25 ರಿಂದ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ

25 ರಿಂದ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ

ಕಲಬುರಗಿ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನ. 25 ಮತ್ತು 26ರಂದು ಎರಡು ದಿನಗಳ ಕಾಲ 38ನೇ ಸರಣ ಕಮ್ಮಟ ಅನುಭವ ಮಂಟಪ ಉತ್ಸವ-2017 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಕಲ್ಯಾಣ ಅನುಭವ ಮಂಟಪ ವಿಶ್ವ ಬಸವ ದರ್ಮ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು. ಗದುಗಿನ ತೋಂಟದಾರ್ಯ ಮಠದ ಪೂಜ್ಯಶ್ರೀ ಜಗದ್ಗುರು ಡಾ. ಸಿದ್ಧಲಿಂಗ ಸ್ವಾಮೀಜಿ, ಹಾರಕೂಡ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲಂನ ಸಾರಂಗ ಮಠದ ಜಗದ್ಗುರು ಡಾ. ಸಾರಂಗಧರ […]

ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಬೀದರನಲ್ಲಿ ಕರವೇಯಿಂದ ಪ್ರತಿಭಟನೆ

ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಬೀದರನಲ್ಲಿ ಕರವೇಯಿಂದ ಪ್ರತಿಭಟನೆ

ಬೀದರ: ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಡಾ. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತ ಪಡಿಸಿದರು. ಲಕ್ಷ್ಮಿ ಹೇಬಾಳ್ಕರ್ ಉನ್ನತ ಸ್ಥಾನದಲ್ಲಿದ್ದು,  ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರಿಗೆ ಅಪಮಾನ  ಮಾಡಿದ್ದಾರೆ. ಕೂಡಲೇ ಅವರು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನದಿಂದ ಕೈ ಬಿಡಬೇಕು. ಮಹಾರಾಷ್ಟ್ರದ ಮೇಲೆ ಅಷ್ಟೊಂದು ಪ್ರೇಮವಿದ್ದರೆ ಹೆಬ್ಬಾಳ್ಕರ್ […]

ಕರ್ತವ್ಯನಿರತ ಪೊಲೀಸ್‌ ಪೇದೆ ಹೃದಯಾಘಾತದಿಂದ ಸಾವು: ಎರಡು ದಿನ ಬಳಿಕ ಶವ ಪತ್ತೆ

ಕರ್ತವ್ಯನಿರತ ಪೊಲೀಸ್‌ ಪೇದೆ ಹೃದಯಾಘಾತದಿಂದ ಸಾವು: ಎರಡು ದಿನ ಬಳಿಕ ಶವ ಪತ್ತೆ

ಬೆಳಗಾವಿ: ಇತ್ತೀಚಿಗೆ ವಿಜಯಪುರ ಜಿಲ್ಲೆಯ ಕರ್ತವ್ಯನಿರತ ಪೊಲೀಸ ಪೇದೆಯೊಬ್ಬರು ನಗರದಲ್ಲಿ ಹೃದಯಾಘಾತದಿಂದ ಮೃತಪಟ್ಟ  ಬಳಿಕ ಮತ್ತೊಬ್ಬ ಪೇದೆ ಸಾವನ್ನಪ್ಪಿದ್ದು, ಇವರ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ. ಪ್ರಕಾಶ(42)ಮೃತ ಪೊಲೀಸ ಪೇದೆ. ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ದಿನ್ನೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇದೆ. ಗಣೇಶ ಉತ್ಸವದ ಭದ್ರತೆಗೆ ನಗರಕ್ಕೆ ಆಗಮಿಸಿದ್ದರು. ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿರಲ್ಲಿಲ್ಲ.  ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಪೇದೆಯನ್ನು ಹುಡುಕುವ ಪ್ರಯತ್ನ ಮಾಡದೇ ಆಲಸ್ಯ ತೋರಿದ್ದಾರೆ. ಶನಿವಾರ ಬೆಳಗ್ಗೆ ಮಾರುತಿಗಲ್ಲಿ […]

ಬೀದರ್: ಲಾರಿ ಹಾಯ್ದು ಶಾಲಾ ಬಾಲಕ ಸಾವು

ಬೀದರ್: ಲಾರಿ ಹಾಯ್ದು ಶಾಲಾ ಬಾಲಕ ಸಾವು

ಬೀದರ್‌: ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿ ಲಾರಿ ಹಾಯ್ದು ಶಾಲಾ ಬಾಲಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಇಂದಿರಾನಗರದ  ಚಂದ್ರಕಾಂತ (11) ಮೃತ ಬಾಲಕ.  ರಾಷ್ಟ್ರೀಯ ಹೆದ್ದಾರಿ 9 ರಲ್ಲಿ  ಬಾಲಕನ ರಸ್ತೆ ದಾಟುತ್ತಿರುವಾಗ ಚಾಲಕನ ನಿರ್ಲಕ್ಷದಿಂಧ  ಅವಘಡ ಸಂಭವಿಸಿದ್ದು, ಘಟನೆ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಮನಾಬಾದ: ಲಾರಿ ಹಾಯ್ದು ಇಬ್ಬರ ಸಾವು

ಹುಮನಾಬಾದ:  ಲಾರಿ  ಹಾಯ್ದು ಇಬ್ಬರ ಸಾವು

ಹುಮನಾಬಾದ:  ನಗರದ ಹೆದ್ದಾರಿ ಮೇಲಿರುವ ಧಾಬಾದಲ್ಲಿ ಊಟ ಮಾಡಿ  ಹೆದ್ದಾರಿ ದಾಟುತ್ತಿರುವ  ಪಾದಚಾರಿಗಳ ಮೇಲೆ ಲಾರಿ ಹಾಯ್ದು ಇಬ್ಬರು ಸಾವನ್ನಪಿರುವ ಘಟನೆ ಶುಕ್ರವಾರ ನಡೆದಿದೆ. ಕುಮರಚುಂಚಳಿ ಗ್ರಾಮದ ಬಾಬು ಚಂದ್ರಪ್ಪ ಘನಚಕರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ ಚಾಂದಪಾಶಾ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಹುಮನಾಬಾದ ತಹಶೀಲ್ದಾರ ಕಚೇರಿಗೆ ಕೆಲಸಕ್ಕೆ ಬಂದಿದ್ದ ಮೃತ ದುರ್ಧೈವಿಗಳು ಮಧ್ಯಾಹ್ನ ಊಟಕ್ಕೆ ಅಂತ ಎನ್ ಎಚ್ 9 ರಾಷ್ಟ್ರೀಯ ಹೆದ್ದಾರಿ ಮೇಲಿರುವ ಧಾಬಾಗೆ ಹೋಗಿರುತ್ತಾರೆ. ಊಟ ಮುಗಿಸಿ ರಸ್ತೆ ದಾಟುವಾಗ ಈ […]

ಬೀದರ್‍: ಕಾರ್ಖಾನೆ ಬಾಯ್ಲರ್ ಸ್ಪೋಟ, ಕಾರ್ಮಿಕ ಸಾವು

ಬೀದರ್‍: ಕಾರ್ಖಾನೆ ಬಾಯ್ಲರ್ ಸ್ಪೋಟ, ಕಾರ್ಮಿಕ ಸಾವು

  ಬೀದರ್‍: ಹುಮ್ನಾಬಾದ್‍ನಲ್ಲಿರುವ ಎಸ್‍.ಕೆ ಆರ್ಗಾನಿಕ್ ಕೆಮಿಕಲ್ ಕಾರ್ಖಾನೆಯ ಬಾಯ್ಲರ್‍ ಸ್ಪೋಟಗೊಂಡ ಪರಿಣಾಮ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.   ಮೃತ ಕಾರ್ಮಿಕ ವೆಂಕಟೇಶ್‍(40) ಎಂದು ಗುತಿಸಲಾದ್ದು, ಕಾರ್ಖಾನೆಯಲ್ಲಿ ಈತನೊಂದಿಗೆ ಎಂಟು ಜನ ಕೆಲಸ ನಿರ್ವಹಿಸುತ್ತಿದ್ದರು. ಸ್ಫೋಟಗೊಳ್ಳುವ ಮುನ್ನ ಅವರೆಲ್ಲ ಹೊರಗಡೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಬಾಯ್ಲರ್‌ ಸ್ಫೋಟಗೊಂಡ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಹುಬ್ಬಳ್ಳಿ: ಬಸ್ ನಲ್ಲಿಯೇ ನಿರ್ವಾಹಕ ನೇಣಿಗೆ ಶರಣು

ಹುಬ್ಬಳ್ಳಿ: ಬಸ್ ನಲ್ಲಿಯೇ ನಿರ್ವಾಹಕ ನೇಣಿಗೆ ಶರಣು

ಹುಬ್ಬಳ್ಳಿ: ನಗರದ ಹೊಸ ಬಸ್ ನಿಲ್ದಾಣದಲ್ಲಿ ನಿರ್ವಾಹಕನೊಬ್ಬ ಬಸ್‍ನಲ್ಲಿಯೇ ನೇಣಿಗೆ ಶರಣಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಬಸವಕಲ್ಯಾಣ ಡಿಪೋದ ನಿರ್ವಾಹಕ ಅಬ್ಬಾಸ ಅಲಿ ನೇಣಿಗೆ ಶರಣಾದವರು. ಗುರುವಾರ ಬಸವ ಕಲ್ಯಾಣದಿಂದ  ಹುಬ್ಬಳ್ಳಿಗೆ ಆಗಮಿಸಿದ್ದರು‌.  ಊಟ ಮಗಿಸಿಕೊಂಡು ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರು ಮಲಗಿದ್ದರು. ನಂತರ ಅಬ್ಬಾಸ್ ಅಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಬಸ್ ಚಾಲಕ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, […]

ಸೇಡಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಸೇಡಂ: ನಗರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ  595ನೇ ಜಯಂತಿ ಆಚರಿಸಲಾಯಿತು. ಹೇಮರಡ್ಡಿ ಮಲ್ಲಮ್ಮ ಅವರ ಚಿತ್ರಕ್ಕೆ ಸಹಾಯಕ ಆಯುಕ್ತ  ಪರಶುರಾಮ ಪೂಜೆ ಸಲ್ಲಿಸಿ ಮಾತನಾಡಿದರು. ಆಯುಕ್ತರ ಕಾರ್ಯಲಯದ ಮೈದಾನದಲ್ಲಿ ಸಭೆ ಆಯೋಜಿಸಲಾಗಿತ್ತು. ಬಿಜೆಪಿ ಮುಖಂಡ ಬಸವಂತ ರೆಡ್ಡಿ, ನಾಗೇಶ್ವರಾವ್ ಮಾಲಿಪಾಟೀಲ್, ತಹಸೀಲ್ದಾರ್ ಸುಬಣಾ ಜಮಖಂಡಿ ಇತರರು ಇದ್ದರು.