ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ

ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ

ಕಲಬುರಗಿ: ಸಾಹಿತ್ಯ ಬರವಣಿಗೆಗೆ ಬಾಲ್ಯದ ನೆನಪುಗಳು ಅಗಾಧ ಪ್ರೇರಕಶಕ್ತಿಯಾಗಿವೆ. ಇಂಗ್ಲೀಷ ಸಾಹಿತ್ಯ, ಕನ್ನಡ ಸಾಹಿತ್ಯಕ್ಕೆ ಪ್ರೇರಕ, ಪೂರಕವಾಗಿದೆ ಎಂದು ನಿವೃತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್.ನಾಯಕ ಅಭಿಪ್ರಾಯ ಪಟ್ಟರು. ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ‘ಸಣ್ಣ ಕಥೆ ಕಟ್ಟುವ ಕೌಶಲ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಬರವಣಿಗೆಗೆ ವಿಶಾಲ ಓದಿನ ಅನುಭವವಿರಬೇಕು ಎಂದು ತಿಳಿಸಿದ್ದರು. ಡಾ. ಶಿವರಾಜ ಶಾಸ್ತ್ರಿ ಪರಿಚಯಿಸಿದರು. ಪ್ರೊ. ನಾನಾ ಸಾಹೇಬ್ ನಿರೂಪಿಸಿದರು. ಡಾ ಸುಮಂಗಲಾ ರೆಡ್ಡಿ ಸ್ವಾಗತಿಸಿದರು. […]

ಪಂಚ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಕೊಪ್ಪಳದಲ್ಲಿ ಸಂಭ್ರಮಾಚರಣೆ

ಪಂಚ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಕೊಪ್ಪಳದಲ್ಲಿ ಸಂಭ್ರಮಾಚರಣೆ

ಲೋಕಸಭಾ ಚುನಾವಣೆಗೆ ಈ ಫಲಿತಾಂಶ ಹೆಚ್ಚು ಬಲವನ್ನು ತಂದಿದೆ- ರಾಜಶೇಖರ್ ಹಿಟ್ನಾಳ ಕೊಪ್ಪಳ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ವಿಜಯದ ಹಿನ್ನಲೇಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪಳ ನಗರದ ಅಶೋಕ ವೃತ್ತದ ಬಳಿ ಸಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಸಿದರು. ಐದು ರಾಜ್ಯಗಳ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ತಿರಸ್ಕಿರಿದ್ದಾರೆ, ಇದು ಮುಂಬರುವ ೨೦೧೯ ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ಹೆಚ್ಚು ಬಲವನ್ನು ತಂದುಕೊಟ್ಟಿದೆ ಎಂದು ಜಿ. ಪಂ. ಮಾಜಿ ಅಧ್ಯಕ್ಷ ಕೆ. […]

ಮಹಡಿ ಮೇಲಿಂದ ಬಿದ್ದು ಕಾರ್ಮಿಕರ ಸಾವು

ಮಹಡಿ ಮೇಲಿಂದ ಬಿದ್ದು ಕಾರ್ಮಿಕರ ಸಾವು

ಕಲಬುರಗಿ: ನಗರದ ಜಯದೇವ ಆಸ್ಪತ್ರೆ  ಕಟ್ಟಡ ಕಾಮಗಾರಿ ನಡೆದಿರುವ ವೇಳೆ ಕಟ್ಟಡ 4ನೇ ಅಂತಸ್ತಿನಿಂದ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಪ್ರಶಾಂತ (21), ಬಟ್ಟಿ (22) ಮೃತಪಟ್ಟಿದ್ದಾರೆ.   ಬ್ರಹ್ಮಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. udayanadu2016

ಕಲಬುರ್ಗಿ: ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಸಿ.ವಿ.ರಾಮನ್‌ ನ್ಯಾಯಾಂಗ ವಶಕ್ಕೆ

ಕಲಬುರ್ಗಿ: ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಸಿ.ವಿ.ರಾಮನ್‌ ನ್ಯಾಯಾಂಗ ವಶಕ್ಕೆ

ಕಲಬುರಗಿ: ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಕಲಬುರ್ಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಸಿ.ವಿ.ರಾಮನ್‌(ಚಿಕ್ಕ ವೆಂಕಟರಮಣಪ್ಪ)ಗೆ ಡಿಸೆಂಬರ್ 24ರವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಕಲಬುರ್ಗಿ ಗ್ರಾಮೀಣ ಸಿಡಿಪಿಓ ಆಗಿದ್ದ ಸಿ.ವಿ.ರಾಮನ್ ವಿರುದ್ಧ ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಹಾಗೂ ಘಟನಯ ನಂತರ ಮಂಜೂರಾತಿ ನಿರೀಕ್ಷಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಸಿ.ವಿ.ರಾಮನ್ ವಿರುದ್ಧ ಕಲಬುರ್ಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ […]

ಜೋಳಕ್ಕೆ ಬೆಂಬಲ ಬೆಲೆ ಕೊಡಲು ಶಿಫಾರಸ್ಸು ಮಾಡಲಾಗಿದೆ :ಕಮ್ಮರಡಿ

ಜೋಳಕ್ಕೆ ಬೆಂಬಲ ಬೆಲೆ ಕೊಡಲು ಶಿಫಾರಸ್ಸು ಮಾಡಲಾಗಿದೆ :ಕಮ್ಮರಡಿ

ಸುರಪುರ: ಉತ್ತರ ಕರ್ನಾಟಕ ಭಾಗದ ರೈತರು ಹೆಚ್ಚು ಜೋಳವನ್ನು ಬೆಳೆಯುತ್ತಿದ್ದರು ಮಾರುಕಟ್ಟೆಯಲ್ಲಿ ಜೋಳಕ್ಕೆ ಸರಿಯಾದ ಬೆಲೆ ಸಿಗದೆ ಪರದಾಡಿದ ರೈತರು ಈಗ ಜೋಳ ಬೇಳೆಯುವುದನ್ನು ಕಡಿಮೆ ಮಾಡಿ ವಾಣಿಜ್ಯಬೆಳೆ ಹಾಗೂ ತೊಗರಿ, ಹತ್ತಿ ಬೇಳೆ ಬೇಳೆಯಲು ಮುಂದಾಗಿದ್ದಾರೆ ಆದ್ದರಿಂದ ನಮ್ಮ ಆಯೋಗವು ರಾಜ್ಯ ಸರಕಾರಕ್ಕೆ ಜೋಳಕ್ಕೂ ಬೆಂಬಲ ಬೇಲೆ ನೀಡಬೇಕೆಂದು ಶಿಫಾರಸ್ಸು ಮಾಡಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ ಕಮ್ಮರಡಿ ತೀಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ […]

ಹಾಸ್ಯಲೋಕದಿಂದ ನಗಿಸುವ ಕಾರ್ಯ ನಿರಂತರವಾಗಿರಲಿ : ಶಾಸಕ ಪರಣ್ಣ

ಹಾಸ್ಯಲೋಕದಿಂದ ನಗಿಸುವ ಕಾರ್ಯ ನಿರಂತರವಾಗಿರಲಿ : ಶಾಸಕ ಪರಣ್ಣ

12ನೇ ವರ್ಷದ ನಗೆ ಸಂಭ್ರಮ ಕಾರ್ಯಕ್ರಮ ಕೊಪ್ಪಳ:  ಹಾಸ್ಯಲೋಕ ಸಂಘಟನೆಯಿಂದ ನಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನತೆಯನ್ನು ಹಾಸ್ಯದಿಂದ ರಂಜಿಸುತ್ತಿರುವುದು ಖುಷಿ ತಂದಿದೆ. ಈ ಕಾರ್ಯ ನಿರಂತರವಾಗಿರಲಿ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಗಂಗಾವತಿ ನಗರದ ಬಾಲಕಿಯರ ಸ.ಹಿ.ಪ್ರಾ. ಶಾಲೆಯಲ್ಲಿ ಹಾಸ್ಯಲೋಕ ಸಂಘಟನೆ ಹಮ್ಮಿಕೊಂಡಿದ್ದ ೧೨ನೇ ವರ್ಷದ ನಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂತರು, ಶರಣರು ನಡೆದಾಡಿದ ಈ ಪುಣ್ಯ ಭೂಮಿಯನ್ನು ಶರಣಬಸಪ್ಪನವರಂತೆ ಎಸ್.ಎಂ.ಪಟೇಲ್,  ಪರಶುರಾಮಪ್ರಿಯ ಅವರು ಹಾಸ್ಯಲೋಕ ಸಂಘಟನೆಯ ಮೂಲಕ ನಗರದ […]

ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕಡ್ಡಾಯಗೊಳಿಸಿ: ಸಚಿವ ವೆಂಕಟರಾವ್‌ಗೆ ಮನವಿ

ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕಡ್ಡಾಯಗೊಳಿಸಿ: ಸಚಿವ ವೆಂಕಟರಾವ್‌ಗೆ ಮನವಿ

ಕೊಪ್ಪಳ:  ರಾಜ್ಯದ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳ  ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಪಶು ಸಂಗೋಪನಾ ಮತ್ತು ಮೀನುಗಾರಿಕೆ ಸಚಿವರಾದ ವೆಂಕಟರಾವ್ ನಾಡಗೌಡರ್‌ವರಿಗೆ  ನಗರದ ಎಸ್‌ಎಫ್‌ಎಸ್ ಶಾಲೆಯ ಹತ್ತಿರ ಕೊಪ್ಪಳ ಜಿಲ್ಲಾ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ರಾಜ್ಯ ಕರಾಟೆ ಶಿಕ್ಷಕರ ಸಂಘದ ಕ್ರೀಡಾ ಕಾರ್ಯದರ್ಶಿ ಮೌನೇಶ ಎಸ್ ವಡ್ಡಟ್ಟಿ ನೇತೃತ್ವದಲ್ಲಿ ಭಾನುವಾರ ಗದಗ ಗೆ ತೆರಳುತ್ತಿದ್ದ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇತ್ತೀಚಿನ ದಿನಗಳಲ್ಲಿ […]

ಕೃತಿ ಕೇಂದ್ರಿತ ವಿಮರ್ಶೆ ಅಗತ್ಯ: ಡಾ. ವಿಸಾಜಿ

ಕೃತಿ ಕೇಂದ್ರಿತ ವಿಮರ್ಶೆ ಅಗತ್ಯ: ಡಾ. ವಿಸಾಜಿ

ಕಲಬುರಗಿ: ವಿಮರ್ಶೆ ಕುರಿತ ಅಲಿಖಿತ ನಿಯಮ ಬೆಳೆದಿರುವುದರಿಂದ ಮುಕ್ತ ವಿಮರ್ಶೆಗೆ ತೊಡಕಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದ ಬಾಪೂಗೌಡ ರಂಗಮಂದಿರ ದಲ್ಲಿ ಇಂದು ನಡೆದ ಭಾಷಾಂತರ- ವಿಮರ್ಶಾ ಗೋಷ್ಠಿಯಲ್ಲಿ ವಿಮರ್ಶೆ ಕುರಿತು ಮಾತನಾಡಿದ ಅವರು, ಕೃತಿ ಕೇಂದ್ರಿತ ವಿಮರ್ಶೆ ಅಗತ್ಯವಾಗಿದ್ದು, ಲಂಕೇಶರು ಹೇಳುವಂತೆ ವಿಮರ್ಶಕರಾದವರು ಕೃತಿಯೊಳಗೆ ಭಕ್ತಿ, ಶ್ರದ್ಧೆಯಿಂದ ಪ್ರವೇಶ ಮಾಡಿ ವೈಚಾರಿಕವಾಗಿ ಹೊರ ಬರಬೇಕು ಎಂದು ತಿಳಿಸಿದರು. ಭಾಷೆ, ವಸ್ತು, ಲೋಕದೃಷ್ಟಿಯ ಮಿತಿಗಳಿಂದ […]

ನಿಂತಿರುವ ಲಾರಿಗೆ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರ ಸಾವು

ನಿಂತಿರುವ ಲಾರಿಗೆ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರ ಸಾವು

ಶಹಾಪುರ: ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು  ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ  ಶಹಾಪುರ ತಾಲೂಕಿನ ರಸ್ತಾಪುರ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಹಳಿಸಗರದ ಮಲ್ಲಿಕಾರ್ಜುನ ಶಹಾಪುರ (28 ) ಮೃತ ಬೈಕ್ ಸವಾರ.  ನಿನ್ನೆ ರಾತ್ರಿ ಕೆಲಸದ ಮುಗಿಸಿಕೊ೦ಡು ಸುರಪುರದಿ೦ದ ಮರಳಿ ಶಹಾಪುರಕೆ ಬರುವಾಗ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. […]

ಚಾಲಕನ ನಿಯಂತ್ರಣ ತಪ್ಪಿ ಭತ್ತದ ಲಾರಿ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಭತ್ತದ ಲಾರಿ ಪಲ್ಟಿ

ಶಹಾಪುರ: ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಭತ್ತ ತುಂಬಿಕೊಂಡು ಹೊರಟಿರುವ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಹತ್ತಿಗೂಡುರ ಗ್ರಾಮದ ಹತ್ತಿರ ಜರುಗಿದ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹತ್ತಿರದ ಶಹಾಪುರ ತಾಲ್ಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭತ್ತದ ಮೂಟೆಗಳು ಚಲ್ಲಾಪಿಲ್ಲೆಯಾಗಿವೆ. ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ.ಅತಿಯಾದ ವೇಗದಿಂದ ಹಾಗೂ ಚಾಲಕರ ನಿರ್ಲಕ್ಷ್ಯತನದಿಂದ ಇಂತಹ ದುರ್ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರ ವಲಯದಲ್ಲಿ ಮಾತುಗಳು […]