ಸುರಪುರ ನಗರಕ್ಕೆ ಮೂಲಭೂತ ಸೌಲಭ್ಯಕ್ಕಾಗಿ ಜಯಕರ್ನಾಟಕ ಮನವಿ

ಸುರಪುರ ನಗರಕ್ಕೆ ಮೂಲಭೂತ ಸೌಲಭ್ಯಕ್ಕಾಗಿ ಜಯಕರ್ನಾಟಕ ಮನವಿ

ಸುರಪುರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಇದ್ದು ತಿಂಗಳಿಗೊಮ್ಮೆ ನೀರು ಬಿಡುತ್ತಿದ್ದು ಕನಿಷ್ಠ ವಾರಕ್ಕೊಮ್ಮೆಯಾದರೂ ಕುಡಿಯುವ ನೀರು ಬಿಡುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ನಗರದಲ್ಲಿ ಒಂದು ಶೌಚಾಲಯವಿಲ್ಲದೆ ಜನರು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ನಗರಸಭೆಯ ಪ್ರತಿ ವಾರ್ಡಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಹಾಗೂ ಎಲ್ಲೆಡೆಯೂ ಬೀದಿ ದೀಪಗಳನ್ನು ಹಾಕಬೇಕು. […]

ಹಿರಿಯ ವಕೀಲರಾದ ವೆಂಕಣ್ಣಗೌಡ ಹಾಲಬಾವಿ ಇನ್ನಿಲ್ಲ

ಹಿರಿಯ ವಕೀಲರಾದ ವೆಂಕಣ್ಣಗೌಡ ಹಾಲಬಾವಿ ಇನ್ನಿಲ್ಲ

ಶಹಾಪುರ: ಹಿರಿಯ ವಕೀಲರು ಉತ್ತಮ ರಾಜಕಾರಣಿ ಹಾಗೂ ಈಶಾನ್ಯ ವಲಯ ಸಾರಿಗೆ ಉಪಾಧ್ಯಕ್ಷರಾದ ವೆಂಕನಗೌಡ ಪಾಟೀಲ್(77) ಹಾಲಭಾವಿ ಅವರು ನಿಧನರಾಗಿದ್ದಾರೆ. ದಿವಂಗತ ಶಿವಶೇಖರಪ್ಪ ಗೌಡ ಪಾಟೀಲ್ ಶಿರವಾಳ ಹಾಗೂ ಬಾಪುಗೌಡ ದರ್ಶನಾಪುರ ಅವರ ಆತ್ಮೀಯರಾಗಿದ್ದರು. ಇಂದು ಸಾಯಂಕಾಲ 4 ಗಂಟೆಗೆ ಶಹಾಪುರ ತಾಲೂಕಿನ ಹೊತಪೇಟ ಗ್ರಾಮದಲ್ಲಿ ಅಂತ್ಯಕ್ರಿಯೆ ಶವ ಸಂಸ್ಕಾರ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂತಾಪ : – ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ,ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ,ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ […]

ನ.14 ರಂದು ಶಹಾಪುರ ಶಾಂತಿಧಾಮದಲ್ಲಿ ಗೌರಮ್ಮರ 4 ನೇ ಪುಣ್ಯ ಸ್ಮರಣೆ

ನ.14 ರಂದು ಶಹಾಪುರ ಶಾಂತಿಧಾಮದಲ್ಲಿ ಗೌರಮ್ಮರ 4 ನೇ ಪುಣ್ಯ ಸ್ಮರಣೆ

ಶಹಾಪುರ: ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹತ್ತಿಗೂಡೂರ ಸಮೀಪದ ಶಾಂತಿಧಾಮದಲ್ಲಿರುವ ನಿವೃತ್ತ ಮುಖ್ಯ ಗುರುಗಳು ಹಾಗೂ ದಿವಂಗತ ಗೌರಮ್ಮರ ನಾಲ್ಕನೇ ಪುಣ್ಯ ಸ್ಮರಣೆಯನ್ನು ನವೆಂಬರ್ 14 ರಂದು ಬೆಳಗ್ಗೆ 8 ಗಂಟೆಗೆ ಜರುಗಲಿದೆ ಎಂದು ಯಾದಗಿರಿ ಸಾರಿಗೆ ಇಲಾಖೆಯ ಆಡಳಿತ ಅಧಿಕಾರಿಗಳಾದ ದೇವರಾಜ್ ಕುರ್ಲೆ ತಿಳಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷ ಣವನ್ನು ಧಾರೆ ಎರೆವುದರ ಮುಖಾಂತರ ಅವರಿಗೆ ಸ್ಫೂರ್ತಿಯನ್ನು ತುಂಬಿ ಉತ್ತಮ ನಾಗರಿಕರಾಗುವ೦ತೆ ತಮ್ಮ ಶಿಷ್ಯಂದಿರಿಗೆ ಬದುಕು ರೂಪಿಸಿಕೊಳ್ಳುವಂತೆ ಸಲಹೆ ನೀಡಿದ ಗೌರಮ್ಮರ 4 ನೇ […]

ಸುರಪುರ ಬಿಜೆಪಿ ಕಚೇರಿಯಲ್ಲಿ ಅನಂತ ಕುಮಾರಗೆ ಶ್ರದ್ಧಾಂಜಲಿ

ಸುರಪುರ ಬಿಜೆಪಿ ಕಚೇರಿಯಲ್ಲಿ ಅನಂತ ಕುಮಾರಗೆ ಶ್ರದ್ಧಾಂಜಲಿ

ಸುರಪುರ: ಈ ದೇಶ ಕಂಡ ಪ್ರಬುದ್ಧ ರಾಜಕಾರಣಿಗಳಲ್ಲಿ ದಿವಂಗತ ಅನಂತ್ ಕುಮಾರ್ ಅವರು ಕೂಡ ಒಬ್ಬರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಪ್ಪ ನಾಯಕ ಹೇಳಿದರು. ಕೇಂದ್ರ ಸಚಿವ ಅನಂತ ಕುಮಾರ ಅವರು ನಿಧನದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಶೋಕಾಚರಣೆ ಸಭೆಯಲ್ಲಿ ಮಾತನಾಡಿ, ಅನಂತ ಕುಮಾರ ಅವರು ಹುಟ್ಟು ಹೋರಾಟಗಾರರು ಅಂತೆ ವಿದ್ಯಾರ್ಥಿ ಜೀವನದಿಂದಲೇ ಹೋರಾಟಕ್ಕೆ ಧುಮುಕಿ ಆರು ಬಾರಿ ಸಂಸದರಾಗಿ, ವಾಜಪೇಯಿ ನರೇಂದ್ರ ಮೋದಿಯವರಂತ ಮೇಧಾವಿ ರಾಜಕಾರಣಿಗಳ ಸಂಪುಟದಲ್ಲಿ ಸಚಿವರಾಗಿ ಸೇವೆ […]

ರಾಜ್ಯೋತ್ಸವ ಸ್ವಾಭಿಮಾನಿ ಕನ್ನಡಿಗರ ಹಬ್ಬ: ಡಾ. ವಾಸುದೇವ ಸೇಡಂ

ರಾಜ್ಯೋತ್ಸವ ಸ್ವಾಭಿಮಾನಿ ಕನ್ನಡಿಗರ ಹಬ್ಬ: ಡಾ. ವಾಸುದೇವ ಸೇಡಂ

ಶಹಾಪುರ: ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿ ಎಲ್ಲಾ ಜಾತಿ-ಜನಾಂಗದವರು, ಭೇದ-ಭಾವ ಮರೆತು ಸ್ವಾಭಿಮಾನದ ಹಬ್ಬವಾಗಿ ಆಚರಿಸುತ್ತಾರೆ. ಇದು ಸಂತೋಷದ ಸಂಗತಿ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ವಾಸುದೇವ ಸೇಡಂ ಅವರು ಹೇಳಿದರು. ಶಹಾಪುರ ಕನ್ನಡ ಸಾಹಿತ್ಯ ಭವನದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಜರುಗಿದ ರಾಜ್ಯೋತ್ಸವ ಸಾಂಸ್ಕೃತಿಕ ಸಂಭ್ರಮ ಹಾಗೂ ಕವಿಗೋಷ್ಟಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕಲಬುರ್ಗಿಯ ಎಂ.ಎಸ್.ಇರಾನಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. […]

ಸುರಪುರಕ್ಕೂ ಬರುತ್ತಿದ್ದರು ಟಿಪ್ಪು ಸುಲ್ತಾನ:ಎಕ್ಬಾಲ ರೂಹಿ

ಸುರಪುರಕ್ಕೂ ಬರುತ್ತಿದ್ದರು ಟಿಪ್ಪು ಸುಲ್ತಾನ:ಎಕ್ಬಾಲ ರೂಹಿ

ಸುರಪುರ: ಟಿಪ್ಪು ಸುಲ್ತಾನ ಯಾವುದೇ ಧರ್ಮ ಭಾಷೆಯ ವಿರೋಧಿಯಾಗಿರಲಿಲ್ಲ,ಅವರು ಸಂಸ್ಕøತಿ ಪ್ರಿಯರಾಗಿದ್ದರು.ದಸರಾ ಉತ್ಸವಕ್ಕಾಗಿ ಸುರಪುರಕ್ಕೆ ಬರುತ್ತಿದ್ದರು,ಆದರೆ ಇಲ್ಲಿಗೆ ಬರದೆ ಗಂಗಾವತಿಯಿಂದ ಮರಳಿ ಮೈಸೂರಿಗೆ ಹೋದರು ಎಂದು ಸಾಹಿತಿ ಎಕ್ಬಾಲ ರೂಹಿ ರಂಗಂಪೇಟೆ ಮಾತನಾಡಿದರು. ತಾಲ್ಲೂಕಾಡಳಿತದಿಂದ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.ಮತ್ತೋರ್ವ ಉಪನ್ಯಾಸಕ ಬಿ.ಆರ್.ಅಂಚೆಸುಗೂರು ಮಾತನಾಡಿ,ಟಿಪ್ಪು ಸುಲ್ತಾನ ಒಬ್ಬ ಸಮಾಜ ಸುಧಾರಕ ಮಹಿಳೆಯರ ಬಗ್ಗೆ ಅಪಾರ ಗೌರವ ಉಳ್ಳವನಾಗಿದ್ದ,ದೀನ ದಲಿತ ಶೋಷಿತರಿಗಾಗಿ ಭೂಸುಧಾರಣಾ ಕಾಯಿದೆ ಮೂಲಕ ಊಳುವವನೆ ಭೂ ಒಡೆಯ ಎಂಬ […]

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿದು ವ್ಯಕ್ತಿ ಕೈಗೆ ಗಂಭೀರ ಗಾಯ

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿದು ವ್ಯಕ್ತಿ ಕೈಗೆ ಗಂಭೀರ ಗಾಯ

ಸುರಪುರ: ದೀಪಾವಳಿ ಎಂದರೆ ಪಟಾಕಿ ಸಿಡಿಸಿ ಪರಿಸರ ಹಾಳು ಮಾಡಬೇಡಿ ಹಾಗೂ ಅವಘಡಕ್ಕೆ ಈಡಾಗದಂತೆ ಸರಕಾರಗಳು ಎಚ್ಚರಿಸಿದರು ಜನರು ಲೆಕ್ಕಿಸದೆ ಅನಾಹುತ ಮಾಡಿಕೊಳ್ಳುತ್ತಾರೆ. ಸುರಪುರ ನಗರದ ಹಸನಾಪುರದ ನಿವಾಸಿ ಶಂಕರ್ ಗೋಲ್ಡ್ ಎಂಬುವವರು ಕಳೆದ ರಾತ್ರಿ ಮಳೆಯ ಪಟಾಕಿ ಕೈಯಲ್ಲಿ ಹಿಡಿದು ಹಚ್ಚಿದ ಪರಿಣಾಮ, ಪಟಾಕಿ ಸಿಡಿದು ಕೈಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿ ಶಂಕರ್ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. udayanadu2016

ಉಪಚುನಾವಣೆಯಲ್ಲಿ’ಕೈ’ ಗೆಲುವು: ಕಾರ್ಯಕರ್ತರ ಸಂಭ್ರಮಾಚರಣೆ

ಉಪಚುನಾವಣೆಯಲ್ಲಿ’ಕೈ’ ಗೆಲುವು: ಕಾರ್ಯಕರ್ತರ ಸಂಭ್ರಮಾಚರಣೆ

ಗಜೇಂದ್ರಗಡ: ಲೋಕಸಭೆ ಮತ್ತು ವಿಧಾನಸಭೆಯ ಉಪ ಸಮರದಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದ ಹಿನ್ನಲೆಯಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಕೋಮುವಾದಿ ಪಕ್ಷವನ್ನು ಮತದಾರರು ದಿಕ್ಕರಿಸಿ ದೋಸ್ತಿ ಸರಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಅಶೋಕ ಬಾಗಮಾರ, ವೀರಣ್ಣ ಸೊನ್ನದ, ಮುರ್ತುಜಾ ಡಾಲಾಯತ್, ರಾಜು ಸಾಂಗ್ಲಿಕಾರ, ಮುತ್ತಣ್ಣ ಮ್ಯಾಗೇರಿ, ಎಚ್.ಎಸ್ ಸೋಂಪೂರ, ಬಿ.ಎಸ್ ಶೀಲವಂತರ ವೆಂಕಟೇಶ್ವರ ಮುದಗಲ್ಲ, ಇಮಾಮಸಾಬ ಬಾಗವಾನ, […]

ಉಪ ಚುನಾವಣೆ ಗೆಲುವಿಗೆ ಸುರಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

ಉಪ ಚುನಾವಣೆ ಗೆಲುವಿಗೆ ಸುರಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

ಸುರಪುರ: ರಾಜ್ಯದಲ್ಲಿ ನವೆಂಬರ್ 3ರಂದು ನಡೆದ ಐದು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸುರಪುರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ರಾಜಾ ವಿಜಯ ಕುಮಾರ್ ನಾಯಕ್ ಮಾತನಾಡಿ ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆಡಳಿತವನ್ನು ಜನತೆ ಮೆಚ್ಚಿ ಎಲ್ಲಾ ಐದು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಮತದಾರರು ಮೈತ್ರಿ ಪಕ್ಷಗಳ ಅಭ್ಯರ್ಥಿಗಳಿಗೆ […]

ಸಾಹಿತಿಗಳ ಬರವಣಿಗೆ ಸಮಾಜದ ಅಂಕುಡೊಂಕು ತಿದ್ದುವಂತಿರಬೇಕು: ನಾಗರಾಜ್

ಸಾಹಿತಿಗಳ ಬರವಣಿಗೆ ಸಮಾಜದ ಅಂಕುಡೊಂಕು ತಿದ್ದುವಂತಿರಬೇಕು: ನಾಗರಾಜ್

ಶಹಾಪುರ : ಇಂದಿನ ಯುವ ಸಾಹಿತ್ಯಗಳ ಬರವಣಿಗೆ  ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಿರಬೇಕು ಎಂದು ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಹೂಹಳ್ಳಿ ನಾಗರಾಜ್ ಅವರು ಹೇಳಿದರು. ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಸಂಯೋಗದಲ್ಲಿ ಜರುಗಿರುವ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಜರುಗಿದ ಕವಿಗೋಷ್ಠಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನವನ್ನು ವಾಚಿಸಿದರು.ಜೊತೆಗೆ ಸಾಧಕರಿಗೆ ಸನ್ಮಾನವನ್ನೂ ಕೂಡ ಏರ್ಪಡಿಸಲಾಗಿತ್ತು. ಅದರಂತೆ ರಾಜ್ಯ ಯುವ ಬರಹಗಾರ […]