್ಲಾ ನಿರುದ್ಯೋಗಿ ಯುವ ಜನತೆ ತಮ್ಮ ವಿವರಗಳನ್ನು ನೊಂದಾಯಿಸಿಕೊಳ್ಳಲು ತಾಲೂಕು ಕಚೇರಿಯಲ್ಲಿ ಮೇ 25 ವರಗೆ ನೊಂದಣಿ ಶಿಬಿರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. Munna Bagwanhttp://udayanadu.com

ಶಿಡ್ಲಘಟ್ಟ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ಹಾನಿ

ಶಿಡ್ಲಘಟ್ಟ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ಹಾನಿ

ಶಿಡ್ಲಘಟ್ಟ: ತಾಲೂಕಿನಾದ್ಯಂತ  ಗುರುವಾರ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಬಹುತೇಕ  ಬೆಳೆಗಳು ನೆಲಕಚ್ಚಿದ್ದು ಮರ ಮತ್ತು ಮನೆಗಳು ಧರೆಗುರಿಳಿ ಕೋಟ್ಯಾಂತರ ರೂ ನಷ್ಟವಾಗಿದೆ. ತಾಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಂದಗಾನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಸೀಮೆಂಟ್ ಶೀಟ್‍ಗಳು ನೆಲಕ್ಕುರುಳಿದ್ದು ಯಾವುದೇ ಪ್ರಾಣ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ತಾಲೂಕಿನ ಬಶೆಟ್ಟಹಳ್ಳಿ,ಸಾದಲಿ ಹೋಬಳಿಯ ದಿಬ್ಬೂರಹಳ್ಳಿ,ದ್ಯಾವರಹಳ್ಳಿ,ಆನೆಮಡಗು,ವಲಸೇನಹಳ್ಳಿ ಮತ್ತಿತರರ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ ಸಹಿತ ಸುರಿದ ಮಳೆಯಿಂದ  ಪಾಲಿಹೌಸ್‍ನ  25 ಎಕರೆ ತೋಟಗಾರಿಕೆ ಬೆಳೆ, 32 ಹೆಕ್ಟೇರ್ ಪ್ರದೇಶದಲ್ಲಿ […]