ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಳ್ಳಲು ಸಚಿವ ಪ್ರೀಯಾಂಕ ಖರ್ಗೆ ಸಲಹೆ

ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಳ್ಳಲು ಸಚಿವ ಪ್ರೀಯಾಂಕ ಖರ್ಗೆ ಸಲಹೆ

ಕಲಬುರಗಿ: ವಿದ್ಯಾರ್ಥಿಗಳು ಕೇವಲ ಓದಿನ ಬಗ್ಗೆ ಗಮನ ಕೊಡದೆ ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಂಡು ಮುಂದುವರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜಕಲ್ಯಾಣ ಸಚಿವರಾದ  ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಕರಾವಿಪ ಜಿಲ್ಲಾ ಸಮಿತಿ, ಗುಲಬರ್ಗಾ ವಿವಿ ಕಲಬುರಗಿ ಸಹಯೋಗದಲ್ಲಿ ಗುವಿ ಕಲಬುರಗಿ ಯ ಡಾ ಬಿ.ಆರ್. ಅಂಬೇಡ್ಕರ್ ಭವನದಲ್ಲಿ […]

ಕಲಬುರಗಿಯಲ್ಲಿ ಡಿ.15 ರಿಂದ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶ

ಕಲಬುರಗಿಯಲ್ಲಿ ಡಿ.15 ರಿಂದ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ 26 ನೇ ಯ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ನಾಳೆ ( ಡಿಸೆಂಬರ್ 15) ಯಿಂದ ಡಿ. 17 ರವರೆಗೆ ಗುಲಬರ್ಗ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಳೆ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಡಾ ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮಾವೇಶ ಉದ್ಘಾಟಿಸುವರು. ಸುಮಾರು 700 […]

ಹೈಕ ಬೇಡಿಕೆಗೆ ಸ್ಪಂದಿಸಿ: ದಸ್ತಿ ಆಗ್ರಹ

ಹೈಕ ಬೇಡಿಕೆಗೆ ಸ್ಪಂದಿಸಿ: ದಸ್ತಿ ಆಗ್ರಹ

ಕಲಬುರಗಿ:  ಹೈದರಾಬಾದ ಕರ್ನಾಟಕ ಪ್ರದೇಶದ ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸದಿದ್ದರೆ  ವಿನೂತನ ಹೋರಾಟದ ಮುಖಾಂತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಂಬರುವ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಲಾಗುವದು ಎಂದು   ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.   ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು, 371(ಜೆ) ಕಲಂ ಅಡಿ ಸವಲತ್ತುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವದು, ಎಚ್ ಕೆ ಆರ್ ಡಿ ಬಿಯಿಂದ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ಹಮ್ಮಿಕೊಂಡು ಕಾಲಮಿತಿಯ ಅಭಿವೃದ್ಧಿಗೆ ಕ್ರಮ,ಇ […]

ಧಾರಾಕಾರವಾಗಿ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

ಧಾರಾಕಾರವಾಗಿ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

ಕಲಬುರಗಿ: ನಗರದಲ್ಲಿ ನಿನ್ನೆ ರಾತ್ರಿ ಧಾರಾಕಾರವಾಗಿ ಮಳೆ ಸಿರದ ಪರಿಣಾಮ ನಗರದಾದ್ಯಂತ ಇಂದು ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಯಿತು. ಲಾಲ್ ಗೇರಿ ಕ್ರಾಸ್, ರಾಮಂಮಂದಿರ ಸರ್ಕಲ್, ಬ್ರಹ್ಮಪುರ ಮುಂತಾದ ಕಡೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾತ್ರಿ 12 ಗಂಟೆಗೆ ಒಮ್ಮದೊಮ್ಮೆಲೆ ಮೋಡ ಕವಿದು ಧಾರಕಾರವಾಗಿ ಸುರಿದ ಪರಿಣಾಮ ನಗರದ ವಿವಿಧ ಶಾಲಾ-ಕಾಲೇಜುಗಳ ಮೈದಾನಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಶಾಲೆಗೆ ಬಂದ ಮಕ್ಕಳು ನಿಂತ ಮಳೆ ನೀರಿನಲ್ಲಿ ಪರಸ್ಪರ ಖುಷಿಯಿಂದ ನೀರೆರಚಾಟದಲ್ಲಿ ತೊಡಗಿರುವುದು ಸರ್ವ ಸಾಮಾನ್ಯವಾಗಿತ್ತು. ಈ ಅವಘಡ ಮಳೆಯಿಂದಾಗಿ ಹತ್ತಿ, […]

ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಅವಘಡ: 5 ಜನರಿಗೆ ಗಾಯ

ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಅವಘಡ: 5 ಜನರಿಗೆ ಗಾಯ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಪ್ಯಾಕ್ಟರಿಯಲ್ಲಿ ಇಂದು ಬೆಳಗ್ಗೆ ಮಟಿರಿಯಲ್ ಬೆಲ್ಟ್ ಹರಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಗಂಭೀರಾಗಿ ಗಾಯಗೊಂಡ ಘಟನೆ ನಡೆದಿದೆ.   ದೇವಿಂದ್ರಪ್ಪಾ,  ಲಕ್ಷ್ಮಣ್, ರವಿಕುಮಾರ್,ಮಲ್ಲಪ್ಪಾ, ಮನೋಜ್ ಗಾಯಾಳುಗಳು. ಗಾಯಾಳುಗಳು ಕೋಡ್ಲಾ, ಬಟ್ಟರಗಾ, ಬಂಕಲಗಾ, ಅಳ್ಳೋಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.   ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಗಂಭೀರವಾಗಿ ಗಾಯಗೊಂಡ ಐದು ಜನರನ್ನು ಕಲಬುರಗಿ ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. […]

ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ

ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ

ಕಲಬುರಗಿ: ಸಾಹಿತ್ಯ ಬರವಣಿಗೆಗೆ ಬಾಲ್ಯದ ನೆನಪುಗಳು ಅಗಾಧ ಪ್ರೇರಕಶಕ್ತಿಯಾಗಿವೆ. ಇಂಗ್ಲೀಷ ಸಾಹಿತ್ಯ, ಕನ್ನಡ ಸಾಹಿತ್ಯಕ್ಕೆ ಪ್ರೇರಕ, ಪೂರಕವಾಗಿದೆ ಎಂದು ನಿವೃತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್.ನಾಯಕ ಅಭಿಪ್ರಾಯ ಪಟ್ಟರು. ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ‘ಸಣ್ಣ ಕಥೆ ಕಟ್ಟುವ ಕೌಶಲ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಬರವಣಿಗೆಗೆ ವಿಶಾಲ ಓದಿನ ಅನುಭವವಿರಬೇಕು ಎಂದು ತಿಳಿಸಿದ್ದರು. ಡಾ. ಶಿವರಾಜ ಶಾಸ್ತ್ರಿ ಪರಿಚಯಿಸಿದರು. ಪ್ರೊ. ನಾನಾ ಸಾಹೇಬ್ ನಿರೂಪಿಸಿದರು. ಡಾ ಸುಮಂಗಲಾ ರೆಡ್ಡಿ ಸ್ವಾಗತಿಸಿದರು. […]

ಮಹಡಿ ಮೇಲಿಂದ ಬಿದ್ದು ಕಾರ್ಮಿಕರ ಸಾವು

ಮಹಡಿ ಮೇಲಿಂದ ಬಿದ್ದು ಕಾರ್ಮಿಕರ ಸಾವು

ಕಲಬುರಗಿ: ನಗರದ ಜಯದೇವ ಆಸ್ಪತ್ರೆ  ಕಟ್ಟಡ ಕಾಮಗಾರಿ ನಡೆದಿರುವ ವೇಳೆ ಕಟ್ಟಡ 4ನೇ ಅಂತಸ್ತಿನಿಂದ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಪ್ರಶಾಂತ (21), ಬಟ್ಟಿ (22) ಮೃತಪಟ್ಟಿದ್ದಾರೆ.   ಬ್ರಹ್ಮಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. udayanadu2016

ಕಲಬುರ್ಗಿ: ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಸಿ.ವಿ.ರಾಮನ್‌ ನ್ಯಾಯಾಂಗ ವಶಕ್ಕೆ

ಕಲಬುರ್ಗಿ: ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಸಿ.ವಿ.ರಾಮನ್‌ ನ್ಯಾಯಾಂಗ ವಶಕ್ಕೆ

ಕಲಬುರಗಿ: ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಕಲಬುರ್ಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಸಿ.ವಿ.ರಾಮನ್‌(ಚಿಕ್ಕ ವೆಂಕಟರಮಣಪ್ಪ)ಗೆ ಡಿಸೆಂಬರ್ 24ರವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಕಲಬುರ್ಗಿ ಗ್ರಾಮೀಣ ಸಿಡಿಪಿಓ ಆಗಿದ್ದ ಸಿ.ವಿ.ರಾಮನ್ ವಿರುದ್ಧ ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಹಾಗೂ ಘಟನಯ ನಂತರ ಮಂಜೂರಾತಿ ನಿರೀಕ್ಷಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಸಿ.ವಿ.ರಾಮನ್ ವಿರುದ್ಧ ಕಲಬುರ್ಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ […]

ಕೃತಿ ಕೇಂದ್ರಿತ ವಿಮರ್ಶೆ ಅಗತ್ಯ: ಡಾ. ವಿಸಾಜಿ

ಕೃತಿ ಕೇಂದ್ರಿತ ವಿಮರ್ಶೆ ಅಗತ್ಯ: ಡಾ. ವಿಸಾಜಿ

ಕಲಬುರಗಿ: ವಿಮರ್ಶೆ ಕುರಿತ ಅಲಿಖಿತ ನಿಯಮ ಬೆಳೆದಿರುವುದರಿಂದ ಮುಕ್ತ ವಿಮರ್ಶೆಗೆ ತೊಡಕಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದ ಬಾಪೂಗೌಡ ರಂಗಮಂದಿರ ದಲ್ಲಿ ಇಂದು ನಡೆದ ಭಾಷಾಂತರ- ವಿಮರ್ಶಾ ಗೋಷ್ಠಿಯಲ್ಲಿ ವಿಮರ್ಶೆ ಕುರಿತು ಮಾತನಾಡಿದ ಅವರು, ಕೃತಿ ಕೇಂದ್ರಿತ ವಿಮರ್ಶೆ ಅಗತ್ಯವಾಗಿದ್ದು, ಲಂಕೇಶರು ಹೇಳುವಂತೆ ವಿಮರ್ಶಕರಾದವರು ಕೃತಿಯೊಳಗೆ ಭಕ್ತಿ, ಶ್ರದ್ಧೆಯಿಂದ ಪ್ರವೇಶ ಮಾಡಿ ವೈಚಾರಿಕವಾಗಿ ಹೊರ ಬರಬೇಕು ಎಂದು ತಿಳಿಸಿದರು. ಭಾಷೆ, ವಸ್ತು, ಲೋಕದೃಷ್ಟಿಯ ಮಿತಿಗಳಿಂದ […]

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಡಾ. ನಾಗಾಬಾಯಿ ಕಳವಳ

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಡಾ. ನಾಗಾಬಾಯಿ ಕಳವಳ

ಕಲಬುರಗಿ: ವೈಚಾರಿಕವಾಗಿ ಆಲೋಚಿಸುವವರನ್ನು  ಕೊಲೆ  ಮಾಡುವುದು, ಬೆದರಿಕೆ ಹಾಕುವ ಸಂದರ್ಭ  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದ್ದು,  ಬರಹಗಾರರು ಚಿಂತನೆ  ನಡೆಸಬೇಕಾಗಿದೆ ಎಂದು ಡಾ.ನಾಗಾಬಾಯಿ ಬುಳ್ಳಾ  ಹೇಳಿದರು. ನಗರದ ಕನ್ನಡ ಭವನದ ಬಾಪೂಗೌಡ ರಂಗಮಂದಿರದಲ್ಲಿ ಇಂದಿನಿಂದ ಆರಂಭವಾದ ಕಲಬುರಗಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರ, ಅಜ್ಞಾನ ಹೊಡೆದೋಡಿಸುವ ನಿಟ್ಟಿನಲ್ಲಿ ಲೇಖಕರು ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು ಎಂದು ತಿಳಿಸಿದರು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಈ […]