ನೂತನ ಇ-ಸ್ಟಾಂಪಿಂಗ್ ಸೇವೆ ಪ್ರಾರಂಭ

ನೂತನ ಇ-ಸ್ಟಾಂಪಿಂಗ್ ಸೇವೆ ಪ್ರಾರಂಭ

ಯಲಬುರ್ಗಾ: ಪಟ್ಟಣದ ಕೊಪ್ಪಳ ಮುಖ್ಯ ರಸ್ತೆಯ ಶ್ರೀಗುರು ಸಿದ್ಧಶ್ರೀ ಸೌಹಾರ್ದ ಪತ್ತಿನ ಸಹಕಾರ ನಿಯಮಿತದ ವತಿಯಿಂದ ನೂತನ ಇ-ಸ್ಟಾಂಪಿಂಗ್ ಸೇವೆಗೆ ಮಾಜಿ ಎಂಎಲ್‍ಸಿ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಲಪ್ಪ ಆಚಾರ ಇತ್ತೀಚಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ  ಹಾಗೂ ರಾಜ್ಯ ಜೈವಿಕ ಇಂಧನ ನಿ.ಮಂ ಸದಸ್ಯ ಬಸವರಾಜ ಉಳ್ಳಾಗಡ್ಡಿ,ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷ ಶೀಪಾದಪ್ಪ ಅಧಿಕಾರಿ,ಮಾಜಿ ಜಿ.ಪಂ ಸದಸ್ಯ ಸಿ.ಎಚ್.ಪಾಟೀಲ್, ಎಸ್.ಎನ್.ಶ್ಯಾಗೋಟಿ,  ಅಮರಪ್ಪ ಕಲಬುರ್ಗಿ, ಸಂಗಣ್ಣ ಟೆಂಗಿನಕಾಯಿ, ಕೆ.ಜಿ.ಪಲ್ಲೇದ, ರಾಜಶೇಖರ ನಿಂಗೋಜಿ […]

ಜೇವರ್ಗಿ: ವಿರಕ್ತ ಮಠ ಪೀಠ ವಿವಾದ, ಭಕ್ತರ ಎರಡು ಗುಂಪುಗಳ ಮಧ್ಯೆ ಕಿತ್ತಾಟ

        ಕಲಬುರಗಿ: ಮಠದ ಪೀಠಕ್ಕಾಗಿ ಭಕ್ತರ ಎರಡು ಗುಂಪುಗಳ ಮಧ್ಯೆ ಜಗಳ ನಡೆದು ವಿಕೋಪಕ್ಕೆ ತಿರುಗಿದ ಪರಿಣಾಮ ಕೈ ಕೈ ಮಿಲಾಯಿಸಿ ರಕ್ತ ಚಿಮ್ಮಿದ ಘಟನೆ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಪೀಠಾಧಿಪತಿ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಮಠದ ಟ್ರಸ್ಟ್ ಅಧ್ಯಕ್ಷ ಷಣ್ಮುಖಪ್ಪ ಹಿರೇಗೌಡರ ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ.   ೧೭ನೇ ಶತಮಾನದ ಶ್ರೇಷ್ಠ […]

ದೇಶದ ಅಭಿವೃದ್ಧಿ ಯಾಗಬೇಕಾದರೆ ಯುವಜನಾಂಗ ಪಾತ್ರ ಪ್ರಮುಖ – ಶಾಸಕ ಡಾ. ಉಮೇಶ.ಜಿ.ಜಾಧವ

ದೇಶದ ಅಭಿವೃದ್ಧಿ ಯಾಗಬೇಕಾದರೆ ಯುವಜನಾಂಗ ಪಾತ್ರ ಪ್ರಮುಖ – ಶಾಸಕ ಡಾ. ಉಮೇಶ.ಜಿ.ಜಾಧವ

ಚಿಂಚೋಳಿ:  ತಾಲೂಕಿನ ತಹಶೀಲ್ದಾರ  ಕಾರ್ಯಾಲಯದ ಆವರಣದಲ್ಲಿ ಜರುಗಿದ ಕರ್ನಾಟಕ ಸರಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜಿವನೋಪಾಯ ಇಲಾಖೆ, ಬೆಂಗಳೂರು, ತಾಲೂಕಾ ಆಡಳಿತ,ತಾಲೂಕಾ ಪಂಚಾಯತ ಮತ್ತು ಪುರಸಭೆ, ಚಿಂಚೋಳಿ ಇವರುಗಳ ಸಹಯೋಗದಲ್ಲಿ “ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯ ಕ್ರಮವನ್ನು ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ. ಉಮೇಶ.ಜಿ.ಜಾಧವ ಅವರು ಉದ್ಘಾಟಿಸಿದರು. ಉದ್ಘಾಟನೆ ನಂತರ ಮಾತನಾಡುತ್ತಾ ನಮ್ಮ ಕಾಂಗ್ರೆಸ್ ಸರಕಾರ ಅನೇಕ ಜನಪರ ಕೆಲಸ ಮಾಡುತ್ತಿದ್ದು ಬಡವರ ಹಿಂದುಳಿದವರ ಪರ ಸಮಾಜಿಕ ನ್ಯಾಯದ ಪರ ನಮ್ಮ […]

ಯಲಬುರ್ಗಾ: ಮಳೆಯ ರಭಸಕ್ಕೆ ಮುಳ್ಳು ಕಂಟಿಗಳು ಸೇತುವೆ ಮೇಲೆ, ದುರಸ್ಥಿಗೆ ಒತ್ತಾಯ

ಯಲಬುರ್ಗಾ: ಮಳೆಯ ರಭಸಕ್ಕೆ ಮುಳ್ಳು ಕಂಟಿಗಳು ಸೇತುವೆ ಮೇಲೆ, ದುರಸ್ಥಿಗೆ ಒತ್ತಾಯ

ಯಲಬುರ್ಗಾ: ತಾಲೂಕಿನ ಗಡಿಭಾಗವಾದ ಸೋಂಪೂರ ಹಾಗೂ ಸಿದ್ನೆಕೊಪ್ಪದ ಮದ್ಯ ಇರುವ ಸೇತುವೆ ಮಳೆಯ ರಭಸಕ್ಕೆ ಮುಳ್ಳು ಕಂಟಿಗಳು ಸೇತುವೆ ತುಂಬಾ ಬಂದಿದೆ.   ಇದರಿಂದಾಗಿ ಎರಡೂ ಗ್ರಾಮದ ಸಂಪರ್ಕ ಸಂಪೂರ್ಣ ನಿಂತಿದ್ದು ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿದ್ನೆಕೊಪ್ಪ ಗ್ರಾಮಸ್ಥರು ಎಲ್ಲದಕ್ಕೂ ಸೊಂಪುರ ಗ್ರಾಮವನ್ನು ಅವಲಂಬಿಸಿರುತ್ತದೆ ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಬೇಗ ರಸ್ತೆಯನ್ನು ಸ್ವಚ್ಛತೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಬಸವರಾಜ ನಾಯ್ಕರ, ಮಂಜು ಹಳ್ಳಿಕೆರಿ, ರಮೇಶ ಉಪ್ಪಾರ ಹಾಗೂ ಇನ್ನಿತರ ಮುಖಂಡರು ಆಗ್ರಹಿಸಿದ್ದಾರೆ. udayanadu2016

ಯಲಬುರ್ಗಾ: ಸಿಡಿಲು ಬಡಿದು 3 ಎತ್ತುಗಳು ಸಾವು

ಯಲಬುರ್ಗಾ: ಸಿಡಿಲು ಬಡಿದು 3 ಎತ್ತುಗಳು ಸಾವು

ಯಲಬುರ್ಗಾ: ತಾಲೂಕಿನ ನೇಲಜೇರಿ ಗ್ರಾಮದಲ್ಲಿ ರವಿವಾರ ಸಾಯಂಕಾಲ ಸಿಡಿಲು ಬಡಿದು ಮೂರು ಎತ್ತುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ನೆಲಜೇರಿ ಗ್ರಾಮದ ರೈತ ಹನುಮಂತಪ್ಪ ಎಂಬುವರಿಗೆ ಸೇರಿದ ಎತ್ತುಗಳಾಗಿದ್ದು ಹೊಲದಲ್ಲಿ ಕಟ್ಟಿದ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾಗಿವೆ. ಈ ಮೊದಲು ಬರಗಾಲದಿಂದ ನಷ್ಟವಾಗಿದ್ದು ಈ ಘಟನೆಯಿಂದ ಮತ್ತೊಂದು ನಷ್ಟ ಸಂಭವಿಸಿದೆ. ಸರಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. udayanadu2016

ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಮನೆ, ನಿವೇಶನಗಳ ತೆರಿಗೆ ಹೆಚ್ಚಳಕ್ಕೆ ಕ್ರಮ

ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ  ಬರುವ ಮನೆ, ನಿವೇಶನಗಳ ತೆರಿಗೆ ಹೆಚ್ಚಳಕ್ಕೆ ಕ್ರಮ

ಯಲಬುರ್ಗಾ: ಸರ್ಕಾರದ ಪೌರಾಡಳಿತ ಇಲಾಖೆಯ ನಿರ್ದೇಶನದಂತೆ ಇನ್ನು ಮುಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಹಾಗೂ ನಿವೇಶನಗಳಿಗೆ 2017 -2018 ನೇ ಸಾಲಿನಲ್ಲಿ ಶೇಕಡಾ 16ರಷ್ಟು ತೆರಿಗೆ ಹೆಚ್ಚಳ ವಿಧಿಸುವ ಕ್ರಮ ಕೈಗೊಳ್ಳಲಾಗುವದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳಿದರು. ಪಟ್ಟಣದ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ  ಮಾತನಾಡಿದ ಅವರು, ತೆರಿಗೆ ಪರಿಷ್ಕರಣೆಯನ್ನು ಕಾಲಕಾಲಕ್ಕೆ ಹೆಚ್ಚಳ  ಮಾಡುವದು ಕಡ್ಡಾಯವಾಗಿದ್ದು ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ಪಟ್ಟಣದಲ್ಲಿ 93 ಖಾಸಗೀ […]

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇದ್ದು ಇಲ್ಲದಂತಾಗಿದೆ: ಪ್ರದೀಪಗೌಡ ಮಾಲಿಪಾಟೀಲ್

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇದ್ದು ಇಲ್ಲದಂತಾಗಿದೆ: ಪ್ರದೀಪಗೌಡ ಮಾಲಿಪಾಟೀಲ್

  ಯಲಬುರ್ಗಾ: ರಾಜ್ಯದ ರೈತರು ವಿವಿಧ ಬ್ಯಾಂಕುಗಳಿಂದ ಪಡೆದುಕೊಂಡ ಕೃಷಿ ಸಾಲವನ್ನು ಮನ್ನಾ ಮಾಡುವದಕ್ಕೆ ರಾಜ್ಯ  ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ರಾಜ್ಯದ ಜನರ ಪಾಲಿಗೆ ರಾಜ್ಯ ಕಾಂಗ್ರೇಸ್ ಸರಕಾರ ಇದ್ದು  ಇಲ್ಲದಂತಾಗಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್ ಹೇಳಿದರು. ಪಟ್ಟಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪಧಾಧಿಕಾರಿಗಳ ನೇಮಕ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು  ಜನರ ಸಮಸ್ಯೆಗಳಿಗೆ ಸ್ಪಂದಿಸುತಿಲ್ಲ.  ಉತ್ತರ ಕರ್ನಾಟಕದ ಅಭಿವೃದ್ದಿಗೆ ಕುಮಾರಸ್ವಾಮಿಯವರು ಯಾವುದೇ ಮಲತಾಯಿ […]

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯಿಂದ ವೇಬ್- ಪೊರ್ಟಲ್ ಗೆ

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯಿಂದ ವೇಬ್- ಪೊರ್ಟಲ್ ಗೆ

  ಯಲಬುರ್ಗಾ: ನಗರದ ಬುದ್ದ,ಬಸವ ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿ ಕೌಶಲ್ಯ ಅಭಿವೃದ್ದಿ ಯೋಜನೆಯಡಿ ವೇಬ್- ಪೊರ್ಟಲ್ ಗೆ ಸೋಮವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೈವಿಕ ಇಂಧನ ಮಂಡಳಿ ಸದಸ್ಯ ಬಸವರಾಜ ಉಳ್ಳಾಗಡ್ಡಿ,ತಹಸೀಲ್ದಾರ ರಮೇಶ ಅಳವಂಡಿಕರ್, ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ,ಜಿಪಂ ಸದಸ್ಯ ಹನಮಂತಗೌಡ ಪಾಟೀಲ್, ಗಿರಿಜಾ ಸಂಗಟಿ, ಹೊಳೆಯಮ್ಮ ಪೋಲಿಸ್ ಪಾಟೀಲ್,ತಾಪಂ ಸದಸ್ಯ ಸಾವಿತ್ರಿ ಗೊಲ್ಲರ, ಓಬಳೆಪ್ಪ ಕುಲಕರ್ಣೀ ಇತರರು ಇದ್ದರು. Munna Bagwanhttp://udayanadu.com

ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ನವೀಕರಣಕ್ಕೆ ಒತ್ತಾಯಿಸಿ ಮನವಿ

ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ನವೀಕರಣಕ್ಕೆ ಒತ್ತಾಯಿಸಿ ಮನವಿ

ಹಟ್ಟಿಚಿನ್ನದಗಣಿ: ಪೊಲೀಸ್ ವಸತಿ ಗೃಹಗಳನ್ನು ನವೀಕರಣಗೊಳಿಸುವಂತೆ ತಾಲೂಕಾ ಕಾಂಗ್ರೇಸ್ ಘಟಕದ ಪದಾಧಿಕಾರಿಗಳು  ಸೋಮವಾರ ಚಿನ್ನದಗಣಿ ವ್ಯವಸ್ಥಾಪಕರ ಮೂಲಕ ಗೃಹ ಸಚಿವ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಾಲೂಕಾ ಕಾಂಗ್ರೇಸ್ ಘಟಕದ ಕಾರ್ಯದರ್ಶಿ ಮೌಲಾಸಾಬ ಮಾತನಾಡಿ,  ಸುಮಾರು 35 ವರ್ಷಗಳ ಹಿಂದೆ ಕಟ್ಟಿಸಿದ ವಸತಿ ಗೃಹಗಳಾಗಿದ್ದು,  ಗೋಡೆಗಳು ಬಿರುಕು ಬಿಟ್ಟಿವೆ ಇಂದು ನಾಳೆ ಬೀಳುವ ಸ್ಥಿತಿಯಲ್ಲಿವೆ.  ಪೊಲೀಸ್ ಸಿಬ್ಬಂದಿ ಆತಂಕದಲ್ಲಿ ವಾಸಿಸುವ ಪರಿಸ್ಥತಿ ನಿರ್ಮಾನವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ನವೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕಾ […]

ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟನೆ ಅಗತ್ಯ: ನಂದಕುಮಾರ್ ಮಾಲಿಪಾಟೀಲ್

ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟನೆ ಅಗತ್ಯ: ನಂದಕುಮಾರ್ ಮಾಲಿಪಾಟೀಲ್

ಕಲಬುರಗಿ: ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟನೆಗಳು ಅಗತ್ಯ ಎಂದು ವಾಲ್ಮೀಕಿ  ನಾಯಕ ಸಂಘದ ಅಧ್ಯಕ್ಷ ನಂದಕುಮಾರ್ ಮಾಲಿಪಾಟೀಲ್ ಹೇಳಿದರು. ನಗರದ  ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಲ್ಮೀಕಿ ನಾಯಕ ಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಶೈಕ್ಷಣಿಕವಾಗಿ, ರಾಜಕೀಯವಾಗಿ ಈ  ಜನಾಂಗ ಹಿಂದುಳಿದಿದೆ. ಯುವಕರು ಒಗಟ್ಟಿನಿಂದ ಹೋರಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಸಮಸ್ಯೆಗಳ ವಿರುದ್ದವಾಗಿ […]