ಜಗತ್ತಿನಲ್ಲಿ ಮಹಿಳಾ ಪೊಲೀಸರು ಲಿಂಗ ತಾರತಮ್ಯವಿಲ್ಲದೆ ಕರ್ತವ್ಯ ನಿರ್ವಹಣೆ: ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿ

ಜಗತ್ತಿನಲ್ಲಿ ಮಹಿಳಾ ಪೊಲೀಸರು ಲಿಂಗ ತಾರತಮ್ಯವಿಲ್ಲದೆ ಕರ್ತವ್ಯ ನಿರ್ವಹಣೆ: ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿ

7ನೇ ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕೊಪ್ಪಳ : ಜಗತ್ತಿನಲ್ಲಿ ಮಹಿಳಾ ಪೊಲೀಸರು ಲಿಂಗ ತಾರತಮ್ಯವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ಡಿಜಿಪಿ ನೀಲಮಣಿ ರಾಜು, ರೋಹಿಣಿ ಹಾಗೂ ರೇಣುಕಾ ಸುಕುಮಾರ ತಾರತಮ್ಯವಿಲ್ಲದೆ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ ಬಳ್ಳಾರಿ ವಲಯ ಐಜಿಪಿ ಎಂ. ನಂಜುಂಡಸ್ವಾಮಿ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 7ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಅವರು, 7ನೇ ತಂಡದ ಎಲ್ಲಾ ಮಹಿಳಾ […]

ಕೊಲೆ ಯತ್ನ, ಕೊಲೆ ಬೆದರಿಕೆ ಆರೋಪಿಗೂ ನಮಗೂ ಸಂಬಂಧವಿಲ್ಲ : ಮಾಲತಿ ನಾಯಕ

ಕೊಲೆ ಯತ್ನ, ಕೊಲೆ ಬೆದರಿಕೆ ಆರೋಪಿಗೂ ನಮಗೂ ಸಂಬಂಧವಿಲ್ಲ : ಮಾಲತಿ ನಾಯಕ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ‘ಕೊಲೆ ಯತ್ನ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿರುವ ಆರೋಪಿಗೆ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಹೇಳಿದರು. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆರೋಪಿ ಪಿಎಸ್‌ಐ ಮನೆಯಲ್ಲಿ’ ಎಂಬ ಸುದ್ದಿ ಪ್ರಕಟವಾಗಿರುವ ಹಿನ್ನಲೆಯಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿತನ ಮೇಲೆ […]

ಸಸ್ಯ ಸಂತೆ ಅಭಿಯಾನಕ್ಕೆ ಸಚಿವ ಇ.ತುಕಾರಾಂ ಚಾಲನೆ

ಸಸ್ಯ ಸಂತೆ ಅಭಿಯಾನಕ್ಕೆ ಸಚಿವ ಇ.ತುಕಾರಾಂ ಚಾಲನೆ

ತೋಟಗಾರಿಕೆ ಇಲಾಖೆಯಿಂದ ಸಸ್ಯಸಂತೆಯಲ್ಲಿ 30 ಸಾವಿರ ವಿವಿಧ ರೀತಿಯ ಸಸಿಗಳ ಪ್ರದರ್ಶನ ಕೊಪ್ಪಳ : ತೋಟಗಾರಿಕಾ ಇಲಾಖೆಯಿಂದ ಜೂನ್ 10 ರಿಂದ 20 ರವರೆಗೆ ಹಮ್ಮಿಕೊಂಡಿರುವ ಹತ್ತು ದಿನಗಳ ಕಾಲದ ಸಸ್ಯ ಸಂತೆ ಅಭಿಯಾನಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಇ.ತುಕಾರಾಂ ಅವರು ಚಾಲನೆಯನ್ನು ನೀಡಿದರು. ಸೋಮವಾರದಂದು ತೋಟಗಾರಿಕಾ ಇಲಾಖೆಯ ಕಚೇರಿ ಆವರಣದಲ್ಲಿ ಸಸ್ಯಸಂತೆ, ಜಲ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ, ಸಸ್ಯ ಸಂತೆ ಹತ್ತು ತೋಟಗಾರಿಕಾ ಅಭಿಯಾನದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಹಲವು […]

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಸದ ಅಭಿಯಾನ: ಟ್ವಿಟರ್ ಮೂಲಕ ಸಿಎಂ ಕುಮಾರಸ್ವಾಮಿಗೆ ಮನವಿ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಸದ ಅಭಿಯಾನ: ಟ್ವಿಟರ್ ಮೂಲಕ ಸಿಎಂ ಕುಮಾರಸ್ವಾಮಿಗೆ ಮನವಿ

ಕೊಪ್ಪಳ ಜಿಲ್ಲೆಯ ಜನರ ಪರ ಆಗ್ರಹ ಕೊಪ್ಪಳ: ರಾಜ್ಯದ ವಿವಿಧೆಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆದ ಬೆನ್ನಲ್ಲೆ ಕೊಪ್ಪಳ ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವಂತೆ ಸಂಸದ ಸಂಗಣ್ಣ ಕರಡಿ ಅಭಿಯಾನ ಆರಂಭಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿರುವ ಸಂಗಣ್ಣ, ರಾಜ್ಯಾದ್ಯಂತ ಅಗತ್ಯವಿರುವ ಕಡೆ ಅದರಲ್ಲೂ ಆರೋಗ್ಯ ಸೂಚ್ಯಂಕದಲ್ಲಿ ಹಿಂದುಳಿದ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲು ಮುಂದಾಗಿರುವುದು ಸ್ವಾಗತರ್ಹ. ಇದರಲ್ಲಿ ಹೈ-ಕ ಪ್ರದೇಶದಲ್ಲಿಯೇ ಹಿಂದುಳಿದ […]

ಹಿರೇಹಳ್ಳ ಸ್ವಚ್ಛಗೊಳಿಸಿರುವುದು ರಾಜ್ಯಕ್ಕೆ ಮಾದರಿ ಕೆಲಸ ಎಂದ ಸಚಿವ ಇ.ತುಕಾರಾಂ

ಹಿರೇಹಳ್ಳ ಸ್ವಚ್ಛಗೊಳಿಸಿರುವುದು ರಾಜ್ಯಕ್ಕೆ ಮಾದರಿ ಕೆಲಸ ಎಂದ ಸಚಿವ ಇ.ತುಕಾರಾಂ

ಹಿರೇಹಳ್ಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಸಚಿವರು ಕೊಪ್ಪಳ : ಹಿರೇಹಳ್ಳ ಸ್ವಚ್ಛಗೊಳಿಸಿದ್ದು ರಾಜ್ಯಕ್ಕೆ ಮಾದರಿ ಕೆಲಸ. ಗವಿಶ್ರೀಗಳ ಈ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಭವಿಷ್ಯದಲ್ಲಿ ಬಂಗಾರ ಸಿಗಬಹುದು. ಆದರೆ, ಅನ್ನ-ನೀರು ಸಿಗುವುದು ಕಷ್ಟವಿದೆ. ಹೀಗಾಗಿ ನೀರಿನ ಮೂಲಗಳನ್ನು ರಕ್ಷಸಿಕೊಳ್ಳಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಇ.ತುಕಾರಾಂ ಹೇಳಿದರು. ನಗರದ ಹೊರವಲಯದ ಹಿರೇಹಳ್ಳಕ್ಕೆ ಸೋಮವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹಿರೇಹಳ್ಳ ಪುನಃಶ್ಚೇತನಗೊಂಡಿರುವುದು ಹೆಚ್ಚು ಖುಷಿ […]

ಕೊಪ್ಪಳದಲ್ಲಿ ಸಾವಿರ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳದಲ್ಲಿ ಸಾವಿರ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ನಗರದಲ್ಲಿ ಸುಮಾರು ರೂ.116 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಸಾಮರ್ಥ್ಯದ ನೂತನ ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದರಿಂದ ಅದು ಶೀಘ್ರದಲ್ಲಿ ನಿರ್ಮಾಣವಾಗಲಿದೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ರೂ.1 ಕೋಟಿಯ ಸಿಸಿರಸ್ತೆ, ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಪದವಿಪೂರ್ವ ಕಾಲೇಜು ಕೊಠಡಿ ನಿರ್ಮಾಣ, ಚರಂಡಿ ಕಾಮಗಾರಿಯ […]

ಅಸ್ತಮಾ ರೋಗಕ್ಕೆ ಉಚಿತ ಔಷಧ : ಕುಟುಗನಹಳ್ಳಿಗೆ ಹರಿದು ಬಂದ ಜನಸಾಗರ

ಅಸ್ತಮಾ ರೋಗಕ್ಕೆ ಉಚಿತ ಔಷಧ : ಕುಟುಗನಹಳ್ಳಿಗೆ ಹರಿದು ಬಂದ ಜನಸಾಗರ

ಮೃಗಶಿರಾ ಮಳೆ ನಕ್ಷತ್ರ ಕೂಡುವ ವೇಳೆ ನೀಡುವ ಪಾರಂಪರಿಕ ಔಷಧಿಗೆ ಅಸ್ತಮಾಕ್ಕೆ ಕಾಯಿಲೆ ವಾಸಿ..| ಕೊಪ್ಪಳ : ಕೊಪ್ಪಳ ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ ಅಸ್ತಮಾ ಕಾಯಿಲೆಗೆ ನೀಡುವ ಉಚಿತ ಔಷಧಿಯನ್ನು ಸೇವಿಸಲು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ರೋಗಿಗಳು ಶನಿವಾರ ರಾತ್ರಿ ಮೃಗಶಿರಾ ಮಳೆ ನಕ್ಷತ್ರ ಕೂಡಿದ ಸುಸಂದರ್ಭ ಸರಿಯಾಗಿ 11.44 ಗಂಟೆಗೆ ಏಕಕಾಲದಲ್ಲಿ ಔಷಧಿ ಸೇವಿಸಿದರು. ಕಳೆದ ಆರು ದಶಕಗಳಿಂದ ಕುಟಗನಹಳ್ಳಿ ಗ್ರಾಮದ ಅಶೋಕ್ ರಾವ್ ಕುಲಕರ್ಣಿ ಕುಟುಂಬದವರು ನೀಡುವ ಉಚಿತ ಔಷಧಿ ಸೇವಿಸಲು […]

ನಾಗರಿಕರ ಅನುಕೂಲಕ್ಕಾಗಿ ದೂರುಸ್ವೀಕಾರ ಕೇಂದ್ರ ಸ್ಥಾಪನೆ

ನಾಗರಿಕರ ಅನುಕೂಲಕ್ಕಾಗಿ ದೂರುಸ್ವೀಕಾರ ಕೇಂದ್ರ ಸ್ಥಾಪನೆ

ಆಡಳಿತದಲ್ಲಿ ಜಿ.ಪಂ.ಸದಸ್ಯರ ಸಹಕಾರ ಇದೆ, ಜೂನ್-26 ರಂದು ಸಾಮಾನ್ಯ ಸಭೆ : ಹೆಚ್.ವಿಶ್ವನಾಥ್ ರಡ್ಡಿ  ಕೊಪ್ಪಳ :ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯತೆಯಿಂದ ನಡೆದರೆ ಮಾತ್ರ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಕೆಳಹಂತದವರೆಗೂ ತಲುಪಿಸಲು ಸಾಧ್ಯವಾಗುತ್ತದೆ ಮತ್ತು ಯಶಸ್ವಿಯಾಗುವುದೆಂದು ಜಿ.ಪಂ.ಅಧ್ಯಕ್ಷ ಹೆಚ್.ವಿಶ್ವನಾಥ್‌ರಡ್ಡಿ ಹೇಳಿದರು. ಜಿಲ್ಲಾ ಪಂಚಾಯತ ಅಧ್ಯಕ್ಷರ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಭೆಗಳನ್ನು ನಡೆಸಲು ಆಗಿರಲಿಲ್ಲ, ಜೂನ್-೨೬ ರಂದು ಜಿ.ಪಂ. ಸಾಮಾನ್ಯ […]

ಬರ ಅಧ್ಯಯನ ಕೊಪ್ಪಳಕ್ಕೆ ಬಿಎಸ್‌ವೈ ಭೇಟಿ

ಬರ ಅಧ್ಯಯನ ಕೊಪ್ಪಳಕ್ಕೆ ಬಿಎಸ್‌ವೈ ಭೇಟಿ

ಜನರ ನೋವಿಗೆ ಸ್ಪಂದಿಸಲು ಯಡಿಯೂರಪ್ಪ ಪ್ರವಾಸ :   ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಕೊಪ್ಪಳ : ಸತತ ‘ಬರ’ ಪರಿಸ್ಥಿತಿಯಿಂದಾಗಿ ಮಳೆ-ಬೆಳೆ ಇಲ್ಲದೆ ಕಂಗಲಾಗಿರುವ ಕೊಪ್ಪಳ ಜಿಲ್ಲೆಯ ಜನತೆ ತತ್ತರಿಸಿಹೋಗಿದ್ದು, ಜನರ ನೋವಿಗೆ ಸ್ಪಂದಿಸಲು, ಬರ ಪರಿಸ್ಥಿತಿ ಅಧ್ಯಯನ ಮಾಡಲು ಹಾಗೂ ಮೈತ್ರಿ ಸರ್ಕಾರಕ್ಕೆ ಚುರುಕು ಮುಟ್ಟಿಸಲು ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಹೇಳಿದರು. ಯಡಿಯೂರಪ್ಪ ಅವರ ಪ್ರವಾಸ ಕುರಿತು ಮಾಹಿತಿ […]

ಸಮರ್ಪಕ ಬರ ನಿರ್ವಹಣೆಗೆ ಕ್ರಮ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ

ಸಮರ್ಪಕ ಬರ ನಿರ್ವಹಣೆಗೆ ಕ್ರಮ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ

ನರೆಗಾದಲ್ಲಿ ಕೂಲಿ ಕೆಲಸ, ಕುಡಿವ ನೀರು ಪೂರೈಕೆಗೆ ಮುಂಜಾಗೃತೆ ಕೊಪ್ಪಳ : ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿಂದ ತಲೆದೊರಿರುವ ಸಮಸ್ಯೆಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಿ, ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ನಡೆಸಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಸ್ಯಾತ್ಮಕ ಗ್ರಾಮಗಳನ್ನು […]