ಗಾಂಜಾ ಮತ್ತಿನಲ್ಲಿ ಮರ ಏರಿ ಹೈಡ್ರಾಮಾ ಮಾಡಿದ ವ್ಯಕ್ತಿ: ಮರದಿಂದ ಕೆಳಗೆ ಜಿಗಿದ ವಿಡಿಯೋ ವೈರಲ್…!

ಗಾಂಜಾ ಮತ್ತಿನಲ್ಲಿ ಮರ ಏರಿ ಹೈಡ್ರಾಮಾ ಮಾಡಿದ ವ್ಯಕ್ತಿ: ಮರದಿಂದ ಕೆಳಗೆ ಜಿಗಿದ ವಿಡಿಯೋ ವೈರಲ್…!

ಶಿವಮೊಗ್ಗ:  ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಮರದ ಮೇಲೆ ಏರಿ ಹೈಡ್ರಾಮಾ ಮಾಡಿ ಮರದ ಮೇಲಿಂದ ಕೆಳಗೆ ಜಿಗಿದ ಘಟನೆ ಗುರುವಾರ ರಾತ್ರಿ ಮಹಾವೀರ ವೃತ್ತದಲ್ಲಿ ನಡೆದಿದೆ. ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಸುಮಾರು 30 ಅಡಿ ಎತ್ತರದ ಮರ ಏರಿ ಮಂಗನಂತೆ ವರ್ತಿಸುವುದನ್ನು ನೋಡಿದ  ಸಾರ್ವಜನಿಕರು ಕೆಳಗಿಳಿಯುವಂತೆ ಮನವಿ ಮಾಡಿದ್ದಾರೆ.  ಆತ ಗಾಂಜಾ ಅಮಲಿನಲ್ಲಿ ತೇಲಾಡುತ್ತಿದ್ದ ಎನ್ನಲಾಗುತ್ತಿದ್ದು, ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮರದ ಮೇಲಿಂದ ಕೆಳಗೆ ಜಿಗಿದಿದ್ದಾನೆ. […]

ಶಾಂತಿ, ಸದ್ಭಾವನೆ ಎಲ್ಲರ  ಗುರಿಯಾಗಬೇಕು: ಎಸ್ಪಿ ಖರೆ 

ಶಾಂತಿ, ಸದ್ಭಾವನೆ ಎಲ್ಲರ  ಗುರಿಯಾಗಬೇಕು: ಎಸ್ಪಿ ಖರೆ 

ಶಿವಮೊಗ್ಗ: ಭಿನ್ನ ಭಿನ್ನ ಭಾಷೆ, ಧರ್ಮ, ಜಾತಿಯ ಪ್ರತಿಯೊಬ್ಬರು ಶಾಂತಿ,ಸೌಹಾರ್ದತೆಯಿಂದ ಬದುಕುವುದೇ  ಎಲ್ಲರ ಗುರಿಯಾಗಬೇಕು ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಅಶೋಕ್ ಖರೆ ಅವರು ಕರೆ ನೀಡಿದರು. ರವಿವಾರ ಸಂಜೆ ಇಲ್ಲಿನ ಟ್ಯಾಂಕ್ ಮೊಹಲ್ಲಾದ ಜೈಭುವನೇಶ್ವರಿ ಸದ್ಭಾವನಾ ಯುವಕರ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಸದ್ಭಾವನೆ , ಸಾಮರಸ್ಯ ನಮ್ಮೆಲ್ಲರ ಬದುಕಾಗಬೇಕು. ಪರಸ್ಪರ ಅರಿತು ಬಾಳುವುದರಲ್ಲಿ ನಮ್ಮ ಬದುಕಿದೆ. ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಕೇವಲ ಮನರಂಜನೆ ಮಾತ್ರ […]

ಸಹೋದರನನ್ನೆ ಕೊಂದವನಿಗೆ ಜೀವಾವಧಿ ಶಿಕ್ಷೆ

ಸಹೋದರನನ್ನೆ ಕೊಂದವನಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಆಸ್ತಿ ವಿವಾದ ಹಿನ್ನಲೆಯಲ್ಲಿ ಒಡಹುಟ್ಟಿದ ಸಹೋದರನನ್ನೆ ಹತ್ಯೆಗೈದಿದ್ದ ಆರೋಪಿ ಶ್ರೀನಿವಾಸ ಎಂಬಾತನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ವಿವರಿಸಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಅವರು ಇಲ್ಲಿನ ವಿದ್ಯಾನಗರದ ನಿವಾಸಿ ಚಂದ್ರಶೇಖರ್ ಮತ್ತು ಅವರ ಸಹೋದರ ಶ್ರೀನಿವಾಸ್ ನಡುವೆ ಆಸ್ತಿವಿವಾದ ಇದ್ದು, ಚಂದ್ರಶೇಖರ್ ಅವರ ಹತ್ಯೆಗೆ ಸಹೋದರ ಶ್ರೀನಿವಾಸನೇ ಸಂಚು ರೂಪಿಸಿದ್ದನು. ಅದರಂತೆ 24.ಡಿಸಂಬರ್ 2014 ರಂದು […]

ಡಿ. 29 ರಿಂದ ಕುವೆಂಪು ‘ವಿಶ್ವಮಾನವ’ ಸಂದೇಶ ಜಾಥಾ : ರಘು ದೊಡ್ಡಮನಿ

ಡಿ. 29 ರಿಂದ ಕುವೆಂಪು ‘ವಿಶ್ವಮಾನವ’ ಸಂದೇಶ ಜಾಥಾ : ರಘು ದೊಡ್ಡಮನಿ

ಶಿವಮೊಗ್ಗ: ಮಾನವ ಬಂಧುತ್ವ ವೇದಿಕೆ ವತಿಯಿಂದ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ಡಿ. 29 ರಂದು ಕುಪ್ಪಳಿಯಿಂದ ಮೈಸೂರಿನವರೆಗೆ ಕುವೆಂಪು ‘ವಿಶ್ವಮಾನವ’ ಸಂದೇಶ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ದಾವಣಗೆರೆ ವಿಭಾಗೀಯ ಸಂಚಾಲಕ ರಘು ದೊಡ್ಡಮನಿ ತಿಳಿಸಿದರು. ನಗರದದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರ ಚಿಂತಕ ಹಾಗೂ ರಾಜಕಾರಣಿ ಸತೀಶ ಜಾರಕಿಹೊಳಿ ಅವರು ಸಂಸ್ಥಾಪಿಸಿದ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡ ಈ ಜಾಥಾವನ್ನು ಡಿ. 29 ರಂದು ಕುಪ್ಪಳಿಯ ಕವಿಶೈಲದಿಂದ ಖ್ಯಾತ ಸಾಹಿತಿ, ಚಿಂತಕ ಬರಗೂರು ಪ್ರಕಾಶ  ಚಾಲನೆ […]

ಆಶ್ರಯ ಸಮಿತಿಯಿಂದ ನಿವೇಶನ ರಹಿತರಿಗೆ ಜಿ+2 ಮಾದರಿ ಮನೆ  ಹಂಚಿಕೆ

ಆಶ್ರಯ ಸಮಿತಿಯಿಂದ ನಿವೇಶನ ರಹಿತರಿಗೆ ಜಿ+2 ಮಾದರಿ ಮನೆ  ಹಂಚಿಕೆ

ಶಿವಮೊಗ್ಗ: ಶಿವಮೊಗ್ಗ ನಗರ ಆಶ್ರಯ ಸಮಿತಿ ವತಿಯಿಂದ ಜಿ+2 ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಜಾಲತಾಣದ ಮೆನುವಿನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು  6144 ವಸತಿ ಹಂಚಲಾಗುವುದು. ಪ್ರತಿ ಮನೆಯ ವಿಸ್ತೀರ್ಣ ೩೬೫ ಚದರಡಿಗಳಿದ್ದು, ಪ್ರತಿ ಮನೆಗೆ ಕಟ್ಟಡ, ವಿದ್ಯುತ್ ಹಾಗೂ ನೀರು ಸರಬರಾಜು ಸೌಲಭ್ಯವಿರುತ್ತದೆ. ಜಿ+2 ಮಾದರಿಯ […]

ರಾಜ್ಯದ ಗಮನ ಸೆಳೆವ ತೀರ್ಥಹಳ್ಳಿ ರಸ್ತೆ ರಸ್ತೆಗಳ ಗುಣಮಟ್ಟಕ್ಕೆ ಆದ್ಯತೆ: ಸಚಿವ ಮಹಾದೇವಪ್ಪ

ತಿರ್ಥಹಳ್ಳಿ:10 ಕೋ.ರೂ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿರುವ ರಾಜ್ಯದ ಗಮನಸೆಳೆಯುತ್ತಿರುವ ಪಟ್ಟಣದ ಚತುಷ್ಪತ ಮುಖ್ಯರಸ್ತೆಯನ್ನು ಇಂದು ರಾಜ್ಯ ಲೋಕೋಪಯೋಗಿ ಸಚಿವ ಹೆಚ್.ಸಿ ಮಹಾದೇವಪ್ಪ ಅವರು ಇಂದಿಲ್ಲಿ ನಾಗರೀಕರಿಗೆ ಸಮರ್ಪಣೆ ಮಾಡಿದರು. ಕಿಷ್ಕಿಂದೆಯಂತಿದ್ದ ತೀರ್ಥಹಳ್ಳಿ ಪಟ್ಟಣದ ಮುಖ್ಯ ರಸ್ತೆ .1.10 ಕಿ.ಮೀ ನ್ನು ಶಿವಮೊಗ್ಗ ಲೋಕೋಪಯೋಗಿ ವೃತ್ತ ಸೂಪರಿಂಟೆಂಡೆಂಟ್ ಬಾಲಕೃಷ್ಣ ಅವರ ಕೌಶಲ್ಯ ಕಲ್ಪನೆಯಲ್ಲಿ ಅಭಿವೃದ್ದಿ ಪಡಿಸಲಾಗಿದ್ದು, ಸರ್ವಋತು ರಸ್ತೆಯನ್ನಾಗಿ ನಿರ್ಮಿಸಲಾಗಿದೆ. ಇಂದು ನಡೆದ ಸಮಾರಂಭದಲ್ಲಿ ರಸ್ತೆಯನ್ನು ಸಚಿವ ಮಹಾದೇವಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು […]

ಶಿವಮೊಗ್ಗ: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ಶಿವಮೊಗ್ಗ: ತನ್ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಇಂದು ತೀರ್ಪು ನೀಡಿದೆ. ಸಾಗರದ ದೊಡ್ಡೇರಿ ಕನ್ನಪ್ಪ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದು, ಅಕ್ಟೋಬರ್ 2015 ರಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಬಿಳಿಸಿರಿ ಗ್ರಾಮದಲ್ಲಿ ಕನ್ನಪ್ಪ ತನ್ನ ಜಮೀನಿನಲ್ಲಿ ಬೆಳೆದಿದ್ದ 46ಸಾವಿರ ರೂ.ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಕೇಸು ದಾಖಲಿಸಿದ್ದ ಗ್ರಾಮಾಂತರ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ […]

ಸದಾಶಿವ ವರದಿ ಜಾರಿಗೆ ಎಂಆರ್‍ಎಚ್‍ಎಸ್ ಆಗ್ರಹ

ಶಿವಮೊಗ್ಗ: ದಲಿತರ ಒಳಮೀಸಲಾತಿಗೆ ಸಂಭಂದಿಸಿದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯವಿಭಾಗೀಯ ಕಾರ್ಯದರ್ಶಿ ಬಿ.ಎ ಭಾನುಪ್ರಸಾದ್ ಮಾದಿಗರಿಗೆ ಸಾಮಾಜಿಕ ಮತ್ತು ರಾಜಕೀಯ ಸಮಾನ ಅವಕಾಶಗಳಿಗಾಗಿ ಒತ್ತಾಯಿಸಿ ನಡೆದ ನಿರಂತರ ಹೋರಾಟದ ಪರಿಣಾಮ ಒಳಮೀಸಲಾತಿ ಹಂಚಿಕೆಗೆ ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಸಲ್ಲಿಕೆಯಾಗಿದ್ದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ. ವರದಿ ಜಾರಿಗೆ ಕೆಲವು ಪಟ್ಟಭದ್ರ […]

ಶಿವಮೊಗ್ಗ: ವೈನ್‌ ಷಾಪ್ ಆರಂಭಕ್ಕೆ ಶಾಂತಿ ನಗರ ನಿವಾಸಿಗಳಿಂದ ಒತ್ತಾಯ

ಶಿವಮೊಗ್ಗ: ಹೊನ್ನಾಳಿ ರಸ್ತೆಗೆ ಲಗತ್ತಾಗಿರುವ ವಾರ್ಡ್ ನಂ.3 ರ ಶಾಂತಿನಗರ (ರಾಗಿಗುಡ್ಡ) ದಲ್ಲಿ  ಖಾಸಗಿ ವೈನ್‌ಷಾಪ್ ಪ್ರಾರಂಭಿಸಲು ಸಿದ್ದತೆ ನಡೆದಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ವೈನ್‌ಷಾಪ್ ಆರಂಭಿಸಲು ಅನುಮತಿ ನೀಡಬಾರದು ಎಂದು ಶಾಂತಿನಗರ ಸರ್ವಧರ್ಮ ಸಾಮಾಜಿಕ ಸೇವಾ ಸಂಸ್ಥೆಯು ಇಂದು ಜಿಲ್ಲಾಡಳಿತಕ್ಕೆ, ಜಿಲ್ಲಾರಕ್ಷಣಾಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ಶಾಂತಿನಗರ ಬಡಾವಣೆಯಲ್ಲಿ ಎಲ್ಲಾ ಜಾತಿ-ಧರ್ಮಗಳ ಜನಸಮುದಾಯಗಳು ವಾಸಮಾಡುತ್ತಿದ್ದು, ಕೃಷಿ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದಾರೆ. ಈ ಭಾಗದಲ್ಲಿ ವೈನ್‌ಷಾಪ್ […]

ಅಂಗಡಿ ಸುಟ್ಟು ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ 4 ವರ್ಷ ಜೈಲು ಶಿಕ್ಷೆ

ಶಿವಮೊಗ್ಗ: ಬೀಡಾ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕಳ ಮೇಲೆ ಹಲ್ಲೆ ನಡೆಸಿ  ಅಂಗಡಿಯನ್ನು ಬೆಂಕಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸೊರಬ ತಾಲ್ಲೂಕಿನ ಆನವಟ್ಟಿಯ  ತಿಮ್ಮಾಪುರದಲ್ಲಿ ಜ. 24 2015 ರಲ್ಲಿ ಬೀಡಾ ಅಂಗಡಿಯೊಂದರ ಮಾಲೀಕಳು ಬಾಕಿ ಹಣ ಕೇಳಿದ್ದಕ್ಕೆ  ಅದೇ ಗ್ರಾಮದ ಚೌಡಪ್ಪ (25) ಎಂಬಾತ ಆಕೆಯ ಮೇಲೆ ಹಲ್ಲೆ ಮಾಡಿ […]

1 2 3 8