ರೈಲಿನ ಬ್ರೇಕ್ ಬೈಂಡಿಂಗ್‍ನಿಂದ ಸಂಚಾರ ಸ್ಥಗಿತ…ಪ್ರಯಾಣಿಕರ ಪರದಾಟ

ಶಿಡ್ಲಘಟ್ಟ: ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲಿನ ಬ್ರೇಕ್ ಬೈಂಡಿಂಗ್‍ನಿಂದ ಸುಮಾರು ಒಂದೂವರೆ ಗಂಟೆ ಕಾಲ ಸಂಚಾರ ಸ್ಥಗಿತಗೊಂಡು ನೂರಾರು ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿನಿಂದ ಯಲಹಂಕ,ದೇವನಹಳ್ಳಿ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸುಗುಮ ಸಂಚಾರ ನಡೆಸಿದ ರೈಲು ಶಿಡ್ಲಘಟ್ಟದಲ್ಲಿ ಬಂದು ಬ್ರೇಕ್ ಬೈಂಡಿಂಗ್ ನಿಲ್ದಾಣದಲ್ಲಿ ನಿಂತು ಹೋಗಿದ್ದರಿಂದ ಚಿಂತಾಮಣಿ,ಶ್ರೀನಿವಾಸಪುರ ಮತ್ತು ಕೋಲಾರಕ್ಕೆ ತೆರಳಬೇಕಾದ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸುಮಾರು 8.17ಕ್ಕೆ ಆಗಮಿಸಿದ ರೈಲು ಚಿಂತಾಮಣಿದತ್ತ ಪ್ರಯಾಣಿಸುವಾಗ ರೈಲ್ವೆ ಹಳಿಯಿಂದ ಬೆಂಕಿ ಕಾಣಿಸಿಕೊಂಡಿದೆ ತಕ್ಷಣ ಕರ್ತವ್ಯದಲ್ಲಿದ್ದ ರೈಲ್ವೆ ನಿಲ್ದಾಣದ ಸಿಬ್ಬಂದಿ ಜಾಗೃತಿವಹಿಸಿ […]

ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ… ಹಾಲಿ ಅಧ್ಯಕ್ಷರ ಪದಚ್ಯುತಿ

ಶಿಡ್ಲಘಟ್ಟ: ತೀವ್ರ ಕುತೂಹಲ ಕೆರಳಿಸಿದ ನಗರಸಭೆಯ ಅಧ್ಯಕ್ಷ ಬಿ.ಅಪ್ಸರ್‍ಪಾಷರ ವಿರುದ್ದ ಆಡಳಿತಾರೂಡ ಜೆ.ಡಿ.ಎಸ್ ಸದಸ್ಯರು ಸಹಿತ 24 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಮೂಲಕ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ್ದಾರೆ ಆಡಳಿತ ನಡೆಸಲು ಸಂಖ್ಯಾಬಲ ಕೊರತೆಯಿದ್ದರೂ ಕಾಂಗ್ರೆಸ್‍ನಿಂದ ನಾಲ್ವರು ಸದಸ್ಯರನ್ನು ಸೆಳೆದುಕೊಂಡು ಅಧ್ಯಕ್ಷಗಾದಿಗೇರಿದ್ದ ಅಪ್ಸರ್‍ಪಾಷಾ ಕೇವಲ ಒಂದು ವರ್ಷದ ಅವಧಿಯೊಳಗೆ ಅಧಿಕಾರ ಕಳೆದಕೊಂಡ ಅಪಖ್ಯಾತಿಗೆ ಗುರಿಯಾಗಿದ್ದಾರೆ. ನಗರಸಭೆಯ ಅಧ್ಯಕ್ಷ ಬಿ.ಅಪ್ಸರ್‍ ಪಾಷ ನಗರದ ಅಭಿವೃಧ್ಧಿ ವಿಚಾರದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದು ಆಡಳಿತಾರೂಡ ಜೆಡಿಎಸ್‍ನ 10ಸದಸ್ಯರು ಸೇರಿದಂತೆ ಒಟ್ಟು […]

ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರು ಗೆಲ್ಲೋದು ನಾವೇ : ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರು ಗೆಲ್ಲೋದು ನಾವೇ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ನಾನು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರು ಗೆಲ್ಲುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2018ರ ಚುನಾವಣೆ ಕೋಲಾರದಿಂದ ಸ್ಪರ್ಧಿಸಬೇಕು ಎಂದು ವಿ.ಆರ್.ಸುದರ್ಶನ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಂದ ಸ್ಪರ್ಧಿಸಿದರು ಗೆಲ್ಲೋದು ನಾವೇ.  ನಾವು ಯಾವ ಕ್ಷೇತ್ರದಲ್ಲಿ ನಿಂತರು 224 ಕ್ಷೇತ್ರಗಳಲ್ಲಿ ಗೆಲ್ಲೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಾಖಲೆ ಸಮೇತ ಕಾಂಗ್ರೆಸ್ ಸಚಿವರು, ಶಾಸಕರ ಭ್ರಷ್ಟಾಚಾರ […]

ಶಾಲಾ ಬಾಲಕಿಗೆ ಲೈಗಿಂಕ ಕಿರುಕುಳ: ಒಬ್ಬನ ಬಂಧನ

ಶಾಲಾ ಬಾಲಕಿಗೆ ಲೈಗಿಂಕ ಕಿರುಕುಳ: ಒಬ್ಬನ ಬಂಧನ

ಚಾಮರಾಜನಗರ: ಶಾಲಾ ಬಾಲಕಿಗೆ ಲೈಗಿಂಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಹಂಪಾಪುರ ಗ್ರಾಮದ ನಿವಾಸಿ ಮಹೇಶ್ ಬಂಧಿತ. ಈತ  ಗ್ರಾಮದ ಶಾಲಾ ಬಾಲಕಿಗೆ ಲೈಗಿಂಕ ಕಿರುಕುಳ ನೀಡಲಾಗುತ್ತಿದ್ದ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದು, ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕೊಳ್ಳೆಗಾಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡಸುತ್ತಿದ್ದಾರೆ. Views: 349

ಅಪ್ರಾಪ್ತ ಬಾಲಕಿ ಮೇಲೆ ಅಡುಗೆ ಸಹಾಯಕನಿಂದ ಅತ್ಯಾಚಾರಕ್ಕೆ ಯತ್ನ: ಯಾರಿಗೂ ತಿಳಿಸದಂತೆ ಬಾಲಕಿಗೆ ವಾರ್ಡನ್ ಬೆದರಿಕೆ

ಅಪ್ರಾಪ್ತ ಬಾಲಕಿ ಮೇಲೆ ಅಡುಗೆ ಸಹಾಯಕನಿಂದ ಅತ್ಯಾಚಾರಕ್ಕೆ ಯತ್ನ: ಯಾರಿಗೂ ತಿಳಿಸದಂತೆ ಬಾಲಕಿಗೆ ವಾರ್ಡನ್ ಬೆದರಿಕೆ

ಕೋಲಾರ: ಅಪ್ರಾಪ್ತ ಬಾಲಕಿ ಮೇಲೆ ವಸತಿ ನಿಲಯ ಅಡುಗೆ ಸಹಾಯಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿರುವ ವಸತಿ ನಿಲಯದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಸತಿ ನಿಲಯ ಅಡುಗೆ ಸಹಾಯಕ  ನಾರಾಯಣಪ್ಪ(50) ಎಂಬಾತನೇ ಐದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ರಾಪ್ತ ಬಾಲಕಿಯನ್ನು ಆ. 16 ರಂದು ಹಾಸ್ಟೆಲ್‌ನಲ್ಲಿ ಕೂಡಿ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಷಯವನ್ನು ಯಾರಿಗೆ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಘಟನೆ ಬಗ್ಗೆ ವಸತಿ ನಿಯಲ ಪಾಲಕನಿಗೆ ತಿಳಿದಿದ್ದರು ಕೂಡ ಕ್ರಮ ಅಡುಗೆ ಸಹಾಯಕನ […]

ಕೋಲಾರ: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರ ದಾರುಣ ಸಾವು

ಕೋಲಾರ: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರ ದಾರುಣ ಸಾವು

ಕೋಲಾರ: ಬಟ್ಟೆ ತೊಳೆಯಲು ಕೆರೆಗೆ ಹೋದ ಇಬ್ಬರು ಬಾಲಕಿಯಲು ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಬಂಗಾರಪೇಟೆ ತಾಲೂಕಿನ ಕಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನಂದವೇಣಿ (17) ಕಲ್ಯಾಣಿ (16) ಮೃತ ದುರ್ದೈವಿಗಳು.  ಗ್ರಾಮದ ಹೊರವಲಯದಲ್ಲಿನ ಕೆರೆ ಬೆಳಗ್ಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ  ಒಬ್ಬ ಬಾಲಕಿಯ ಶವ ಹೊರ ತೆಗೆದಿದ್ದು, ಮತ್ತೊಬ್ಬಳ  ಶವಕ್ಕಾಗಿ ಶೋಧ ನಡೆದಿದೆ. ಈ ಕುರಿತು ಕೆಜಿಎಫ್‌ನ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ […]

ಕೋಲಾರ: ಆಹಾರ ಅರಸಿ ನಾಡಿಗೆ ಬಂದ ಜಿಂಕೆ ನಾಯಿಗಳಿಗೆ ಬಲಿ

ಕೋಲಾರ: ಆಹಾರ ಅರಸಿ ನಾಡಿಗೆ ಬಂದ ಜಿಂಕೆ ನಾಯಿಗಳಿಗೆ ಬಲಿ

ಕೋಲಾರ: ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯೊಂದು ನಾಯಿಗಳ ದಾಳಿಗೆ  ಸಿಲುಕಿ ಸಾವನ್ನಪ್ಪಿದ  ಘಟನೆ  ಜಿಲ್ಲೆಯ ಕೆಜಿಎಫ್ ನಗರದ ಚಲಪ್ಪ ಲೈನ್ ಮುನೇಶ್ವರ ದೇವಾಲಯದ ಬಳಿ ಈ ಘಟನೆ ನಡೆದಿದೆ. ಮಾರಿಕುಪ್ಪಂ ಅರಣ್ಯದಿಂದ ನಗರಕ್ಕೆ ಆಹಾರ ಅರಿಸಿ  ಜಿಂಕೆ  ಬಂದಿತ್ತು. ಈ ವೇಳೆ ನಾಯಿಗಳ ಹಿಂಡು ದಾಳಿ ಮಾಡಿವೆ ಗಂಭೀರ ಗಾಯಗೊಂಡು, ಮೃತಪಟ್ಟಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾರೆ. ಸ್ಥಳಕ್ಕೆ  ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಿಂಕೆ ಕಳೆಬರಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ […]

ಕೋಲಾರ: ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ, ಪೊಲೀಸರಿಂದ ವಶ

ಕೋಲಾರ: ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ, ಪೊಲೀಸರಿಂದ ವಶ

ಕೋಲಾರ: ಇಲ್ಲಿನ ಬಂಗಾರ ಪೇಟೆ ಸಂದಘಟ್ಟ ಗ್ರಾಮದ ಮೂಲಕ  ಕೇರಳಕ್ಕೆ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ  ಜಾನುವಾರಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದಿಂದ ಸಂದಘಟ್ಟ ಗ್ರಾಮದ ಮೂಲಕ ಕೇರಳಕ್ಕೆ  30 ಕ್ಕೂ ಹೆಚ್ಚು ಜಾನುವಾರಗಳನ್ನು ಕೇರಳ ಕಸಾಯಿ ಖಾನೆಗೆ  ಸಾಗಿಸಲಾಗತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬೇತಮಂಗಲ ಠಾಣೆ ಪೊಲೀಸರು ದಾಳಿ ನಡೆಸಿ ಜಾನುವಾರಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರುನ್ನು ನೋಡಿದ ಚಾಲಕರು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ವಶಪಡಿಸಿದ ಜಾನುವಾರುಗಳನ್ನು ಸ್ಥಳೀಯ ಗೋ ಶಾಲೆ‌ಗೆ ಬಿಡಲು […]

ವಿಧಾನಸಭಾ ಚುನಾವಣೆ ಯುದ್ಧದಂತೆ, ಕಾಂಗ್ರೆಸ್ ಸಂಘಟಿಸಿ ಯುದ್ಧ ಗೆಲ್ಲಬೇಕು: ಸಂಸದ ಮುನಿಯಪ್ಪ

ವಿಧಾನಸಭಾ ಚುನಾವಣೆ ಯುದ್ಧದಂತೆ, ಕಾಂಗ್ರೆಸ್ ಸಂಘಟಿಸಿ ಯುದ್ಧ ಗೆಲ್ಲಬೇಕು: ಸಂಸದ ಮುನಿಯಪ್ಪ

ಕೋಲಾರ: 2018ರ ರಾಜ್ಯ ವಿಧಾನಸಭಾ ಚುನಾವಣೆ ಯುದ್ಧದಂತೆ ಇದೆ.  ಈ ಯುದ್ಧದಲ್ಲಿ ಕಾಂಗ್ರೆಸ್‌ ಅನ್ನು ಮತ್ತೆ  ಸಂಘಟಿಸಿ ಅಧಿಕಾರಕ್ಕೆ ತರಬೇಕು ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಕಾರ್ಯಕರ್ತರಿಗೆ ಮನವಿ ಮಾಡಿದರು. ಕೋಲಾರದಲ್ಲಿ ಜಿಲ್ಲಾ ಕಾಂಗ್ರೆಸ್ ರವಿವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಜಾತ್ಯತೀತ ಪಕ್ಷಗಳು ಒಂದಾಗಿ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಒಕ್ಕಟ್ಟಿನಿಂದ ಕೆಲಸ ಮಾಡಬೇಕು ಎಂದರು. ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಮಧುಯಾಕ್ಷಿಗೌಡ, ಕೆಪಿಸಿಸಿ […]

ಅಪಘಾತ: ಒಂದು ವರ್ಷದ ಮಗು ಸಾವು, ಇಬ್ಬರಿಗೆ ಗಂಭೀರ ಗಾಯ

ಅಪಘಾತ: ಒಂದು ವರ್ಷದ ಮಗು ಸಾವು, ಇಬ್ಬರಿಗೆ ಗಂಭೀರ ಗಾಯ

ಕೋಲಾರ: ಮುಳಬಾಗಿಲು ತಾಲೂಕಿನ ಕಾಂತರಾಕ್ ಸರ್ಕಾಲ್ ಬಳಿ ಎರಡು ಬೈಕ್‍ಗಳ ಮಧ್ಯೆ ಅಪಘಾತ ಸಂಭವಿಸಿದ್ದ ಪರಿಣಾಮ ಒಂದು ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೂಲತ ನಾಗರಹಳ್ಳಿ ನಿವಾಸಿ ಸುಧಾಕರ ಮತ್ತು ಪತ್ನಿ ಚೈತ್ರ  ಅವರ ಒಂದು ವರ್ಷದ ಮಗು ಅಪಘಾತದಲ್ಲಿ  ಸಾವನ್ನಪ್ಪಿದೆ. ಬೈಕ್ ಮೇಲೆ ನಾಗರಹಳ್ಳಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಮುಳಬಾಗಲು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ […]