ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ 6 ಜನರ ಬಂಧನ: 5 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ 6 ಜನರ ಬಂಧನ: 5 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಕೊಡಗು:  ಇಲ್ಲಿನ ಸಂತೆ ಮಾಳದ ಹೊರವಲದದಲ್ಲಿ ಅಕ್ರಮವಾಗಿ ಗಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಒಂದು ಮಾರತಿ  ಕಾರನ್ನು ವಶಪಡಿಸಿಕೊಂಡಿದ್ದಾರೆ. ಹುಣಸೂರಿನ ನಿವಾಸಿ ಹೆಚ್.ಎಸ್.ಇಸ್ಮಾಯಿಲ್ ಶರೀಫ್(34), ಶಿವಜ್ಯೋತಿ ನಗರದ  ಕೆ.ಮಹೇಶ್(30), ಕೊಯಂಬತ್ತೂರು ಕಾಲೋನಿಯ ಕೆ. ರಾಜೇಗೌಡ(61), ಭೀಮನಹಳ್ಳಿ ಗ್ರಾಮದ ಸೋಮೇಶ್(20), ಸುಂಟಿಕೊಪ್ಪದ ಇ.ಇರ್ಫಾನ್(27), ಪಿರಿಯಾಪಟ್ಟಣದ ಹಾರ್ನಳ್ಳಿ ಗ್ರಾಮದ ಎನ್.ನಾಸೀರ್ ಶರೀಫ್(23) ಬಂಧಿತರು. ಇವರು ಆಂಧ್ರಪ್ರದೇಶದಿಂದ 2 ಕೆಜಿಯ 7 ಪ್ಯಾಕೇಟ್  ಗಾಂಜಾ ತೆರೆಸಿಕೊಂಡು […]

ಮಡಿಕೇರಿ ಅರಣ್ಯ ಇಲಾಖೆ ಭವನದಲ್ಲೇ ನೌಕರ ನೇಣಿಗೆ ಶರಣು

ಮಡಿಕೇರಿ: ಇಲ್ಲಿಯ ಅರಣ್ಯ ಭವನದಲ್ಲಿಯೇ ಅರಣ್ಯ ಇಲಾಖೆ ನೌಕರನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಮಂಜು(50) ಮೃತ ನೌಕರ. ಅರಣ್ಯ ಇಲಾಖೆ  ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಹೋದ್ಯೋಗಿ ವಾಸು ಮತ್ತು ನಂದಾ ಎಂಬುವರೊಂದಿಗೆ ಅರಣ್ಯ ಭವನದ ಕೊಠಡಿಯಲ್ಲಿ ಮಲಗಿದ್ದ. ನಸುಕಿನಲ್ಲಿ ನಂದ, ತನ್ನ ಮನೆಗೆ ತೆರಳಿದ್ದು, ವಾಸು ಅರಣ್ಯ ಭವನದ ಆವರಣದಲ್ಲಿದ್ದ ಮೋಟಾರ್ ಚಾಲನೆ ಮಾಡಲೆಂದು ತೆರಳಿದ್ದ. ಈ ಸಮಯದಲ್ಲಿ ಮಂಜು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಡಿಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ […]