ಕೊಪ್ಪಳದಲ್ಲಿ ಚೀನಾ ಮೊಬೈಲ್‌ ಅವಾಂತರ – ಕೂಲ್‌ ನೋಟ್‌ಪ್ಯಾಡ್‌ ಜೇಬಿನಲ್ಲಿಯೇ ಸ್ಫೋಟ​ಗೊಂಡ ಮೊಬೈಲ್​

ಅಗ್ಗದ ಬೆಲೆಯ ಸ್ಮಾರ್ಟ್​ ಮೊಬೈಲ್​ಗಳ ದುಸ್ಥಿತಿ ಕೊಪ್ಪಳ: ಮೊಬೈಲ್ ಬಳಕೆದಾರರೇ ಎಚ್ಚರ..! ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಸಿಕ್ಕಾಪಟ್ಟೆ ಫೀಚರ್ ಇರುವ ಮೊಬೈಲ್ ಬಳಕೆ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಅದರಲ್ಲಿಯೂ ಚೀನಾ ಮೊಬೈಲ್​ ಬಳಸುತ್ತಿದ್ದರೆ ತುಸು ಹೆಚ್ಚೇ ಜಾಗೃತರಾಗಿರಬೇಕು.   ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಮೊಬೈಲ್​ ಸ್ಫೋಟವಾಗಿದೆ.  ಮೊಬೈಲ್​ ಯುವಕನೊಬ್ಬನ  ಮೊಬ್ಯೆಲ್ ಜೇಬಿನಲ್ಲಿದ್ದಾಗ ಈ ಘಟನೆ ನಡೆದಿದೆ.   ಹನುಮೇಶ್​ ಹರಿಜನ ಎಂಬುವರ ಬಳಿ ಇದ್ದ ಕೂಲ್ ನೋಟ್​ ಪ್ಯಾಡ್​ ಮೊಬೈಲ್ ಸ್ಫೋಟಗೊಂಡು ಆತನಿಗೆ […]

ಚುನಾವಣಾ ಪ್ರಣಾಳಿಕೆಯಂತೆ ಸರಕಾರ ಭರವಸೆಗಳನ್ನು ಈಡೇರಿಸಿದೆ-ಸಚಿವ ರಾಯರೆಡ್ಡಿ

ಗುಣಮಟ್ಟದ ಕಾಮಗಾರಿಗಳ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ಕೊಪ್ಪಳ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಸಂಧರ್ಭದಲ್ಲಿ ಜನತೆಗೆ ನೀಡಿದ್ದ ಭರವಸೆಗಳನ್ನು  ಈಡೇರಿಸಿದೆ ಎಂದು ಉನ್ನತ್ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.   ಯಲಬುರ್ಗಾ ತಾಲೂಕಿನ ಕಲ್ಲೂರ, ಸಂಗನಹಾಲ ಇತರೆ ಗ್ರಾಮಗಳಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ‌ರು.   ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಂತೆ ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಡೆದಿವೆ.   ಡಿಸೆಂಬರನಿಂದ‌ […]

ಕೊಪ್ಪಳ: ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

  ಕೊಪ್ಪಳ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ವಿಫಲವಾದ ಸ್ಥಳೀಯ ಆಡಳಿತ  ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು, ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೊಪ್ಪಳದ ಇತಿಹಾಸದಲ್ಲೇ ಇದೇ ಮೊದಲು ನಗರಕ್ಕೆ ಮಳೆಗಾಲದಲ್ಲಿ ಬೇಸಿಗೆಯಂತೆ ವಾರ-ಹತ್ತುದಿನಗಳಿಗೊಮ್ಮೆ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿಗಾಗಿ ಕೋಟ್ಯಾಂತರ ರೂ ಅನುದಾನ ಬಳಕೆಯಾದರೂ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತಿಲ್ಲ. ತುಂಗಭದ್ರ ನದಿಯಲ್ಲಿ […]

ಕೊಪ್ಪಳ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತಕ್ಕೆ ಅಪರೇಷನ್ ಅಂತ ಪ್ರಾರಂಭ

ಕೊಪ್ಪಳ: ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿಯಲ್ಲಿ ಕೊಪ್ಪಳ ಜಿಲ್ಲೆಯನ್ನು ನ. 19 ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯೊಂದಿಗೆ, ಜಿಲ್ಲಾ ಪಂಚಾಯತಿ ವತಿಯಿಂದ “ಆಪರೇಷನ್ ಅಂತ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಕರೆ ನೀಡಿದರು. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಭವನದಲ್ಲಿ “ಆಪರೇಷನ್ ಅಂತ” ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಚ್ಛ […]

ನ. 20 ರಂದು ಕೊಪ್ಪಳದಲ್ಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ: ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ

ಕೊಪ್ಪಳ: ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನ. 20 ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು. ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಸಮಾಜದ ಮುಖಂಡರ ಮನವಿ ಮೇರೆಗೆ ನ. 10  […]

ಲಂಬಾಣಿ ನೃತ್ಯ ಕಲೆಗೆ ಸಂದ ಗೌರವ: ಗೊರ್ಲೇಕೊಪ್ಪದ ಶಾವಮ್ಮ ರಾಠೋಡಗೆ ರಾಜೋತ್ಸವ ಪ್ರಶಸ್ತಿ ಗರಿ

ಕೊಪ್ಪಳ : ಜಾನಪದ ಕಲೆಗಳಲ್ಲಿ ಒಂದಾದ ಲಂಬಾಣಿ ನೃತ್ಯವನ್ನು ಆರಾಧಿಸುವ ಕಲಾವಿದೆ ತಾಲೂಕಿನ ಗೊರ್ಲೆಕೊಪ್ಪದ ಶಾವಮ್ಮ ರಾಠೋಡ ಅವರ ಮುಡಿಗೆ 2017 ನೇ ಸಾಲಿನ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಒಲಿದಿದೆ. ರಾಜ್ಯ ಸರ್ಕಾರ ಅಕ್ಟೋಬರ್ 30 ರಂದು ಪ್ರಕಟಿಸಿದ ಪಟ್ಟಿಯಲ್ಲಿ ಪ್ರಶಸ್ತಿಗೆ ಶಾವಮ್ಮ ರಾಠೋಡ ಆಯ್ಕೆಯಾಗಿದ್ದಾರೆ.ಲಂಬಾಣಿ ನೃತ್ಯದ ಜತೆ ಬುಡಬುಡಕಿ, ರಾಮಕುಂದಡಿ ಸೇರಿ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಲಂಬಾಣಿ ನೃತ್ಯದ ಕಲಾಶ್ರಿಮಂತಿಕೆಯನ್ನು ಪ್ರಸ್ತುತಪಡಿಸುತ್ತಾರೆ. ಅನಕ್ಷರಸ್ಥೆ ಜತೆಗೆ ಕೂಲಿ ಮಾಡಿ ಜೀಬನ ಸಾಗಿಸುವ ಶಾವಮ್ಮ ತಾಲೂಕಿನ ಲಂಬಾಣಿ […]

ರಾಷ್ಟ್ರೀಯ ಏಕತಾ ಓಟಕ್ಕೆ ಸಂಸದ ಕರಡಿ ಸಂಗಣ್ಣ ಚಾಲನೆ

ಕೊಪ್ಪಳ: ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನದ ಪ್ರಯುಕ್ತ  ಜಿಲ್ಲಾಡಳಿತದ ವತಿಯಿಂದ ಮಂಗಳವಾರದಂದು ಕೊಪ್ಪಳದ ಗಡಿಯಾರ ಕಂಬದ ಬಳಿ ಆರಂಭಿಸಲಾದ ರಾಷ್ಟ್ರೀಯ ಏಕತಾ ಓಟಕ್ಕೆ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು. ರಾಷ್ಟ್ರೀಯ ಏಕತಾ ಓಟಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಅವರು ಉಪಸ್ಥಿತರಿದ್ದರು. ನಗರದ ಗಡಿಯಾರ ಕಂಬದ ಬಳಿಯಿಂದ ಪ್ರಾರಂಭಿಸಲಾದ ರಾಷ್ಟ್ರೀಯ ಏಕತಾ ಓಟದಲ್ಲಿ ಸಂಸದ […]

ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಸಂರಕ್ಷಣೆ ಮುಖ್ಯವಾಗಿದೆ : ಟಿ. ಶ್ರೀನಿವಾಸ

ಕೊಪ್ಪಳ: ಮಹಿಳೆಯರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಒಂದು ಸುಂದರವಾದ, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಸಂರಕ್ಷಣೆ ಬಹಳ ಮಖ್ಯವಾಗಿದೆ ಎಂದು  ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಹೇಳಿದರು. ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಕಾರಿಗಳ ಕಚೇರಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಹೆಣ್ಣು […]

ಹೈ-ಕ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಕೊಡಲೇ ಸಮರ್ಪಕ ಅನುಷ್ಠಾನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೂಚನೆ

ಕೊಪ್ಪಳ: ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ನಿಗದಿಪಡಿಸಲಾಗಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಜಿಲ್ಲೆಯ ಅನುಷ್ಠಾನಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 2017-18 ನೇ ಸಾಲಿಗೆ ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯ ಮೈಕ್ರೋ ಯೋಜನೆಯಡಿ 85. 83 ಕೋಟಿ ರೂ. ಗಳಲ್ಲಿ ಒಟ್ಟು 428 ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕೊಪ್ಪಳ ತಾಲೂಕಿನಲ್ಲಿ 96 ಕಾಮಗಾರಿಗಳಿಗೆ 16. 69 ಕೋಟಿ ರೂ., ಗಂಗಾವತಿ ತಾಲೂಕಿನಲ್ಲಿ 36 […]

ಮನೋರೋಗದ ಬಗ್ಗೆ ಜಾಗೃತಿ ಅತ್ಯವಶ್ಯ : ರಾಜೀವ್ ಗುರುನಾಥ ಜೋಶಿ

ಕೊಪ್ಪಳ : ಮನೋರೋಗವು ವ್ಯಾಪಕವಾಗಿದ್ದು, ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ ಗುರುನಾಥ ಜೋಷಿ  ಹೇಳಿದರು. ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ” ಅಂಗವಾಗಿ ಸಾಕ್ಷಿದಾರರ ಮೊಗಸಾಲೆ, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ, “ಕಾನೂನು ಅರಿವು-ನೆರೆವು” […]

1 54 55 56 57 58 74