ಚಳ್ಳಕೆರೆ: ನೂರಕ್ಕೂ ಹೆಚ್ಚು ಮಹಿಳೆಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಚಳ್ಳಕೆರೆ: ನೂರಕ್ಕೂ ಹೆಚ್ಚು ಮಹಿಳೆಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಚಳ್ಳಕೆರೆ : ಇಲ್ಲಿನ ಶಾಸಕ ಭವನದಲ್ಲಿ ಜಿಲ್ಲಾ ಮಹಿಳಾ ಘಟಕ ಉಪಾಧ್ಯಕಷೆ ಭಾಗಮ್ಮ ಅವರ ನೇತೃತ್ವದಲ್ಲಿ ಗಾಂಧಿನಗರ ಹಾಗೂ ಅಂಬೇಡ್ಕರ್ ನಗರದ ಮುಸ್ಲಿಂ ಮಹಿಳೆಯರು ಸೇರಿದಂತೆ ವಿವಿಧ ಸಮುದಾಯದ 100ಕ್ಕೂ ಹೆಚ್ಚು ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಅಲ್ಪಸಂಖ್ಯಾತ, ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಹತ್ತು ಹಲವು ಭಾಗ್ಯಗಳನ್ನು ಜಾರಿಗೆ ತಂದು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ನೀವು ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ […]

ಚಳ್ಳಕೆರೆ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ, ವ್ಯಕ್ತಿ ಸಾವು

ಚಳ್ಳಕೆರೆ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ, ವ್ಯಕ್ತಿ ಸಾವು

ಚಳ್ಳಕೆರೆ: ತಾಲ್ಲೂಕಿನ ಕುರಿಡಿಹಳ್ಳಿ ಲಾಂಬಾಣಿ ಹಟ್ಟಿ ಅರಣ್ಯ ಪ್ರದೇಶ ಹತ್ತಿರ ಬೈಕಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.  ಮೃತ ಯವಕ ಚಳ್ಳಕೆರೆ ತಾಲೂಕಿನ  ಚಿತ್ರಯ್ಯನಹಟ್ಟಿ ಗ್ರಾಮದ ಪಾಲಯ್ಯ (35) ಎಂದು ತಿಳಿದು ಬಂದಿದೆ. ಚಳ್ಳಕೆರೆ ಕಡೆಯಿಂದ ದ್ವಿಚಕ್ರವಾಹನದಲ್ಲಿ ಚಿತ್ರದುರ್ಗಕ್ಕೆ ಹೋಗುತ್ತಿದ್ದಾಗ ಅರಣ್ಯ ಪ್ರದೇಶದ ಹತ್ತಿರ ಲಾರಿ  ಡಿಕ್ಕಿ ಹೊಡೆದಿದೆ. ಅಪಘಾತ ಸ್ಥಳದಿಂದ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿ  ಬಿಟ್ಟು  ಪರಾರಿಯಾಗಿದ್ದಾನೆ. ಚಳ್ಳಕೆರೆ ಗ್ರಾಮಾಂತರ  ಪೋಲಿಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  Views: 436

ಕೆಪಿಸಿಸಿ ಎಸ್ ಟಿ ಘಟಕದ ಕಾರ್ಯದರ್ಶಿಯಾಗಿ ಸಿ.ಟಿ. ರಾಘವೇಂದ್ರ ನೇಮಕ

ಕೆಪಿಸಿಸಿ ಎಸ್ ಟಿ ಘಟಕದ ಕಾರ್ಯದರ್ಶಿಯಾಗಿ ಸಿ.ಟಿ. ರಾಘವೇಂದ್ರ ನೇಮಕ

ಜಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ   ಪರಿಶಿಷ್ಟ ಪಂಗಡ ಘಟಕದ ಕಾರ್ಯದರ್ಶಿಯನ್ನಾಗಿ ಸಿ.ಟಿ. ರಾಘವೇಂದ್ರ   ಅವರನ್ನು ನೇಮಕಮಾಡಿ ಕೆಪಿಸಿಸಿ ಎಸ್.ಟಿ ಘಟಕದ  ಅಧ್ಯಕ್ಷ ಕೆ.ಪಿ. ಪಾಲಯ್ಯ ಅವರು ಆದೇಶ ಹೊರಡಿಸಿದ್ದಾರೆ. ಇಂದು ಜಗಳೂರಿನಲ್ಲಿ  ಸಿ.ಟಿ. ರಾಘವೇಂದ್ರ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿ ಮಾತನಾಡಿದ ಕೆಪಿಸಿಸಿ ಎಸ್.ಟಿ ಘಟಕದ  ಅಧ್ಯಕ್ಷ ಕೆ.ಪಿ. ಪಾಲಯ್ಯ ಅವರು, ರಾಜ್ಯ ಕಾಂಗ್ರೆಸ್ ಸಮಿತಿಯ ಎಸ್.ಟಿ ವಿಭಾಗದ ಮಾರ್ಗದರ್ಶನದಲ್ಲಿ ಮತ್ತು ಜಿಲ್ಲಾ ಸ್ಥಳಿಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಸಕ್ರೀಯವಾಗಿ ಕಾರ್ಯೋನ್ಮುಖರಾಗಬೇಕೆ ಎಂದು […]

ಚಳ್ಳಕೆರೆ: ಪ್ರತಿಭಟನೆ ಹಿಂಪಡೆಯುವಂತೆ ಶಾಸಕ ರಘುಮೂರ್ತಿ ಕಾರ್ಮಿಕರಲ್ಲಿ ಮನವಿ

ಚಳ್ಳಕೆರೆ: ಪ್ರತಿಭಟನೆ ಹಿಂಪಡೆಯುವಂತೆ ಶಾಸಕ ರಘುಮೂರ್ತಿ ಕಾರ್ಮಿಕರಲ್ಲಿ ಮನವಿ

ಚಳ್ಳಕೆರೆ: ಸರ್ಕಾರದ ಹಂತದ ಕ್ಯಾಬಿನೆಟ್‍ನಲ್ಲಿ ತಮ್ಮ ಜಾಗದ ಸಂಬಂಧಿಸಿದ ಕಡತಗಳ ಪರೀಶಿಲನೆ ನಡೆಯುತ್ತಿದೆ, ಆದ್ದರಿಂದ ಸ್ವಲ್ಪ ಕಾಲ ವಿಳಂಬವಾಗಿದೆ ನಿಮ್ಮೊಂದಿಗೆ ನಾವಿದ್ದೇವೆ. ಯಾವುದೇ ಕಾರಣಕ್ಕೆ ದೃತಿಗೆಡುವುದು ಬೇಡ. ಎಲ್ಲಾರು ಸೇರಿ ತಮ್ಮ ಹಕ್ಕುಗಳನ್ನು ಪಡೆಯೋಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಶಾಸಕರ ಭವನದ ಆವರಣದಲ್ಲಿ ಡಿ,11ರಿಂದ ಕೂಲಿ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಮಾತನಾಡಿ, ಕಾರ್ಮಿಕರು ಎರಡು ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಕಾಲದ ಧರಣಿಯನ್ನು ಹಿಂಪಡೆಯಂತೆ ಶಾಸಕ ಟಿ.ರಘುಮೂರ್ತಿ ಮನಹೊಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಹೇಳಿದರು.  […]

ಚಳ್ಳಕೆರೆ: ಎರಡು ಆನೆಗಳು ಪ್ರತ್ಯಕ್ಷ, ಆತಂಕದಲ್ಲಿ ಜನರು

ಚಳ್ಳಕೆರೆ: ಎರಡು ಆನೆಗಳು ಪ್ರತ್ಯಕ್ಷ, ಆತಂಕದಲ್ಲಿ ಜನರು

ಚಳ್ಳಕೆರೆ:ತಾಲ್ಲೂಕಿನ ತಳಕು ಹೋಬಳಿಯ ಕರೆಯಗಳಹಳ್ಳಿ ಕೆರೆಯಲ್ಲಿ ಇಂದು ಮುಂಜಾನೆ ಎರಡು ಆನೆಗಳು ಕಾಣಿಸಿಕೊಂಡಿದ್ದು ಸುತ್ತು ಮುತ್ತಲಿನ ಜನ ಆಂತಕಕ್ಕಿಡಾಗಿದ್ದಾರೆ. ಎರಡು ಆನೆಗಳ ದಾಳಿಗೆ ಮೊಳಕಾಲ್ಮೂರು ಮತ್ತು ಆಂಧ್ರ  ಗಡಿಯಲ್ಲಿರುವ ರಾಯ್ ದುರ್ಗ ತಾಲ್ಲೂಕಿನ ಬೆಳಗುಪ್ಪ ಗ್ರಾಮದ ಅನೆಕಹಾಳ್ ಮತ್ತು ಮರಡಿ ಗ್ರಾಮದಲ್ಲಿ ಆನೆ ದಾಳಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಕರ್ಣಾಟಕ ಗಡಿ ಗ್ರಾಮಗಳಾದ ನಾಗ ಸಮುದ್ರ ಹುಚ್ಚಿಂಗಿದುರ್ಗ ಬಾಂಡ್ರವಿ‌ ಅರಣ್ಯ ಪ್ರದೇಶದಲ್ಲಿ ಅನೆಗಳು ಕಾಣಿಸಿಕೊಂಡಿವೆ. ಕಳೆದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಳ ದಲ್ಲಿ ಕಾಣಿಸಿಕೊಂಡಿದ್ದು ತುಮಕೂರು ಕಡೆಗೆ […]

ಚಳ್ಳಕೆರೆ: ವಿಶ್ವ ವಿಕಲಚೇತನರ ದಿನಾಚರಣೆ

ಚಳ್ಳಕೆರೆ: ವಿಶ್ವ ವಿಕಲಚೇತನರ ದಿನಾಚರಣೆ

ಚಳ್ಳಕೆರೆ: ಅಂಗವಿಕಲತೆ ದೇವರು ನೀಡಿದ ಶಾಪವಲ್ಲ, ಅದು ಸೃಷ್ಠಿಯ ವೈಪರಿತ್ಯ  ಎಂದು ಇಲ್ಲಿನ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು. ನಗರದ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿಶ್ವವಿಕಲ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಮಾತನಾಡಿ, ವಿಕಲಚೇತನ ವಿದ್ಯಾರ್ಥಿಗಳನ್ನು ಕಂಡು ಅವರ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರದ ನಿಬಂಧನೆಗಳಾನುಸಾರ ಸೌಲಭ್ಯ ನೀಡಲಾಗಿದೆ ಎಂದರು. ಶಿಕ್ಷಣ ಇಲಾಖೆ ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿರುವುದು ಹರ್ಷ ತಂದಿದೆ ಎಂದರು. […]

ಖಾಸಗಿ ಬಸ್ – ದ್ವಿಚಕ್ರ ವಾಹನ ಮಧ್ಯೆ ಅಫಘಾತ: ಮಹಿಳೆ ಸಾವು

ಖಾಸಗಿ ಬಸ್ – ದ್ವಿಚಕ್ರ ವಾಹನ ಮಧ್ಯೆ ಅಫಘಾತ: ಮಹಿಳೆ ಸಾವು

  ಚಳ್ಳಕೆರೆ: ಖಾಸಗಿ ಬಸ್ – ದ್ವಿಚಕ್ರ ವಾಹನ ಮಧ್ಯೆ ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಮೇಲಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಡೆಕುಂಟೆ ಗ್ರಾಮದ ಬಳಿ ಮಂಗಳವಾರ ನಡೆದಿದೆ.  ಸರೋಜಮ್ಮ(45) ಮೃತಪಟ್ಟ ಮಹಿಳೆ,  ಗಂಭೀರಗಾಯಗೊಂಡ ಮುಡಲಗಿರಿಯಪ್ಪ (50) ಅವರನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.   ಬೆಳಗೆರೆ ಗ್ರಾಮದವರಾದ ಮುಡಲಗೀರಿಯಪ್ಪ ಹಾಗು ಸರೋಜಮ್ಮ ಕಾಪರಹಳ್ಳಿಯಿಂದ ಬೆಳಗೆರೆ ಕಡೆ ಹೋಗುತ್ತಿದ್ದಾಗೆ ಬೆಳಗೆರೆ ಕಡೆಯಿಂದ ಚಳ್ಳಕೆರೆ ಮಾರ್ಗವಾಗಿ ಖಾಸಗಿ ಬಸ್ಸು ಬರುತ್ತಿದ್ದಾಗ ಜಡೆಕೆಂಟೆ ತಿರುವು ಹತ್ತಿರ ಮುಖಾ ಮುಖಿ […]

ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಸ್ಪರ್ಧೆ: ನಟ ಶಶಿಕುಮಾರ

ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಸ್ಪರ್ಧೆ: ನಟ ಶಶಿಕುಮಾರ

  ಚಳ್ಳಕೆರೆ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವ ಉದ್ದೇಶವಿದೆ, ಆದರೆ ಯಾವ ಪಕ್ಷ ಎಂಬುದನ್ನು ಇನ್ನೂ ನಿರ್ಧಾವಾಗಿಲ್ಲಾ ಎಂದು ಮಾಜಿ ಸಂಸದ ಹಾಗೂ ಚಲನಚಿತ್ರ ನಟ ಶಶಿಕುಮಾರ್ ಹೇಳಿದರು. ತಾಲ್ಲೂಕಿನ ಗುರು ತಿಪ್ಪೆರುದ್ರಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಭೇಟ್ಟಿ ನೀಡಿ ಅವರು ಮಾತನಾಡಿದರು. ಈ ದೇವಸ್ಥಾನಕ್ಕೆ ನಮ್ಮ ತಂದೆಯವರು ಬರುತ್ತಿದ್ದರು .ಆದರೆ ಇಂದು ನೀ ಹೋಗಿ ಬಾ ಎಂದು ಹೇಳಿದ್ದಕೆ ನಾನು ಬಂದಿದ್ದೇನೆ  ಬರುವ ವಿಚಾರ ತಿಳಿದ ಮಾಜಿ ಶಾಸಕರಾದ […]

ಚಿತ್ರದುರ್ಗ: ಟೈಯರ್ ಸಿಡಿದು ಮರಕ್ಕೆ ಲಾರಿ ಡಿಕ್ಕಿ…ಚಾಲಕನನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಚಿತ್ರದುರ್ಗ: ಟೈಯರ್ ಸಿಡಿದು ಮರಕ್ಕೆ ಲಾರಿ ಡಿಕ್ಕಿ…ಚಾಲಕನನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಚಿತ್ರದುರ್ಗ:  ಕಲ್ಲಹಳ್ಳಿ ಬಳಿ  ಟೈಯರ್ ಸಿಡಿದು ಖಾಸಗಿ ಬಸ್ ಗೆ ಲಾರಿ ಡಿಕ್ಕಿ ಹೊಡೆದು  ನಂತರ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಲಾರಿಯಲ್ಲಿಯೇ ಸಿಲುಕಿಕೊಂಡಿರುವ ಘಟನೆ ರವಿವಾರ ನಡೆದಿದೆ.  ಚಿತ್ರದುರ್ಗದಿಂದ ಚಳ್ಳಕೆರೆ ಕಡೆಗೆ ಹೋಗುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಲಾರಿ ಚಾಲಕ ಒಳಗೆ ಸಿಲುಕಿಕೊಂಡು ನರಳುತ್ತಿದ್ದನು.  ಚಾಲಕನನ್ನು ಹೊರೆತೆಗೆಯಲು  ಅಗ್ನಿಶಾಮಕ ಸಿಬ್ಬಂದಿದವರು  ಹರಸಾಹಸಪಟ್ಟು ಹೊರತೆಗೆದು  ಚಾಲಕನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ  ರಸ್ತೆ ಜಾಮವಾಗಿತ್ತು. ಸ್ಥಳಕ್ಕೆ […]

ಚಳ್ಳಕೆರೆ: ರೈತರಿಂದ ಶೇಂಗಾ ಖರೀದಿಸಲು ಮುಂದಾಗುವಂತೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ತಾಕೀತು

ಚಳ್ಳಕೆರೆ: ರೈತರಿಂದ ಶೇಂಗಾ ಖರೀದಿಸಲು ಮುಂದಾಗುವಂತೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ತಾಕೀತು

ಚಳ್ಳಕೆರೆ: ಸಂಕಷ್ಟದಲ್ಲಿರುವ ತಾಲೂಕಿನ ರೈತರನ್ನು  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವರ್ತಕರು ಹಾಗೂ ಕರ್ನಾಟಕ ಎಣ್ಣೆ ಬೀಜ ಮಾರಾಟ ಸಹಕಾರ ಸಂಘಗಳು ಇಚ್ಛಾಶಕ್ತಿ ಹಾಗೂ ಸಾಮಾಜಿಕ ಕಳಕಳಿಯಿಂದ ಸೋಮವಾರದಿಂದಲೇ ರೈತರಿಂದ ಶೇಂಗಾ ಖರೀದಿಸಲು ಮುಂದಾಗುವಂತೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ತಾಕೀತು ಮಾಡಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿ.ಆರ್.ಶಿವಣ್ಣ ಇವರ ಅಧ್ಯಕ್ಷತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಣದಲ್ಲಿ ಕಂದಾಯ, ಕೃಷಿ ಇಲಾಖೆ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ, ದಲ್ಲಾಲಿ ಮಂಡಿ ವರ್ತಕರು, ಕರ್ನಾಟಕ ಎಣ್ಣೆ ಬೀಜ […]