ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವು ಅಗತ್ಯ: ಹ.ನಿ.ದೇಸಾಯಿ

ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವು ಅಗತ್ಯ: ಹ.ನಿ.ದೇಸಾಯಿ

  ಸುರಪುರ: ಪ್ರಾಥಮಿಕ ಹಂತದಲ್ಲಿಯೆ ಶಾಲಾ ಮಕ್ಕಳಿಗೆ ಇತಿಹಾಸದ ಕುರಿತು ಅರಿವು ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಸಂಶೋಧಕ ಹ.ನಿ.ದೇಸಾಯಿ ಅಭಿಪ್ರಾಯ ಪಟ್ಟರು. ಸುರಪುರ ತಾಲ್ಲೂಕಿನ ಹುಣಸಗಿ ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಐತಿಹಾಸಿಕ ಪರಂಪರೆ ಉಳಿಸಿ ಸಮಾರಂಭದಲ್ಲಿ ಅವರು ಹೇಳಿದರು. ಇತಿಹಾಸ ಉಪನ್ಯಾಸಕರಾದ ರಾಘವೇಂದ್ರ ಮಾತನಾಡಿ ಇತಿಹಾಸದ ಕುರಿತು ಆಳವಾಗಿ ಅಧ್ಯಯನ ಮಾಡಬೇಕಾದರೆ ಮೂಲ ಆಧಾರವಾಗಿ ಶಿಲಾ ಶಾಸನಗಳು, ಶಿಲ್ಪಗಳು, ವೀರಗಲ್ಲುಗಳು, ಐತಿಹಾಸಿಕ ದೇವಾಲಯಗಳುನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ […]

ಕಾಂಗ್ರೆಸ್ ಗೆ ಮತ್ತೆ ಅಧಿಕಾರ: ಮಾಜಿ ಸಚಿವ ದರ್ಶನಾಪುರ

ಕಾಂಗ್ರೆಸ್ ಗೆ ಮತ್ತೆ ಅಧಿಕಾರ: ಮಾಜಿ ಸಚಿವ ದರ್ಶನಾಪುರ

ಶಹಾಪುರ:ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಆದ್ದರಿಂದ ಇಂದು ಯುವ ಜನತೆ ಪಕ್ಷದ ತತ್ವ ಸಿದ್ದಾಂತಗಳು ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೆರುತ್ತಿದ್ದಾರೆ ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ಮಾಜಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಹೇಳಿದರು. ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನೂತನವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾರ್ಯಕರ್ತರನ್ನು ಬರಮಾಡಿಕೊಂಡು ಅವರು ಮಾತನಾಡಿದರು. ತಾಲೂಕಿನ ಹಲವಾರು ಗ್ರಾಮಗಳ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.   Views: […]

ಜಾನಪದ ಗ್ರಾಮೀಣ ಜನರ ಜೀವಾಳ…ನಿರ್ದೇಶಕ ದತ್ತಪ್ಪ ಸಾಗನೂರ

ಜಾನಪದ ಗ್ರಾಮೀಣ ಜನರ ಜೀವಾಳ…ನಿರ್ದೇಶಕ  ದತ್ತಪ್ಪ ಸಾಗನೂರ

ಸುರಪುರ: ಹಳ್ಳಿಯ ಜನರ ಬಾಯಿಂದ ಬಾಯಿಗೆ ಹರಡಿರುವ ಪದ ಜಾನಪದ ಈ ಜಾನಪದ ಗ್ರಾಮೀಣ ಜನತೆಯ ಜೀವಾಳ ಎಂದು ಯಾದಗಿರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಹೇಳಿದರು. ಸುರಪುರ ತಾಲೂಕಿನ ವಜ್ಜಲ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಜನಪದ ಉತ್ಸವ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ  ಅತಿಥಿಗಳಾಗಿ ಜಿಲ್ಲಾ ಪಂಚಾಯತ ಸದಸ್ಯರಾದ ಬಸವರಾಜ ಸ್ಥಾವರಮಠ ಮಾತನಾಡಿ,ಇಂದು ಜನರು ಯಾಂತ್ರಿಕ ಬದುಕಿಗೆ ವಾಲಿ ಜನಪದ ಹಾಗೂ […]

ಪ್ರಜ್ಞಾವಂತರೆ ಜಾತಿಮತಿಯ ಭೂತಗಳು: ನಿಜಗುಣ ದೋರನಹಳ್ಳಿ

ಪ್ರಜ್ಞಾವಂತರೆ ಜಾತಿಮತಿಯ ಭೂತಗಳು: ನಿಜಗುಣ ದೋರನಹಳ್ಳಿ

ಶಹಾಪುರ: ಸಾಮಾಜಿಕ ಬಡತನ ಹಾಗೂ ಜಾತಿಮತೆಯ ಭೂತಗಳಿಗೆ ದೇಶದ ಪ್ರಜ್ಞಾವಂತರೆ ಕಾರಣ ಎಂದು ದಲಿತ ಯುವ ಮುಖಂಡ ನಿಜಗುಣ ದೋರನಹಳ್ಳಿ ಬಹಳ ನೋವಿನಿಂದ ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಪರಿಷತ್ತು ಗುರುವಾರ ಹಮ್ಮಿಕೊಂಡಿದ್ದ ಹಿರಿಯ ಚಿಂತಕ ಪೆರಿಯಾರ್ ಅವರ 138 ನೇ ಜನ್ಮದಿನದಂದು ಅವರು ಮಾತನಾಡಿದರು. ಇನ್ನೂರ್ವ ಅತಿಥಿಗಳಾಗಿ ಭಾಗವಹಿಸಿ ಮಿಲಿಂದ ಕುಮಾರ ಕಾಂಬ್ಳೆ ಮಾತನಾಡಿ ಹಿಂದಿನ ಸಂಸ್ಕೃತಿ ಮತ್ತು ಧಾರ್ಮಿಕತೆಯ ನಂಬಿಕೆಗಳಿಗೆ ದಕ್ಕೆಯಾಗದಂತೆ ನಾವು ನೀವೆಲ್ಲರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಹೇಳಿದರು. […]

ಟೆಂಡರ್ ರದ್ದು ಖಂಡಿಸಿ ಪೌರಾಯುಕ್ತರ ವಿರುದ್ಧ ಡಿಸಿಗೆ ದೂರು: ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ

ಟೆಂಡರ್ ರದ್ದು ಖಂಡಿಸಿ ಪೌರಾಯುಕ್ತರ ವಿರುದ್ಧ ಡಿಸಿಗೆ ದೂರು: ಯಾದಗಿರಿ ನಗರಸಭೆ ಅಧ್ಯಕ್ಷೆ  ಲಲಿತಾ ಅನಪೂರ

ಯಾದಗಿರಿ: ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 1.75 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ರದ್ದುಪಡಿಸಿದ ಯಾದಗಿರಿ ನಗರಸಭೆ ಆಯುಕ್ತ ಸಂಗಪ್ಪ ಉಪಾಸೆ ವಿರುದ್ದ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರಿಗೆ ದೂರು ಸಲ್ಲಿಸಿ ಅವರ ವರ್ಗಾವಣೆಗೆ ಕೋರುವುದಾಗಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅನಪೂರ, ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ ಹಾಗೂ ಇತರೆ ಸದಸ್ಯರು, ಆಯುಕ್ತ ಸಂಗಪ್ಪ ಉಪಾಸೆ ವಿರುದ್ದ ಹರಿಹಾಯ್ದರು. ರೂ 1.75 ಕೋಟಿ ವೆಚ್ಚದ ಟೆಂಡರ್ ರದ್ದುಗೊಳಿಸಿ ಹೊಸದಾಗಿ […]

ತೆಲಂಗಾಣ ಜಲಾಶಯದ ಹಿನ್ನೀರು ನುಗ್ಗಿ ರಾಜ್ಯದ ರೈತರ ಬೆಳೆ ಹಾನಿ: ಕ್ರಮಕೈಗೊಳ್ಳದ ಜನಪ್ರತಿನಿಗಳು, ಜಿಲ್ಲಾಡಳಿತ

ತೆಲಂಗಾಣ ಜಲಾಶಯದ ಹಿನ್ನೀರು ನುಗ್ಗಿ ರಾಜ್ಯದ ರೈತರ ಬೆಳೆ ಹಾನಿ: ಕ್ರಮಕೈಗೊಳ್ಳದ ಜನಪ್ರತಿನಿಗಳು, ಜಿಲ್ಲಾಡಳಿತ

ಯಾದಗಿರಿ: ತೆಲಂಗಾಣ ರಾಜ್ಯದ ಮಹಬೂಬನಗರ ಜಿಲ್ಲೆಯ ಮಕ್ತಲ್ ತಾಲೂಕಿನ ಸಂಗಂಬಂಡಾ ಜಲಾಶಯ ಹಿನ್ನೀರು ನುಗ್ಗಿ ಯಾದಗಿರಿ ತಾಲೂಕಿನ ಚಲೇರಿ ಗ್ರಾಮದ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾದ ಘಟನೆ ನಡೆದಿದೆ. ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣವಾಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿವೆ ಎಂದು ಗುರುಮಠಕಲ್ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಬಣ್ಣ ಬೋರಬಂಡಾ ಆರೋಪಿಸಿದ್ದಾರೆ. ಮಹಬೂಬ್ ನಗರ ಜಿಲ್ಲೆಯ ಹಲವಾರು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಬೇಸಾಯಕ್ಕಾಗಿ ಮಕ್ತಲ್ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ […]

ನಿಮಯ ಉಲ್ಲಂಘನೆ: ನಗರಸಭೆಯ1.75 ರೂ. ಕೋಟಿ ಮೊತ್ತದ ಟೆಂಡರ್ ರದ್ದು: ಆಯುಕ್ತರ ಆದೇಶ

ನಿಮಯ ಉಲ್ಲಂಘನೆ: ನಗರಸಭೆಯ1.75 ರೂ. ಕೋಟಿ ಮೊತ್ತದ ಟೆಂಡರ್ ರದ್ದು: ಆಯುಕ್ತರ ಆದೇಶ

ಯಾದಗಿರಿ:  ನಗರಸಭೆಯಿಂದ ರೂ 1.75 ಕೋಟಿ ಮೊತ್ತಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಇನ್ನೇನೂ ಕಾಮಗಾರಿ ಪ್ರಾರಂಭಿಸಬೇಕು ಎನ್ನುವುದರೊಳಗೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ್ದು ಕಂಡು ಬಂದಿದ್ದರಿಂದ  ಆಯುಕ್ತ ಸಂಗಮೇಶ ಉಪಾಸೆ  ಟೆಂಡರ್ ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 14 ನೇ ಹಣಕಾಸು ಸಾಮಾನ್ಯ ಮೂಲ ಹಾಗೂ ಎಸ್ ಎಫ್ ಸಿ ಮುಕ್ತ ನಿಧಿಯಿಂದ ಬಿಡುಗಡೆಯಾಗಿದ್ದ ರೂ. 1.75 ಕೋಟಿಗೆ ನಗರಸಭೆಯ ಅಧಿಕಾರಿಗಳು ಇತ್ತೀಚಿಗೆ ಟೆಂಡರ್ ಕರೆದಿದ್ದರು. ಒಟ್ಟು 8 ಪ್ಯಾಕೇಜ್‍ಗಳಲ್ಲಿ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ […]

ಪಟೇಲರ ದಿಟ್ಟ ನಿರ್ಧಾರದಿಂದ ಹೈಕ ವಿಮೋಚನೆಯಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

ಪಟೇಲರ ದಿಟ್ಟ ನಿರ್ಧಾರದಿಂದ ಹೈಕ ವಿಮೋಚನೆಯಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

ಯಾದಗಿರಿ: ಭಾರತ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಸರದಾರ ವಲಭಭಾಯಿ ಪಟೇಲ್ ಅವರ ದಿಟ್ಟ ನಿರ್ಧಾರದಿಂದ ಹೈದರಾಬಾದ್ ಕರ್ನಾಟಕ ಪ್ರದೇಶ ವಿಮೋಚನೆ ಹೊಂದಲು ಕಾರಣವಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಯಾದಗಿರಿಯಲ್ಲಿ 70ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಅವರು,  ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕೂಡ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಆಸೀಫ್ ಝಾ-7 ಹೈಕ ಭಾಗವನ್ನು ಭಾರತ ಭೂಪ್ರದೇಶಕ್ಕೆ ಸೇರಿಸಲು ಒಪ್ಪಿರಲಿಲ್ಲ. ಪಟೇಲರು ತೆಗೆದುಕೊಂಡ ದಿಟ್ಟ […]

ಹಳೆಯ ವೈಷಮ್ಯ ಮಾರಕಾಸ್ತ್ರಗಳಿಂದ ಹಲ್ಲೆ: ಒಬ್ಬ ಸಾವು, ನಾಲ್ವರಿಗೆ ಗಾಯ

ಹಳೆಯ ವೈಷಮ್ಯ ಮಾರಕಾಸ್ತ್ರಗಳಿಂದ ಹಲ್ಲೆ: ಒಬ್ಬ ಸಾವು, ನಾಲ್ವರಿಗೆ ಗಾಯ

ಯಾದಗಿರಿ: ಹಳೆಯ ವೈಷಮ್ಯದಿಂದ  ಒಂದು ಗುಂಪಿನ ಮೇಲೆ ಮತ್ತೊಂದು ಗುಂಪಿನವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಓರ್ವನ ಒಬ್ಬರ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾದ ಘಟನೆ ಯಾದಗಿರಿ ತಾಲೂಕಿನ ಅರಕೇರಾ ( ಬಿ ) ಗ್ರಾಮದಲ್ಲಿ ಗುರುವಾರ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಲ್ಲಪ್ಪ ಸಾಬಣ್ಣ ಉಂಬರಿಗಿ ( 32) ಎಂದು ಗುರುತಿಸಲಾಗಿದೆ. ಕೊಲೆಯಾದ ಮಲ್ಲಪ್ಪ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಆತನ ವಿರೋಧಿ ಗುಂಪು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ನಾಲ್ವರನ್ನು ಪೊಲೀಸರು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ […]

ನಿರ್ವಹಣೆ ಕೊರತೆ ಪಾಳು ಬಿದ್ದ ವಾಲ್ಮೀಕಿ ಭವನ: ಸಮಾಜದ ಮುಖಂಡರ ಆಕ್ರೋಶ

ನಿರ್ವಹಣೆ ಕೊರತೆ ಪಾಳು ಬಿದ್ದ ವಾಲ್ಮೀಕಿ ಭವನ: ಸಮಾಜದ ಮುಖಂಡರ ಆಕ್ರೋಶ

ಯಾದಗಿರಿ: ಯಾದಗಿರಿ ನಗರದಲ್ಲಿ ಸುಮಾರು ಒಂದು ಕೋಟಿ ರೂ.  ವೆಚ್ಚದಲ್ಲಿ ಕಟ್ಟಲಾದ ವಾಲ್ಮೀಕಿ ಭವನ ನಿರ್ವಹಣೆ ಕೊರತೆಯಿಂದಾಗಿ ಪಾಳುಬಿದ್ದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಕಿಟಕಿ ಗಾಜುಗಳು ಪುಡಿಯಾಗಿದ್ದರೆ, ಇಡೀ ಕಟ್ಟಡದ ಸುತ್ತಮುತ್ತಲಿನ ಪರಿಸರ ಕಳೆಯಿಂದ ತುಂಬಿಹೋಗಿ, ಹಾವು ಚೇಳುಗಳ ವಾಸಿಸುವ ತಾಣವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ನಿರ್ಮಿಸಲಾಗಿರುವ ಕಟ್ಟಡದ ಶಂಕುಸ್ಥಾಪನೆಯನ್ನು ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದರೆ, ಸಿಎಂ ಸಿದ್ದರಾಮಯ್ಯ ಫೆಬ್ರವರಿ 4 ರಂದು ಉದ್ಘಾಟನೆ ಮಾಡಿದ್ದರು. ಕಟ್ಟಡ ನಿರ್ಮಾಣ ಮುಖ್ಯವಲ್ಲ ಆದರೆ ಸರಿಯಾದ ನಿರ್ವಹಣೆ ಮುಖ್ಯ. […]