ಯುವಕರಲ್ಲಿ ಕ್ರೀಯಾ ಶೀಲತೆ ಅವಶ್ಯ: ಕರೀಕೆರೆ ನಾಗರಾಜು

ಯುವಕರಲ್ಲಿ ಕ್ರೀಯಾ ಶೀಲತೆ ಅವಶ್ಯ: ಕರೀಕೆರೆ ನಾಗರಾಜು

ಚಳ್ಳಕೆರೆ: ಮಡಿವಾಳ ಜನಾಂಗಕ್ಕೆ ಈ ಕಸುಬನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ವ್ಯವಸ್ಥೆಯಿಲ್ಲ. ಸಮುದಾಯದ ಅಭಿವದ್ದಿಗೆ ಜನಾಂಗದ ಯುವಕರಲ್ಲಿ ಕ್ರಿಯಾಶೀಲತೆಯನ್ನು ಅವಶ್ಯವಿದೆ ಎಂದು ಮಡಿವಾಳ ಯುವಕ ಸಂಘದ ಅಧ್ಯಕ್ಷ ಕರೀಕೆರೆ ನಾಗರಾಜು ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು,  ಹಲವಾರು ದಶಕಗಳಿಂದ ತಾಲ್ಲೂಕಿನ ಮಡಿವಾಳರು ತಮ್ಮ ಮೂಲ ಕುಲಕಸುಬನ್ನು ನಡೆಸಿಕೊಂಡು ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹಲವಾರು ಸಮಸ್ಯೆಗಳಲ್ಲಿ ಸಿಲುಕಿದ್ದು, ಇದರಿಂದ ಹೊರ ಬರಲು ಚಿಂತನೆ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾವೇಶ ನಡೆಸಿ […]

ಕ್ರುಸರ್ ಪಲ್ಟಿ ಓರ್ವ ಸಾವು, ನಾಲ್ವರಿಗೆ ಗಾಯ

ಕ್ರುಸರ್ ಪಲ್ಟಿ ಓರ್ವ ಸಾವು, ನಾಲ್ವರಿಗೆ ಗಾಯ

ಚೆಳ್ಳಕೆರೆ: ತಾಲೂಕಿನ ಹೆಗ್ಗೆರೆ ಗೆಟ್ ಬಳಿ ಕ್ರುಸರ್ ಪಲ್ಟಿಯಾದ ಪರಿಣಾಮ ಒಬ್ಬರು ಸಾವನ್ನಪ್ಪಿ, ನಾಲ್ವರಿಗೆ ಸಣ್ಣ ಪುಟ್ಟ ಗಾಯವಾದ ಘಟನೆ  ನಡೆದಿದೆ. ಶಂಕರ್ ಮೂರ್ತಿ(೬೦) ಮೃತ ದುರ್ದೈವಿ,  ಸಿದ್ದಾಪುರದಿಂದ ಮದುವೆ ಸಮಾರಂಭ ಮುಗಿಸಿಕೊಂಡು ಹೊಸದುರ್ಗದ ಗುಡ್ಡದ ನೆರಳುಕೆರೆಗೆ ಹೋಗುತ್ತಿರುವಾಗ ಘಟನೆ ಸಂಭವಿಸಿದೆ. ಗಾಯಾಳುಗಳನ್ನು  ಚೆಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಚೆಳ್ಳೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖಾ ಕಾರ್ಯ ಕೈಗೊಂಡಿದ್ದಾರೆ.

ಹಾವು ಕಡಿದು ನಾಲ್ಕು ವರ್ಷದ ಬಾಲಕ ಸಾವು

ಹಾವು ಕಡಿದು ನಾಲ್ಕು ವರ್ಷದ ಬಾಲಕ ಸಾವು

ಚೆಳ್ಳಕೆರೆ:  ಹಿರೆಮಧುರೆ ಸಮೀಪದ ಉಪ್ಪಾರಟ್ಟಿ ಗ್ರಾಮದಲ್ಲಿ  ಹಾವು ಕಡಿದು  ಬಾಲಕ ಸಾವನ್ನಪಿರುವ ಘಟನೆ ರವಿವಾರ ನೆಡದಿದೆ. ಹರ್ಷ( ೪) ಮೃತ ಬಾಲಕ, ಮನೆಯ ಹಿಂದೆ ಆಟವಾಡುತ್ತಿರುವಾಗ ಘಟನೆ ಸಂಭವಿಸಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಸೇರಿಸುವ ಮಾರ್ಗ ಮಧ್ಯೆ ಬಾಲಕ ಮೃತ ಪಟ್ಟಿದ್ದಾನೆ.  ಸರಿಯಾದ ಸಮಯಕ್ಕೆ  ತುರ್ತುವಾಹನ ಸಿಗದಿದ್ದರಿಂದ ಮಗು ಸಾವಿಗೆ ಕಾರಣ ಎಂದು  ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಚೆಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 11 12 13