ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟನೆ ಅಗತ್ಯ: ನಂದಕುಮಾರ್ ಮಾಲಿಪಾಟೀಲ್

ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟನೆ ಅಗತ್ಯ: ನಂದಕುಮಾರ್ ಮಾಲಿಪಾಟೀಲ್

ಕಲಬುರಗಿ: ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟನೆಗಳು ಅಗತ್ಯ ಎಂದು ವಾಲ್ಮೀಕಿ  ನಾಯಕ ಸಂಘದ ಅಧ್ಯಕ್ಷ ನಂದಕುಮಾರ್ ಮಾಲಿಪಾಟೀಲ್ ಹೇಳಿದರು. ನಗರದ  ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಲ್ಮೀಕಿ ನಾಯಕ ಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಶೈಕ್ಷಣಿಕವಾಗಿ, ರಾಜಕೀಯವಾಗಿ ಈ  ಜನಾಂಗ ಹಿಂದುಳಿದಿದೆ. ಯುವಕರು ಒಗಟ್ಟಿನಿಂದ ಹೋರಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಸಮಸ್ಯೆಗಳ ವಿರುದ್ದವಾಗಿ […]

ನವಜಾತ ಹೆಣ್ಣು ಶಿಶು ಪತ್ತೆ

ಕಲಬುರಗಿ: ನಗರದ ಹೊರವಲಯದ ಸೇಡಂ ರಸ್ತೆಯ ಕಾಳನೂರ ಕ್ರಾಸ್ ಬಳಿ ರವಿವಾರ ಎರಡು, ಮೂರು ದಿನದ ನವಜಾತ ಶಿಶು ಪತ್ತೆಯಾಗಿದೆ. ರಸ್ತೆ ಪಕ್ಕದ ಮುಳ್ಳಿನ ಪೂದೆಯೊಳಗೆ ಬಟ್ಟೆಯಲ್ಲಿ ಸುತ್ತಿಟ್ಟು ಪರಾರಿಯಾಗಿದ್ದಾರೆ. ಮಗು ಅಳುವದನ್ನು ಗಮನಿಸಿದ ಸ್ಥಳೀಯರು ಶಿಶುವನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯ ಪೋಲಿಸರು ಶಿಶುವನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. Munna Bagwanhttp://udayanadu.com

ಅಣವಾರ ಗ್ರಾಮದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ

ಅಣವಾರ ಗ್ರಾಮದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ

ಚಿಂಚೋಳ್ಳಿ: ತಾಲೂಕಿನ ಅಣವಾರ ಗ್ರಾಮದಲ್ಲಿ ಡಾ.ಉಮೇಶ ಜಾದವ ಅಭಿಮಾನಿಗಳ ಬಳಗ  ಮತ್ತು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಲಬುರಗಿ ವತಿಯಿಂದ ಇತ್ತೀಚಿಗೆ ಉಚಿತ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಿತು. ಶಾಸಕ ಡಾ.ಉಮೇಶ ಜಿ ಜಾಧವ ಅವರು ಶಿಬಿರಕ್ಕೆ ಚಾಲನೆ ನೀಡಿ  ಮಾತನಾಡಿ,  ಎಲ್ಲರೂ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿಕೊಳ್ಳಬೇಕೆಂದು ಹೇಳಿದರು.  ಈ ವೇಳೆ ಜಿಪಂ ಸದಸ್ಯ ಗೌತಮ ಪಾಟೀಲ,  ಗ್ರಾಪಂ ಅಧ್ಯಕ್ಷ ಬಸವಂತ ರೆಡ್ಡಿ, ಪಾಂಡುರಂಗ ಪೂಜಾರಿ,  ಆರ್ಚನಾ, ಕೆ […]

ಸೇಡಂನಲ್ಲಿ ಬುದ್ಧ ಪೂರ್ಣಿಮೆ ಆಚರಣೆ

ಸೇಡಂನಲ್ಲಿ ಬುದ್ಧ ಪೂರ್ಣಿಮೆ ಆಚರಣೆ

ಸೇಡಂ: ನಗರದಲ್ಲಿ ಗೌತಮ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು. ವೈಶಾಖ ಪೂರ್ಣಿಮೆ ದಿನ ಗೌತಮ ಬುದ್ಧ ಜ್ಞಾನೋದಯವಾದ ದಿನವಾಗಿದೆ. ಬೌದ್ಧರಿಗೆ ಈ ದಿನ ಪವಿತ್ರವಾದ ಹಬ್ಬವಾಗಿದೆ.  ಮನುಷ್ಯ ಮನುಷ್ಯನಾಗಿ ಬಾಳುವುದು ಮತ್ತು ಜೀವನದ ನಿಜ ಸ್ಥಿತಿ ಅರಿಯುವುದು, ಕರುಣೆ, ಮೈತ್ರಿಯಿಂದ  ಬಾಳುವುದು ಬುದ್ಧ ಪೂರ್ಣಿಮೆಯ ಉದ್ದೇಶಗಳು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ)  ಜಿಲ್ಲಾ ಉಪಾಧ್ಯಕ್ಷ  ಹುಳುಗೋಳಕಾರ್ ಹೇಳಿದರು. ಮುಖಂಡರು ಮತ್ತು ಹಿರಿಯ ನಾಯಕರು ಇದ್ದರು.  udayanadu2016

ಕಲಬುರಗಿಯಲ್ಲಿ ಅರ್ಥಪೂರ್ಣವಾಗಿ ಬಸವಜಯಂತಿ ಆಚರಣೆ

ಕಲಬುರಗಿಯಲ್ಲಿ ಅರ್ಥಪೂರ್ಣವಾಗಿ ಬಸವಜಯಂತಿ ಆಚರಣೆ

  ಕಲಬುರಗಿ: ವಿಶ್ವಗುರು ಬಸವಣ್ಣನವರ 884 ನೇ ಜಯಂತ್ಯೋತ್ಸವವನ್ನು ಕಲಬುರಗಿಯಲ್ಲಿ ಇತ್ತಿಚಿಗೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.  ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಮಿತಿಯ ಆಶ್ರಯದಲ್ಲಿ   ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೊಟ್ಟಮೊದಲ ಬಾರಿಗೆ ಅತ್ಯಂತ ವಿಜೃಂಭಣೆಯಿಂದ  ಆಚರಿಸಲಾಯಿತು. ಈ ನಿಮಿತ್ಯವಾಗಿ  ಮಾನವ ಬಂಧುತ್ವ ವೇದಿಕೆಯಿಂದ ಅನ್ನಸಂತರ್ಪಣೆ ಕಾರ್ಯಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಸಂದರ್ಭದಲ್ಲಿ  ಕಲಬುರಗಿಯ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿಯ ಸದಸ್ಯ ಹನುಮಂತ ಜಿ. ಯಳಸಂಗಿ, ಜಿಲ್ಲಾ ಸಂಚಾಲನಾ ಸಮಿತಿಯ […]

ಕುರುಬರ ಸಂಘಕ್ಕೆ ತಾಲೂಕಾ ಪದಾಧಿಕಾರಿಗಳ ನೇಮಕ

ಕುರುಬರ ಸಂಘಕ್ಕೆ ತಾಲೂಕಾ ಪದಾಧಿಕಾರಿಗಳ ನೇಮಕ

ಸೇಡಂ: ನಗರದ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಅರುಣಕುಮಾರ್ ಪೂಜಾರಿ, ಕಾರ್ಯದರ್ಶಿಯಾಗಿ ನಾಗೇಂದ್ರಪ್ಪ ಹೇಡಳ್ಳಿಕರ್, ತಾಲೂಕಾಧ್ಯಕ್ಷ ಸತೀಶ್ ಪೂಜಾರಿ ಮತ್ತು ಮಲ್ಲಪ್ಪ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. udayanadu2016

ಮಾನವ ಬಂಧುತ್ವ ವೇದಿಕೆಯಿಂದ ತಾಲೂಕಾ ಸಂಚಾಲಕರ ಸಭೆ

ಮಾನವ ಬಂಧುತ್ವ ವೇದಿಕೆಯಿಂದ ತಾಲೂಕಾ ಸಂಚಾಲಕರ ಸಭೆ

ಸೇಡಂ: ನಗರದ ಪ್ರವಾಸ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ, ತಾಲೂಕ ಸಂಚಾಲನ ಸಮಿತಿ ವತಿಯಿಂದ ರವಿವಾರ ಸಭೆ ನಡೆಯಿತು. ಈ ವೇಳೆ ತಾಲೂಕ ಸಂಚಾಲಕ ಸುನೀಲ್ ರಾಣಿವಾಲ್ ಮಾತನಾಡಿ ಮಾನವ ಬಂಧುತ್ವ ವೇದಿಕೆಯ ಹುಬ್ಬಳ್ಳಿ ಶಾಖೆಯಲ್ಲಿ ಬರುವ ಎಲ್ಲಾ ಗ್ರಾಮ ಶಾಖೆಗಳಿಗೆ ಸಂಚಾಲನ ಸಮಿತಿ ರಚಿಸಬೇಕೆಂದು ಹುಬಳ್ಳಿ ಶಾಖೆ  ಸಂಚಾಲಕರಾದ ಮಲ್ಲಿಕಾರ್ಜುನ ರವರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕ ಸಹ ಸಂಚಲಕ ಅಂಬ್ರೇಶ ಮಳಖೇಡ,ನಾಗೇಶ ರೇಡ್ಡಿ,ಸಂತೋಷ ಹುಗಾರ ಇತರರು ಉಪಸ್ಥಿತರಿದ್ದರು. Munna Bagwanhttp://udayanadu.com

ಮಕ್ಕಳಿಗೆ ಶಿಸ್ತು ಕಲಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ: ಕುಲಸಚಿವ ಸಿ.ಎಸ್ ಪಾಟೀಲ

ಮಕ್ಕಳಿಗೆ ಶಿಸ್ತು ಕಲಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ: ಕುಲಸಚಿವ ಸಿ.ಎಸ್ ಪಾಟೀಲ

ಕಲಬುರಗಿ: ಮಕ್ಕಳು ಮನೆಯ ಅಥವಾ ಶಾಲೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಕುಳಿತು ಕಲಿತರೆ ಸಾಲದು, ಅದರ ಜೊತೆಗೆ ಸಮಾಜದಲ್ಲಿಯು ಕಲೆಯಬೇಕಾಗಿದೆ. ಸಮಾಜದಲ್ಲಿ ಕಲೆಯಬೇಕಾಗಿರುವುದನ್ನು ಕಲಿಸಿಕೊಡುವ ಮಹತ್ವದ ಕೆಲಸವನ್ನು ಈ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಲಿಸಿಕೊಡುತ್ತದೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಎಸ್ ಪಾಟೀಲ್ ಹೇಳಿದರು. ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ  ಶನಿವಾರದಂದು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕರ್ನಾಟಕ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ […]

1 33 34 35