ಹುಲಿಗಿ ಗ್ರಾಮದಲ್ಲಿ ಆತಂಕ ಸೃಷ್ಠಿಸಿದ್ದ ಕರಡಿ ಕೊನೆಗೂ ಬೋನಿಗೆ

ಹುಲಿಗಿ ಗ್ರಾಮದಲ್ಲಿ ಆತಂಕ ಸೃಷ್ಠಿಸಿದ್ದ ಕರಡಿ ಕೊನೆಗೂ ಬೋನಿಗೆ

ಕೊಪ್ಪಳ : ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕರಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ಸೋಮವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಶುಕ್ರವಾರವಷ್ಟೇ ಕಾಸನಕಂಡಿ ಗ್ರಾಮದ ಬಳಿ ಕರಡಿ ಪ್ರತ್ಯಕ್ಷವಾಗಿತ್ತು. ಇದರಿಂದ ಗ್ರಾಮಸ್ಥರು ಭಯಭಿತರಾಗಿದ್ದು, ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಕರಡಿ ಕಾಟ ಹೆಚ್ಚಿದ್ದರಿಂದ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಮಾಹಿತಿ ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಸನಕಂಡಿ ಬಳಿ ಬೋನ್ ಇಟ್ಟು, ಕರಡಿ […]

ಬಿಗಿ ಭದ್ರತೆಯಲ್ಲಿ ಮತಯಂತ್ರಗಳು: ನಾಳೆ ಕೊಪ್ಪಳದಲ್ಲಿ ಮತ ಎಣಿಕೆ

ಬಿಗಿ ಭದ್ರತೆಯಲ್ಲಿ ಮತಯಂತ್ರಗಳು: ನಾಳೆ ಕೊಪ್ಪಳದಲ್ಲಿ ಮತ ಎಣಿಕೆ

ಕೊಪ್ಪಳ:  ಮೇ. 15 ರಂದು  ಬೆಳಿಗ್ಗೆ 07 ಗಂಟೆಯಿಂದ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ  ನಗರದ ಗವಿಸಿದ್ದೇಶ್ವರ ಮಹಾ ವಿದ್ಯಾಯಲದಲ್ಲಿ  ಆರಂಭವಾಗಲಿದ್ದು, ಅಭ್ಯರ್ಥಿಗಳ ಭವಿಷ್ಯ ಒಳಗೊಂಡಿರುವ ಮತಯಂತ್ರಗಳನ್ನು ಸ್ಟ್ರಾಗ್ ರೂಮಿನಲ್ಲಿ ಬಿಗಿ ಭದ್ರತೆ  ಕಾಲೇಜು ಕಟ್ಟಡದಲ್ಲಿ ಇರಿಸಲಾಗಿದೆ. ಕಾಲೇಜು ಕಟ್ಟಡದ ಸ್ಟ್ರಾಂಗ್ ರೂಮಿನಲ್ಲಿ ಮತ ಯಂತ್ರಗಳು ಭದ್ರವಾಗಿವೆ.  ಇಂದು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಮತ್ತ ಅಪರ ಜಿಲ್ಲಾಧಿಕಾರಿ […]

ಬಿಜೆಪಿಗೆ ಮತಹಾಕುವಂತೆ ದಲಿತರ ಮೇಲೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಬಿಜೆಪಿಗೆ ಮತಹಾಕುವಂತೆ ದಲಿತರ ಮೇಲೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಯಲಬುರ್ಗಾ: ಬಿಜೆಪಿಗೆ ಮತ ಹಾಕುವಂತೆ ಯಾವಗಲ್ ಗ್ರಾಮದಲ್ಲಿ ದಲಿತ ಯುವಕರ  ಮೇಲೆ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳುವಂತೆ  ದಲಿತ ಸಂಘರ್ಷ ಸಮಿತಿ , ಭೀಮವಾದ ತಾಲೂಕು ಅಧ್ಯಕ್ಷ ಡಿ. ಎಚ್. ಶಶೀಧರ ಛಲವಾದಿ ಒತ್ತಾಯಿಸಿದ್ದಾರೆ. ಚುನಾವಣೆ ದಿನದಂದು ಬಿಜೆಪಿಯವರು ದಲಿತ ಯುವಕರಿಗೆ ಬಿಜೆಪಿಗೆ ಮತ ಹಾಕುವಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ. ಬಿಜೆಪಿ ಗೂಂಡಾ ಕಾರ್ಯಕರ್ತರ ಮೇಲೆ ಚುನಾವಣಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ […]

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವ ರಾಯರೆಡ್ಡಿ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರಕ್ಕೆ‌ ನಿರ್ಧಾರ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವ ರಾಯರೆಡ್ಡಿ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರಕ್ಕೆ‌ ನಿರ್ಧಾರ

ಕೊಪ್ಪಳ:  ದಲಿತರ ಕಾಲೋನಿಯಲ್ಲಿ ಕುಡಿಯುವ ನೀರಿನ ಶುದ್ಧ ಘಟಕ, ಹಾಗೂ ಅಂಗನವಾಡಿ ಕೇಂದ್ರ ಸೇರಿದಂತೆ ವಿವಿಧ  ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುಂತೆ ಸುಮಾರು ವರ್ಷಗಳಿಂದ ಇದ್ದ ಬೇಡಿಕೆ ಈಡೇರಿಸಿದ ಕಾರಣ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕು ಬಳೂಟಗಿ ಗ್ರಾಮದ ಛಲವಾದಿ ಕಾಲೋನಿ ಯಲ್ಲಿ ಮತದಾನ ಬಹಿಷ್ಕಾರ ತಿರ್ಮಾನಿಸಿ , ಗುರುವಾರ ಬೆಳಿಗ್ಗೆ ಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣ ಮಂತ್ರಿ ಬಸವರಾಜ ರಾಯರೆಡ್ಡಿ ಪ್ರತಿನಿಧಿಸುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಳೂಟಗಿ ಗ್ರಾಮದಲ್ಲಿ ಈ […]

ಮೇ.15 ಕ್ಕೆ ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತವೆಂದ ಬಿಎಸ್ ವೈ

ಮೇ.15 ಕ್ಕೆ ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತವೆಂದ ಬಿಎಸ್ ವೈ

ಕೊಪ್ಪಳ: ಇನ್ನು ಕೇವಲ ಆರು ದಿನದಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ಮನೆಗೆ ಹೋಗುವವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಸೋಮವಾರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಹನುಮಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನಿಗೆ ಯೋಗ್ಯತೆ ಇದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಬೇಕಿತ್ತು. ಬದಾಮಿಗೆ ಯಾಕೆ ಬಂದು ಸ್ಪರ್ಧೆ ಮಾಡಿದ್ದಾರೆ, ಚಾಮುಂಡೇಶ್ವರಿ ಹಾಗೂ ಬಾದಾಮಿ […]

ಮತೀಯ ಶಕ್ತಿಗಳು ಮುಸ್ಲಿಂ ಸಮುದಾಯವನ್ನು ಕೆಟ್ಟ ಮನಸ್ಥಿತಿಯಿಂದ ನೋಡುತ್ತಿವೆ: ಸಚಿವ ರಾಯರೆಡ್ಡಿ

ಮತೀಯ ಶಕ್ತಿಗಳು ಮುಸ್ಲಿಂ ಸಮುದಾಯವನ್ನು ಕೆಟ್ಟ ಮನಸ್ಥಿತಿಯಿಂದ ನೋಡುತ್ತಿವೆ: ಸಚಿವ ರಾಯರೆಡ್ಡಿ

ಕೊಪ್ಪಳ : ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕೆಟ್ಟ ಹೆಸರು ತರಲು ನಿರಂತರವಾಗಿ ಕೆಲ ಮತೀಯ ಶಕ್ತಿಗಳು ಯತ್ನಿಸುತ್ತ ಬಂದಿವೆ. ಇದರ ವಿರುದ್ಧ ನಿಲ್ಲಬೇಕಾಗಿದೆ ಎಂದು ಸಚಿವ, ಯಲಬುರ್ಗಾ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಹೇಳಿದರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಾಬುಸಾಬ ಕೊತ್ವಲ್ ಮಿಲ್‌ನಲ್ಲಿ ರವಿವಾರ ರಾತ್ರಿ  ಹಮ್ಮಿಕೊಳ್ಳಲಾಗಿದ್ದ ಮುಸ್ಲಿಂ ಸಮುದಾಯದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳ ರೂಪಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ಸಬಲೀಕರಣಗೊಳಿಸಲು ಹೆಚ್ಚು ಆದ್ಯತೆಯನ್ನು ನೀಡಲಾಗಿದೆ ಎಂದರು. […]

ಸಿದ್ದರಾಮಯ್ಯ ಸರ್ಕಾರದಿಂದ ಹೈ-ಕ ಪ್ರದೇಶಕ್ಕೆ ಅನ್ಯಾಯ: ಪುರಂದರೇಶ್ವರಿ

ಸಿದ್ದರಾಮಯ್ಯ ಸರ್ಕಾರದಿಂದ ಹೈ-ಕ ಪ್ರದೇಶಕ್ಕೆ ಅನ್ಯಾಯ: ಪುರಂದರೇಶ್ವರಿ

ಕೊಪ್ಪಳ: ಭ್ರಷ್ಟಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರವನ್ನು ಬದಲಿಸಿ ಬಿಜೆಪಿಯ ಕಮಲವನ್ನು ಅರಳಿಸಿ ಎಂದು ಕೊಪ್ಪಳ ಬಿಜೆಪಿ ಉಸ್ತುವಾರಿ, ಮಾಜಿ ಕೇಂದ್ರ ಸಚಿವೆ ಪುರಂದೇಶ್ವರಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಸರಕಾರ ರೈತರು, ಕೃಷಿ ಕಾರ್ಮಿಕರಿಗೆ ವಂಚಿಸಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಸೇರಿದಂತೆ ಸಂವಿಧಾನದ 371ಜೆ ಅನುಷ್ಠಾನ ತರುವಲ್ಲಿ ಸರ್ಕಾರ ಎಡವಿದೆ. ಈ ಸರಕಾರದಿಂದ ಅಭಿವೃದ್ದಿ ನಿರೀಕ್ಷಿಸಲಾಗದು. ರಾಜ್ಯದಲ್ಲಿ ಬಿಜೆಪಿಗೆ ತಳಮಟ್ಟದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. […]

ಹೈಕ ಭಾಗದ ಧ್ವನಿಯಾಗಿ ಕಾರ್‍ಯ ನಿರ್ವಹಿಸುವೆ: ಡಾ.ರಜಾಕ್ ಉಸ್ತಾದ್

ಹೈಕ ಭಾಗದ ಧ್ವನಿಯಾಗಿ ಕಾರ್‍ಯ ನಿರ್ವಹಿಸುವೆ: ಡಾ.ರಜಾಕ್ ಉಸ್ತಾದ್

ಕೊಪ್ಪಳ : ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ 371 ನೇ ಜೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ ಸಮರ್ಪಕ ಅನುಷ್ಠಾನಗೊಳಿಸಲು ವಿಧಾನಸಭೆಯಲ್ಲಿ ಈ ಭಾಗದ ಪದವೀಧರರ ಧ್ವನಿಯಾಗಿ ಕಾರ್‍ಯ ನಿರ್ವಹಿಸುವೆ ಎಂದು ಈಶಾನ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ರಜಾಕ್ ಉಸ್ತಾದ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಸಂವಿಧಾನ 371 ನೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಹೋರಾಟ ಮಾಡಿದ್ದೇನೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ, 371ನೇ ಜೆ ಕಾನೂನುಗಳ ಅನುಷ್ಠಾನದಲ್ಲಿ ಆಗುತ್ತಿರುವ ಗೊಂದಲವನ್ನು ನಿವಾರಿಸಿ ಉದ್ಯೋಗ […]

ಬಿಜೆಪಿ ಸರಕಾರ ರಚನೆಯಾದರೆ ನೀರಾವರಿ ಯೋಜನೆಗೆ 1.50 ಲಕ್ಷ ಕೋಟಿ ಬಳಕೆ : ಶ್ರೀರಾಮುಲು

ಬಿಜೆಪಿ ಸರಕಾರ ರಚನೆಯಾದರೆ ನೀರಾವರಿ ಯೋಜನೆಗೆ 1.50 ಲಕ್ಷ ಕೋಟಿ ಬಳಕೆ : ಶ್ರೀರಾಮುಲು

ಕೊಪ್ಪಳ : ರಾಜ್ಯದ ನೀರಾವರಿ ಯೋಜನೆಗಾಗಿ ಚುನಾವಣೆ ನಂತರ ಬಿಜೆಪಿ ಸರಕಾರ 1.50 ಲಕ್ಷ ಕೋಟಿ ರೂ. ಬಳಕೆ ಮಾಡಲು ನಿರ್ಧರಿಸಿದೆ ಎಂದು  ಸಂಸದ, ಬದಾಮಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸ್ಗೂರ್ ಪರ ರೋಡ್ ಶೋ ನಡೆಸಿ ಬಳಿಕ ನಂತರ ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಿ  ಮಾತನಾಡಿದ  ಅವರು, ಜನಾರ್ಧನರೆಡ್ಡಿ ಮತ್ತು ತಮ್ಮ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಮೇಲಿಂದ ಮೇಲೆ ಟೀಕೆ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ. ಮೇ.15 ರಂದು ರಾಜ್ಯದಲ್ಲಿ ಬಿಜೆಪಿ […]

ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ಬಿಜೆಪಿ ಗುರಿ: ಅಮರೇಶ್ ಕರಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ಬಿಜೆಪಿ ಗುರಿ: ಅಮರೇಶ್ ಕರಡಿ

ಕೊಪ್ಪಳ : ಕೊಪ್ಪಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ಬಿಜೆಪಿಯ ಗುರಿ. ಹೀಗಾಗಿ ಕ್ಷೇತ್ರದ ಜನತೆ ಕೂಡ ಬಿಜೆಪಿ ಬೆಂಬಲಿಸಿ ಮತ ಹಾಕಿದರೆ ಅನುಕೂಲವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ್ ಕರಡಿ ಹೇಳಿದರು. ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಕಾಂಗ್ರೆಸ್ ಅಭಿವೃದ್ಧಿ ಕಾರ್ಯ ಮಾಡದೇ ಕಾಲಹರಣ ಮಾಡಿದೆ. ಕ್ಷೇತ್ರದಲ್ಲಿ ಮರಳು ಮಾಫಿಯಾ, ನೀರು ಮಾಫಿಯಾ ಹೆಚ್ಚಾಗಿ ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿ ಮರೆತ ಕಾಂಗ್ರೆಸ್‌ನ್ನು ದೂರ […]

1 2 3 33