ಬೇಲೂರು: ಮಣ್ಣು, ಸಿಮೆಂಟ್‍ ಮಿಶ್ರಿತ ಅನ್ನಭಾಗ್ಯ ಅಕ್ಕಿ ವಿತರಣೆ

ಬೇಲೂರು: ಮಣ್ಣು, ಸಿಮೆಂಟ್‍ ಮಿಶ್ರಿತ ಅನ್ನಭಾಗ್ಯ ಅಕ್ಕಿ ವಿತರಣೆ

ಬೇಲೂರು:  ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಲ್ಲಿ ಸಿಮೆಂಟ್, ಕಲ್ಲುಗಳು ಹಾಗೂ ಗೊಬ್ಬರ ಮಿಶ್ರಿತ ಅಕ್ಕಿಯನ್ನು ವಿತರಿಸುತ್ತಿರುವ ಘಟನೆ ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ. ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗೆರೆ ಗ್ರಾಮದ ನ್ಯಾಯಾಬೆಲೆ ಅಂಗಡಿಯಲ್ಲಿ ಈ  ‍ಘಟನೆ ನಡೆದಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕನಿಗೆ  ಗ್ರಾಮಸ್ಥರು ಮಣ್ಣು ಮಿಶ್ರಿತ  ಅಕ್ಕಿಯನ್ನು ವಾಪಸ್‍ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿ ಮಾಲೀಕ ಅಕ್ಕಿ ವಾಪಸ್‍ ತೆಗೆದುಕೊಳ್ಳದೇ  ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ […]

ಹಾಸನ: ಅಪಘಾತದಲ್ಲಿ ಸಹೋದರ ಸಾವು, ಮನನೊಂದು ವಿಕಲಚೇತನ ಅಣ್ಣ ಆತ್ಮಹತ್ಯೆ

ಹಾಸನ: ಅಪಘಾತದಲ್ಲಿ ಸಹೋದರ ಸಾವು, ಮನನೊಂದು ವಿಕಲಚೇತನ ಅಣ್ಣ ಆತ್ಮಹತ್ಯೆ

ಹಾಸನ: ರಸ್ತೆ ಅಪಘಾತದಲ್ಲಿ ತಮ್ಮ ಸಾವನ್ನಪ್ಪಿದ ಕಾರಣ ಮನನೊಂದು ವಿಕಲಚೇತನ ಅಣ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೇಲೂರ ತಾಲೂಕಿನ ಬಂಟೇನಹಳ್ಳಿಯಲ್ಲಿ ನಡೆದಿದೆ. ಜುಲೈ 3 ರಂದು ತಮ್ಮ ಚಂದ್ರು(21) ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದರು,  ಸೋದರನ ಅಗಲಿಕೆಯಿಂದ ಮನನೊಂದ ಅಣ್ಣ ಮಂಜುನಾಥ್(23) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಕಲಾಂಗರಾಗಿದ್ದ ಮಂಜುನಾಥ್ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. Views: 337

ಬ್ಯಾಂಕ್ ನೋಟಿಸ್‍ಗೆ ಹೆದರಿ ರೈತ ನೇಣಿಗೆ ಶರಣು

  ಅರಸೀಕೆರೆ: ಬ್ಯಾಂಕ್ ನೋಟಿಸ್‍ಗೆ ಹೆದರಿ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ  ಕಣಕಟ್ಟೆ ಹೋಬಳಿಯ ಡಿ.ಎಂ ಕುರ್ಕೆ ಗ್ರಾಮದಲ್ಲಿ ನಡೆದಿದೆ. ಶಶಿಕುಮಾರ್‍( 30) ಮೃತ ದುರ್ದೈವಿ. ಆಕ್ಸಿಸ್‍ ಬ್ಯಾಂಕ್‍ನಲ್ಲಿ 3 ಲಕ್ಷ ರೂ. ಸಾಲ ಪಡೆದಿದ್ದ.  ಬ್ಯಾಂಕ್ ಸಾಲ ಮರು ಪಾವತಿಸುವಂತೆ ನೋಟಿಸ್ ಬಂದಿತ್ತು. ಇದರಿಂದ ಮನನೊಂದು  ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 302

ಕೃಷ್ಣಪುರ ಗ್ರಾಮದಲ್ಲಿ ಆಸ್ತಿ ಜಗಳಕ್ಕೆ ಬೇಸತ್ತು ವೃದ್ಧ ದಂಪತಿ ಆತ್ಮಹತ್ಯೆ ಯತ್ನ

ಕೃಷ್ಣಪುರ ಗ್ರಾಮದಲ್ಲಿ  ಆಸ್ತಿ ಜಗಳಕ್ಕೆ ಬೇಸತ್ತು ವೃದ್ಧ ದಂಪತಿ ಆತ್ಮಹತ್ಯೆ ಯತ್ನ

ಹಾಸನ: ನಾಲ್ಕು ಎಕರೆ ಜಮೀನಿಗೆ ಸಂಬಂಧಿಸಿ ಕುಟುಂಬದಲ್ಲಿ ಇದ್ದ ಜಗಳಕ್ಕೆ ಬೇಸತ್ತು  ಹಾಸನದ ಬೇಲೂರು ತಾಲೂಕಿನ ಕೃಷ್ಣಪುರ ಗ್ರಾಮದಲ್ಲಿ ಇಬ್ಬರು ವೃದ್ಧ ದಂಪತಿ ಮಂಗಳವಾರ ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೌರಮ್ಮ (53) ಹಾಗೂ ಅನಂತರಾಮು (65) ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಸೊಸೆ ಪ್ರೀತಿ (29) ಯೊಂದಿಗೆ ನಾಲ್ಕು  ಎಕರೆ ಜಮೀನಿನ ವಿಚಾರಕ್ಕೆ ಪದೇ ಪದೆ ಜಗಳವಾಗುತ್ತಿತ್ತು.  ಆಸ್ತಿ ವಿಚಾರವಾಗಿ ಸೋಮವಾರ ರಾತ್ರಿಯೂ ಜಗಳವಾಗಿದೆ. ಜಗಳದಲ್ಲಿ ವಯೋವೃದ್ಧ ದಂಪತಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು ಎಂದು ಗೊತ್ತಾಗಿದೆ. ಬೇಸತ್ತ ದಂಪತಿ […]

ಲಂಚ ಭ್ರಷ್ಟ ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ: 80ರ ವೃದ್ದ ಪ್ರತಿಭಟನೆ

ಲಂಚ ಭ್ರಷ್ಟ ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ: 80ರ ವೃದ್ದ ಪ್ರತಿಭಟನೆ

ಚನ್ನರಾಯಪಟ್ಟಣ: ಪುರಸಭೆಯ ಲಂಚ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಗೊಳಿಸುವಂತೆ ಆಗ್ರಹಿಸಿ  80 ವರ್ಷದ ವೃದ್ದ ಸೋಮವಾರ ಮಿನಿ ವಿಧಾನ ಸೌಧದ  ಎದುರು ಅನಿರ್ದಿಷ್ಟ  ಧರಣಿ ಸತ್ಯಾಗೃಹ ನಡೆಸುತ್ತಿದ್ದಾರೆ. ಪುರಸಭೆಯ ಅಧಿಕಾರಿಗಳಾದ ಮುಖ್ಯಾಧಿಕಾರಿ ಬಿ. ಬಸವರಾಜ, ಕಂದಾಯ ನೀರಿಕ್ಷಕ  ಶಿವಾನಂದಪ್ಪ, ಕೇಸ್ ವರ್ಕರ್ ರಾಜೇಶ್  ಇವರು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡಲು ಲಚ ಪಡೆಯುತ್ತಿದ್ದು, ಕೂಡಲೇ ಇವರನ್ನು ಅಮಾನತ್ತು ಮಾಡುವಂತೆ ಶಿವನಂಜಪ್ಪ(80) ವೃದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.   Views: 320