ಸಮಾಜಕ್ಕೆ ಅಗತ್ಯವಾದ ಸಾಹಿತ್ಯವನ್ನು ಕಲ್ಪಿಸುವ ಜವಾಬ್ದಾರಿ ದಸಾಪದ್ದಾಗಿದೆ: ಕಂಟಲಗೇರೆ ಸೊಣ್ಣಕೊನ್ನಯ್ಯ

ಸಮಾಜಕ್ಕೆ ಅಗತ್ಯವಾದ ಸಾಹಿತ್ಯವನ್ನು ಕಲ್ಪಿಸುವ ಜವಾಬ್ದಾರಿ ದಸಾಪದ್ದಾಗಿದೆ: ಕಂಟಲಗೇರೆ ಸೊಣ್ಣಕೊನ್ನಯ್ಯ

ಮಧುಗಿರಿ: ದಲಿತರಿಗೆ ಇಂದಿಗೂ ಕೆಲವು ದೇವಾಲಯಗಳಲ್ಲಿ ಪ್ರವೇಶವಿಲ್ಲ ಹಾಗೂ ಚೌರ ನಿರಾಕರಣೆ ಇಂತಹ ಸಮಸ್ಯೆಗಳು ಜೀವಂತವಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಜೀವರಾಯ ವಿಷಾದ ವ್ಯಕ್ತಪಡಿಸಿದರು.  ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.  ಬಡವರು ಮತ್ತು ಶ್ರೀಮಂತರ ನಡುವೆ ಅಂತರಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿ ಹಟ್ಟಿಗಳಿಗೆ ತೆರಳಿ ದಲಿತ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.  […]

ಕೈದಾಳದಲ್ಲಿ ಜ.1ರಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಕೈದಾಳದಲ್ಲಿ ಜ.1ರಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಕಲಬುರಗಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ವಿಶ್ವಕರ್ಮರ  ಆರಾಧ್ಯದೈವ ಅಮರಶಿಲ್ಪಿ ಜಕಣಾಚಾರಿ ಅವರ  ಸಂಸ್ಮರಣಾ ದಿನಾಚರಣೆಯನ್ನು ಜನವರಿ ೧ರಂದು ತುಮಕೂರು ಜಿಲ್ಲೆಯ ಕೈದಾಳೆ ಗ್ರಾಮದಲ್ಲಿ ಆಚರಿಸಲಾಗುತ್ತದೆ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೊದ್ದಾರ ಹರಸೂರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ವಿಶ್ವಕರ್ಮ ಸಮುದಾಯದ ಪೀಠಾಧಿಪತಿಗಳು, ಹಿಂದುಳಿದ ಸಮಾಜಗಳ  ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಮತ್ತು ರಾಜ್ಯದ ಹಲವು ನಾಯಕರು […]

ಮಧುಗಿರಿ: ಸಿಎಂ ಸಿದ್ದರಾಮಯ್ಯನವರಿಂದ ಡಿ. 10 ರಂದು ಗುರುಭವನ ಲೋಕಾರ್ಪಣೆ

ಮಧುಗಿರಿ: ಸಿಎಂ ಸಿದ್ದರಾಮಯ್ಯನವರಿಂದ ಡಿ. 10 ರಂದು ಗುರುಭವನ ಲೋಕಾರ್ಪಣೆ

ಮಧುಗಿರಿ: ಪಟ್ಟಣದ ಗುರುಭವನದ ಮುಂಭಾಗದಲ್ಲಿ ಗುರುಭವನ ವ್ಯವಸ್ಥಾಪನಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ 30 ಮಳಿಗೆಗಳನ್ನು ಡಿ.10 ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆಂದು ಸಮಿತಿ ಅಧ್ಯಕ್ಷ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹಯ್ಯ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಈ ಮಳಿಗೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಯಾವ ತಾಲೂಕುಗಳಲ್ಲೂ ಶಿಕ್ಷಕರ ಸಂಘಕ್ಕೆ ಆದಾಯ ತರುವ ಅಂಗಡಿ ಮಳಿಗೆಗಳಿಲ್ಲ. ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ […]

ಡಿ. 10 ತುಮಕೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಮಟ್ಟದ ಸಮಾವೇಶ

ಡಿ. 10 ತುಮಕೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಮಟ್ಟದ ಸಮಾವೇಶ

2 ಲಕ್ಷ ಜನ ಸೇರುವ ನಿರೀಕ್ಷೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಭಾಗಿ ದಾವಣಗೆರೆ: ಡಿ. 10 ರಂದು ತುಮಕೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ 5ರಿಂದ 6 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್, ಜಫ್ರುಲ್ಲಾಖಾನ್, ಬಿ.ಎಂ. ಫಾರೂಕ್ […]

ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಹಣ ದೋಚಿ ಪರಾರಿ

ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಹಣ ದೋಚಿ ಪರಾರಿ

ಮಧುಗಿರಿ: ಪರ ಊರಿನಿಂದ ಚಲನ ಚಿತ್ರ ನೋಡಲು ಬಂದಿದ್ದ ವ್ಯಕ್ತಿಯ ಮೇಲೆ ಮೂರು ಜನ ಅಪರಿಚಿತರು ದಾಳಿ ಮಾಡಿ ಹಣ ದೋಚಿ ಪರಾರಿಯಾಗಿರುವ ಘಟನೆ ರಾತ್ರಿ ಪಟ್ಟಣದ ಸಿವಿಲ್ ಬಸ್ಟಾಂಡ್ ನಲ್ಲಿ ನಡೆದಿದೆ. ಕೊರಟಗೆರೆ ಪಟ್ಟಣದ ದೇವಾಂಗ ಬೀದಿಯ ವಾಸಿ ಇನಾಯತ್ (25) ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದಾನೆ. ಇತನು ರಾತ್ರಿ ಖಾಸಗಿ ಬಸ್ ನಿಲ್ದಾಣದಲ್ಲಿ ಹೊಟೆಲ್ ಒಂದರ ಬಳಿ ಊಟ ಸೇವಿಸುತ್ತಿದ್ದನ್ನು ಗಮನಿಸಿದ ಬೈಕ್ ನಲ್ಲಿ ಬಂದ ಮೂವರು ಅಪರಿಚಿತರು ಇನಾಯತ್ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿ […]

ಎಲ್ಲರಿಗಾಗಿ ನಾನು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲಿ: ಪ್ರಾಚಾರ್ಯ ನರಸಿಂಹ

ಎಲ್ಲರಿಗಾಗಿ ನಾನು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲಿ: ಪ್ರಾಚಾರ್ಯ ನರಸಿಂಹ

ಮಧುಗಿರಿ: ಹಣ, ಚಿನ್ನಾಭರಣವನ್ನು ಯಾರು ಬೇಕಾದವರು ದೋಚ ಬಹುದು, ಆದರೆ ವಿದ್ಯೆಯನ್ನು ಯಾರು ದೋಚಲು ಸಾಧ್ಯವಿಲ್ಲ. ಜ್ಞಾನ ಸಂಪತ್ತನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಉಪಕಾರವದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಪ್ರಾಚಾರ್ಯ ಕೆ.ಸಿ.ನರಸಿಂಹ ತಿಳಿಸಿದರು. ತಾಲೂಕಿನ ಹೊಸಕೆರೆ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ವಯೋನಿವೃತ್ತಿ ನಿಮಿತ್ತ  ಕಾಲೇಜು ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,   ನಾನು ನನಗಾಗಲ್ಲ, ಎಲ್ಲರಿಗಾಗಿ ನಾನು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. […]

ಪತ್ನಿಯ ಕೊಲೆಗೆ ಯತ್ನ: ಪತಿರಾಯನಿಗೆ ಐದು ವರ್ಷ ಜೈಲು ಶಿಕ್ಷೆ

ಪತ್ನಿಯ ಕೊಲೆಗೆ ಯತ್ನ: ಪತಿರಾಯನಿಗೆ ಐದು ವರ್ಷ ಜೈಲು ಶಿಕ್ಷೆ

ಮಧುಗಿರಿ: ಹೆಂಡತಿಯ ಮೇಲೆ ಕೊಲೆಗೆ ಯತ್ನಿಸಿ ಆರೋಪ ಸಾಬೀತಾದ ಪತಿರಾಯನಿಗೆ ಐದು ವರ್ಷ ಜೈಲು ವಾಸ ಮತ್ತು ಹತ್ತು ಸಾವಿರ ರೂ ದಂಡವಿದಿಸಿ ಇಲ್ಲಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶರು ಸೋಮವಾರ ತೀರ್ಪು ನೀಡಿದ್ದಾರೆ. 2016 ರ ಡಿಸೆಂಬರ್ 8 ರಂದು ಪಾವಗಡ ತಾಲೂಕಿನ ಬಾಲಮ್ಮನಹಳ್ಳಿ ಗ್ರಾಮದಲ್ಲಿ ಅಂದು ಸಂಜೆ 7 ಘಂಟೆಗೆ ಗೋವಿಂದಪ್ಪ ಎಂಬುವವನು ತನ್ನ ಹೆಂಡತಿ ಸಕ್ಕರಮ್ಮಳನ್ನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಜಗಳ ತೆಗೆದು ಹೆಂಡತಿಯನ್ನು ಸಾಯಸಲೇಬೇಕೆಂಬ ಉದ್ದೇಶದಿಂದ ಆಕೆಯನ್ನು ಮಚ್ಚಿನಿಂದ […]

ದೇಶದ ಜನರು ಮೂಢನಂಬಿಕೆಗಳಿಂದ ಹೊರಬರಲಿ: ಎಸಿ ಡಾ. ವೆಂಕಟೇಶಯ್ಯಾ

ದೇಶದ ಜನರು ಮೂಢನಂಬಿಕೆಗಳಿಂದ ಹೊರಬರಲಿ: ಎಸಿ ಡಾ. ವೆಂಕಟೇಶಯ್ಯಾ

ಮಧುಗಿರಿ: ಮೂಢನಂಬಿಕೆ ಜಾತಿವ್ಯವಸ್ಥೆ ತಾರತಮ್ಯವಿಲ್ಲದ ಸುಂದರ ಸಮಾಜ ನಿರ್ಮಾಣಕ್ಕೆ ಯುವ ಶಕ್ತಿ ಮುಂದಾಗಬೇಕು ಎಂದು ಉಪ ವಿಭಾಗಾಧಿಕಾರಿ ಡಾ. ವೆಂಕಟೇಶಯ್ಯ ಕರೆ ನೀಡಿದರು. ಪಟ್ಟಣದ ಪಾವಗಡ ರಸ್ತೆಯ ಅಂಬೇಡ್ಕರ್ ಪುತ್ಥಳಿ ಬಳಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಮತ್ತು ದಲಿತ ಪರ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನದ ಪ್ರಯುಕ್ತ ಜನ ಜಾಗೃತಿ ಜಾಥದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಜನರು ಆದಷ್ಟ ಬೇಗನೇ ಮೂಢನಂಬಿಕೆಗಳಿಂದ ಹೊರ ಬರಲಿ. ವೇದಿಕೆಯ ವತಿಯಿಂದ ಸಶ್ಮಾನಗಳಲ್ಲಿ ಕಾರ್ಯಕ್ರಮದ ವೇದಿಕೆಗಳನ್ನು […]

ಅಪರಿಚಿತ ವಾಹನ ಡಿಕ್ಕಿ: ಎರಡು ವರ್ಷದ ಗಂಡು ಕರಡಿ ಸಾವು

ಅಪರಿಚಿತ ವಾಹನ ಡಿಕ್ಕಿ: ಎರಡು ವರ್ಷದ ಗಂಡು ಕರಡಿ ಸಾವು

ಮಧುಗಿರಿ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಗಂಡು ಕರಡಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗಿನ ಜಾವ ಘಟನೆ ನಡೆದಿದೆ. ತಾಲೂಕಿನ ಕಸಬ ಹೋಬಳಿಯ ಮಧುಗಿರಿ- ತುಮಕೂರು ರಸ್ತೆಯ ಸಮೀಪವಿರುವ ಹುಣಸೆ ಮರದ ಹಟ್ಟಿ ಸಮೀಪ ಈ ಘಟನೆ ನಡೆದಿದ್ದು,  ಸ್ಥಳಕ್ಕೆ ಅರಣ್ಯಧಿಕಾರಿಗಳ ಭೇಟಿ ನೀಡಿದ್ದಾರೆ.     

ಮಧುಗಿರಿ: ಕಬ್ಬಡ್ಡಿ ಪಂದ್ಯಾವಳಿಗೆ ತೆರೆ

ಮಧುಗಿರಿ: ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ 200 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಶ್ರೀರಾಮ ದೇವರ ಮೂರ್ತಿಯ ಅದ್ದೂರಿ ಹೂವಿನ ರಥೋತ್ಸವ ಪ್ರಯುಕ್ತ  ಆಯೋಜಿಸಲಾಗಿದ್ದ ಕಬ್ಬಡಿ ಕ್ರೀಡಾಕೂಟ ತೆರೆಬಿದ್ದಿತು. ವಿವಿಧ  ಜಿಲ್ಲೆಗಳಿಂದ ಸುಮಾರು 20 ಕ್ಕಿಂತ ಹೆಚ್ಚು ಕಬ್ಬಡ್ಡಿ ತಂಡಗಳು  ಕ್ರೀಡಾಕೂಡದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದವು. ದೊಡ್ಡಬಳ್ಳಾಪುರದ ನರೇಶ್ ಬ್ರದರ್ ತಂಡ ಮೊದಲ ಸ್ಥಾನ ಪಡೆದು 50 ಸಾವಿರ ರೂ. ಬಹುಮಾನ ಪಡೆದರೆ ತಿಂಗಳೂರಿನ ರಾಜಕುಮರ್ ಗೆಳೆಯರ ಬಳಗದ ತಂಡ ದ್ವೀತಿಯ ಸ್ಥಾನ ಪಡೆದು 25 ಸಾವಿ […]

1 2 3 8