ಮಕ್ಕಳ ಕಳ್ಳತನ ವದಂತಿ ವ್ಯಕ್ತಿ ಮೇಲೆ ಹಲ್ಲೆ:ದೂರು ದಾಖಲು

ಮಕ್ಕಳ ಕಳ್ಳತನ ವದಂತಿ ವ್ಯಕ್ತಿ ಮೇಲೆ ಹಲ್ಲೆ:ದೂರು ದಾಖಲು

ಸುರಪುರ: ತಾಲ್ಲೂಕಿನಾದ್ಯಂತ ಎದ್ದಿರುವ ಮಕ್ಕಳ ಕಳ್ಳತನ ಸುದ್ದಿಯಿಂದಾಗಿ ನಗರದ ವಣಕಿಹಾಳದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಜರುಗಿದೆ. ನಗರದ ಹಸನಾಪುರ ಗ್ರಾಮದಲ್ಲಿ ವಾಸವಿರುವ ಆಂಧ್ರ ಮೂಲದ ವ್ಯಕ್ತಿ ಸತೀಶ ತಂದೆ ಫಕೀರ ದಂಡೇಲಾ (40ವರ್ಷ) ಶುಕ್ರವಾರ ರಾತ್ರಿ ತನ್ನ ಮನೆಯಲ್ಲಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಹೊರಗಡೆ ಹೋದಾಗ,ನಶೆ ಹೆಚ್ಚಾಗಿದ್ದರಿಂದ ಹಸನಾಪುರ ಪೆಟ್ರೋಲ್ ಪಂಪ್ ಬಳಿಯ ವಣಕಿಹಾಳದ ಸಮೀಪದ ಅಂಬೇಡ್ಕರ ಶಾಲೆಯ ಬಳಿ ಮಲಗಿದ್ದು,ಸ್ಥಳಿಯ ಕೆಲ ಜನರು ಬಂದು ನನ್ನನ್ನು ಮಕ್ಕಳ ಕಳ್ಳ […]

ಜನ ಕೊಟ್ಟ ತೀರ್ಪಿಗೆ ತಲೆಬಾಗುವೆ-ಮಾಜಿ ಶಾಸಕ ಆರ್.ವಿ.ನಾಯಕ

ಜನ ಕೊಟ್ಟ ತೀರ್ಪಿಗೆ ತಲೆಬಾಗುವೆ-ಮಾಜಿ ಶಾಸಕ ಆರ್.ವಿ.ನಾಯಕ

ಸುರಪುರ: ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನೀಡಿದ ತೀರ್ಮಾನಕ್ಕೆ ತಲೆ ಬಾಗುವದಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ. ಕ್ಷೇತ್ರದಾದ್ಯಂತ ನನ್ನ ಹಾಗು ಪಕ್ಷದ ಪರವಾಗಿ ಅವಿರತ ದುಡಿದ ಕಾರ್ಯಕರ್ತರು ಹಾಗು ಅಭಿಮಾನಿಗಳು ನಿರಾಶೆಯಾಗಬೇಕಿಲ್ಲ,ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯವಾದ್ದರಿಂದ ಯಾರೂ ಚಿಂತಿತರಾಗಬೇಕಿಲ್ಲ.ತಿಂಗಳುಗಟ್ಟಲೆ ಪಕ್ಷ ಹಾಗು ನನ್ನ ಗೆಲುವಿಗಾಗಿ ತಾವೆಲ್ಲ ಶ್ರಮಿಸಿದ್ದಿರಿ,ಆದ್ದರಿಂದ ತಮ್ಮೆಲ್ಲರಿಗು ನಾನು ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದ್ದಾರೆ. ಸೋಲಿನ ಬಗ್ಗೆ ಚಿಂತಿಸದೆ ಪರಾಮರ್ಶೆಯೊಂದಿಗೆ ಆತ್ಮಾವಲೋಕನ ಮಾಡಿಕೊಂಡು ಪಕ್ಷವನ್ನು ಬಲಗೊಳಿಸೋಣ,ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ […]

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ದಾಖಲಿಸಲು ಸೂಚನೆ

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ದಾಖಲಿಸಲು ಸೂಚನೆ

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿಗಾಗಿ ನಮೂನೆ-18ನ್ನು ಸ್ವೀಕರಿಸಲಾಗಿದೆ. ಅವುಗಳನ್ನು ಇಂದೇ ಇ.ಆರ್.ಎಂ.ಎಸ್.(ಎಲೆಕ್ಟ್ರೋಲ್ ರೋಲ್ ಮ್ಯಾನೇಜಮೇಂಟ್ ಸಿಸ್ಟಮ್)ನಲ್ಲಿ ದಾಖಲಿಸಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು. ಅವರು ಶುಕ್ರವಾರ ಕಲಬುರಗಿಯಲ್ಲಿ ವಿಡಿಯೋಕಾನ್ಫರೆನ್ಸ್ ಮೂಲಕ ಕಲಬುರಗಿ ವಿಭಾಗದ ಬೀದರ, ಯಾದಗಿರಿ, ರಾಯಚೂರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಧಿಕಾರಿಗಳೊಂದಿಗೆ ಮಾತನಾಡಿ, ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಮತದಾರರ ಅಂತಿಮ ಪರಿಷ್ಕರಣೆಯಂತೆ […]

ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ಬಿಎಸ್’ಪಿ ಅಭ್ಯರ್ಥಿಯಾಗಿ ರಾಹುಲ್ ತಮ್ಮಣ್ಣ

ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ಬಿಎಸ್’ಪಿ ಅಭ್ಯರ್ಥಿಯಾಗಿ ರಾಹುಲ್ ತಮ್ಮಣ್ಣ

ಕಲಬುರಗಿ: ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಕಲಬುರಗಿಯ ಬಹುಜನ ಸಮಾಜ ಪಕ್ಷದಿಂದ ರಾಹುಲ್ ತಮ್ಮಣ್ಣ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಬಹುಜನ ಸಮಾಜವಾಧಿ ಪಕ್ಷದ ಮುಖಂಡ ಸೂರ್ಯಕಾಂತ ನಿಂಬಾಳಕರ್ ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಈಶಾನ್ಯ ಪದವೀರ ಮತಕ್ಷೇತ್ರಕ್ಕೆ ಕಣಕ್ಕಿಳಿಸಲಾಗಿದೆ ಎಲ್ಲಾ ಮತದಾರರು ರಾಹುಲ್ ತಮ್ಮಣ್ಣ ಅವರನ್ನು ಬೆಂಬಲಿಸುವ ಮೂಲಕ ಬಹುಮತದಿಂದ ಹಾರಿಸಿ ತರಬೇಕು ಎಂದು ಅವರು ಮನವಿ ಮಾಡಿದರು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೆ ಇದರೂ […]

ಯಡಿಯೂರಪ್ಪ ಸಿಎಂ: ಶಹಾಪುರದಲ್ಲಿ ಸಂಭ್ರಮಾಚರಣೆ

ಯಡಿಯೂರಪ್ಪ ಸಿಎಂ: ಶಹಾಪುರದಲ್ಲಿ ಸಂಭ್ರಮಾಚರಣೆ

ಶಹಾಪುರ: ಕರ್ನಾಟಕ ರಾಜ್ಯದ ೨೪ ನೇ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕಾರ ಮಾಡಿದರು . ಅತ್ತ ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಗೆ ಪ್ರಮಾಣವಚನ ಸ್ವೀಕಾರ ಮಾಡುವಾಗಲೇ ಇತ್ತ ಶಹಾಪುರದ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ಬಿಜೆಪಿಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗುರು ಕಾಮ ಬಸ್ಸು ಎಸ್ .ಬಸವರಾಜ್ ಸತ್ಯಂಪೇಟ್ ಗುರುರಾಜ್ ಹಾಗೂ ಇತರರು ಹಾಜರಿದ್ದರು . Munna Bagwanhttp://udayanadu.com

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ

1) ಯಾದಗಿರಿ ವಿಧಾನಸಭೆ ಕ್ಷೇತ್ರ: ಬಿಜೆಪಿ ಗೆಲುವು ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಪಡೆದ ಮತಗಳು :62,227 ಗೆಲುವಿನ ಅಂತರ: 12,881 ಪ್ರತಿಸ್ಪರ್ಧಿ ಕಾಂಗ್ರೆಸ್ ನ ಡಾ.ಎ.ಬಿ.ಮಾಲಕರೆಡ್ಡಿ ಪಡೆದ ಮತಗಳು : 49,346 ಸೋಲು ಮೂರನೇ ಸ್ಥಾನ ಜೆಡಿಎಸ್ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳು: 25,774 2) ಗುರುಮಠಕಲ್ ವಿಧಾನಸಭೆ ಕ್ಷೇತ್ರ : ಜೆಡಿಎಸ್ ಗೆಲುವು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಪಡೆದ ಮತಗಳು : 79,627 ಗೆಲುವಿನ ಅಂತರ:24,480 ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ […]

ಹುಲಿಗಿ ಗ್ರಾಮದಲ್ಲಿ ಆತಂಕ ಸೃಷ್ಠಿಸಿದ್ದ ಕರಡಿ ಕೊನೆಗೂ ಬೋನಿಗೆ

ಹುಲಿಗಿ ಗ್ರಾಮದಲ್ಲಿ ಆತಂಕ ಸೃಷ್ಠಿಸಿದ್ದ ಕರಡಿ ಕೊನೆಗೂ ಬೋನಿಗೆ

ಕೊಪ್ಪಳ : ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕರಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ಸೋಮವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಶುಕ್ರವಾರವಷ್ಟೇ ಕಾಸನಕಂಡಿ ಗ್ರಾಮದ ಬಳಿ ಕರಡಿ ಪ್ರತ್ಯಕ್ಷವಾಗಿತ್ತು. ಇದರಿಂದ ಗ್ರಾಮಸ್ಥರು ಭಯಭಿತರಾಗಿದ್ದು, ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಕರಡಿ ಕಾಟ ಹೆಚ್ಚಿದ್ದರಿಂದ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಮಾಹಿತಿ ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಸನಕಂಡಿ ಬಳಿ ಬೋನ್ ಇಟ್ಟು, ಕರಡಿ […]

ಬಿಗಿ ಭದ್ರತೆಯಲ್ಲಿ ಮತಯಂತ್ರಗಳು: ನಾಳೆ ಕೊಪ್ಪಳದಲ್ಲಿ ಮತ ಎಣಿಕೆ

ಬಿಗಿ ಭದ್ರತೆಯಲ್ಲಿ ಮತಯಂತ್ರಗಳು: ನಾಳೆ ಕೊಪ್ಪಳದಲ್ಲಿ ಮತ ಎಣಿಕೆ

ಕೊಪ್ಪಳ:  ಮೇ. 15 ರಂದು  ಬೆಳಿಗ್ಗೆ 07 ಗಂಟೆಯಿಂದ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ  ನಗರದ ಗವಿಸಿದ್ದೇಶ್ವರ ಮಹಾ ವಿದ್ಯಾಯಲದಲ್ಲಿ  ಆರಂಭವಾಗಲಿದ್ದು, ಅಭ್ಯರ್ಥಿಗಳ ಭವಿಷ್ಯ ಒಳಗೊಂಡಿರುವ ಮತಯಂತ್ರಗಳನ್ನು ಸ್ಟ್ರಾಗ್ ರೂಮಿನಲ್ಲಿ ಬಿಗಿ ಭದ್ರತೆ  ಕಾಲೇಜು ಕಟ್ಟಡದಲ್ಲಿ ಇರಿಸಲಾಗಿದೆ. ಕಾಲೇಜು ಕಟ್ಟಡದ ಸ್ಟ್ರಾಂಗ್ ರೂಮಿನಲ್ಲಿ ಮತ ಯಂತ್ರಗಳು ಭದ್ರವಾಗಿವೆ.  ಇಂದು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಮತ್ತ ಅಪರ ಜಿಲ್ಲಾಧಿಕಾರಿ […]

ಬಿಜೆಪಿಗೆ ಮತಹಾಕುವಂತೆ ದಲಿತರ ಮೇಲೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಬಿಜೆಪಿಗೆ ಮತಹಾಕುವಂತೆ ದಲಿತರ ಮೇಲೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಯಲಬುರ್ಗಾ: ಬಿಜೆಪಿಗೆ ಮತ ಹಾಕುವಂತೆ ಯಾವಗಲ್ ಗ್ರಾಮದಲ್ಲಿ ದಲಿತ ಯುವಕರ  ಮೇಲೆ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳುವಂತೆ  ದಲಿತ ಸಂಘರ್ಷ ಸಮಿತಿ , ಭೀಮವಾದ ತಾಲೂಕು ಅಧ್ಯಕ್ಷ ಡಿ. ಎಚ್. ಶಶೀಧರ ಛಲವಾದಿ ಒತ್ತಾಯಿಸಿದ್ದಾರೆ. ಚುನಾವಣೆ ದಿನದಂದು ಬಿಜೆಪಿಯವರು ದಲಿತ ಯುವಕರಿಗೆ ಬಿಜೆಪಿಗೆ ಮತ ಹಾಕುವಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ. ಬಿಜೆಪಿ ಗೂಂಡಾ ಕಾರ್ಯಕರ್ತರ ಮೇಲೆ ಚುನಾವಣಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ […]

ಶಹಾಪುರ:ಶುರುವಾಗಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಶಹಾಪುರ:ಶುರುವಾಗಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಶಹಾಪುರ: 2018 ನೇ ಸಾಲಿನ ಶಹಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಢವಢವ ಶುರುವಾಗಿದೆ. ಶಹಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಶರಣಬಸ್ಸಪ್ಪಗೌಡ ದರ್ಶನಾಪುರ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗುರು ಪಾಟೀಲ್ ಶಿರವಾಳ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಅಮೀನರೆಡ್ಡಿ ಪಾಟೀಲ್ ಯಾಳಗಿ ಇವರು ಸ್ಪರ್ಧಿಸಿದ್ದು ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಯಲ್ಲಿದ್ದರೆ ಜೆಡಿಎಸ್ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಒಂಚೂರು ಮುಂಚೂಣಿಯಲ್ಲಿದೆ. ಜಯದ ಮಾಲೆ ಯಾರ ಕೊರಳಿಗೆ […]

1 2 3 125