ಕಲಬುರ್ಗಿ : ಸಿಡಿಲಿಗೆ ಮನೆ ಕುಸಿತ, ಮೂವರ ಸಾವು!

ಕಲಬುರ್ಗಿ : ಸಿಡಿಲಿಗೆ ಮನೆ ಕುಸಿತ, ಮೂವರ ಸಾವು!

ಕಲಬುರ್ಗಿ: ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಪರಿಣಾಮ ಸಿಡಿಲು ಬಡಿದು ಮನೆ ಕುಸಿದು ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮಂಗಲಗಿ ಗ್ರಾಮದ ಅಬಿದಾಬಿ ಮುಜಾವಾರ್ (60), ಅಲಿಯಾ ಮುಸ್ತಫ (12) ಮತ್ತು ಶಫಿಕ್ ಭಂಟನಳ್ಳಿ (18) ಈ ಮೂವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮೆಹಬೂಬ ಭಂಟನಳ್ಳಿ (15) ಹಾಗೂ ಹೈದರಸಾಬ್ ಭಂಟನಳ್ಳಿ(50) ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಳಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ Views: 116

ಕಾಂಗ್ರೆಸ್ ಪಕ್ಷ ನನ್ನನ್ನು ಪರಿಗಣಿಸಬೇಕು: ಶಾಸಕ ಅಜಯ ಸಿಂಗ್

ಕಾಂಗ್ರೆಸ್ ಪಕ್ಷ ನನ್ನನ್ನು ಪರಿಗಣಿಸಬೇಕು: ಶಾಸಕ ಅಜಯ ಸಿಂಗ್

ಕಲಬುರಗಿ: ಇಲ್ಲಿನ ಜೇವರ್ಗಿ ಕಾಂಗ್ರೆಸ್ ಶಾಸಕ, ಮಾಜಿ ಸಿಎಂ ದಿ. ಧರ್ಮಸಿಂಗ್ ಪುತ್ರ ಅಜಯ ಸಿಂಗ್ ಕಾಂಗ್ರೆಸ್ ಪಕ್ಷ ನನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ನಾನೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಹೈಕಮಾಂಡ್ ನನ್ನನ್ನು ಪರಿಗಣಿಸಬೇಕು. ನಾನೂ ಕೂಡ ಸಚಿವ ಸ್ಥಾನ ಆಕಾಂಕ್ಷಿ ಎನ್ನುವ ಮೂಲಕ ತಾನೂ ಅತೃಪ್ತ ಶಾಸಕ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇನ್ನೂ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರು ಅದಕ್ಕೆ ಬದ್ಧನಾಗಿರುವುದಾಗಿ ಕೂಡ ಅಜಯ ಸಿಂಗ್ ತಿಳಿಸಿದ್ದಾರೆ. […]

ಮೇ 31 ರಂದು ಜಯಶ್ರೀ ದಂಡೆಯವರ ಬದುಕು ಬರಹ: ವಿಚಾರ ಸಂಕಿರಣ

ಮೇ 31 ರಂದು ಜಯಶ್ರೀ ದಂಡೆಯವರ ಬದುಕು ಬರಹ: ವಿಚಾರ ಸಂಕಿರಣ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ. ಜಯಶ್ರೀ ದಂಡೆ ಅವರ ಬದುಕು ಬರಹ ಹಾಗೂ ಅಭಿನಂದನ ಸಮಾರಂಭವನ್ನು ಮೇ 31ರಂದು ಬೆಳಗ್ಗೆ 9ರಂದು ಮಧ್ಯಾಹ್ನ 1 ಗಂಟೆಯವೆರೆಗೆ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರಸ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಜಯಶ್ರೀ ದಂಡೆ ಅಭಿನಂದನ ಸಮಿತಿ ತಿಳಿಸಿದೆ. ಬೆಳಗ್ಗೆ 9 ಗಂಟೆಗೆ ಜರುಗಲಿರುವ ವಿಚಾರ ಸಂಕುರಣದ ಉದ್ಘಾಟನೆಯನ್ನು ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ಉದ್ಘಾಟಿಸಲಿದ್ದಾರೆ. ಡಾ. ಆನಂದ ಸಿದ್ಧಾಮಣಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. […]

ಮುಳಸಾವಳಗಿ ಕಾಯಕ ದಾಸೋಹ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ

ಮುಳಸಾವಳಗಿ ಕಾಯಕ ದಾಸೋಹ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ

ಡಾ. ತೋಂಟದ ಸಿದ್ಧರಾಮ ಸ್ವಾಮೀಜಿಯಿಂದ ಕಲ್ಯಾಣ ಶರಣರ ಉದಾತ್ತ ಚಿಂತನೆಗಳು ಕೃತಿ ಜನಾರ್ಪಣೆ ಸಾಹಿತಿ ಶಿವರಂಜನ್ ಸತ್ಯಂಪೇಟೆ ಅವರಿಂದ” ಜಗದ ಬೆಳಕು” ಎಂಬ ವಿಷಯದ ಬಗ್ಗೆ ಉಪನ್ಯಾಸ ವಿಜಯಪುರ: ಬಸವಾದಿ ಶರಣರ ಕಾಯಕ ದಾಸೋಹ ಹಾಗೂ ಸಮಾನತೆಯನ್ನು ತಳಹದಿಯನ್ನಾಗಿಟ್ಟುಕೊಂಡು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕಾಯಕ ದಾಸೋಹ ಪ್ರತಿಷ್ಠಾನವು ತನ್ನ 10ನೇ ವರ್ಷಾಚರಣೆ ನಿಮಿತ್ತ ಹಲವು ಹತ್ತು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ನುಡಿದರು. ಜಿಲ್ಲೆಯ […]

ಮೋಹನರಾಜ್ ಪತ್ತಾರ ಅವರಿಗೆ ಪಿ.ಎಚ್. ಡಿ

ಮೋಹನರಾಜ್ ಪತ್ತಾರ ಅವರಿಗೆ  ಪಿ.ಎಚ್. ಡಿ

ಕಲಬುರಗಿ: ಭೌತಶಾಸ್ತ್ರ ವಿಷಯದಲ್ಲಿ ಪ್ರಬಂಧ ಮಂಡಿಸಿದ ಮೋಹನರಾಜ್ ಪತ್ತಾರ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪಿ.ಎಚ್. ಡಿ ಪ್ರಕಟಿಸಿದೆ. ಮೋಹನರಾಜ್ ಅವರು ” ಸ್ಟಡಿ ಆನ್ ಎಲೆಮೆಂಟಲ್ ಅನಾಲೆಸಿಸ್ ಆಫ್ ಮೆಡಿಸ್ನಲ್ ಬೈ ಎಕ್ಸರೇಸ್” ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು. ಡಾ. ಬಿ.ಆರ್ ಕೋರೂರ್ ಅವರು ಮಾರ್ಗದರ್ಶನ ಮಾಡಿದ್ದರು. Views: 54

ಅಂತರ್ ರಾಜ್ಯ ಜಿಂಕೆ ಬೇಟೆಗಾರರ ಬಂಧನ

ಅಂತರ್ ರಾಜ್ಯ ಜಿಂಕೆ ಬೇಟೆಗಾರರ ಬಂಧನ

ಕಲಬುರ್ಗಿ: ಅಂತರ್ ರಾಜ್ಯ ಜಿಂಕೆ ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆ ನಾಗಲಗೀತ ಮಂಡಲ ಗ್ರಾಮದಲ್ಲಿ ಹೈಫೈ ಕಾರಿನಲ್ಲಿ ಬಂದು ಜಿಂಕೆ ಬೇಟೆಯಾಡಿ ಮಾಂಸ ಚರ್ಮ ಸಾಗಿಸುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ. ಕಲ್ಬುರ್ಗಿಯ ಮಹಮ್ಮದ್ ಶಾಕೀರ್, ಮಹಮ್ಮದ್ ಅಬ್ದುಲ್ ವಾಹಬ್, ಮಹಮ್ಮದ್ ನಿಜಾಜ್, ಹೈದರಾಬಾದಿನ ಮಹಮ್ಮದ್ ಮುಕ್ರಂ ಹಾಗೂ ಮಹಮ್ಮದ್ ಮುನೀರ್ ಬಂಧಿತ ಆರೋಪಿಗಳಾಗಿದ್ದು ಬೇಟೆಗೆ ಬಳಸಿದ ಸ್ಕಾರ್ಪಿಯೋ ವಾಹನ, 30.60 ಸ್ಪೋರ್ಟ್ಸ್ ರೈಫಲ್, 12 ಜೀವಂತ ಗುಂಡು, 4 ಚಾಕು, ಜಿಂಕೆ […]

ಎದೆಯ ದನಿಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ: ಸಾಹಿತಿ ಸತ್ಯಂಪೇಟೆ

ಎದೆಯ ದನಿಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ: ಸಾಹಿತಿ ಸತ್ಯಂಪೇಟೆ

ಕಲಬುರಗಿ: ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವುದೇ ಧರ್ಮ. ದಯೆಯೇ ಧರ್ಮದ ಮೂಲ ಎಂದು ಧರ್ಮದ ಪರಿಕಲ್ಪನೆಯನ್ನು ಸರಳೀಕರಣಗೊಳಿಸಿದ, ಸ್ಪಷ್ಟಪಡಿಸಿದ ಬಸವಾದಿ ಶರಣರು ಲಿಂಗಾಯತ ಸ್ವತಂತ್ರ ಧರ್ಮದ ನಿರ್ಮಾತೃಗಳು ಎಂದು ಲೇಖಕ, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು. ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಭಾರತೀಯ ಬಸವ ಬಳಗ, ಬಸವ ಮಾರ್ಗ ಪ್ರತಿಷ್ಠಾನ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಶರಣ ಸಾಹಿತ್ಯ ಪರಿಷತ್ ಇವುಗಳ ಸಹಯೋಗದಲ್ಲಿ ಪಟ್ಟಣದ ಬಸವ ಮಂಟಪದಲ್ಲಿ ಆಯೋಜಿಸಿದ್ದ ಶರಣ ಸಂಗಮ ಹಾಗೂ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ “ಯಾವುದು […]

ಚಿಂಚೊಳ್ಳಿ ಕೈ ಅಭ್ಯರ್ಥಿ ಟೆಂಪಲ್ ರನ್: ಡಾ. ರಾಮರಾಮ್ ಶ್ರೀ ಭೇಟಿ ಮಾತುಕತೆ

ಚಿಂಚೊಳ್ಳಿ ಕೈ ಅಭ್ಯರ್ಥಿ ಟೆಂಪಲ್ ರನ್: ಡಾ. ರಾಮರಾಮ್ ಶ್ರೀ ಭೇಟಿ ಮಾತುಕತೆ

ಕಲಬುರಗಿ: ಚಿಂಚೊಳ್ಳಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಟೆಂಪಲ್ ರನ್ ಆರಂಭಿಸಿದ್ದಾರೆ. ಇಂದು ಬೆಳಗಿನ ಜಾವ 7.30 ರ ಸುಮಾರಿಗೆ ಮಹಾರಾಷ್ಟ್ರದ ಪೌರಾದೇವಿ ಪೀಠದ ಡಾ. ರಾಮರಾಮ್ ಮಹಾರಾಜ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದ್ದಾರೆ. ಬಂಜಾರಾ ಸಮುದಾಯದ ನಡೆದಾಡುವ ದೇವರು ಎಂದು ರಾಮರಾಮ್ ಮಹಾರಾಜರು ಹೆಸರು ವಾಸಿಯಾಗಿದ್ದು, ಚಿಂಚೊಳ್ಳಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರಾ ಸಮುದಾಯದ ಮತಗಳಿದ್ದು, ತಮಗೆ ಬೆಂಬಲಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಮನವಿ ಮಾಡಿದ್ದಾರೆ. Views: 210

ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ: ತಪ್ಪಿದ ಭಾರಿ ಅನಾಹುತ!

ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ: ತಪ್ಪಿದ ಭಾರಿ ಅನಾಹುತ!

ಕಲಬುರಗಿ: ಸಿಲಿಂಡರ್ ಸ್ಪೋಟಗೊಂಡು ಹೋಟೆಲ್ ಬೆಂಕಿಗಾಹುತಿಯಾದ ಘಟನೆ ನಗರದಲ್ಲಿ ನಡೆದಿದ್ದು, ಅದೃಷ್ಟವಶಾಹತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇಲ್ಲಿನ ರೋಜಾ ಪ್ರದೇಶದಲ್ಲಿನ ಖ್ವಾಜಾ ಬಂದೇನವಾಜ್ ಎಂಬುವವರಿಗೆ ಸೇರಿದ ಲಬ್ಬಾಯಿಕ್ ಹೋಟೆಲ್ ನಲ್ಲಿ ಅಡುಗೆ ಸಿಲಿಂಡರ್ ಸ್ಪೋಟಗೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾಹತ್ ಯಾರು ಇಲ್ಲದರಿಂದ ಭಾರಿ ಅನಾಹುತ ತಪ್ಪಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Views: 112

ದೃಶ್ಯಕಲೆಯಲ್ಲಿ ಮಾನವ ಶಾಸ್ತ್ರೀಯ ಗುಣವಿದೆ:ಸತ್ಯಂಪೇಟೆ

ದೃಶ್ಯಕಲೆಯಲ್ಲಿ ಮಾನವ ಶಾಸ್ತ್ರೀಯ ಗುಣವಿದೆ:ಸತ್ಯಂಪೇಟೆ

ಕಲಬುರಗಿ: ಪ್ರತಿಭೆಯ ಜೊತೆಗೆ ಪ್ರಯತ್ನ ಕೂಡ ಅಗತ್ಯ. ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮತನವನ್ನು ಮೆರೆಯಬೇಕು ಎಂದು ಲಲಿತಾಕಲಾ ಅಕಾಡೆಮಿ ಸದಸ್ಯ ಮಹ್ಮದ್ ಅಯಾಜುದ್ದೀನ್ ಪಟೇಲ್ ಹೇಳಿದರು. ಲಿಯೊನಾರ್ಡೊ ಡ ವಿಂಚಿ ಜನುಮ ದಿನದ ಅಂಗವಾಗಿ ಇಲ್ಲಿನ ದೃಶ್ಯಕಲಾ ಸಾಂಸ್ಕೃತಿಕ ಸಂಸ್ಥೆ ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ದೃಶ್ಯಕಲಾ ದಿನಾಚರಣೆ ಆರನೆ ವಾರ್ಷಿಕ ಚಿತ್ರ-ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಲೆ ದೃಷ್ಟಿಯಿಂದ ಕಲ್ಬುರ್ಗಿ ಅತ್ಯಂತ ಹಾಟೆಸ್ಟ್ ಸಿಟಿ. ಇಲ್ಲಿ ಬಿಸಿಲು ಪ್ರಖರತೆ ಇರುವಂತೆ ಕಲೆ ಕೂಡ […]

1 2 3 47