ಪಾಂಡವಪುರ: ಬುದ್ಧಿಮಾಂಧ್ಯ ವ್ಯಕ್ತಿ ನಾಪತ್ತೆ

ಪಾಂಡವಪುರ: ಬುದ್ಧಿಮಾಂಧ್ಯ ವ್ಯಕ್ತಿ ನಾಪತ್ತೆ

ಪಾಂಡವಪುರ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದಿಂದ ನಾಪತ್ತೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲೋಕೇಶಾಚಾರಿ (45) ನಾಪತ್ತೆಯಾದ ವ್ಯಕ್ತಿಯಾಗಿದ್ದು, ಕಳೆದ ನವೆಂಬರ್ ತಿಂಗಳ 19 ರಂದು ಇವರು ಕಣಿವೆ ಕೊಪ್ಪಲು ಗ್ರಾಮದ ತಮ್ಮ ಮನೆಯಿಂದ ಕಾಣೆಯಾಗಿರುತ್ತಾರೆ. ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣದ ಚಹರೆಯುಳ್ಳ ಕಪ್ಪು, ಬಿಳೆ ಕೂದಲಿನ ವ್ಯಕ್ತಿ ಕಂಡು ಬಂದರೆ ಸಮೀಪದ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪಾಂಡವಪುರ ಪೊಲೀಸರು ಕೋರಿದ್ದಾರೆ. udayanadu2016

ಮಸೀದಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ

ಮಸೀದಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ  ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ

ಪಾಂಡವಪುರ: ಪಟ್ಟಣದ ಮಸ್ಜೀದೆ ಆಲಾ ಅಹಲೆ ಸುನ್ನತುಲ್ ಜಮಾತ್ ಮಸೀದಿಯ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಿ.ಎಸ್.ಪುಟ್ಟರಾಜು ಸೋಮವಾರ ಚಾಲನೆ ನೀಡಿದರು. ಬೆಳಿಗ್ಗೆ ಸುಮಾರು 9.30ಕ್ಕೆ ಮಸೀದಿಗೆ ಆಗಮಿಸಿದ ಸಚಿವರನ್ನು ಮಸೀದಿಯ ಆಡಳಿತ ಮಂಡಳಿಯವರು ಸಚಿವರನ್ನು ಗೌರವಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಮಸೀದಿಯ ಧರ್ಮಗುರು ಸಲ್ಮಾನ್ ರಜಾ ಅವರ ಮಂತ್ರ ಪಠಣದ ನಡುವೆ ಸಚಿವ ಪುಟ್ಟರಾಜು ಭೂಮಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಮಸೀದಿ ಆಡಳಿತ […]

ಬೌದ್ಧದಮ್ಮ ರಥಯಾತ್ರೆ ಸ್ವಾಗತಕ್ಕೆ ಭರದ ಸಿದ್ಧತೆ

ಬೌದ್ಧದಮ್ಮ ರಥಯಾತ್ರೆ ಸ್ವಾಗತಕ್ಕೆ ಭರದ ಸಿದ್ಧತೆ

ಪಾಂಡವಪುರ : ಡಿ.4 ರಂದು ಕೆ.ಆರ್.ಪೇಟೆ ತಾಲ್ಲೂಕಿನ ಮೂಲಕ ಪಾಂಡವಪುರ ತಾಲ್ಲೂಕಿಗೆ ಪ್ರವೇಶಿಸಲಿರುವ ಬೌದ್ಧದಮ್ಮ ರಥಯಾತ್ರೆ ಸ್ವಾಗತಕ್ಕೆ ಅದ್ಧೂರಿ ಸಿದ್ದತೆ ನಡೆಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧದಮ್ಮ ರಥಯಾತ್ರೆ ಸ್ವಾಗತ ಸಮಿತಿಯ ತಾಳಶಾಸನ ಮೋಹನ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ನೇ ಅಕ್ಟೋಬರ್ 1956 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧರ್ಮ ಸ್ವೀಕರಿಸಿದ ದಿನದ ನೆನಪಿಗಾಗಿ ಈ ರಥಯಾತ್ರೆ ಕಾರ್ಯಕ್ರಮ ಹಮ್ಮಿಮೊಂಡಿರುವುದಾಗಿ ಹೇಳಿದರು. ಕರುಣೆ, ಪ್ರೀತಿ, […]

ಮಂಡ್ಯದಲ್ಲಿ ನಿನ್ನೆ ನಡೆದ ಸ್ಪೋಟಕ್ಕೂ ಗಣಿಗಾರಿಕೆಗೂ ಸಂಬಂಧವಿಲ್ಲ: ನಟರಾಜ್

ಮಂಡ್ಯದಲ್ಲಿ ನಿನ್ನೆ ನಡೆದ ಸ್ಪೋಟಕ್ಕೂ ಗಣಿಗಾರಿಕೆಗೂ ಸಂಬಂಧವಿಲ್ಲ: ನಟರಾಜ್

ಪಾಂಡವಪುರ: ಮಂಡ್ಯ ಜಿಲ್ಲಾದ್ಯಂತ ನಿನ್ನೆ ಮಧ್ಯಾಹ್ನ ಕೇಳಿ ಬಂದ ಭಾರಿ ಶಬ್ದಕ್ಕೂ ಮತ್ತು ಕಲ್ಲು ಗಣಿಗಾರಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ತಾಲೂಕು ಕ್ರಶರ್ ಮಾಲೀಕರ ಸಂಘದ ಉಪಾಧ್ಯಕ್ಷ ನಟರಾಜು ಸ್ಪಷ್ಟಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಮಧ್ಯಾಹ್ನ ಸುಮಾರು 3.40ಕ್ಕೆ ಜಿಲ್ಲಾದ್ಯಂತ ಭಾರಿ ಸದ್ದು ಕೇಳಿ ಬಂದ ವಿಚಾರವಾಗಿ ಮಾಧ್ಯಮಗಳಲ್ಲಿ ಭೂಕಂಪ ಅಥವಾ ಗಣಿಗಾರಿಕೆ ಸ್ಪೋಟದಿಂದ ಭಾರಿ ಶಬ್ದ ಬಂದಿದೆ ಎಂದು ವರದಿ ಮಾಡಲಾಗಿದೆ. ಆದರೆ, ಕಳೆದ ಸೆ.25 […]

ಯುವಜನತೆ ದಿಶಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ನಜೀರ್ ಅಹಮದ್

ಯುವಜನತೆ ದಿಶಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ನಜೀರ್ ಅಹಮದ್

ಪಾಂಡವಪುರ:ರಾಜ್ಯಸರಕಾರ ದಿಶಾ ಯೋಜನೆಯ ಮೂಲಕ  ಉದ್ಯೋಗ ಹೆಚ್ಚಿಸಲು ಕೌಶಲ್ಯ ಮತ್ತು ಪರಿಣತಿ ತರಬೇತಿ ನೀಡುತ್ತಿದ್ದು ಯುವಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದು ಮೋಮಿನ್ ಫೌಂಡೇಷನ್ ಕಾರ್ಯದರ್ಶಿ ನಜೀರ್ ಅಹಮದ್ ಹೇಳಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ವಾಭಿಮಾನಿ ಮಹಿಳೆಯರ ಸಹಕಾರ ಸಂಘ, ಮೋಮಿನ್ ಫೌಂಡೇಷನ್ ಸಹಯೋಗದೊಂದಿಗೆ ಸಿಡಾಕ್ ಸಂಸ್ಥೆ ಏರ್ಪಡಿಸಿದ್ದ “ದಿಶಾ” ಉದ್ಯಮಿ ಮಾರ್ಗದರ್ಶನ ಔಟ್‍ರಿಚ್ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. ಸರಕಾರ ವಿವಿಧ ಯೋಜನೆಗಳಲ್ಲಿ ಸಾಲ, ತರಬೇತಿ ಮತ್ತಿತರ ಸಹಾಯ ಪಡೆಯಲು ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬಹುದು  ಮತ್ತು ಉದ್ಯೋಗಿಗಳನ್ನು ಹೆಚ್ಚಿಸಲು ಬೇಕಾದ ಕೌಶಲ್ಯ […]

ತೇಲುವ ವೇದಿಕೆ ಮೇಲೆ ತೊಣ್ಣೂರು ಉತ್ಸವ : ಸಚಿವ ಪುಟ್ಟರಾಜು

ತೇಲುವ ವೇದಿಕೆ ಮೇಲೆ ತೊಣ್ಣೂರು ಉತ್ಸವ : ಸಚಿವ ಪುಟ್ಟರಾಜು

ಪಾಂಡವಪುರ: ತಾಲೂಕಿನ ಐತಿಹಾಸಿಕ ತೊಣ್ಣೂರು ಕೆರೆಯ ಮೇಲೆ ಇದೇ ಮೊದಲ ಬಾರಿಗೆ ನಿರ್ಮಿಸಿರುವ ಬೃಹತ್ ತೇಲುವ ವೇದಿಕೆಯ ಮೇಲೆ ತೊಣ್ಣೂರು ಉತ್ಸವದ ಸಾಂಸ್ಕೃಕ ಕಾರ್ಯಕ್ರಮ ನಡೆಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ತೊಣ್ಣೂರು ಗ್ರಾಮದ ಕೆರೆಯ ಬಳಿ ಬುಧವಾರ  ನಡೆದ ಐತಿಹಾಸಿಕ ತೊಣ್ಣೂರು ಕೆರೆ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತೊಣ್ಣೂರು ಕೆರೆ ಈ ಭಾಗದ ರೈತರ ಜೀವನಾಡಿಯಾಗಿದೆ.  ಪ್ರತಿ ವರ್ಷ ತುಂಬಿದ […]

ಸಹಕಾರಿ ಕ್ಷೇತ್ರ ಬಲವರ್ಧನೆಗೆ ಸರಕಾರ ಬದ್ಧ: ಸಚಿವ ಸಿ.ಎಸ್.ಪುಟ್ಟರಾಜು

ಸಹಕಾರಿ ಕ್ಷೇತ್ರ ಬಲವರ್ಧನೆಗೆ ಸರಕಾರ ಬದ್ಧ: ಸಚಿವ ಸಿ.ಎಸ್.ಪುಟ್ಟರಾಜು

ಪಾಂಡವಪುರ: ದೋಸ್ತಿ ಸರಕಾರ ರೈತಪರವಾಗಿದ್ದು, ರೈತರ ಅಗತ್ಯಗಳನ್ನು ಪೂರೈಸಲು ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿನನಿತ್ಯ ಶ್ರಮಿಸುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಟಿಎಪಿಸಿಎಂಎಸ್ ಮತ್ತು ತಾಲ್ಲೂಕಿನ ಎಲ್ಲ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ […]

ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಇಂಜಿನೀಯರ್ ನಟರಾಜ್

ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಇಂಜಿನೀಯರ್ ನಟರಾಜ್

• ನಕಲಿ ಹೋರಾಟಗಾರರಿಂದ ಗಣಿ ಕಾರ್ಮಿಕರು ಸಂಕಷ್ಟಕ್ಕೆ ಪಾಂಡವಪುರ : ತಾಲೂಕಿನ ಬೇಬಿ ಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ರೈತರ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಯಾವುದೇ ರೀತಿಯ ಅಪಾಯವಿಲ್ಲದಿದ್ದರೂ ಗಣಿಗಾರಿಕೆ ವಿರುದ್ಧ ನಕಲಿ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆಗಳಿಂದ ಗಣಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ತಾಲೂಕು ಕ್ರಶರ್ ಮಾಲೀಕರ ಸಂಘದ ಉಪಾಧ್ಯಕ್ಷ, ಇಂಜಿನೀಯರ್ ನಟರಾಜ್ ಹೇಳಿದರು. ತಾಲೂಕಿನ ಬೇಬಿ ಬೆಟ್ಟದ ಬಳಿಯ ರಾಮಯೋಗೀಶ್ವರ ಮಠದ ಆವರಣದಲ್ಲಿ ಸೋಮವಾರ ನಡೆದ ಕ್ರಶರ್ ಮಾಲೀಕರು, ಕಲ್ಲು ಕ್ವಾರಿ […]

ಟಿಪ್ಪು  ಕಾಲದಲ್ಲಿ ಕನ್ನಡಿಗರ ಬದುಕು ಗೌರವಯುತವಾಗಿತ್ತು:ಪತ್ರಕರ್ತ ಬಿಳಿದಾಳೆ ಪಾರ್ವತೀಶ್

ಟಿಪ್ಪು  ಕಾಲದಲ್ಲಿ ಕನ್ನಡಿಗರ ಬದುಕು ಗೌರವಯುತವಾಗಿತ್ತು:ಪತ್ರಕರ್ತ ಬಿಳಿದಾಳೆ ಪಾರ್ವತೀಶ್

ಪಾಂಡವಪುರ : ಕರ್ನಾಟಕದ ಹೆಮ್ಮೆಯ ಕಲಿ, ಧೀರೋತ್ತಾರ ಪುರುಷ ಮೈಸೂರು ಹುಲಿ ಬಿರುದಾಂಕಿತ ಟಿಪ್ಪು  ಸುಲ್ತಾನ್ ಕಾಲದಲ್ಲಿ ಕನ್ನಡಿಗರ ಬದುಕು ಘನತೆ ಮತ್ತು ಗೌರವದಿಂದ ಕೂಡಿತ್ತು ಎಂದು ಪತ್ರಕರ್ತ ಬಿಳಿದಾಳೆ ಪಾರ್ವತೀಶ್ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಟಿಪ್ಪು ಆಡಳಿತದಲ್ಲಿ ಮೈಸೂರು ರಾಜ್ಯ ಕೈಗಾರಿಕ ಕ್ರಾಂತಿ ನಡೆಸಿತ್ತು, ದೇಶ ವಿದೇಶಗಳಿಗೆ ಇಲ್ಲಿನ ಸಕ್ಕರೆ, ರೇಷ್ಮೆ ಬಟ್ಟೆ, ಉಕ್ಕು ಸೇರಿದಂತೆ ವಿವಿಧ ಉತ್ಪನ್ನಗಳು ರಫ್ತಾಗುತ್ತಿದ್ದವು, […]

ಶೈಕ್ಷಣಿಕ ಕೇಂದ್ರವಾಗಿ ಮೂಡಲಕೊಪ್ಪಲು ಗ್ರಾಮ : ಸಚಿವ ಪುಟ್ಟರಾಜು

ಶೈಕ್ಷಣಿಕ ಕೇಂದ್ರವಾಗಿ ಮೂಡಲಕೊಪ್ಪಲು ಗ್ರಾಮ : ಸಚಿವ ಪುಟ್ಟರಾಜು

ಪಾಂಡವಪುರ: ಗ್ರಾಮೀಣ ಪ್ರದೇಶದ ರೈತರ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮೂಡಲಕೊಪ್ಪಲು ಗ್ರಾಮವನ್ನು ಈ ಭಾಗದ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುವುದಾಗಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ತಾಲೂಕಿನ ಮೂಡಲಕೊಪ್ಪಲು ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು,  ಮೂಡಲಕೊಪ್ಪಲು ಗ್ರಾಮದ ಸುತ್ತಲೂ ಸುಮಾರು ಹತ್ತು ಗ್ರಾಮಗಳ ರೈತರ ಮಕ್ಕಳು ಶಿಕ್ಷಣ ಪಡೆಯಲು ದೂರ ಪ್ರಯಾಣ ಮಾಡಬೇಕಿತ್ತು.  ಇದರಿಂದ ಹಲವಾರು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. […]

1 2 3 22