ದುಶ್ಚಟಗಳಿಂದ ದೂರವಿರುವಂತೆ ಮಕ್ಕಳಿಗೆ ಪಿಎಸ್‍ಐ ಶೈಲಾ ಸಲಹೆ

ದುಶ್ಚಟಗಳಿಂದ ದೂರವಿರುವಂತೆ ಮಕ್ಕಳಿಗೆ ಪಿಎಸ್‍ಐ ಶೈಲಾ ಸಲಹೆ

ಹಟ್ಟಿಚಿನ್ನದಗಣಿ: ದುಶ್ಚಟಗಳಿಂದ ಮಕ್ಕಳ ಜೀವನ ಹಾಳಾಗುತ್ತದೆ. ದುಶ್ಚಟಗಳಿಂದ ದೂರವಿರಬೇಕು ಎಂದು ಹಟ್ಟಿ ಪಿಎಸ್‍ಐ ಶೈಲಾ ಎಸ್.ಪ್ಯಾಟಿಶೆಟ್ಟರ್ ಹೇಳಿದರು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತುಗಳ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ದುಶ್ಚಟಗಳಿಗೆ ದಾಸರಾಗಿ ಬೆಳೆಯುವ ಮಕ್ಕಳ ಜೀವನ ಕಮರಿ ಹೋಗುತ್ತದೆ. ಮಾದಕ ವಸ್ತುಗಳ ಮಾರಾಟದ ಜಾಲದ ಕುರಿತು ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸರಿಗೆ ತಿಳಿಸಿಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಬಲಭೀಮರಾವ್ […]

ಯಲಬುರ್ಗಾ ತಾ.ಪಂ ಅಧಿಕಾರಿಗಳಿಂದ ತಾರತಮ್ಯ: ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಆರೋಪ

ಯಲಬುರ್ಗಾ ತಾ.ಪಂ ಅಧಿಕಾರಿಗಳಿಂದ ತಾರತಮ್ಯ: ಉಪಾಧ್ಯಕ್ಷ  ವಿಶ್ವನಾಥ ಮರಿಬಸಪ್ಪನವರ ಆರೋಪ

ಯಲಬುರ್ಗಾ: ಹಲವು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಖಾಸಗಿ ಬೊರ್‍ವೆಲ್‍ಗಳಿಂದ ನೀರು ಸರಬರಾಜು ಮಾಡುವಲ್ಲಿ ತಾಲೂಕಿನಲ್ಲಿ ಬೊರ್‍ವೆಲ್ ಮಾಲೀಕರಿಗೆ ಪ್ರತಿ ತಿಂಗಳು 10ಸಾವಿರ ನೀಡಿ ತಾರತಮ್ಯವಾಗುವಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಗುಡುಗಿದರು. ಇಲ್ಲಿನ ತಾಲೂಕ ಪಂಚಾಯತ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ನಂತರ ಮಾತನಾಡಿದ ತಾಪಂ ಸದಸ್ಯ ಶರಣಪ್ಪ ಈಳಿಗೇರ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆಯವರೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ನಗು […]

ಅಕ್ರಮ ಮರಳು ಸಾಗಾಟ: ಟ್ರ್ಯಾಕ್ಟರ್ ವಶ

ಅಕ್ರಮ ಮರಳು ಸಾಗಾಟ: ಟ್ರ್ಯಾಕ್ಟರ್ ವಶ

ಹಟ್ಟಿಚಿನ್ನದಗಣಿ: ತಾಲೂಕಿನ ಯಲಗಟ್ಟಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜಾಲಹಳ್ಳಿ ಕಡೆಯಿಂದ ಹಟ್ಟಿ ಪಟ್ಟಣದ ಕಡೆಗೆ ಅಕ್ರಮ ಮರಳು ತುಂಬಿಕೊಂಡು ಬರುತ್ತಿದ್ದಾಗ ಪಿಎಸ್‍ಐ ಶೈಲಾ ಪ್ಯಾಟಿಶೆಟ್ಟರ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ಮರಳು ತುಂಬಿದ ಟ್ರ್ಯಾಕ್ಟರ್‍ ಮತ್ತು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಟ್ಟಿಚಿನ್ನದಗಣಿ ಪೊಲೀಸ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.   Munna Bagwanhttp://udayanadu.com

ಹಟ್ಟಿಚಿನ್ನದಗಣಿ: ಶಾಲಾ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಹಟ್ಟಿಚಿನ್ನದಗಣಿ: ಶಾಲಾ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಹಟ್ಟಿಚಿನ್ನದಗಣಿ: ಇಲ್ಲಿನ ಕ್ಯಾಂಪಿನಲ್ಲಿರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ಜರುಗಿದೆ. ಶಾಲೆಯ  ಕಾರ್ಯಾಲಯದ ಬೀಗ ಮುರಿದ ಕಳ್ಳರು ಟ್ರಿಜೋರಿಗಳಲ್ಲಿದ್ದ ವಿಜ್ಞಾನ ಸಾಮಗ್ರಿಗಳು ಮತ್ತು ಕೆಲ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಇದರಿಂದ ಸುಮಾರು 25 ಸಾವಿರ ಮೌಲ್ಯದ ವಸ್ತುಗಳು ಹಾಳಾಗಿವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಎಸ್‍ಡಿಎಮ್‍ಸಿ ಅಧ್ಯಕ್ಷ ಮುನ್ನಾಬಾಯ್ ಮನವಿ ಮಾಡಿದ್ದಾರೆ. ಈ ಕುರಿತು ಹಟ್ಟಿಚಿನ್ನದಗಣಿ ಪೊಲೀಸ ಠಾಣೆಯಲ್ಲಿ ಪ್ರಕರಣ […]

200 ಜನವಸತಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ವಿತರಣೆ: ಕೆ. ಶಿವಮೂರ್ತಿ

200 ಜನವಸತಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ವಿತರಣೆ: ಕೆ. ಶಿವಮೂರ್ತಿ

ರಾಯಚೂರು: ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉಳುವವನೇ ಭೂಮಿಯ ಒಡೆಯ ಯೋಜನೆ ಅಡಿಯಲ್ಲಿ ಹಕ್ಕುಪತ್ರಗಳನ್ನು ನೀಡಲಾಗುವುದೆಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಎಸ್‍ಸಿ,ಎಸ್‍ಟಿ ಕಾಲೋನಿಗಳ ಅಭಿವೃದ್ಧಿಗೆ 243ಕೋಟಿ ರೂ ಅನುದಾನ ಬಂದಿದೆ.143ಕೋಟಿ ಖರ್ಚಾಗಿದ್ದು ಇನ್ನುಳಿದ ಅನುದಾನ ಖರ್ಚು ಮಾಡಲು ಸೂಚಿಸಲಾಗಿದೆ. ಎಸ್‍ಸಿಪಿ ಹಾಗೂ ಟಿಎಸ್‍ಪಿ ಅನುದಾನ ಖರ್ಚು ಮಾಡದ […]

ಕೊಪ್ಪಳ: ನೂತನ ವಸತಿ ನಿಲಯ ಕಾಮಗಾರಿಗೆ ಚಾಲನೆ

ಕೊಪ್ಪಳ: ನೂತನ ವಸತಿ ನಿಲಯ ಕಾಮಗಾರಿಗೆ ಚಾಲನೆ

ಕೊಪ್ಪಳ: ಸಮೀಪದ ಗಿಣಿಗೇರಾ ಗ್ರಾಮದಲ್ಲಿ 2 ಕೋಟಿ ವೆಚ್ಚದಲ್ಲಿ ನೂತನ ಬಾಲಕರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಬುಧವಾರ  ಶಾಸಕ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು.   ಈ ಸಂದಭ೯ದಲ್ಲಿ ತಾಪಂ ಅಧ್ಯಕ್ಷ ಬಾಲಚಂದ್ರ, ಜಿಪಂ ಸದಸ್ಯ ಕೆ ರಾಜಶೇಖರ ಹಿಟ್ನಾಳ, ಗೂಳಪ್ಪ ಹಲಗೇರಿ, ತಾಲೂಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ ಇತರರು ಇದ್ದರು. udayanadu2016

ರಕ್ತದಾನ ಕುರಿತು ಜನ ಜಾಗೃತಿ ಅವಶ್ಯಕ: ಸಿಇಒ ಎಂ.ಕೂರ್ಮಾರಾವ್

ರಕ್ತದಾನ ಕುರಿತು ಜನ ಜಾಗೃತಿ ಅವಶ್ಯಕ: ಸಿಇಒ ಎಂ.ಕೂರ್ಮಾರಾವ್

ರಾಯಚೂರು: ರಕ್ತದಾನದ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳಿಗೆ ತರೆ ಎಳೆಯುವುದು ಅವಶ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಕೂರ್ಮಾರಾವ್ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್ ಆಸ್ಪತ್ರೆ, ನವೋದಯ ವೈಧ್ಯಕಿಯ ಕಾಲೇಜು, ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ರೆಡ್ ರಿಬ್ಬಿನ ಕ್ಲಬ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ಮಲೇರಿಯ ವಿರೋಧಿ ಮಾಸಾಚರಣೆ ಜಾಗೃತಿ ಜಾಥಾಗೆ […]

ಕಲಬುರಗಿಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಕಲಬುರಗಿಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಕಲಬುರಗಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಂತ್ರಾಸವಾಡಿ ಸಿ.ಟಿ. ಬಸ್ ನಿಲ್ದಾಣ ಹತ್ತಿರದ ರಾಜಕಾಲುವೆ ನೀರಿನಲ್ಲಿ ಮಗುವೊಂದು ಕೊಚ್ಚಿ ಹೋಗಿದ್ದು, ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಮೆಹತರಗಲ್ಲಿ ನಿವಾಸಿ ರಾಖೇಶ ಅಠವಾಲಾ ಎಂಬುವರ ಮಗ ಕೃಷ್ಣ ಎಂಬಾತನೇ ನೀರು ಪಾಲಾದ ಬಾಲಕ.  ಸ್ನೇಹಿತರೊಂದಿಗೆ ಆಟ ಆಡಲು ಹೋಗಿದ್ದಾಗ ಚರಂಡಿಯಲ್ಲಿ ಬಿದ್ದಿದ್ದಾನೆ. ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಸುಗಮ ಸಂಚಾರಕ್ಕೂ ಸಂಚಕಾರ ಒದಗಿದೆ. udayanadu2016

ಕುಕನೂರ ಸಮುದಾಯ ಭವನ ಕಾಮಗಾರಿ ವಿಕ್ಷೀಸಿದ ಅನ್ನದಾನೇಶ್ವರ ಶ್ರೀ

 ಯಲಬುಗಾ೯ :ತಾಲೂಕಿನ ಕುಕನೂರು ಪಟ್ಟಣದ  ಶಾಖಾ ಮಠದಲ್ಲಿ ನಿಮಿ೯ಸುತ್ತಿರುವ ಸಮುದಾಯ ಭವನ ಕಾಮಗಾರಿಯನ್ನು ಮಂಗಳವಾರ ಅನ್ನದಾನೇಶ್ವರ ಸ್ವಾಮೀಜಿ ವಿಕ್ಷೀಸಿದರು. ಈ ಸದರ್ಭದಲ್ಲಿ  ಮಹದೇವಯ್ಯ ಸ್ವಾಮೀಜಿ , ಗ್ರಾಮದ ಮುಖಂಡರಾದ ಸತ್ಯನಾರಾಯಣ ಹರಪನಹಳ್ಳಿ.ಶೇಖಪ್ಪ ವಾರದ ಇತರರು ಇದ್ದರು.   Munna Bagwanhttp://udayanadu.com

ರಾಷ್ಟ್ರಪತಿಗಳ ಕಾಯ೯ ಶ್ಲಾಘನೀಯ: ರತ್ನಾಕರ

ರಾಷ್ಟ್ರಪತಿಗಳ ಕಾಯ೯ ಶ್ಲಾಘನೀಯ: ರತ್ನಾಕರ

ಕೊಪ್ಪಳ: ರಾಷ್ಟ್ರಪತಿಗಳು ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಮಸೂದೆಗೆ ಅಂಗೀಕಾರ ನೀಡಿದ್ದು ಹಿಂದುಳಿದ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ವರವಾಗಲಿದೆ ಎಂದು ಗುತ್ತಿಗೆದಾರ ಹಾಗೂ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಟಿ.ರತ್ನಾಕರ ಹೇಳಿದರು. ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಮಂಗಳವಾರ  ಗುತ್ತಿಗೆದಾರರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.  ವಿವಿಧ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ  ಗುತ್ತಿಗೆದಾರರಿಗೆ ಶೇ.24.1 ರಷ್ಟು ಮೀಸಲಾತಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು ಶ್ಲಾಘನೀಯ ಹಾಗೂ ಪಂಚಾಯತರಾಜ್, ಲೋಕೋಪಯೋಗಿ, ನೀರಾವರಿ, ನಗರ ಸ್ಥಳೀಯ ಸಂಸ್ಥೆಯ ಕಾಮಗಾರಿಯಲ್ಲಿ […]