ಹಟ್ಟಿಚಿನ್ನದಗಣಿ: ದುಷ್ಕರ್ಮಿಗಳಿಂದ ಶಾಲಾ ಗಾಜಿನ ಕಿಟಕಿಗಳು ಧ್ವಂಸ

ಹಟ್ಟಿಚಿನ್ನದಗಣಿ: ದುಷ್ಕರ್ಮಿಗಳಿಂದ ಶಾಲಾ ಗಾಜಿನ ಕಿಟಕಿಗಳು ಧ್ವಂಸ

ಹಟ್ಟಿ ಚಿನ್ನದಗಣಿ: ಇಲ್ಲಿನ ಶ್ರೀ ವಿನಾಯಕ ವಿಧ್ಯಾ ಸಂಸ್ಥೆಯ ನೂತನ ಕಟ್ಟಡಗಳ ಗಾಜಿನ ಕಿಟಕಿಗಳನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೋಳಿಸಿದ್ದಾರೆ. ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳಿಂದ ಶ್ರೀ ವಿನಾಯಕ ವಿಧ್ಯಾಸಂಸ್ಥೆಯ ಹೊಸ ಕಟ್ಟಡಗಳು ನಿರ್ಮಾಣವಾಗಿದ್ದು ಅದರ ಕಿಟಕಿಗಳನ್ನು ಗಾಜಿನಿಂದ ನಿರ್ಮಿಸಲಾಗಿದ್ದು ದುಷ್ಕರ್ಮಿಗಳಿಂದ ಸಂಪೂರ್ಣ ಹೊಡೆದು ಹಾಳಾಗಿರುತ್ತವೆ. ಇದರಿಂದ ಸಂಸ್ಥೆಗೆ ಸುಮಾರು 1 ಲಕ್ಷ ದಷ್ಟು ಹಾನಿಯಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರುಗಳಾದ ನರಸಪ್ಪ ಯಾದವ್ ತಿಳಿಸಿದ್ದಾರೆ. ಹಟ್ಟಿ ಪೋಲಿಸ್ ಠಾಣೆಯ ಪಿ.ಎಸ್.ಐ. ಕುಮಾರಿ ಶೈಲಾ ಪ್ಯಾಟಿ ಶಟಲ್ ಸ್ಥಳಕ್ಕೆ ಬೇಟಿನೀಡಿ […]

ನನ್ನ ಓಟು ಉದ್ಯೋಗಕ್ಕೆ : ಯುವಜನರಿಂದ ಆಂದೋಲನಕ್ಕೆ ಚಾಲನೆ

ನನ್ನ ಓಟು ಉದ್ಯೋಗಕ್ಕೆ : ಯುವಜನರಿಂದ ಆಂದೋಲನಕ್ಕೆ ಚಾಲನೆ

ರಾಯಚೂರು:ಉದ್ಯೋಗಕ್ಕೆ ಓಟು ಆಂದೋಲನದಿಂದ ನಗರದಲ್ಲಿ ಇಂದು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ್ದ ಕಾರ್ಯಕರ್ತರು ಈ ಭಾರೀ ನನ್ನ ಓಟು ಉದ್ಯೋಗಕ್ಕೆ ಎಂದು ವಿಶಿಷ್ಟ ಪ್ರಚಾರದ ಮೂಲಕ ಗಮನ ಸೆಳೆದರು. ನಂತರ ಮನೆ ಮನೆಗೆ ತೆರಳಿ ಆಂದೋಲನದ ಪಾರಂನಲ್ಲಿ ಸಹಿ ಮತ್ತು ಉದ್ಯೋಗಕ್ಕೆ ಓಟು ಆಫ್‍ನಲ್ಲಿ ಮತ ಹಾಕಿಸಲಾಯಿತು. ಸಹಿ ಹಾಕುವುದರ ಜೊತೆಗೆ ಮತದಾರರು 2 ರೂ. ಹಣವನ್ನು ನೀಡಬೇಕಿತ್ತು. ಈ ವಿಚಾರದ ಬಗ್ಗೆ ಒಪ್ಪಿಗೆ ಇರುವವರು ಸಹಿ ಮತ್ತು ಓಟು ಹಾಕಬೇಕೆಂದು […]

ಡಿಸಿ ಕಚೇರಿಯಲ್ಲಿ ಕುಂದುಕೊರತೆ ಸಭೆ: ದೂರುಗಳ ಇತ್ಯರ್ಥಕ್ಕೆ ಸೂಚನೆ

ಡಿಸಿ ಕಚೇರಿಯಲ್ಲಿ ಕುಂದುಕೊರತೆ ಸಭೆ: ದೂರುಗಳ ಇತ್ಯರ್ಥಕ್ಕೆ ಸೂಚನೆ

ರಾಯಚೂರು: ಪ್ರತಿ ಮಂಗಳವಾರದಂದು ಜಿಲ್ಲಾಡಳಿತ ನಡೆಸುವ ಕುಂದುಕೊರತೆ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಮ ಶಂಕರ ಪರಿಶೀಲಿಸಿ ಸಂಬಂಧಿಸಿ ಇಲಾಖೆಗಳಿಗೆ ಸೂಚನೆ ನೀಡಿದರು. ಕುಂದುಕೊರತೆ ಸಭೆಯಲ್ಲಿ ದಾಖಲಾಗುವ ದೂರುಗಳನ್ನು ಆಧ್ಯತೆಯ ಮೇಲೆ ಸಂಬಂದಿಸಿ ಇಲಾಖೆಗಳು ಇತ್ಯರ್ಥಪಡಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ್ದ ದೂರುದಾರರು, ಇಲಾಖೆ ಅಧಿಕಾರಿಗಳಿದ್ದರು.

ಬುದ್ದ ಮಲಗಿರುವ ದೃಶ್ಯ ವೀಕ್ಷಿಸಿದ ಡಾ: ಪರಮೇಶ್ವರ್

ಬುದ್ದ ಮಲಗಿರುವ ದೃಶ್ಯ ವೀಕ್ಷಿಸಿದ ಡಾ: ಪರಮೇಶ್ವರ್

ಶಹಾಪುರ:ಬೀದರ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಶಹಾಪುರದ ಪರ್ವತದಲ್ಲಿ ಬುದ್ದ ಮಲಗಿರುವ ದೃಶ್ಯ ನೋಡಿ ಖುಷಿಪಟ್ಟರು. ಕಲಬುರಗಿಯಿಂದ ದೇವದುರ್ಗದ ಕಾಂಗ್ರೆಸ್ ಸಮಾವೇಶಕ್ಕೆ ಹೊರಟಿರುವ ಶಹಾಪುರದ ಮಾರ್ಗ ಮದ್ಯದಲ್ಲಿ ಬುದ್ದ ಮಲಗಿರುವ ದೃಶ್ಯ ನೊಡಲಿಕ್ಕೆಂದೆ ಕಾರಿನಿಂದ ಕೆಳಗಿಳಿದು ವಿಕ್ಷಣೆ ಮಾಡಿದರು. ಹೈದರಾಬಾದ್ ಕರ್ನಾಟಕದಲ್ಲಿ ಬುದ್ದಮಲಗಿರುವ ದೃಶ್ಯದಿಂದ ಶಹಾಪುರ ಪ್ರಸಿದ್ದಿ ಪಡೆದು ಅದೊಂದು ಪ್ರೇಕ್ಷಣೀಯ ಸ್ಥಳವಾಗಿದೆ. ಇದಕ್ಕೆ ಜಿಲ್ಲಾ ಆಡಳಿತ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ತುಂಬಾ ಮುತುವರ್ಜಿವಹಿಸಿ ಅಭಿವೃದ್ಧಿಗಾಗಿ ನೂರಾರು ಕೋಟಿ ಬಜೆಟ್ ಬಿಡುಗಡೆ ಮಾಡಿದೆ. ಡಾ: ಸಿದ್ಧಯ್ಯ […]

ಸದಾಶಿವ ವರದಿ ಜಾರಿಗಾಗಿ ಜೈಲ್ ಭರೋ ಚಳುವಳಿ: ಮಾದಿಗ ಛಲವಾದಿ ಮುಖಂಡರ ಬಂಧನ-ಬಿಡುಗಡೆ

ಸದಾಶಿವ ವರದಿ ಜಾರಿಗಾಗಿ ಜೈಲ್ ಭರೋ ಚಳುವಳಿ: ಮಾದಿಗ ಛಲವಾದಿ ಮುಖಂಡರ ಬಂಧನ-ಬಿಡುಗಡೆ

ರಾಯಚೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಹಾಗೂ ಛಲವಾದಿ ಸಮುದಾಯ ಸಂಘಟನೆಗಳ ನೇತೃತ್ವದಲ್ಲಿ ಜೈಲ್ ಭರೋ ಚಳುವಳಿಗೆ ಮುಂದಾದ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಗರದ ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಚಳುವಳಿಗೆ ಮುಂದಾದಾಗ ಹೋರಾಟಗಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ನ್ಯಾಯಮೂರ್ತಿ ಏ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ವಿರುದ್ದ ಆಕ್ರೋಶ […]

ಗುಂಡಾ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳನ್ನು ತುರ್ವಿಹಾಳ ಹೋಬಳಿಯಲ್ಲಿ ಮುಂದುವರೆಸಲು ಆಗ್ರಹ

ಗುಂಡಾ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳನ್ನು ತುರ್ವಿಹಾಳ ಹೋಬಳಿಯಲ್ಲಿ ಮುಂದುವರೆಸಲು ಆಗ್ರಹ

ರಾಯಚೂರು: ಸಿಂಧನೂರು ತಾಲೂಕಿನ ಗುಂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ಹಳ್ಳಿಗಳನ್ನು ತುರ್ವಿಹಾಳ ಹೋಬಳಿ ವ್ಯಾಪ್ತಿಗೆ ಮುಂದುವರೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗುಂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳನ್ನು ಹೊಸದಾಗಿ ರಚನೆಯಾಗಿರುವ ಮಸ್ಕಿ ತಾಲೂಕಿಗೆ ಸೇರ್ಪಡೆ ಮಾಡಿದ್ದು, ಗುಡುದೂರು ಹೋಬಳಿ ವ್ಯಾಪ್ತಿಗೆ ಒಳಪಡಿಸಿರುವುದು ಅವೈಜ್ಞಾನಿಕ ನಿಲುವು ಆಗಿದೆ. ಗುಂಡಾ ಗ್ರಾ.ಪಂ ವ್ಯಾಪ್ತಿಯ ಗುಡಿಹಾಳ, ಹೊಗರನಾಳ, ಹೊಕ್ರಾಣಿ ಸೇರಿ ವಿವಿಧ ಗ್ರಾಮಗಳು  ತುರ್ವಿಹಾಳ ಹೋಬಳಿಯಲ್ಲಿ ಬರುತ್ತಿದ್ದು, ಆದರೇ ಈ ಎಲ್ಲಾ ಹಳ್ಳಿಗಳನ್ನು […]

ರಾಯಚೂರು ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಮಕರಣಕ್ಕೆ ಮನವಿ

ರಾಯಚೂರು ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಮಕರಣಕ್ಕೆ ಮನವಿ

ರಾಯಚೂರು:ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡುವಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಕಾರ್ಯಕರ್ತರು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಜಿಲ್ಲೆಯ ಹೈದ್ರಬಾದ್ ಕರ್ನಾಟಕ ಭಾಗದ ಗಡಿ ಜಿಲ್ಲೆಯಾಗಿದ್ದು, ನಾಡು ನುಡಿಗೆ ಹೆಚ್ಚು ಗಮನ ನೀಡುವುದು ಅತ್ಯಗತ್ಯವಾಗಿದೆ. ದೇಶಪ್ರೇಮಿ, ಸ್ವಾತಂತ್ರ ಸೇನಾನಿ ರಾಯಣ್ಣರ ಹೆಸರನ್ನು ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವರು ಪರಿಶೀಲಿಸುವುದಾಗಿ […]

ಪಾವಗಡಕ್ಕೆ ತುಂಗಭದ್ರ ಜಲಾಶಯದ ನೀರು ಹರಿಸಲು ವಿರೋಧ: ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಪಾವಗಡಕ್ಕೆ ತುಂಗಭದ್ರ ಜಲಾಶಯದ ನೀರು ಹರಿಸಲು ವಿರೋಧ: ಹೋರಾಟಕ್ಕೆ  ಸಂಘಟನೆಗಳ ನಿರ್ಧಾರ

  ರಾಯಚೂರು: ತುಂಗಭದ್ರ ಜಲಾಶಯದಿಂದ ತುಮಕೂರು ಜಿಲ್ಲೆಯ ಪಾವಗಡಕ್ಕೆ 2.5 ಟಿಎಂಸಿ ನೀರು ಹರಿಸುವದನ್ನು ವಿರೋಧಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವದು, ಸ್ಪಂದನೆ ದೊರೆಯದೇ ಇದ್ದಲ್ಲಿ ಚುನಾವಣೆಯಲ್ಲಿ ನಿರಂತರ ಹೋರಾಟ ನಡೆಸಲು ಜೆಸಿಭವನದಲ್ಲಿ ಮಂಗಳವಾರ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಯಿತು. ವಾಣಿಜ್ಯೋಧ್ಯಮ ಸಂಘದ ಹರವಿನಾಗನಗೌಡ ಮಾತನಾಡಿ ತುಂಗಭದ್ರ ಜಲಾಶಯದಲ್ಲಿ 35 ಟಿಎಂಸಿಯಷ್ಟು ಹೂಳು ತುಂಬಿದಿದೆ. ಎಡದಂಡೆ ಅಚ್ಚುಕಟ್ಟು ವ್ಯಾಪ್ತಿ ರೈತರಿಗೆ ನೀರುಬಾರದಂತಾಗಿದೆ. ನೀರಿನ ಲಭ್ಯತೆಯ ಕೊರತೆಯ ಮಧ್ಯೆಯೂ ಪಾವಗಡಕ್ಕೆ ನೀರುಹರಿಸುವದು ಸರಿಯಾದುದ್ದಲ್ಲ. ಈ ಹಿಂದೆ ಸಿಂಗಟಾಲೂರು ಏತನೀರಾವರಿಗೂ […]

ಸದಾಶಿವ ಆಯೋಗದ ವರದಿ ಜಾರಿಗಾಗಿ ಮಾದಿಗ, ಛಲವಾದಿ ಸಮಾಜದಿಂದ ಜ 11 ರಂದು ಜೈಲ್ ಭರೋ : ಎಂ.ವಿರೂಪಾಕ್ಷಿ

ಸದಾಶಿವ ಆಯೋಗದ ವರದಿ ಜಾರಿಗಾಗಿ ಮಾದಿಗ, ಛಲವಾದಿ ಸಮಾಜದಿಂದ ಜ 11 ರಂದು ಜೈಲ್ ಭರೋ : ಎಂ.ವಿರೂಪಾಕ್ಷಿ

ರಾಯಚೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಹಾಗೂ ಛಲವಾದಿ ಸಮುದಾಯ ಸಂಘಟನೆಗಳು ಒಗ್ಗೂಡಿ ಜ.11 ರಂದು ನಗರದಲ್ಲಿ ಜೈಲ ಭರೋ ಕಾರ್ಯಕ್ರಮ ನಡೆಸಲು ನಿರ್ಧರಿಸಿರುವದಾಗಿ ಸಮಾಜ ಮುಖಂಡ ಎಂ.ವಿರೂಪಾಕ್ಷಿ ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಸದಾಶಿವ ಆಯೋಗ ಜಾರಿಗೆ ಈಗಾಗಲೇ ರಾಜ್ಯ ಸರ್ಕಾರ ಸಭೆ ನಡೆಸಲು ಭರವಸೆ ನೀಡಿತ್ತು. ಸಭೆಯನ್ನು ಮೂಂದೂಡಲಾಗಿದೆ. ವಿಳಂಬವಾಗುತ್ತಿರುವದನ್ನು ವಿರೋಧಿಸಿ ಕೂಡಲೇ ಜಾರಿಗೆ ಮುಂದಾಗಲು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಎರಡು ಸಮುದಾಯ ಜನರು ಭಾಗವಹಿಸಿ ಜೈಲ […]

ಮಾಟಮಾರಿಯಲ್ಲಿ ಜ. 9 ರಂದು ಕನಾಕದಾಸರ ಪುತ್ಥಳಿ ಅನಾವರಣ

ಮಾಟಮಾರಿಯಲ್ಲಿ ಜ. 9 ರಂದು ಕನಾಕದಾಸರ ಪುತ್ಥಳಿ ಅನಾವರಣ

ರಾಯಚೂರು: ಜ. 9 ರಂದು ತಾಲೂಕಿನ ಮಟಮಾರಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಹಾಗೂ ಹಾಲುಮತ ಸಮಾಜದಿಂದ ಕನದಾಸರ ಪುತ್ಥಳಿ ಅನಾವರಣ ಮತ್ತು ಕನಕದಾಸರ 530ನೇ ಜಯಂತ್ಯೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜನೆ ಸಮಿತಿ ಅಧ್ಯಕ್ಷ ಕೆ.ನಾಗೇಂದ್ರಪ್ಪ ಮಟಮಾರಿ ತಿಳಿಸಿದರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಕನದಾಸರ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅವರು ಸಂಗೊಳ್ಳಿ ರಾಯಣ್ಣ ನಾಮಪಲಕ ಅನಾವರಣ ವಿಧಾನ ಪರಿಷತ್ ಸದಸ್ಯ […]

1 2 3 26