ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ

ಸುರಪುರ: ಈಗಾಗಲೆ ಬೇಸಿಗೆ ಆರಂಭಗೊಂಡಿದ್ದು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸವiಸ್ಯೆ ತಲೆದೋರಿದೆ.ಇದೇ ಮೊದಲೇನಲ್ಲ ಪ್ರತಿವರ್ಷ ಕುಡಿಯುವ ನೀರಿನ ತೊಂದರೆ ಇದ್ದರು ಜಿಲ್ಲಾ ಪಂಚಾಯತಿ ಇಂಜಿನಿಯರರು ಕ್ರೀಯಾ ಯೋಜನೆ ತಯ್ಯಾರಿಸುತ್ತಿಲ್ಲ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಪಂಚಾಯತಿ ಇಂಜಿಯರಿಂಗ್ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಕ್ರೀಯಾ ಯೋಜನೆ ಮಾಡದೆ ಇಂಜಿನಿಯರರು ಜನರ ಸಮಸ್ಯೆಗೆ ಕಾರಣವಾಗಿದ್ದಾರೆ.ಇದರಲ್ಲಿ ಅಕ್ರಮ […]

ಸಗರ ಗ್ರಾಮದಲ್ಲಿ ಸುಟ್ಟು ಕರಕಲಾದ ಶವ ಪತ್ತೆ: ಜನರಲ್ಲಿ ಆತಂಕ

ಸಗರ  ಗ್ರಾಮದಲ್ಲಿ ಸುಟ್ಟು ಕರಕಲಾದ ಶವ ಪತ್ತೆ: ಜನರಲ್ಲಿ ಆತಂಕ

ಶಹಾಪುರ: ಅರ್ಧಮರ್ಧ ರೀತಿಯಲ್ಲಿ ಸುಟ್ಟು ಕರಕಲಾಗಿರುವ ಶವವನ್ನು ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಶಾರದಳ್ಳಿ ರಸ್ತೆಯಲ್ಲಿರುವ ಬಸವಣ್ಣ ದೇವರ ಗುಡಿಯ ಹತ್ತಿರ ಪತ್ತೆಯಾಗಿದೆ. ಗುರುತು ಸಿಗದೇ ಇರುವ ಹಾಗೆ ಯಾರೋ ಬೇರೆ ಕಡೆಯಿಂದ ತಂದು ಕೊಲೆ ಮಾಡಿ ಸುಟ್ಟಿದ್ದಾರೆ ಎಂದು ಅನುಮಾನಾಸ್ಪದವಾಗಿ ತಿಳಿದು ಬಂದಿದೆ. ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. Views: 460

ಸುರಪುರದಲ್ಲಿ ಬಿಎಸ್‌ಪಿ ಸಂಸ್ಥಾಪಕ ಕಾನ್ಸಿರಾಂ ಜಯಂತಿ ಆಚರಣೆ

ಸುರಪುರದಲ್ಲಿ ಬಿಎಸ್‌ಪಿ ಸಂಸ್ಥಾಪಕ ಕಾನ್ಸಿರಾಂ ಜಯಂತಿ ಆಚರಣೆ

ಸುರಪುರ: ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ, ಪೆರಿಯಾರ್ ಮೊದಲಾದವರ ವಿಚಾರವನ್ನು ಮನೆಮನೆಗೆ ತಲುಪಿಸಿದ ಮಹಾನ್ ವ್ಯಕ್ತಿ ಕಾನ್ಸಿರಾಮ್‌ಜಿಯವರಾಗಿದ್ದಾರೆ ಎಂದು ಬಿಎಸ್‌ಪಿ ಮುಖಂಡ ಮೂರ್ತಿ ಬೊಮ್ಮನಹಳ್ಳಿ ಹೇಳಿದರು. ತಾಲೂಕು ಬಹುಜನ ಸಮಾಜವಾದಿ ಪಕ್ಷ (BSP) ವತಿಯಿಂದ ಹಮ್ಮಿಕೊಂಡಿದ್ದ ಕಾನ್ಸಿರಾಮ್ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾನ್ಸಿರಾಮ್ ಅವರು ಸೈಕಲ್ ಮೇಲೆ ಸುತ್ತಿ ಸಮಾಜ ಜಾಗೃತಿ ಹಾಗು ಪಕ್ಷ ಸಂಘಟನೆ ಮಾಡಿದವರು.ಅವರು ಉತ್ತರ ಪ್ರದೇಶದಲ್ಲಿ ಸತತ ಮೂರು ಬಾರಿ ಆಡಳಿತ ನಡೆಸುವ ಮೂಲಕ ಬಹುಜನ ಸುಖಾಯ […]

ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಅವಶ್ಯ: ಇಓ ಜಗದೇವಪ್ಪ

ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಅವಶ್ಯ:  ಇಓ ಜಗದೇವಪ್ಪ

ಸುರಪುರ:  ಮತದಾನ ಪ್ರಮಾಣ ಹೆಚ್ಚಿಸಲು ಶಾಲಾ-ಕಾಲೇಜುಗಳಲ್ಲಿ  ಚುನಾವಣಾ ಸಾಕ್ಷರತಾ ಕ್ಲಬ್ ಮೂಲಕ ಮಕ್ಕಳ  ಪೋಷಕರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸುವುದು ಅವಶ್ಯ ಎಂದು ತಾ ಪಂ ಕಾರ್ಯನಿರ್ವಹಣಾಧಿಕಾರಿ ಜಗದೇವಪ್ಪ ಹೇಳಿದರು. ನಗರದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಸ್ಥಾಪಿಸಲಾದ ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಚುನಾವಣೆಗಳು ಆರಂಭಗೊಂಡು 70 ವರ್ಷಗಳಾದರೂ ಇಲ್ಲಿಯವರೆಗೂ ಕಡ್ಡಾಯ ಮತದಾನ ಮತದಾನ ಸಾಧ್ಯವಾಗಿಲ್ಲ. […]

ಸುರಪುರದ ಜಿ.ಎಂ. ಪಾಟೀಲ್‍ಗೆ “ಮಿಸ್ಟರ್ ನಾರ್ತ್ ಕರ್ನಾಟಕ” ಪ್ರಶಸ್ತಿ

ಸುರಪುರದ ಜಿ.ಎಂ. ಪಾಟೀಲ್‍ಗೆ “ಮಿಸ್ಟರ್ ನಾರ್ತ್ ಕರ್ನಾಟಕ” ಪ್ರಶಸ್ತಿ

ಸುರಪುರ: ಇತ್ತೀಚಿಗೆ ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್ ಹೋಟೆಲ್ ನಲ್ಲಿ ನಡೆದ ರಾಜ್ಯ ಮಟ್ಟದ ಮಾಡಲಿಂಗ್ ಸ್ಪರ್ಧೆಯಲ್ಲಿ ಸುರಪುರ ತಾಲೂಕಿನ  ನಾಗರಾಳ ಗ್ರಾಮದ ಗಚ್ಚಪ್ಪಗೌಡ ಮಲ್ಲೇಶಿ ಪಾಟೀಲ ಮಿಸ್ಟರ್ ನಾರ್ತ್ ಕರ್ನಾಟಕ ಪ್ರಶಸ್ತಿ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ 40 ಸಾವಿರ  ಮೊಬೈಲ್ ಫೋನ್ ವೋಟಿಂಗ್ ಪಡೆದು ಪಾಪ್ಯುಲರ್ ಫೇಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಗಚ್ಚಪ್ಪಗೌಡ ಧಾರವಾಡದಲ್ಲಿ ಎಂ.ಎಸ್ಸಿ. ಓದುತ್ತಿದ್ದು,  ಓದಿನ ಜೊತೆಗೆ ರಂಗಭೂಮಿ, ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆನ್ನುವ ಆಸೆ ಹೊಂದಿದ್ದಾರೆ. Views: 152

ಲೋಕ ಜನಶಕ್ತಿಗೆ ಜಿಲ್ಲಾಧ್ಯಕ್ಷರ ನೇಮಕ

ಲೋಕ ಜನಶಕ್ತಿಗೆ ಜಿಲ್ಲಾಧ್ಯಕ್ಷರ ನೇಮಕ

ಸುರಪುರ: ರಾಮವಿಲಾಸ ಪಾಸ್ವನ್‍ರವರ ಸಂಸ್ಥಾಪಕತ್ವದ ಲೋಕ ಜನಶಕ್ತಿ ಪಕ್ಷದ ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಸತ್ಯಂಪೇಟೆ ಗ್ರಾಮದ ಅಪ್ಪಾರಾವ್ ನಾಯಕರನ್ನು ನೇಮಕಗೊಳಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಪಕ್ಷದ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್,ಪಕ್ಷದ ತತ್ವ ಸಿಧ್ದಾಂತಗಳಿಗೆ ಬಧ್ಧರಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಮಾಡುವಂತೆ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. Views: 76

ರಾಯಚೂರು ಲೋಕಸಭಾ ಟಿಕೆಟ್ ರಾಜಾ ನಾಯಕಗೆ ನೀಡಲು ಒತ್ತಾಯ

ರಾಯಚೂರು ಲೋಕಸಭಾ ಟಿಕೆಟ್ ರಾಜಾ ನಾಯಕಗೆ ನೀಡಲು ಒತ್ತಾಯ

ಸುರಪುರ: ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹಾಗು ಯಾದಗಿರಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಜಿಲ್ಲೆಯ ಗ್ರಾಮೀಣ ಭಾಗದ ಅಭೀವೃಧ್ದಿಗೆ ಶ್ರಮಿಸಿರುವ ರಾಜಾ ಹನುಮಪ್ಪ ನಾಯಕ(ತಾತಾ) ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ರಾಯಚೂರ ಲೋಕಸಭಾ ಕ್ಷೇತ್ರದ ಅಭ್ಯಾರ್ಥಿಯನ್ನಾಗಿಸುವಂತೆ ಯುವ ಮುಖಂಡ ರಂಗನಗೌಡ ದೇವಿಕೇರಾ ಹಾಗು ರಾಜಾ ಹನುಮಪ್ಪ ನಾಯಕರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು,ರಾಜಾ ಹನುಮಪ್ಪ ನಾಯಕರು ಹಾಲಿ ಶಾಸಕ ನರಸಿಂಹ ನಾಯಕರ ಗೆಲುವಿನಲ್ಲಿ ಹಾಗು ಹಿಂದೆ […]

ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ

ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ

ಸುರಪುರ: ನಗರದ ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿಲ್ಲದೆ ಪ್ರಯಾಣಿಕರು ತೊಂದರೆ ಪಡುವಂತಾಗಿದೆ,ಆದ್ದರಿಂದ ಬಸ್ ನಿಲ್ದಾಣದಲ್ಲಿ ಉಚಿತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಶೋಷಿತರ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಆಗ್ರಹಿಸಿದರು. ಒಕ್ಕೂಟದಿಂದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ.ಅಲ್ಲದೆ ಬಸ್ ನಿಲ್ದಾಣದಲ್ಲಿನ ಶೌಚಾಲಯಗಳು ಸ್ವಚ್ಛತೆಯಿಲ್ಲದೆ ನಾರುತ್ತಿವೆ.ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ತೆರೆದ ಚರಂಡಿಗಳಿವೆ ಇವುಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು.ಗ್ರಾಮೀಣ ಪ್ರದೇಶಕ್ಕೆ ಹೋಗುವ ರಾತ್ರಿ ವಸತಿ […]

ದೇಶಭಕ್ತನಾಗಿ ದುಡಿದ ಹಣ ದೇಶಕ್ಕೆ ನೀಡಿದೆ:ಕಿಶನರಾವ್

ದೇಶಭಕ್ತನಾಗಿ ದುಡಿದ ಹಣ ದೇಶಕ್ಕೆ ನೀಡಿದೆ:ಕಿಶನರಾವ್

ಸುರಪುರ: ಅನೇಕರು ತಮ್ಮಲ್ಲಿನ ಹಣವನ್ನು ದೇವರ ಹುಂಡಿಗೆ ಮತ್ತೊಂದಕ್ಕೆ ಸುರಿಯುತ್ತಾರೆ.ಆದರೆ ನಾನೊಬ್ಬ ದೇಶಭಕ್ತ ಆದ್ದರಿಂದ ನನ್ನ ಬದುಕಿನಲ್ಲಿ ದುಡಿದ ಹಣದಲ್ಲಿ ತೆಗೆದಿರಿಸಿದ್ದನ್ನು ದೇಶಕ್ಕೆ ಅರ್ಪಣೆಯಾಗಲೆಂದು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದೆ ಎಂದು ನಿವೃತ್ತ ಶಿಕ್ಷಕ ಕಿಶನರಾವ್ ಹೇಳಿದರು. ನಗರದಲ್ಲಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ನಾನು ಒಬ್ಬ ಸರಕಾರಿ ಶಾಲೆಯ ಶಿಕ್ಷಕನಾಗಿ ಸುಮಾರು ಮೂವತ್ತೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ.ನನ್ನ ನವಕರಿಯ ಅವಧಿಯಲ್ಲಿ ಉಳಿಸಿದ ಸುಮಾರು ಹತ್ತು ಲಕ್ಷ ರೂಪಾಯಿ ನಿವೃತ್ತಿ ಸಂದರ್ಭದಲ್ಲಿ ಕೈಗೆ […]

ಭಾರತೀಯ ಸೇನೆಗೆ 11 ಲಕ್ಷ ರೂ. ದೇಣಿಗೆ ನೀಡಿದ ನಿವೃತ್ತ ಶಿಕ್ಷಕ

ಭಾರತೀಯ ಸೇನೆಗೆ 11 ಲಕ್ಷ ರೂ. ದೇಣಿಗೆ ನೀಡಿದ ನಿವೃತ್ತ ಶಿಕ್ಷಕ

ಸುರಪುರ: ಹನ್ನೊಂದು ಲಕ್ಷ ರೂಪಾಯಿ ದಾನಗೈದರೂ ಇನ್ನೊಬ್ಬರ ಗಮನಕ್ಕೆ ತರದ ಮಹಾದಾನಿ ನಿವೃತ್ತ ಶಿಕ್ಷಕ  ಕಿಶನರಾವ ಪಾಟೀಲ. ಹೌದು… ನೂರು ರೂಪಾಯಿ ಕೊಟ್ಟರೂ ಊರು ತುಂಬಾ ನಮ್ಮ ಹೆಸರು ಹೇಳಬೇಕು ಎನ್ನುವ ಈ ದುರಂತ ಕಾಲಘಟ್ಟದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಈ ದೇಶದ ಸೈನ್ಯ ಬಲವರ್ಧನೆಗಾಗಿ ಮತ್ತು ನೊಂದ ಹುತಾತ್ಮ ಯೋಧರ ಕುಟುಂಬಕ್ಕೆ ಆಸರೆ ಆಗಲಿ ಎನ್ನುವ ಸದ್ಭಾವದಿಂದ  ಸುರಪುರ ನಗರದ ನಿವೃತ್ತ ಶಿಕ್ಷಕರಾದ ಶ್ರೀ ಕಿಶನರಾವ ಪಾಟೀಲರು ತಮ್ಮ ಸ್ವಂತ ದುಡಿಮೆಯಿಂದ ಸಂಗ್ರಹಿಸಿದ 11 ಲಕ್ಷ ರೂಪಾಯಿಗಳನ್ನು […]