ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಳ್ಳಲು ಸಚಿವ ಪ್ರೀಯಾಂಕ ಖರ್ಗೆ ಸಲಹೆ

ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಳ್ಳಲು ಸಚಿವ ಪ್ರೀಯಾಂಕ ಖರ್ಗೆ ಸಲಹೆ

ಕಲಬುರಗಿ: ವಿದ್ಯಾರ್ಥಿಗಳು ಕೇವಲ ಓದಿನ ಬಗ್ಗೆ ಗಮನ ಕೊಡದೆ ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಂಡು ಮುಂದುವರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜಕಲ್ಯಾಣ ಸಚಿವರಾದ  ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಕರಾವಿಪ ಜಿಲ್ಲಾ ಸಮಿತಿ, ಗುಲಬರ್ಗಾ ವಿವಿ ಕಲಬುರಗಿ ಸಹಯೋಗದಲ್ಲಿ ಗುವಿ ಕಲಬುರಗಿ ಯ ಡಾ ಬಿ.ಆರ್. ಅಂಬೇಡ್ಕರ್ ಭವನದಲ್ಲಿ […]

ಜನೇವರಿ 27,28 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ: ರೂಪಾ ಮೋಹನ್

ಜನೇವರಿ 27,28 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ: ರೂಪಾ ಮೋಹನ್

ಶಹಾಪುರ: ಬೆಂಗಳೂರಿನ ಸೃಷ್ಟಿ ಕಲಾ ಮಂದಿರ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಜನವರಿ 27,28 ರಂದು ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸೃಷ್ಟಿ ಕಲಾ ಮಂದಿರದ ಸಂಸ್ಥಾಪಕ ಅಧ್ಯಕ್ಷರಾದ ರೂಪಾ ಮೋಹನ್ ಅವರು ಪ್ರಕಟಣೆಗೆ ತಿಳಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಬಹುದು ಆಸಕ್ತ ಶಿಶು ಸಾಹಿತಿಗಳು ತಮ್ಮ ಸ್ವರಚಿತ ಮೂರು ಕವನಗಳು ಅಥವಾ ಎರಡು ಕಥೆಗಳು ಸ್ಪಷ್ಟವಾಗಿ ಬರೆದು ಕೆಳಕಂಡ ವಿಳಾಸಕ್ಕೆ ಇದೇ ತಿಂಗಳು ೩೧ ರೊಳಗಾಗಿ ಕಳುಹಿಸಿ […]

ರೈತರ 1 ಲಕ್ಷವರೆಗಿನ ಸಾವಿರ ಕೋಟಿ ಸಾಲ ಮನ್ನಾಕ್ಕೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ

ರೈತರ 1 ಲಕ್ಷವರೆಗಿನ ಸಾವಿರ ಕೋಟಿ ಸಾಲ ಮನ್ನಾಕ್ಕೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ

ಕೊಪ್ಪಳ ಜಿಲ್ಲೆಯ 98 ಸಹಕಾರ ಸಂಘಗಳ 23976 ರೈತರ ರೂ.12168.10 ಲಕ್ಷ ಹೊರಬಾಕಿ ಸಾಲ – 147 ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ 67507 ರೈತರ ಅಂದಾಜು 996 ಕೋಟಿ – ಬ್ಯಾಂಕುಗಳಿಗೆ ದಾಖಲಾತಿ ಮಾಹಿತಿ ಸಲ್ಲಿಸಲು ಡಿ.15 ರಿಂದ 28ರ ವರೆಗೆ ಕಾಲವಕಾಶ-ಡಿ.ಸಿ. ಸುನೀಲ್ ಕುಮಾರ ಕೊಪ್ಪಳ : ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಸಹಕಾರ ಸಂಘಗಳ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ […]

ಶಿಕ್ಷಣದ ಏಳಿಗೆಗೆ ಶ್ರಮಿಸಿ: ಬಿಇಒ ಓಲೆಕಾರ್ ಕರೆ

ಶಿಕ್ಷಣದ ಏಳಿಗೆಗೆ ಶ್ರಮಿಸಿ: ಬಿಇಒ ಓಲೆಕಾರ್ ಕರೆ

ಸುರಪುರ: ಹಿಂದುಳಿದ ಪ್ರದೇಶಗಳೆಂಬ ಹಣೆಪಟ್ಟೆಯಲ್ಲಿರುವ ನಮ್ಮ ಹೈ-ಕ ಭಾಗದಲ್ಲಿ ಶಿಕ್ಷಣದ ಅಭಿವೃದ್ಧಿ ಎಂಬುದು ಆದ್ಯತೆಯ ವಿಷಯವಾಗಿದೆ.  ಶಿಕ್ಷಣ ಅಭಿವೃದ್ದಿಗೆ ವಿಶೇಷ ಒತ್ತು ನೀಡುವಂತೆ ನೂತನ ಶಿಕ್ಷಕರಿಗೆ ಬಿಇಒ ನಾಗರತ್ನ ಓಲೆಕಾರ್ ಕರೆ ನೀಡಿದರು. ಸರಕಾರದಿಂದ ಖಾಯಂ ಶಿಕ್ಷಕರಾಗಿ ನೇಮಕಗೊಂಡ ನಲವತ್ತು ಜನ ಶಿಕ್ಷಕರಿಗೆ ತಮ್ಮ ಕಚೇರಿಯಲ್ಲಿ ಎಲ್ಲರನ್ನು ಭೇಟಿ ಮಾಡಿ ಮಾತನಾಡಿ ,ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿನ ಕಲಿಕಾ ಮಟ್ಟದ ಸುಧಾರಣೆಗೆ ಕಾಳಜಿ ವಹಿಸಿ ಹಾಗು ನಿಮಗೆ ನೀಡಿರುವ ವಿಷಯಗಳ ಪಾಠವನ್ನು ಅವಧಿಯೊಳಗೆ ಮುಗಿಸುವ ಮೂಲಕ ಮಕ್ಕಳಿಗೆ ಯಾವುದೆ […]

ಕಲಬುರಗಿಯಲ್ಲಿ ಡಿ.15 ರಿಂದ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶ

ಕಲಬುರಗಿಯಲ್ಲಿ ಡಿ.15 ರಿಂದ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ 26 ನೇ ಯ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ನಾಳೆ ( ಡಿಸೆಂಬರ್ 15) ಯಿಂದ ಡಿ. 17 ರವರೆಗೆ ಗುಲಬರ್ಗ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಳೆ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಡಾ ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮಾವೇಶ ಉದ್ಘಾಟಿಸುವರು. ಸುಮಾರು 700 […]

ಹೈಕ ಬೇಡಿಕೆಗೆ ಸ್ಪಂದಿಸಿ: ದಸ್ತಿ ಆಗ್ರಹ

ಹೈಕ ಬೇಡಿಕೆಗೆ ಸ್ಪಂದಿಸಿ: ದಸ್ತಿ ಆಗ್ರಹ

ಕಲಬುರಗಿ:  ಹೈದರಾಬಾದ ಕರ್ನಾಟಕ ಪ್ರದೇಶದ ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸದಿದ್ದರೆ  ವಿನೂತನ ಹೋರಾಟದ ಮುಖಾಂತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಂಬರುವ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಲಾಗುವದು ಎಂದು   ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.   ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು, 371(ಜೆ) ಕಲಂ ಅಡಿ ಸವಲತ್ತುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವದು, ಎಚ್ ಕೆ ಆರ್ ಡಿ ಬಿಯಿಂದ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ಹಮ್ಮಿಕೊಂಡು ಕಾಲಮಿತಿಯ ಅಭಿವೃದ್ಧಿಗೆ ಕ್ರಮ,ಇ […]

ಧಾರಾಕಾರವಾಗಿ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

ಧಾರಾಕಾರವಾಗಿ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

ಕಲಬುರಗಿ: ನಗರದಲ್ಲಿ ನಿನ್ನೆ ರಾತ್ರಿ ಧಾರಾಕಾರವಾಗಿ ಮಳೆ ಸಿರದ ಪರಿಣಾಮ ನಗರದಾದ್ಯಂತ ಇಂದು ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಯಿತು. ಲಾಲ್ ಗೇರಿ ಕ್ರಾಸ್, ರಾಮಂಮಂದಿರ ಸರ್ಕಲ್, ಬ್ರಹ್ಮಪುರ ಮುಂತಾದ ಕಡೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾತ್ರಿ 12 ಗಂಟೆಗೆ ಒಮ್ಮದೊಮ್ಮೆಲೆ ಮೋಡ ಕವಿದು ಧಾರಕಾರವಾಗಿ ಸುರಿದ ಪರಿಣಾಮ ನಗರದ ವಿವಿಧ ಶಾಲಾ-ಕಾಲೇಜುಗಳ ಮೈದಾನಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಶಾಲೆಗೆ ಬಂದ ಮಕ್ಕಳು ನಿಂತ ಮಳೆ ನೀರಿನಲ್ಲಿ ಪರಸ್ಪರ ಖುಷಿಯಿಂದ ನೀರೆರಚಾಟದಲ್ಲಿ ತೊಡಗಿರುವುದು ಸರ್ವ ಸಾಮಾನ್ಯವಾಗಿತ್ತು. ಈ ಅವಘಡ ಮಳೆಯಿಂದಾಗಿ ಹತ್ತಿ, […]

ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಅವಘಡ: 5 ಜನರಿಗೆ ಗಾಯ

ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಅವಘಡ: 5 ಜನರಿಗೆ ಗಾಯ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಪ್ಯಾಕ್ಟರಿಯಲ್ಲಿ ಇಂದು ಬೆಳಗ್ಗೆ ಮಟಿರಿಯಲ್ ಬೆಲ್ಟ್ ಹರಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಗಂಭೀರಾಗಿ ಗಾಯಗೊಂಡ ಘಟನೆ ನಡೆದಿದೆ.   ದೇವಿಂದ್ರಪ್ಪಾ,  ಲಕ್ಷ್ಮಣ್, ರವಿಕುಮಾರ್,ಮಲ್ಲಪ್ಪಾ, ಮನೋಜ್ ಗಾಯಾಳುಗಳು. ಗಾಯಾಳುಗಳು ಕೋಡ್ಲಾ, ಬಟ್ಟರಗಾ, ಬಂಕಲಗಾ, ಅಳ್ಳೋಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.   ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಗಂಭೀರವಾಗಿ ಗಾಯಗೊಂಡ ಐದು ಜನರನ್ನು ಕಲಬುರಗಿ ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. […]

ಪೊಲೀಸರ ಸಮ್ಮುಖದಲ್ಲಿ ಪ್ರೇಮಿಗಳ ಮದುವೆ

ಪೊಲೀಸರ ಸಮ್ಮುಖದಲ್ಲಿ ಪ್ರೇಮಿಗಳ ಮದುವೆ

ಸುರಪುರ: ನಗರದ ಹುದ್ದಾರ ಓಣಿಯ ಪ್ರೇಮಿಗಳಿಬ್ಬರು ಪೊಲೀಸರ ಸಮ್ಮುಖದಲ್ಲಿ  ಹಸೆಮಣೆ ಏರಿದ ಘಟನೆ ನಡೆಯಿತು. ಕಳೆದ ಎರಡು ವರ್ಷಗಳಿಂದ ಪ್ರೇಮಿಸುತ್ತಿದ್ದ ಹುದ್ದಾರ ಓಣಿಯ ಭೀಮಣ್ಣ ತಳವಾರ ಹಾಗು ಕಾವೇರಿ ಜಾಲಗಾರ ಎಂಬ ಜೋಡಿಯು  ನಗರ ಠಾಣೆಯ ಇನ್ಸ್ಪೇಕ್ಟರ್ ಹರೀಬಾ ಜಮಾದಾರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ವಿವಾಹಗೊಂಡರು. ಈ ಜೋಡಿಗೆ ಅವರ ಮನೆಯಲ್ಲಿ ವಿವಾಹಕ್ಕೆ ವಿರೋಧ ವ್ಯಕ್ತಿವಾಗಿದ್ದರಿಂದ ಪೊಲೀಸರ ಸಹಕಾರದಲ್ಲಿ ಮದುವೆಯಾಗುವಾಗ ಇಬ್ಬರ ಪೊಷಕರು ಠಾಣೆಗೆ ಬಂದು ಸಮ್ಮುಖ ವಹಿಸಿದ್ದರು.ಹಾರ ಬದಲಾಯಿಸಿಕೊಂಡ ನಂತರ ಉಪ […]

ಬಸ್ಸಿಗೆ ಬೈಕ್ ಡಿಕ್ಕಿ: ಚಾಲಕನ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರರು

ಬಸ್ಸಿಗೆ ಬೈಕ್ ಡಿಕ್ಕಿ: ಚಾಲಕನ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರರು

ಶಹಾಪುರ: ಶಹಾಪುರದ ಹೊಸ ಬಸ್ ನಿಲ್ದಾಣದ ಒಳಗಡೆ ಬಸ್ ಚಲಿಸುವಾಗ ಹಿಂದಿನಿಂದ ಬೈಕ್ ಸವಾರನೊಬ್ಬ ಬಸ್ಗೆ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರರಿಬ್ಬರು ಬಸ್ಸಿನ ಹಿಂಭಾಗದ ಚಕ್ರದಡಿ ಸಿಲುಕಿದಾಗ ಚಾಲಕನ ಜಾಗರೂಕತೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ ಬೈಕ್ ಸವಾರರಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಶಹಾಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರರಿಗೆ ರಸ್ತೆಯ ನಿಯಮಗಳು ಸರಿಯಾಗಿ ತಿಳಿದೇ ಇರುವುದು ಜೊತೆಗೆ ವೇಗದಿಂದ ಚಲಿಸುವುದೇ ಇದಕ್ಕೆ ಮೂಲ ಕಾರಣ ಎಂದು […]