ಅಭಿವೃದ್ದಿಪರ ಬಜೆಟ್ ನೀಡಿದ ಕಾಂಗ್ರೆಸ್’ಗೆ ಮತ್ತೊಮ್ಮೆ ಜನಾಶೀರ್ವಾದ: ತಿಪ್ಪೇಸ್ವಾಮಿ

ಅಭಿವೃದ್ದಿಪರ ಬಜೆಟ್ ನೀಡಿದ  ಕಾಂಗ್ರೆಸ್’ಗೆ ಮತ್ತೊಮ್ಮೆ ಜನಾಶೀರ್ವಾದ: ತಿಪ್ಪೇಸ್ವಾಮಿ

ಜಗಳೂರು: ಕರ್ನಾಟಕ ರಾಜ್ಯದಲ್ಲಿ 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ಸರ್ಕಾರದ ಕೊನೆಯ ಅವಧಿಯ ಬಜೆಟ್‍ನಲ್ಲಿ ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ಸರ್ವ ಜನಾಂಗದ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಅಭಿವೃದ್ದಿ ಬಜೆಟ್ ಇದಾಗಿದ್ದು, ಮುಂದಿನ ಭಾರಿ ಕಾಂಗ್ರೆಸ್ ಪಕ್ಷವನ್ನು ಜನರು ಆಶೀರ್ವದಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಜೆಟ್‍ನಲ್ಲಿ ಜಗಳೂರು ತಾಲೂಕಿಗೆ 46 ಕೆರೆಗಳಿಗೆ ತುಂಗಾಭದ್ರ ನದಿಯಿಂದ ನೀರು […]

ದಾವಣಗೆರೆ: ಶಾಮನೂರು ಶಿವಶಂಕರಪ್ಪನವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಾದವ್ ತಿರುಗೇಟು

ದಾವಣಗೆರೆ: ಶಾಮನೂರು ಶಿವಶಂಕರಪ್ಪನವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಾದವ್ ತಿರುಗೇಟು

ದಾವಣಗೆರೆ: ಚುನಾವಣೆಯಲ್ಲಿ ನನ್ನ ಠೇವಣಿಯನ್ನು ಉಳಿಸುವುದಾಗಲಿ ಅಥವಾ ಕಳೆಯುವುದಾಗಲಿ ಮತದಾರರೇ ವಿನಃ ಶ್ಯಾಮನೂರು ಶಿವಶಂಕರಪ್ಪನವರಲ್ಲ ಎಂದು  ಬಿಜೆಪಿ ದಾವಣಗೆರೆ ಜಿಲ್ಲಾದ್ಯಕ್ಷ ಯಶವಂತರಾವ್ ಜಾದವ್ ತಿರುಗೇಟು ನೀಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಎಸ್ ಮಲ್ಲಿಕಾರ್ಜುನವರೇ ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ ಇನ್ನೊಬ್ಬರ ಬಗ್ಗೆ ಟೀಕೆ ಮಾಡ್ತೀರಿ ಅಂತ ಪರೋಕ್ಷವಾಗಿ ಶಾಮನೂರು ಶಿವಶಂಕರಪ್ಪನವರಿಗೆ ಟಾಂಗ್ ನೀಡಿದರು. ಯಾವುದೇ ಚುನಾವಣೆಯಲ್ಲಿ ನಾನು ಸೋಲು ಗೆಲುವನ್ನು ಸ್ವತಃ ನಾನೂ ಕ್ರೀಡಾಪಟುವಾಗಿ ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡುತ್ತೇನೆ. ಅದ್ಯಾಕೆ ಶಾಮನೂರು ಶಿವಶಂಕರಪ್ಪನವರು […]

ದಾವಣಗೆರೆ: ಭದ್ರಾ ಕೊನೆ ಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಮುತ್ತಿಗೆ

ದಾವಣಗೆರೆ: ಭದ್ರಾ ಕೊನೆ ಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಮುತ್ತಿಗೆ

ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ಬರದ ಹಿನ್ನಲೆ  ಭದ್ರಾ ಕೊನೆ ಭಾಗದ ರೈತರು ಬುಧವಾರ   ದಾವಣಗೆರೆ ಡಿಸಿ ಕಚೇರಿ ಎದರು ರೈತರ ಪ್ರತಿಭಟನೆ ನಡೆಸಿದರು. ಜ.೫ ರಿಂದ ಭದ್ರಾ ನಾಲೆಗೆ ನೀರು ಹರಿಸಲಾಗಿದೆ. ಆದರೆ, ಅಚ್ವುಕಟ್ಟು ಭಾಗದ ಕೊನೆ ಭಾಗಕ್ಕೆ ಇನ್ನು ನೀರು ತಲಪಿಲ್ಲ- ಭದ್ರಾ ನಾಲೆಯ ವ್ಯಾಪ್ತಿಯ ಮೇಲ್ಭಾಗದಲ್ಲಿ 35 ಸಾವಿರ ಅಕ್ರಮ ಪಂಪ್ ಸೆಟ್ ಅಳವಡಿಸಿ ನೀರು ಕದಿಯುಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದಾರೆ. ಅಕ್ರಮ ಪಂಪ್ ಸೆಟ್ ತೆರವು ಮಾಡುವಲ್ಲಿ […]

ದಾವಣಗೆರೆ ಕ್ರಷರ್ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ದಾವಣಗೆರೆ ಕ್ರಷರ್ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ದಾವಣಗೆರೆ: ಆದಾಯ ತೆರಿಗೆ ಪಾವತಿ ಲೋಪದ ಹಿನ್ನೆಲೆಯಲ್ಲಿ ಕ್ರಷರ್ ಉದ್ಯಮಿಗಳಾದ ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವನಗೌಡ ಮತ್ತು ಗಿರೀಶ್ ಎಂಬುವರ ಮನೆ ಮೇಲೆ ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಸಮೀಪವಿರುವ ಬೇವಿನಹಳ್ಳಿಯಲ್ಲಿ ಇರುವ ಬಸವನಗೌಡ ಅವರಿಗೆ ಸೇರಿದ 2 ಕ್ರಷರ್ ಕಚೇರಿಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರ ಜತೆ ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿ ಇರುವ ಗಿರೀಶ್‍ರವರ ಮನೆ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು […]

ದಾವಣಗೆರೆ ಉತ್ತರ ಕ್ಷೇತ್ರದಿಂದ ನಾನು ಜೆಡಿಎಸ್ ಟಿಕೇಟ್ ಆಕಾಂಕ್ಷಿ: ಸಂಗೇಗೌಡರು

ದಾವಣಗೆರೆ ಉತ್ತರ ಕ್ಷೇತ್ರದಿಂದ ನಾನು ಜೆಡಿಎಸ್ ಟಿಕೇಟ್ ಆಕಾಂಕ್ಷಿ: ಸಂಗೇಗೌಡರು

ದಾವಣಗೆರೆ: ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ನಾನು ಜೆಡಿಎಸ್ ಟಿಕೇಟ್ ಆಕಾಂಕ್ಷಿ ಎಂದು ಜೆಡಿಎಸ್ ಉತ್ತರ ವಿಧಾನ ಸಭಾ ಕ್ಷೇತ್ರದ ಅದ್ಯಕ್ಷ ಸಂಗೇಗೌಡರು ಹೇಳಿದ್ದಾರೆ.  ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಒಂದು ವೇಳೆ  ಟಿಕೇಟ್ ಸಿಗದೇ ಇದ್ದರೂ, ಪಕ್ಷ  ಯಾರಿಗೆ  ಟಿಕೆಟ್ ನೀಡಿದರೂ ಅವರಿಗೆ ಸಹಕಾರ ಮಾಡುತ್ತೇನೆ. ದಾವಣಗೆರೆಯಲ್ಲಿ ಮನೆ ಮನೆ ಕುಮಾರಣ್ಣ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಬಾರಿ ಜೆಡಿಎಸ್ ಗೆ ಮತದಾರರು ಆಶಿರ್ವಾದ ಮಾಡಬೇಕು ಎಂದು ಕೋರಿದರು.   ಕ್ಷೇತ್ರದ ಸಂಸದ ಮತ್ತು ಶಾಸಕರು ಸಾರ್ವಜನಿಕ ಸಮಸ್ಯೆಗಳನ್ನು […]

ದಾವಣಗೆರೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ದಾವಣಗೆರೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ದಾವಣಗೆರೆ: ಸಾಲ ಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಅಣ್ಣಾಪುರ ಗ್ರಾಮದಲ್ಲಿ ಇಂದು ನಡೆದಿದೆ. ಕೆಂಚಪ್ಪ(52)  ಮೃತ ದುರ್ಧೈವಿ ರೈತ ಎಂದು ಗುರುತಿಸಲಾಗಿದೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಕೊಡಗನೂರು ಶಾಖೆಯಲ್ಲಿ ರೂ. 90 ಸಾವಿರ ಮತ್ತು 5 ಲಕ್ಷ ಕೈ ಸಾಲ ಮಾಡಿಕೊಂಡಿದ್ದಾನೆ.  ಎರಡು ಎಕರೆ ಜಮೀನಿನಲ್ಲಿ ಎರಡು ಕೊಳವೆ ಬಾಂವಿಗಳನ್ನು ಕೊರೆಸಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.  ಮಾಯಕೊಂಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.  

ಕಿರಾಣಿ ಅಂಗಡಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ಕಿರಾಣಿ ಅಂಗಡಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ದಾವಣಗೆರೆ: ಇಲ್ಲಿನ ಹೆಚ್ ಪಿಎಸ್ ನಗರದಲ್ಲಿರುವ  ಕಿರಾಣಿ ಮತ್ತು ಜನರಲ್ ಸ್ಟೋರ್ ಗೆ ನಿನ್ನೆ ತಡ ರಾತ್ರಿ  ಬೆಂಕಿ ತಗುಲಿ ಅಪಾರ ಪ್ರಮಾಣದ  ಹಾನಿಯಾಗಿರುವ  ಘಟನೆ ನಡೆದಿದೆ. ಬಸವರಾಜ ಎಂಬುವರಿಗೆ ಸೇರಿದ ಸ್ಟೋರ್ ಗೆ  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಸುಮಾರು 9 ಲಕ್ಷ ಮೌಲ್ಯದ ದಾಸ್ತಾನು ,ಜೆರಾಕ್ಸ್ ಯಂತ್ರಗಳು ಭಸ್ಮವಾಗಿವೆ.  ಜವಾಬ್ದಾರಿ ಮರೆತ ಮಹಾನಗರ ಪಾಲಿಕೆ ಅಧಿಕಾರಿಗಳು ಘಟನಾ  ಸ್ಥಳಕ್ಕೆ ಬಾರದೆ ಇರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಗಾಂಧಿನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. 

ಕೋಮು ಸೌಹಾರ್ದತೆ ಕದಡುವ ಮನುವಾದಿ ಸಂಘಟನೆಗಳ ವಿರುದ್ದ ಕ್ರಮಕೈಗೊಳ್ಳಿ: ಹೋರಾಟಗಾರ ಭರಮಸಮುದ್ರ

ಕೋಮು ಸೌಹಾರ್ದತೆ ಕದಡುವ ಮನುವಾದಿ ಸಂಘಟನೆಗಳ ವಿರುದ್ದ ಕ್ರಮಕೈಗೊಳ್ಳಿ: ಹೋರಾಟಗಾರ ಭರಮಸಮುದ್ರ

ಜಗಳೂರು: ದೇಶದಲ್ಲಿ ಧರ್ಮ ಮತ್ತು ಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತಿ ಕೋಮು ಸೌಹಾರ್ದತೆಯನ್ನು ಕದಡುವಂತಹ ಮನುವಾದಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಗತಿ ಪರ ಹೋರಾಟಗಾರ ಭರಮಸಮುದ್ರ ನಾಗಲಿಂಗಪ್ಪ ಒತ್ತಾಯಿಸಿದರು. ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಮಾನವ ಬಂಧುತ್ವ ವೇದಿಕೆ ಹಾಗೂ ಎಸ್‍ಎಫ್‍ಐ ಮತ್ತು ಪ್ರಗತಿ ಪರ ಸಂಘಟನೆಗಳಿಂದ ಮಹಾತ್ಮ ಗಾಂಧೀಜಿ ಹುತಾತ್ಮದಿನದ ನಿಮಿತ್ತ ಹಮ್ಮಿಕೊಳ್ಳಲಾಗದ್ದ ಸೌಹಾರ್ದತೆ ಕರ್ನಾಟಕ ನಿರ್ಮಾಣಕ್ಕಾಗಿ ಮಾನವ ಸರಪಣಿ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ […]

ಜಗಳೂರು: ಜ.20 ರಂದು ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ

ಜಗಳೂರು: ಜ.20 ರಂದು ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ

ಜಗಳೂರು: ಜ. 20 ರಂದು ಪಟ್ಟಣದ ಸರ್ಕಾರಿ  ಬಾಲಕರ ಶಾಲಾ ಆವರಣದಲ್ಲಿ ಛಲವಾದಿ ಸಮಾಜದ ವತಿಯಿಂದ ಒನಕೆ ಓಬವ್ವ ಜಯಂತಿ ಹಾಗೂ ಜಿಲ್ಲಾ ಮಟ್ಟದ ಛಲವಾದಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಸಮಾಜದ ಮುಖಂಡ ಸಿ. ಲಕ್ಷ್ಮಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಛಲವಾದಿ ಸಮಾಜದ ಸಂಘಟನೆಗಾಗಿ ಸಮಾವೇಶ ಅಗತ್ಯವಾಗಿದ್ದು, ಇದರ ಮೂಲಕ ತಾಲೂಕಿನ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗಬೇಕಿದೆ. ವೀರ ಮಹಿಳೆ ಇತಿಹಾಸ ಪುಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಒನಕೆ […]

ಸ್ಪರ್ಧಾತ್ಮಕ ಯುಗದಲ್ಲಿ ವಿಧ್ಯಾಭ್ಯಾಸಕ್ಕೆ ಲ್ಯಾಪ್ ಟ್ಯಾಪ್ ಅತ್ಯಗತ್ಯ: ಶಾಸಕ ಹೆಚ್.ಪಿ.ರಾಜೇಶ್

ಸ್ಪರ್ಧಾತ್ಮಕ ಯುಗದಲ್ಲಿ ವಿಧ್ಯಾಭ್ಯಾಸಕ್ಕೆ ಲ್ಯಾಪ್ ಟ್ಯಾಪ್ ಅತ್ಯಗತ್ಯ: ಶಾಸಕ ಹೆಚ್.ಪಿ.ರಾಜೇಶ್

ಜಗಳೂರು: ಸ್ಪರ್ಧಾತ್ಮಕ ಯುಗದಲ್ಲಿ ವಿಶ್ವದ ಸಮಗ್ರ ಮಾಹಿತಿ ಮತ್ತು ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಲ್ಯಾಪ್ ಟ್ಯಾಪ್ ಅತ್ಯಗತ್ಯವಾಗಿದ್ದು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ನೀಡುವ ಮೂಲಕ ಅವರ ನೆರವಿಗೆ ಬಂದಿದೆ ವಿದ್ಯಾರ್ಥಿಗಳು ಇದನ್ನು ಬಳಸಿಕೊಂದು ಉನ್ನತ ಸಾಧನೆ ಮಾಡಬೇಕು ಎಂದು ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರ ಕೊಡಮಾಡಿರುವ ಉಚಿತ ಲ್ಯಾಪ್ ಟಾಪ್ ವಿತರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ನಮ್ಮ ಸರ್ಕಾರ ಅದಿಕಾರಕ್ಕೆ ಬಂದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣ […]

1 2 3 60