ಪಿಕೆ ಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ: ನಾಲ್ವರ ಸಾವು

ಪಿಕೆ ಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ: ನಾಲ್ವರ ಸಾವು

ಬಳ್ಳಾರಿ: ಹೊಸಪೇಟೆ ತಾಲೂಕಿನ ಪಿ ಕೆ ಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ  ಕಾರು ಮತ್ತು ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಮೃತರು  ಚಿತ್ರದುರ್ಗ ಜಿಲ್ಲೆ ಹಿರಿಯೂರಿನವರಾಗಿದ್ದು, ಶ್ರೀನಿವಾಸ, ನಳಿನಿ, ವೆಂಕಟಮ್ಮ ಮತ್ತು ಹೆಸರು ಗೊತ್ತಿಲ್ಲದ ಇನೊಬ್ಬ ವ್ಯಕ್ತಿ ಎಂದು ಗುರುತಿಸಲಾಗಿದೆ.  ಇವರೆಲ್ಲ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರಕ್ಕಾಗಿ ಹೊಸಪೇಟೆಗೆ ಹೊರಟಿದ್ದರು. ಗಾಯಗೊಂಡಿರುವ ಎಂಟು ಜನರನ್ನು ಹೊಸಪೇಟೆ ಮತ್ತು ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಲಾರಿ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣವಾಗಿದೆ ಎಂದು […]

ಬಳ್ಳಾರಿ: ವಿಮ್ಸ್ ಆಸ್ಪತ್ರೆ ಆಪರೇಷನ್ ಥಿಯೇಟರ್ ಮೇಲ್ಛಾವಣಿ ದಿಢೀರ್ ಕುಸಿತ

ಬಳ್ಳಾರಿ: ವಿಮ್ಸ್ ಆಸ್ಪತ್ರೆ ಆಪರೇಷನ್ ಥಿಯೇಟರ್ ಮೇಲ್ಛಾವಣಿ ದಿಢೀರ್ ಕುಸಿತ

ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮೇಲ್ಛಾಚಣಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬೆಳಗ್ಗೆ ಆಸ್ಪತ್ರೆಯ ಆಪರೇಷನ್ ಥಿಯೆಟರ್ ಮೇಲ್ಛಾಚಣಿ ಏಕಾಏಕಿ ಕುಸಿದ್ದಿದ್ದು, ಈ ಸಮಯದಲ್ಲಿ ಯಾವುದೇ ಶಸ್ತ್ರ ಚಿಕಿತ್ಸೆ ನಡೆಯುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಆಪರೇಷನ್ ಥಿಯೇಟರ್ ಗೆ ಭೀಗ ಹಾಕಲಾಗಿದ್ದು, ಇಂದು ನಡೆಯಬೇಕಿದ್ದ ಎಲ್ಲ ಶಸ್ರ್ತ ಗಳನ್ನು ರದ್ದುಗೊಳಿಸಲಾಗಿದೆ. ವಿಮ್ಸ್ ಆಸ್ಪತ್ರೆಗೆ ಆಪರೇಷನ್‌ ಥಿಯೇಟರ್‌ ಮೇಲ್ಛಾವಣಿ ಕುಸಿದು ಬಿದ್ದಿರುವುದು ನೋಡಿದರೆ ಇಲ್ಲಿನ ಅವವ್ಯವಸ್ಥೆ ತಾಂಡವಾಡುತ್ತಿದೆ ಎಂದು ಕಂಡು ಬರುತ್ತದೆ. […]

ಮಕ್ಕಳಾಗಿಲ್ಲವೆಂದು ಮತ್ತೊಬ್ಬರ ಮಗು ಅಪಹರಣ: ಮಹಿಳೆ ಬಂಧನ

ಮಕ್ಕಳಾಗಿಲ್ಲವೆಂದು ಮತ್ತೊಬ್ಬರ ಮಗು ಅಪಹರಣ: ಮಹಿಳೆ ಬಂಧನ

ಬಳ್ಳಾರಿ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಎರಡು ತಿಂಗಳ ಹಿಂದೆ ನಾಲ್ಕು ವರ್ಷದ ಮಗುವನ್ನು ಅಪಹರಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು  ಕಮಲಾಪುರ ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ. ಅಂಬಮ್ಮ ಬಂಧಿತ  ಮಹಿಳೆ.  ಕಮಲಾಪುರದ ನಿವಾಸಿ ನೀಲಮ್ಮ ಎಂಬುವರ ಮಗಳು ಮಲ್ಲೇಶ್ವರಿ (4) ಅಪಹರಣವಾಗಿದ್ದ ಮಗು. ಮಕ್ಕಳಾಗಲಿಲ್ಲ ಎಂದು ಕಳೆದ ಜುಲೈ ತಿಂಗಳಲ್ಲಿ ಮಲ್ಲೇಶ್ವರಿಯನ್ನು ಅಂಬಮ್ಮ ಅಪಹರಿಸಿ ಪರಾರಿಯಾಗಿದ್ದಳು. ಪಿಎಸ್‍ಐ ನಾಗರತ್ನಮ್ಮ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು  ಗಂಗಾವತಿ ತಾಲೂಕಿನ ಕಾರಟಗಿ ಬಸ್ ನಿಲ್ದಾಣದಲ್ಲಿ ಅಂಬಮ್ಮನನ್ನು ವಶಕ್ಕೆ […]

ಬಳ್ಳಾರಿ: ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

ಬಳ್ಳಾರಿ: ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಲ್ಲಿನ  ವೀರಶೈವ ವಿದ್ಯಾವರ್ಧಕ ಸಂಘದ ಪಿಡಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಬಿಗಿದುಕೊಂಡು ಆತ್ಮತಹ್ಯೆ ಮಾಡಿಕೊಂಡಿದ್ದಾಳೆ. ಸುರಪುರ ತಾಲೂಕಿನ ಹುಣಸಿಗಿ ಗ್ರಾಮದ ಪವಿತ್ರ (18) ಮೃತ ವಿದ್ಯಾರ್ಥಿನಿ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇವಳು  ಪ್ರಥಮ ಸೆಮಿಸ್ಟರ್ ನಲ್ಲಿ ನಾಲ್ಕು ಮತ್ತು ದ್ವೀತಿಯ ಸೆಮಿಸ್ಟರ್ ನಲ್ಲಿ  ಐದು  ವಿಷಯ ಅನುತ್ತೀರ್ಣವಾದ ಹಿನ್ನೆಲೆ  ಮನನೊಂದು ಕಾಲೇಜಿನ ಆವರಣದಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ […]

ಬಳ್ಳಾರಿ: ಹೂತ ಶವ ತಗೆದು ಸುಡಲು ಯತ್ನ, ಶವದ ರುಂಡ ಕಾಣೆ

ಬಳ್ಳಾರಿ: ಹೂತ ಶವ ತಗೆದು ಸುಡಲು ಯತ್ನ, ಶವದ ರುಂಡ ಕಾಣೆ

ಬಳ್ಳಾರಿ:  ಬಿಳಿ ಮಚ್ಚೆಇರುವ ವ್ಯಕ್ತಿಯೊಬ್ಬರ ಶವವನ್ನು ಸುಡದೇ ಹೂತಿರುವುದರಿಂದ ನಗರದಲ್ಲಿ ಮಳೆಯಾಗುತ್ತಿಲ್ಲ ಎಂದು ಆರೋಪಿಸಿ   ಗ್ರಾಮಸ್ಥರು ಶವವನ್ನು ಹೊರತಗೆದು ಸುಡಲು ಮುಂದಾಗಿದ್ದು, ಇದನ್ನು ತಡೆಯಲು ಮುಂದಾದ ಕಟುಂಬದವರಿಗೆ ಮತ್ತು ಪೊಲೀಸ ಪೇದೆಗಳಿಗೆ ಹಲ್ಲೆ ಮಾಡಿ ಶವದ ರುಂಡ ತಗೆದುಕೊಂಡು ಹೋದ ಘಟನೆ ಕೂಡ್ಲಗಿ ತಾಲೂಕಿನ ಅಗ್ರಹಾರದಲ್ಲಿ ನೆಡೆದಿದೆ. ಬಿಳಿ ಮಚ್ಚೆ ಹೊಂದಿರುವ ಅಗ್ರಹಾರ ನಿವಾಸಿ ಕೊಟ್ರಬಯ್ಯ ಎಂಬುವವರರು ಕಳೆದ ವರ್ಷ ಸಾವನ್ನಪ್ಪಿದ್ದರು. ಇವರ ಕುಟಂಬಸ್ಥರು ಸ್ವತಂ ಜಮೀನಿನಲ್ಲಿ ಇವರ ಅಂತ್ಯಕ್ರಿಯೆ ನೆರವೇರಿಸಿದ್ದರು.  ಅಕ್ಕಪಕ್ಕದ ಗ್ರಾಮಸ್ಥರು ಶವವನ್ನು […]

ಬಳ್ಳಾರಿ: ವಿಷ ಆಹಾರ ಸೇವಿಸಿ 13 ಕುರಿಗಳು ಸಾವು

ಬಳ್ಳಾರಿ: ವಿಷ ಆಹಾರ ಸೇವಿಸಿ 13 ಕುರಿಗಳು ಸಾವು

ಬಳ್ಳಾರಿ: ಕೂಡ್ಲಗಿ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ವಿಷ ಆಹಾರ ಸೇವಿಸಿ  13 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಹುಣಸಿಕಟ್ಟೆ ಗ್ರಾಮದ ನಿವಾಸಿ  ರಮೇಶ ಮತ್ತು ಮಂಜಪ್ಪ ಎಂಬುವರಿಗೆ ಸೇರಿದ ಕುರಿಗಳು ಇವಾಗಿದ್ದು, ಸೋಮವಾರ ಗ್ರಾಮದ ಹೊರವಲಯದಲ್ಲಿ ಮೇಯಲು ಹೋದಾಗ ವಿಷ ಆಹಾರ ಸೇವಿಸಿ ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಈ ಕುರಿತು ಕೊಟ್ಟೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್, ಬಿಜೆಪಿ ಶಾಸಕರು ಜೆಡಿಎಸ್ ಸೇರಲಿದ್ದಾರೆ: ಹೆಚ್. ವಿಶ್ವನಾಥ

ಕಾಂಗ್ರೆಸ್, ಬಿಜೆಪಿ ಶಾಸಕರು ಜೆಡಿಎಸ್ ಸೇರಲಿದ್ದಾರೆ: ಹೆಚ್. ವಿಶ್ವನಾಥ

ಬಳ್ಳಾರಿ: ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಬೇಸತ್ತಿರುವ ಶಾಸಕರು, ಮುಖಂಡರು ಬರುವ ದೀಪಾವಳಿ ಹಬ್ಬದ ನಂತರ ಜೆಡಿಎಸ್ ಗೆ ಸೇರಲಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಂಸದ ಹೆಚ್ ವಿಶ್ವನಾಥ ಅವರು ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತ ಶಾಸಕರು, ಮುಖಂಡರು ಪ್ರಾದೇಶಿಕ ಪಕ್ಷದತ್ತ  ಒಲವುತೋರಿಸುತ್ತಿದ್ದಾರೆ. 1994 ರಲ್ಲಿ ಬಳ್ಳಾರಿ,  ದಾವಣಗೆರೆ, ಮೈಸೂರು ಮೊದಲಾದ ಕಡೆಗಳಲ್ಲಿ ನಡೆದ ಸಭೆಯಲ್ಲಿ ನಾನು ಮುಖ್ಯಮಂತ್ರಿಯಾದರೆ ಹಾಲುಮತವನ್ನು ಎಸ್‌ಟಿ ವರ್ಗಕ್ಕೆ ಸೇರಿಸುತ್ತೇನೆ […]

ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ನಾಲ್ವರಿಂದ ಅತ್ಯಾಚಾರ, ಹಲ್ಲೆ

ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ನಾಲ್ವರಿಂದ ಅತ್ಯಾಚಾರ, ಹಲ್ಲೆ

ಬಳ್ಳಾರಿ: ಬಹಿರ್ದೆಸೆಗೆಂದು ಹೊರ ಹೋಗಿದ್ದ ಮಹಿಳೆಯನ್ನು ಅಪಹರಿಸಿದ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ತಿಳಿಸದಂತೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಬಿ. ಗೋನಾಳು ಗ್ರಾಮದಲ್ಲಿ ನಡೆದಿದೆ. ಘಟನೆ ನಡೆದು ಒಂದು ಗಂಟೆ ನಂತರ ಮತ್ತೊಬ್ಬ ಮಹಿಳೆ ನೋಡಿ ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ತ ಮಹಿಳೆಯನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾಳೆ. ಸುದ್ದಿ ತಿಳಿದ ನಂತರ ಗ್ರಾಮಸ್ಥರು ರಾತ್ರಿ ರಸ್ತೆ ತಡೆ ಹಿಡಿದು ದಿಡೀರ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಇನ್ನೂ ಪೊಲೀಸ್ ಠಾಣೆಯಲ್ಲಿ […]

ದಲಿತ ವಿರೋಧಿ ನೀತಿಯಿಂದ ಬೇಸರವಾಗಿದೆ: ಪರಶುರಾಮ ನಿಲನಾಯಕ

ದಲಿತ ವಿರೋಧಿ ನೀತಿಯಿಂದ ಬೇಸರವಾಗಿದೆ: ಪರಶುರಾಮ ನಿಲನಾಯಕ

ದಿನದಲಿತರಿಗೆ ಬೆಲೆ ಇಲ್ಲದಂತಾಗಿದೆ, ನಮ್ಮಆಯ್ಕೆ ಆಹಾರ ತಿನ್ನುವ ಹಕ್ಕು ಕೇಂದ್ರ ಕಸಿದುಕೊಳ್ಳುತ್ತಿದೆ ಬಳ್ಳಾರಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನ ತಿದ್ದುಪಡಿ ಮಾಡುವಷ್ಟು ವಿದ್ವಾಂಸರು ನಮ್ಮ ದೇಶದಲ್ಲಿ ಹುಟ್ಟಿದ್ದಾರೆ ಎಂದು ಕನಾ೯ಟಕ ದಲಿತ ಸಂಘಷ೯ ಸಮಿತಿ ಭೀಮವಾದದ ರಾಜ್ಯ ಸಂಚಾಲಕ ಪರಶುರಾಮ ನಿಲನಾಯಕ ಹೇಳಿದರು. ಹೊಸಪೇಟೆ ನಗರದ ಪಂಪಾ ಕಲಾ ಮಂದಿರದಲ್ಲಿ ನಡೆದ ದಲಿತ ಸಂಘಷ೯ ಸಮಿತಿ ಬೀಮವಾದ ಮಹಿಳಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಂವಿಧಾನ ಬಚಾವೋ ದೇಶ ಬಚಾವೋ ಮಹಿಳಾ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಬಡವರಿಗೆ […]

ಕೊಟ್ಟೂರಿನಲ್ಲಿ ಮಗುವಿಗೆ ವಿಷ ಉಣಿಸಿ ದಂಪತಿ ಆತ್ಮಹತ್ಯೆ

ಕೊಟ್ಟೂರಿನಲ್ಲಿ ಮಗುವಿಗೆ ವಿಷ ಉಣಿಸಿ ದಂಪತಿ ಆತ್ಮಹತ್ಯೆ

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಕೊಟ್ಟೂ ರಿನಲ್ಲಿ  ಗಂಡ ಹೆಂಡತಿ ತಮ್ಮ 3 ವರ್ಷದ ಮಗುವಿಗೆ ವಿಷ ಕುಡಿಸಿ ತಾವೂ ವಿಷ ಸೇವಿಸಿ ಮಂಗಳವಾರ ರಾತ್ರಿ ತಮ್ಮದೇ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬುಧವಾರ ಬೆಳಕಿಗೆ ಬಂದಿದೆ. ಮೃತ್ಯುಂಜಯ(48) ಪತ್ನಿ ಮಧು ಮತ್ತು 3 ವರ್ಷದ ಮಗಳು ಬಿಂದು ಮೃತಪಟ್ಟವರು. ಸಾವಿಗೆ ತಾವೇ ಕಾರಣ ಎಂದು ಮರಣ ಪತ್ರ ಬರೆದಿಟ್ಟಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿದರು. ಮೃತ ಮೃತ್ಯುಂಜಯ ಅವರು ಕೊಟ್ಟೂರಿನಲ್ಲಿ ಪ್ಲಾಟ್, […]