ಮಕ್ಕಳ ಕಳ್ಳತನ ವದಂತಿ ವ್ಯಕ್ತಿ ಮೇಲೆ ಹಲ್ಲೆ:ದೂರು ದಾಖಲು

ಮಕ್ಕಳ ಕಳ್ಳತನ ವದಂತಿ ವ್ಯಕ್ತಿ ಮೇಲೆ ಹಲ್ಲೆ:ದೂರು ದಾಖಲು

ಸುರಪುರ: ತಾಲ್ಲೂಕಿನಾದ್ಯಂತ ಎದ್ದಿರುವ ಮಕ್ಕಳ ಕಳ್ಳತನ ಸುದ್ದಿಯಿಂದಾಗಿ ನಗರದ ವಣಕಿಹಾಳದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಜರುಗಿದೆ. ನಗರದ ಹಸನಾಪುರ ಗ್ರಾಮದಲ್ಲಿ ವಾಸವಿರುವ ಆಂಧ್ರ ಮೂಲದ ವ್ಯಕ್ತಿ ಸತೀಶ ತಂದೆ ಫಕೀರ ದಂಡೇಲಾ (40ವರ್ಷ) ಶುಕ್ರವಾರ ರಾತ್ರಿ ತನ್ನ ಮನೆಯಲ್ಲಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಹೊರಗಡೆ ಹೋದಾಗ,ನಶೆ ಹೆಚ್ಚಾಗಿದ್ದರಿಂದ ಹಸನಾಪುರ ಪೆಟ್ರೋಲ್ ಪಂಪ್ ಬಳಿಯ ವಣಕಿಹಾಳದ ಸಮೀಪದ ಅಂಬೇಡ್ಕರ ಶಾಲೆಯ ಬಳಿ ಮಲಗಿದ್ದು,ಸ್ಥಳಿಯ ಕೆಲ ಜನರು ಬಂದು ನನ್ನನ್ನು ಮಕ್ಕಳ ಕಳ್ಳ […]

ಜನ ಕೊಟ್ಟ ತೀರ್ಪಿಗೆ ತಲೆಬಾಗುವೆ-ಮಾಜಿ ಶಾಸಕ ಆರ್.ವಿ.ನಾಯಕ

ಜನ ಕೊಟ್ಟ ತೀರ್ಪಿಗೆ ತಲೆಬಾಗುವೆ-ಮಾಜಿ ಶಾಸಕ ಆರ್.ವಿ.ನಾಯಕ

ಸುರಪುರ: ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನೀಡಿದ ತೀರ್ಮಾನಕ್ಕೆ ತಲೆ ಬಾಗುವದಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ. ಕ್ಷೇತ್ರದಾದ್ಯಂತ ನನ್ನ ಹಾಗು ಪಕ್ಷದ ಪರವಾಗಿ ಅವಿರತ ದುಡಿದ ಕಾರ್ಯಕರ್ತರು ಹಾಗು ಅಭಿಮಾನಿಗಳು ನಿರಾಶೆಯಾಗಬೇಕಿಲ್ಲ,ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯವಾದ್ದರಿಂದ ಯಾರೂ ಚಿಂತಿತರಾಗಬೇಕಿಲ್ಲ.ತಿಂಗಳುಗಟ್ಟಲೆ ಪಕ್ಷ ಹಾಗು ನನ್ನ ಗೆಲುವಿಗಾಗಿ ತಾವೆಲ್ಲ ಶ್ರಮಿಸಿದ್ದಿರಿ,ಆದ್ದರಿಂದ ತಮ್ಮೆಲ್ಲರಿಗು ನಾನು ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದ್ದಾರೆ. ಸೋಲಿನ ಬಗ್ಗೆ ಚಿಂತಿಸದೆ ಪರಾಮರ್ಶೆಯೊಂದಿಗೆ ಆತ್ಮಾವಲೋಕನ ಮಾಡಿಕೊಂಡು ಪಕ್ಷವನ್ನು ಬಲಗೊಳಿಸೋಣ,ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ […]

ಯಡಿಯೂರಪ್ಪ ಸಿಎಂ: ಶಹಾಪುರದಲ್ಲಿ ಸಂಭ್ರಮಾಚರಣೆ

ಯಡಿಯೂರಪ್ಪ ಸಿಎಂ: ಶಹಾಪುರದಲ್ಲಿ ಸಂಭ್ರಮಾಚರಣೆ

ಶಹಾಪುರ: ಕರ್ನಾಟಕ ರಾಜ್ಯದ ೨೪ ನೇ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕಾರ ಮಾಡಿದರು . ಅತ್ತ ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಗೆ ಪ್ರಮಾಣವಚನ ಸ್ವೀಕಾರ ಮಾಡುವಾಗಲೇ ಇತ್ತ ಶಹಾಪುರದ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ಬಿಜೆಪಿಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗುರು ಕಾಮ ಬಸ್ಸು ಎಸ್ .ಬಸವರಾಜ್ ಸತ್ಯಂಪೇಟ್ ಗುರುರಾಜ್ ಹಾಗೂ ಇತರರು ಹಾಜರಿದ್ದರು . Munna Bagwanhttp://udayanadu.com

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ

1) ಯಾದಗಿರಿ ವಿಧಾನಸಭೆ ಕ್ಷೇತ್ರ: ಬಿಜೆಪಿ ಗೆಲುವು ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಪಡೆದ ಮತಗಳು :62,227 ಗೆಲುವಿನ ಅಂತರ: 12,881 ಪ್ರತಿಸ್ಪರ್ಧಿ ಕಾಂಗ್ರೆಸ್ ನ ಡಾ.ಎ.ಬಿ.ಮಾಲಕರೆಡ್ಡಿ ಪಡೆದ ಮತಗಳು : 49,346 ಸೋಲು ಮೂರನೇ ಸ್ಥಾನ ಜೆಡಿಎಸ್ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳು: 25,774 2) ಗುರುಮಠಕಲ್ ವಿಧಾನಸಭೆ ಕ್ಷೇತ್ರ : ಜೆಡಿಎಸ್ ಗೆಲುವು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಪಡೆದ ಮತಗಳು : 79,627 ಗೆಲುವಿನ ಅಂತರ:24,480 ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ […]

ಶಹಾಪುರ:ಶುರುವಾಗಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಶಹಾಪುರ:ಶುರುವಾಗಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಶಹಾಪುರ: 2018 ನೇ ಸಾಲಿನ ಶಹಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಢವಢವ ಶುರುವಾಗಿದೆ. ಶಹಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಶರಣಬಸ್ಸಪ್ಪಗೌಡ ದರ್ಶನಾಪುರ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗುರು ಪಾಟೀಲ್ ಶಿರವಾಳ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಅಮೀನರೆಡ್ಡಿ ಪಾಟೀಲ್ ಯಾಳಗಿ ಇವರು ಸ್ಪರ್ಧಿಸಿದ್ದು ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಯಲ್ಲಿದ್ದರೆ ಜೆಡಿಎಸ್ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಒಂಚೂರು ಮುಂಚೂಣಿಯಲ್ಲಿದೆ. ಜಯದ ಮಾಲೆ ಯಾರ ಕೊರಳಿಗೆ […]

ಸ್ಟ್ರಾಂಗ್ ರೂಮಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ : ಶಸ್ತ್ರ ಸಜ್ಜಿತ ಸೇನಾಪಡೆಯಿಂದ ಕಾವಲು

ಸ್ಟ್ರಾಂಗ್ ರೂಮಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ : ಶಸ್ತ್ರ ಸಜ್ಜಿತ ಸೇನಾಪಡೆಯಿಂದ ಕಾವಲು

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ 65. 85 ರಷ್ಟು ಮತದಾನ ದಾಖಲಾಗಿದೆ. 2013 ರಲ್ಲಿ ಶೇ 65.32 ರಷ್ಟು ಮತದಾನ ದಾಖಲಾಗಿತ್ತು. 2018  ನಾಲ್ಕು ಕ್ಷೇತ್ರಗಳಲ್ಲಿ ನಡೆದ ಮತದಾನ ವಿವರಣೆ ಈ ಕೆಳಗಿನಂತಿದೆ. ಸುರಪುರ : ಒಟ್ಟು 275886 ( 138800 ಪುರುಷರು ಹಾಗೂ 136868 ಮಹಿಳೆಯರು)ಮತದಾರರಲ್ಲಿ, 196284 ( ಶೇ. 71.20) ಮತದಾರರು ( 100718 ಪುರುಷರು ಹಾಗೂ 75733 ಮಹಿಳೆಯರು) ಮತದಾನ ಮಾಡಿದ್ದಾರೆ. ಶಹಾಪುರ : ಒಟ್ಟು […]

ಏದಲಭಾವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ

ಏದಲಭಾವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ

ಸುರಪುರ: ಕ್ಷೇತ್ರದ ಎದಲಭಾವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ಜೀಪಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮತದಾನ ಕೇಂದ್ರದೊಳಗಿದ್ದ ಬಿಜೆಪಿ ಪಕ್ಷದ ಪೊಲಿಂಗ್ ಏಜೆಂಟ್ ಮತದಾನಕ್ಕೆ ಒಳ ಹೋದವರಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳುತ್ತಿರುವದನ್ನು ವಿರೋಧಿಸಿದ್ದರಿಂದ ಕಾಂಗ್ರೇಸ್ ಹಾಗು ಬಿಜೆಪಿ ಏಜೆಂಟರುಗಲ ಮದ್ಯೆ ವಾಗ್ವಾದ ನಡೆದಿದೆ.ವಿಷಯ ತಿಳಿದು ಏದಲಬಾವಿ ಮತ ಕೇಂದ್ರಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿದಾಗ,ಅಲ್ಲಿದ್ದ ಬಿಜೆಪಿ ಕಾರ್ಯಕರ್ತರ ಕೂಗಾಟವನ್ನು ಕಂಡ ಪೊಲೀಸರು ಎಲ್ಲರನ್ನು ಓಡಿಸಿದ್ದಾರೆ. ಇದರಿಂದ ಕೊಪಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸ್ […]

ಚುನಾವಣಾ ಆಯೋಗದ ಹೊಸ ಪ್ರಯತ್ನ ಪಿಂಕ್ ಬೂತ್:ಡೇವಿಡ್

ಚುನಾವಣಾ ಆಯೋಗದ ಹೊಸ ಪ್ರಯತ್ನ ಪಿಂಕ್ ಬೂತ್:ಡೇವಿಡ್

ಸುರಪುರ: ಈಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೂತನ ಪ್ರಯೋಗವಾಗಿ ಪ್ರತಿ ಮತಕ್ಷೇತ್ರದಲ್ಲಿ ಮಹಿಳೆಯರ ವಿಶೇಷದ ಪಿಂಕ್ ಬೂತ್‍ಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ತಿಳಿಸಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ನಮ್ಮ ಕ್ಷೇತ್ರದಲ್ಲಿ ಎರಡು ಪಿಂಕ್ ಬೂತ್ ತೆರೆಯಲಾಗಿದ್ದು.ಅವೆರಡು ಸುರಪುರ ನಗರದ ಆನಂದ ವಿದ್ಯಾಲಯದ ಮತ್ತಗಟ್ಟೆ ಸಂಖ್ಯೆ 84 ಮತ್ತು 85ರಲ್ಲಿ ತೆರೆಯಲಾಗಿದೆ ಎಂದರು. ಈ ಎರಡು ಪಿಂಕ್ ಮತಕೇಂದ್ರಗಳನ್ನು ಪಿಂಕ್ ಬಣ್ಣದಿಂದ ಅಲಂಕರಿಸಲಾಗುವದು.ಮತಕೇಂದ್ರದಲ್ಲಿಯ ಎಲ್ಲಾ ಸಿಬ್ಬಂದಿಗಳು ಮಹಿಳೆಯರೆ ಇರಲಿದ್ದಾರೆ.ಅಲ್ಲದೆ ಎಲ್ಲಾ ಸಿಬ್ಬಂದಿಗಳು ಪಿಂಕ್ ಬಣ್ಣದ ಸಮವಸ್ತ್ರ […]

ಸುರಪುರ: ಕ್ಷೇತ್ರದಾದ್ಯಂತ ಚುನಾವಣೆಗೆ ಸಕಲ ಸಿಧ್ದತೆ ಪೂರ್ಣ

ಸುರಪುರ: ಕ್ಷೇತ್ರದಾದ್ಯಂತ ಚುನಾವಣೆಗೆ ಸಕಲ ಸಿಧ್ದತೆ ಪೂರ್ಣ

ಸುರಪುರ: ಮತಕ್ಷೇತ್ರದ ಎಲ್ಲಾ ಮೂರು ನೂರ ಹತ್ತೊಂಬತ್ತು ಮತಟ್ಟೆಗಳಿಗೆ ಮತಯಂತ್ರ ಹಾಗು ವಿವಿ ಪ್ಯಾಟ್ ವಿತರಣೆ ಮಾಡಲಾಗಿದೆ,ಅಲ್ಲದೆ ಎಲ್ಲಾ ಮತಕೇಂದ್ರಗಳಲ್ಲಿ ಮೂತಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.ಒಟ್ಟು ಕ್ಷೇತ್ರದಲ್ಲಿ ಎರಡು ಲಕ್ಷ ಎಪ್ಪತ್ತೈದು ಸಾವಿರದ ಆರು ನೂರ ಅರವತ್ತೆಂಟು ಮತದಾರರಿದ್ದಾರೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ತಿಳಿಸಿದರು. ನಗರದ ಶ್ರೀಪ್ರಭು ಕಾಲೇಜು ಮೈದಾನದಲ್ಲಿ ಕ್ಷೇತ್ರದ ಮತಗಟ್ಟೆಗಳಿಗೆ ಮತಯಂತ್ರ ಹಾಗು ವಿವಿಪ್ಯಾಟ್ ವಿತರಣೆ ಮಾಡಿ ಮಾದ್ಯಮದವರೊಂದಿಗೆ ಮಾತನಾಡಿ,ಕ್ಷೇತ್ರದ ಎಲ್ಲಾ ಮತಗಟ್ಟೆಯ ಪ್ರತಿ ಕೇಂದ್ರದಲ್ಲಿ ಐದು ಜನ ಚುನಾವಣಾ ಸಿಬ್ಬಂದಿಯನ್ನು […]

ಶಹಾಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಗುರು ಪಾಟೀಲ್ ಶಿರವಾಳ

ಶಹಾಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಗುರು ಪಾಟೀಲ್ ಶಿರವಾಳ

ಶಹಾಪುರ: ಪಟ್ಟಣದಲ್ಲಿ ಚುನಾವಣೆ ರಂಗು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇಂದು ಬಿಜೆಪಿ ಪಕ್ಷದ ವತಿಯಿಂದ ಶಹಾಪುರ ಪಟ್ಟಣದಲ್ಲಿ ಶಾಸಕರಾದ ಗುರು ಪಾಟೀಲ್ ಶಿರವಾಳ ಅವರು ಭರ್ಜರಿ ರೋಡ್ ಶೋ ನಡೆಸಿ ಜನರು ಆಶೀರ್ವಾದ ಮಾಡುವಂತೆ ಕೇಳಿಕೊಂಡರು . ಶಹಾಪುರ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರಮಾಣದ ರೋಡ್ ಶೋ ನಡೆಸಿದರು ಇದರಲ್ಲಿ ಅಪಾರ ಬೆಂಬಲಿಗರು ಭಾಗವಹಿಸಿದ್ದು ವಿಶೇಷವಾಗಿತ್ತು . ನಗರದ ಬೀದಿಯುದ್ದಕ್ಕೂ ಮಹಿಳೆಯರು ಯುವಕರು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಗುರು ಪಾಟೀಲ್ ಶಿರವಾಳ ಅವರಿಗೆ ಜಯವಾಗಲಿ ಎಂಬ […]

1 2 3 40