ಕಲಬುರಗಿ: ಹೈಕ ಲೇಖಕರ ಗ್ರಂಥಾಲಯ ಉದ್ಘಾಟನೆ 31ರಂದು

ಕಲಬುರಗಿ: ಹೈಕ ಲೇಖಕರ ಗ್ರಂಥಾಲಯ ಉದ್ಘಾಟನೆ 31ರಂದು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಡಿ.31 ರಂದು ಬೆಳಿಗ್ಗೆ 10.30 ಗಂಟೆಗೆ ಹೈದ್ರಾಬಾದ ಕರ್ನಾಟಕ ಲೇಖಕರ ಗ್ರಂಥಾಲಯ ಹಾಗೂ ಭಾವಚಿತ್ರಗಳ ಭವನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ ಗ್ರಂಥಾಲಯ ಹಾಗೂ ಭಾವಚಿತ್ರಗಳ ಭವನದ ಉದ್ಘಾಟನೆ ನೆರವೇರಿಸಲಿದ್ದಾರೆ. ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ಅವರು ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ.ಸಿ.ಸೋಮಶೇಖರ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಡಿ.ಎಂ.ಮದರಿ, ವಿತ್ತಾಧಿಕಾರಿ ಪ್ರೊ.ಲಕ್ಷ್ಮಣ ರಾಜನಾಳಕರ್, ಸಮಾಜ ವಿಜ್ಞಾನ ನಿಕಾಯದ […]

ಕಲಬುರಗಿಯಲ್ಲಿ ನಾಳೆ ತೊಗರಿ ಬೆಳೆಗಾರರ ಸಭೆ

ಕಲಬುರಗಿಯಲ್ಲಿ ನಾಳೆ ತೊಗರಿ ಬೆಳೆಗಾರರ ಸಭೆ

ಕಲಬುರಗಿ: ತೊಗರಿ ಬೆಳೆಗಾರ, ಉದ್ಯಮಿ, ವ್ಯಾಪಾರಿಗಳ ರಕ್ಷಣೆ ಕುರಿತು ಚರ್ಚಿಸಲು ನಾಳೆ ( ಡಿಸೆಂಬರ್ 30) ಬೆಳಿಗ್ಗೆ 11 ಕ್ಕೆ ಚೆಂಬರ್ ಆಫ್ ಕಾಮರ್ಸ್  ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಮಾಜಿ ಸಚಿವ ಎಸ್ ಕೆ ಕಾಂತಾ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ,  ಜಿ.ವಿ ಶ್ರೀರಾಮರೆಡ್ಡಿ,ನಾಸೀರ ಹುಸೇನ್, ರೈತ ನಾಯಕ ಚಾಮರಾಜ ಪಾಟೀಲ ಮತ್ತು ರೈತ ನಾಯಕರು. ಅಡತ ವ್ಯಾಪಾರಿಗಳು ,ದಾಲ್ ಮಿಲ್ ಉದ್ಯಮಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು […]

ಕಳಸಾ ಬಂಡೂರಿ ನಾಲೆಗೆ ಚಾಲನೆ ನೀಡಲು ಆಗ್ರಹಿಸಿ ಪ್ರತಿಭಟನೆ

ಕಳಸಾ ಬಂಡೂರಿ ನಾಲೆಗೆ ಚಾಲನೆ ನೀಡಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಕಳಸಾ ಬಂಡೂರಿ ನಾಲಗೆ ಚಾಲನೆ ದೊರೆಯಲಿ, ಕುಡಿವ ನೀರಿನ ಬವಣೆ ತಪ್ಪಿಸಿ ಜನ ಜಾನುವಾರುಗಳ ದಾಹ ನೀಗಿಸುವಂತೆ ಆಗ್ರಹಿಸಿ ಇಲ್ಲಿನ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಹದಾಯಿ ಕುಡಿವ ನೀರಿನ ಹಂಚಿಕೆ ಕುರಿತಂತೆ ಮಹದಾಯಿ ನದಿ ಪ್ರಾಧಿಕಾರವು ನ್ಯಾಯಾಧೀಕರಣಕ್ಕೆ ಸಲ್ಲಿಸಿದ ವರದಿಯನ್ವಯ ನ್ಯಾಯಾಧೀಕರಣವು ಕಳೆದ ಆಗಸ್ಟ್ನಲ್ಲಿ ಕರ್ನಾಟಕ 13.4 ಟಿಎಂಸಿ ನೀರಿನ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ತೀರ್ಪು ನೀಡಿರುತ್ತದೆ. ಇದರಂತೆ 5.4 ಟಿಎಂಸಿ ಕುಡಿವ ನೀರಿನ ಬಳಕೆಗೂ, 8.02 […]

ಕಲಬುರಗಿ: ನ್ಯಾಕ್ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಕಲಬುರಗಿ: ನ್ಯಾಕ್ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಕಲಬುರಗಿ: ಪ್ರಸ್ತುತ ದಿನಮಾನಗಳಲ್ಲಿ ಭಾರತದಲ್ಲಿ ಪದವಿ ಮಹಾವಿದ್ಯಾಲಯಗಳು ನ್ಯಾಕ್ ಗೆ ಒಳಪಡುತ್ತಿರುವುದು ಕೇವಲ ಯು.ಜಿ.ಸಿ.ಹಾಗೂ ರೂಸಾ ಅನುದಾನಗೊಸ್ಕರವಾಗಿದೆ ವಿನಹ ವಿ.ವಿ. ಪದವಿ ಕಾಲೇಜುಗಳ ಉಪನ್ಯಾಸಕರು ಸ್ವ ಇಚ್ಛೆಯಿಂದ ನ್ಯಾಕ್ ಬಗ್ಗೆ ಆಸಕ್ತಿ ವಹಿಸದಿರುವುದು ದುರಾದೃಷ್ಟಕರ ಸಂಗತಿ ಎಂದು ಕರ್ನಾಟಕ‌ ಕೇಂದ್ರೀಯ ವಿಶ್ವ ವಿದ್ಯಾಲಯದ ಸಮ ಕುಲಪತಿ ಡಾ. ಜಿ.ಆರ್. ನಾಯಕ ಹೇಳಿದರು. ನಗರದ ಎಂ.ಎಸ್.ಐ. ಡಿಗ್ರಿ ಕಾಲೇಜಿನಲ್ಲಿ ಇಂದು ಆಯೋಜಿಸಿದ್ದ ನ್ಯಾಕ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಖಾಸಗಿ ಸಂಸ್ಥೆಗಳು ಹಣ […]

ಕಲಬುರಗಿ: ತೊಗರಿ ನೋಂದಣಿ ಪ್ರಕ್ರಿಯೆ ಆರಂಭ

ಕಲಬುರಗಿ: ತೊಗರಿ ನೋಂದಣಿ ಪ್ರಕ್ರಿಯೆ ಆರಂಭ

ಕಲಬುರಗಿ: ತೊಗರಿ ಬೆಳೆಗಾರರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಸರ್ಕಾರ ನಿರ್ಧರಿಸಿದ್ದು, ಮುಂದಿನ ಸೋಮವಾರದಿಂದ ತೊಗರಿ ಮಾರುವ ರೈತರು ಹೆಸರು ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ಕೇಂದ್ರ ಸರ್ಕಾರದ 5675 ರೂ. ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ 425 ರೂ. ಪ್ರೋತ್ಸಾಹ ಧನ ಸಹಾಯ ಸೇರಿ ಪ್ರತಿ ಕ್ವಿಂಟಲ್​ಗೆ 6100 ರೂ. ದರದಲ್ಲಿ ತೊಗರಿ ರೈತರಿಂದ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 24 ರಿಂದ ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವದಾಗಿ […]

ಕಲಬುರಗಿಯಲ್ಲಿ ಡಿ.23 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

ಕಲಬುರಗಿಯಲ್ಲಿ ಡಿ.23 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

ಕಲಬುರಗಿ : ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಕಲಬುರಗಿ ಆಳ್ವಾಸ್ ನುಡಿಸಿರಿ ಘಟಕ, ಹೋಟೆಲ್ ಬೇಕರಿ ಮತ್ತು ವಸತಿ ಗೃಹಗಳ ಮಾಲೀಕರ ಸಂಘ,ಮತ್ತು ನಗರೇಶ್ವರ ವೆಲ್‍ಫೇರ್ ಸೊಸೈಟಿ ಸಹಯೋಗದಲ್ಲಿ ಡಿಸೆಂಬರ್ 23 ( ರವಿವಾರ)ರಂದು ಸಂಜೆ 5.45 ಕ್ಕೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಆಳ್ವಾಸ್ ಸಾಂಸ್ಕ್ಡತಿಕ ವೈಭವ ನಡೆಯಲಿದೆ. ಕಾರ್ಯಕ್ರಮದಲ್ಲಿ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಅದ್ಭುತ ಸಾಂಸ್ಕ್ಡತಿಕ ಕಾರ್ಯಕ್ರಮ ನೀಡುವರು ಎಂದು ಕಲಬುರಗಿ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಅಮರನಾಥ ಸಿ ಪಾಟೀಲ ಸುದ್ದಿಗೋಷ್ಠಿಯಲ್ಲಿ […]

ಮೈ ಕೊರೆವ ಚಳಿಯಲ್ಲಿ ಕಳ್ಳರ ಕರಾಮತ್ತು

ಮೈ ಕೊರೆವ ಚಳಿಯಲ್ಲಿ ಕಳ್ಳರ ಕರಾಮತ್ತು

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮೈಕೊರೆಯುವ ಚಳಿ ಪ್ರಾರಂಭವಾಗಿದೆ. ಹೀಗಾಗಿ ಜನರು ಬೆಚ್ಚಗೆ ಹೊದ್ದು ಬೆಡ್ ರೂಮ್ ನಲ್ಲಿ ಮಲಗುತ್ತಿದ್ದಾರೆ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕಳ್ಳರು ಮನೆಗಳಲ್ಲಿ ಜನರಿದ್ದರು‌ ಕೂಡಾ ಸುಲಭವಾಗಿ ಕಳ್ಳತನ ಮಾಡ್ತಾಯಿದ್ದಾರೆ. ಹೌದು ಕಳೆದ ರಾತ್ರಿ ಕಲಬುರಗಿ ನಗರದ ಹೊರವಲಯದಲ್ಲಿರುವ ವಿಶ್ವರಾದ್ಯ ಕಾಲೋನಿಯಲ್ಲಿ ನ ಮನೆಯಲ್ಲಿ ಕಳ್ಳರು ಕರಾಮತ್ತು ಮೆರದಿದ್ದಾರೆ. ಹೌದು ಕಲಬುರಗಿ ನಗರದಲ್ಲಿ ಮತ್ತೆ ಪ್ರ ಮನೆಗಳ್ಳರ ಹಾವಳಿ ಪ್ರಾರಂಭವಾಗಿದೆ.ಗುರುನಾಥ್ ಯಳಮಲ್ಲಿ ಅನ್ನೋರ ಮನೆಯಲ್ಲಿ ಕಳ್ಳತನವಾಗಿದ್ದು ಕಳ್ಳರು ಐವತ್ತು ಗ್ರಾಮ […]

ಕಸಾಪ ಸಮ್ಮೇಳನ ಅಲ್ಲ, ಕಾಂಗ್ರೆಸ್ ಸಾಹಿತ್ಯ ಸಮ್ಮೇಳನ-ಅರುಣಿ ಆರೋಪ

ಕಸಾಪ ಸಮ್ಮೇಳನ ಅಲ್ಲ, ಕಾಂಗ್ರೆಸ್ ಸಾಹಿತ್ಯ ಸಮ್ಮೇಳನ-ಅರುಣಿ ಆರೋಪ

ಕಲಬುರಗಿ : ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿರುವ ನಾಲ್ಕನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಸಮ್ಮೇಳನವಾಗಿರದೆ ಕಾಂಗ್ರೆಸ್ ಪಕ್ಷದ ಸಾಹಿತ್ಯ ಸಮ್ಮೇಳನವಾಗಿದೆ ಎಂದು ಪರಿಷತ್ ಕ್ರೀಯಾಶೀಲ ಸದಸ್ಯ ಬಸವರಾಜ ಅರುಣಿ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿದ ಅವರು ಜಿಲ್ಲಾ ಮತ್ತು ತಾಲೂಕು ಪರಿಷತ್ ಅಧ್ಯಕ್ಷರು ಸಮ್ಮೇಳನದಲ್ಲಿ ತಮ್ಮ ಆತ್ಮೀಯರ ಮತ್ತು ತಮಗೆ ಬೇಕಿದ್ದವರಿಗೆ ಮಣೆ ಹಾಕುವ ಮೂಲಕ ತಾಲೂಕಿನ ಅನೇಕರನ್ನು ಕಡೆಗಣನೆ ಮಾಡಿದ್ದಾರೆ.ಸಗರನಾಡಿನಲ್ಲಿಯ ಪ್ರಮುಖ ಸಾಹಿತಿಗಳು,ಯುವ ಬರಹಗಾರರು,ಹೋರಾಟಗಾರು,ದಲಿತ ಹಿಂದುಳಿದ ವರ್ಗದವರರನ್ನು ಹೆಚ್ಚಾಗಿ ಬಳಸಿಕೊಂಡಿಲ್ಲ. […]

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: 2 ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ ಸತ್ಯಾಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ:  2 ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ ಸತ್ಯಾಗ್ರಹ

ಚಿಂಚೋಳಿ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕೃಷಿ ಕೂಲಿಕಾರ ಸಂಘ ವತಿಯಿಂದ ರೈತರು ಚಂದಾಪೂರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಇಂದಿಗೆ 2 ನೇ ದಿನಕ್ಕೆ ಕಾಲಿಟ್ಟಿದೆ. ಕ್ಷೇತ್ರದಲ್ಲಿನ ಎಲ್ಲ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಕೂಡಲೇ ತೊಗರಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಸರಕಾರಿ ಅರಣ್ಯ ಭೂಮಿಯಲ್ಲಿ ಶತಮಾನಗಳಿಂದ ಉಳಿಮೆಮಾಡಿಕೊಂಡು ಬದುಕುತ್ತಿರುವ ರೈತರಿಗೆ ಹಕ್ಕುಪತ್ರ ವಿತರಿಸಬೇಕು. ರಾಷ್ಟ್ರೀಕೃತ  ಬ್ಯಾಂಕ್ […]

ಕಲಬುರಗಿ: ಡಿ. 30ಕ್ಕೆ ಕೆ-ಸೆಟ್ ಪರೀಕ್ಷೆ

ಕಲಬುರಗಿ: ಡಿ. 30ಕ್ಕೆ ಕೆ-ಸೆಟ್ ಪರೀಕ್ಷೆ

ಕಲಬುರಗಿ: ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ( ಕೆ-ಸೆಟ್) 2018 ಪರೀಕ್ಷೆಯು ಡಿ. 30ರಂದು ನಡೆಯಲಿದೆ. ಪರೀಕ್ಷೆಯ ಮೊದಲನೇ ಅವಧಿ ಬೆಳಗ್ಗೆ 9.30ರಿಂದ ಬೆಳಗ್ಗೆ 10.30ರವರೆಗೆ ಹಾಗೂ ಎರಡನೇ ಅವಧಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ. ಕಲಬುರಗಿ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡ 10,284 ವಿದ್ಯಾರ್ಥಿಗಳಿಗೆ ಕಲಬುರಗಿ ನಗರದ 11 ಉಪ ಕೇಂದ್ರಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಡಿ. 15ರ ನಂತರ ಮೈಸೂರು […]