ಶಿಡ್ಲಘಟ್ಟ: ಮೇ 20ರಂದು ಬೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ

ಶಿಡ್ಲಘಟ್ಟ: ಮೇ 20ರಂದು ಬೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ

ಶಿಡ್ಲಘಟ್ಟ: ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಲು ನಗರದ ಬೆಸ್ಕಾಂ ಕಚೇರಿಯಲ್ಲಿ ಮೇ 20 ರಿಂದ ಪ್ರತಿ ತಿಂಗಳ ಕೊನೆಯ ಶನಿವಾರ ಮಧ್ಯಾಹ್ನ 3 ರಿಂದ  5 ಗಂಟೆ ವರೆಗೆ ಗ್ರಾಹಕ ಸಂವಾದ ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಲಿಖಿತ ರೂಪದಲ್ಲಿ  ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಬೆಸ್ಕಾಂ ಇಲಾಖೆಯ ಎಇಇ ಅನ್ಸರ್‍ಬಾಷಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Munna Bagwanhttp://udayanadu.com

ದುಷ್ಕರ್ಮಿಗಳಿಂದ ರಾಸಾಯನಿಕ ವಸ್ತು ಸಿಂಪಡಣೆ: ದ್ರಾಕ್ಷಿ ತೋಟ ನಾಶ

ದುಷ್ಕರ್ಮಿಗಳಿಂದ ರಾಸಾಯನಿಕ ವಸ್ತು ಸಿಂಪಡಣೆ: ದ್ರಾಕ್ಷಿ ತೋಟ ನಾಶ

ಶಿಡ್ಲಘಟ್ಟ: ತಾಲೂಕಿನ ಅರಳಹಳ್ಳಿಯ ರೈತ ವೆಂಕಟೇಶಪ್ಪ ಅವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿ ದುಷ್ಕರ್ಮಿಗಳು   ರಾಸಾಯನಿಕವನ್ನು ಸಿಂಪಡಿಸಿದ್ದು 100ಕ್ಕೂ ಅಧಿಕ  ದ್ರಾಕ್ಷಿ ಗಿಡಗಳು  ನಾಶವಾಗಿವೆ ಇದರಿಂದ  ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ರೈತ  ಕಂಗಾಲಾಗಿದ್ದಾನೆ. ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಅರಳಹಳ್ಳಿಯ ರೈತ ಎಚ್.ಎನ್.ವೆಂಕಟೇಶಪ್ಪ ಅವರಿಗೆ ಸೇರಿದ  ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ದಿಲ್ ಖುಷ್ ತಳಿಯ 500 ದ್ರಾಕ್ಷಿಯ ಸಸಿಗಳನ್ನು ನಾಟಿ ಮಾಡಿದ್ದು ದುಷ್ಕರ್ಮಿಗಳು ಕಳೆ ನಾಶಕ್ಕೆ ಬಳಸುವ ರಾಸಾಯನಿಕವನ್ನು ಗಿಡಗಳಿಗೆ ಸಿಂಪಡಿಸಿದ್ದರಿಂದ  ಎಲೆಗಳು ಒಣಗಿ ಕರಕಲಾಗಿವೆ. […]

ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆ: ಎಂ ರಾಜಣ್ಣ

ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆ: ಎಂ ರಾಜಣ್ಣ

ಶಿಡ್ಲಘಟ್ಟ: ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಮತ್ತು ನಾಗರಿಕರ ಅನುಕೂಲಕ್ಕಾಗಿ ಶಿಡ್ಲಘಟ್ಟ-ಬೆಂಗಳೂರು ಮಾರ್ಗದಲ್ಲಿ ಸಮರ್ಪಕವಾಗಿ  ಬಸ್ಸಿನ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಶಾಸಕ ಎಂ.ರಾಜಣ್ಣ ಹೇಳಿದರು. ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರ 85 ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದಲ್ಲಿ ಜೆ.ಡಿ.ಎಸ್ ಕಾರ್ಯಕರ್ತರೊಂದಿಗೆ ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿ ಅಂಧ ಮಕ್ಕಳಿಗೆ ಕೇಕ್ ನೀಡಿ ಸಂಭ್ರಮ […]

ಮೇ 21ರಂದು 101 ಸಾಮೂಹಿಕ ವಿವಾಹ

ಮೇ 21ರಂದು 101 ಸಾಮೂಹಿಕ ವಿವಾಹ

ಶಿಡ್ಲಘಟ್ಟ: ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರ 85 ನೇ ಹುಟ್ಟು ಹಬ್ಬದ ನಿಮಿತ್ತ  ತಾಲೂಕಿನ ಚಿಕ್ಕದಾಸರಹಳ್ಳಿಯ  ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ  ಮೇ 21 ಭಾನುವಾರ ದಂದು ಉಚಿತ 101 ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು. ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲೂರಿನ ರವಿಕುಮಾರ ಸಾರಥ್ಯದಲ್ಲಿ ಜೆ.ಡಿ.ಎಸ್ ಪಕ್ಷದಿಂದ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖಂಡರು-ಕಾರ್ಯಕರ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ […]