ಶೈಕ್ಷಣಿಕ ಕೇಂದ್ರವಾಗಿ ಮೂಡಲಕೊಪ್ಪಲು ಗ್ರಾಮ : ಸಚಿವ ಪುಟ್ಟರಾಜು

ಶೈಕ್ಷಣಿಕ ಕೇಂದ್ರವಾಗಿ ಮೂಡಲಕೊಪ್ಪಲು ಗ್ರಾಮ : ಸಚಿವ ಪುಟ್ಟರಾಜು

ಪಾಂಡವಪುರ: ಗ್ರಾಮೀಣ ಪ್ರದೇಶದ ರೈತರ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮೂಡಲಕೊಪ್ಪಲು ಗ್ರಾಮವನ್ನು ಈ ಭಾಗದ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುವುದಾಗಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ತಾಲೂಕಿನ ಮೂಡಲಕೊಪ್ಪಲು ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು,  ಮೂಡಲಕೊಪ್ಪಲು ಗ್ರಾಮದ ಸುತ್ತಲೂ ಸುಮಾರು ಹತ್ತು ಗ್ರಾಮಗಳ ರೈತರ ಮಕ್ಕಳು ಶಿಕ್ಷಣ ಪಡೆಯಲು ದೂರ ಪ್ರಯಾಣ ಮಾಡಬೇಕಿತ್ತು.  ಇದರಿಂದ ಹಲವಾರು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. […]

ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಜೆಡಿಎಸ್ ಮುಖಂಡರು

ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಜೆಡಿಎಸ್ ಮುಖಂಡರು

ಪಾಂಡವಪುರ : ಪುರಸಭೆಗೆ ನಡೆದ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಪುರಸಭೆ ವ್ಯಾಪ್ತಿಯ ಮತದಾರರು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಇ.ಧರ್ಮರಾಜು ನೇತೃತ್ವದಲ್ಲಿ ನೂತನ ಸದಸ್ಯರು ಹಾಗೂ ಇತರೆ ಮುಖಂಡರು ಕೃತಜ್ಞತೆ ಸಲ್ಲಿಸಿದರು. ಪಟ್ಟಣದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಇ.ಧರ್ಮರಾಜು ಮಾತನಾಡಿ, ಪಾಂಡವಪುರ ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆ ವ್ಯಾಪ್ತಿಯ ಮತದಾರರು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವುದರ […]

ಪಾಂಡವಪುರ ಪುರಸಭೆಯಲ್ಲಿ ಜೆಡಿಎಸ್ ಜಯಭೇರಿ

ಪಾಂಡವಪುರ ಪುರಸಭೆಯಲ್ಲಿ ಜೆಡಿಎಸ್ ಜಯಭೇರಿ

ಪಾಂಡವಪುರ: ಆ.31 ರಂದು ಪಾಂಡವಪುರ ಪುರಸಭೆಯ 23 ವಾರ್ಡ್‍ಗಳಿಗೆ ನಡೆದಿದ್ದ ಚುನಾವಣೆಯ ಮತ ಏಣಿಕೆ ಕಾರ್ಯ ಇಂದು ಮುಗಿದಿದ್ದು, 18 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಜೆಡಿಎಸ್ ಜಯಭೇರಿ ಬಾರಿಸಿದೆ. ಒಟ್ಟು 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 18 ಸ್ಥಾನಗಳಿಸಿ ಜೆಡಿಎಸ್ ಅಧಿಕಾರ ಹಿಡಿದರೆ, ಉಳಿದ 5 ಸ್ಥಾನಗಳಲ್ಲಿ ಮೂರು ಕಾಂಗ್ರೆಸ್, ರೈತ ಸಂಘ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಗಳಿಸಿವೆ. ಪಾಂಡವಪುರ ಪುರಸಭೆಯ 23 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಮತ್ತು […]

ಕರ್ನಾಟಕ ಭೂ ಸೇನಾ ನಿಗಮದಿಂದ ಕಳಪೆ ಕಾಮಗಾರಿ : ಜೆಡಿಎಸ್ ಪ್ರತಿಭಟನೆ

ಪಾಂಡವಪುರ : ಕರ್ನಾಟಕ ಭೂ ಸೇನಾ ನಿಗಮ (ಲ್ಯಾಂಡ್ ಆರ್ಮಿ)ದಿಂದ ತಾಲ್ಲೂಕಿನಲ್ಲಿ ನಡೆದಿರುವ 10 ಕೋಟಿ ವೆಚ್ಚದ ಕಾಮಗಾರಿಗಳು ಅಪೂರ್ಣ ಮತ್ತು ಕಳಪೆಯಿಂದ ಕೂಡಿದ್ದು ಸಿಓಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಇಂದು ಕರ್ನಾಟಕ ಭೂ ಸೇನಾ ನಿಗಮ ಮತ್ತು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಭೂ ಸೇನಾ ನಿಗಮ ಕಚೇರಿ ಮುಂದೆ ಜಮಾಯಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು, ನಿಗಮದ ಅಧಿಕಾರಿಗಳು ಏಜೆಂಟರ ಮೂಲಕ ನಡೆಸಿದ ಕಾಮಗಾರಿಗಳಿಗೆ […]

ಕೆನ್ನಾಳು ನೂತನ ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗೆ ಸನ್ಮಾನ

ಕೆನ್ನಾಳು ನೂತನ ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗೆ ಸನ್ಮಾನ

ಪಾಂಡವಪುರ: ತಾಲೂಕಿನ ಜಯಂತಿನಗರ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಮುತುವರ್ಜಿ ವಹಿಸುವುದಾಗಿ ಕೆನ್ನಾಳು ಗ್ರಾಮ ಪಂಚಾಯಿತಿ  ನೂತನ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ತಿಳಿಸಿದರು. ಶುಕ್ರವಾರ ರಾತ್ರಿ ಜಯಂತಿನಗರ ಗ್ರಾಮದ ರಾಮಮಂದಿರದ ಆವರಣದಲ್ಲಿ ಗ್ರಾಮಸ್ಥರು ಮತ್ತು ಯುವಕರು ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ 30 ಲಕ್ಷ ಅನುದಾನ ಬರಲಿದೆ.  ಜತೆಗೆ ನರೇಗಾ ಮತ್ತು ಇನ್ನಿತರ ಯೋಜನೆ ಮೂಲಕ ಗ್ರಾಮದಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ನಡೆಸಲಾಗುವುದು ಜತೆಗೆ ಗ್ರಾಮಕ್ಕೆ ಶುದ್ಧ ಕುಡಿಯುವ […]

ಜೆ.ಕೆ.ಟೈರ್ಸ್ ಕಾರ್ಖಾನೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಜೆ.ಕೆ.ಟೈರ್ಸ್ ಕಾರ್ಖಾನೆಯಲ್ಲಿ ಬೃಹತ್ ರಕ್ತದಾನ ಶಿಬಿರ

ದಿ.ಹರಿಶಂಕರ್ ಸಿಂಘಾನೀಯ ಜನ್ಮ ದಿನ ಪ್ರಯುಕ್ತ ಮೈಸೂರು: ಜೆ.ಕೆ.ಸಮೂಹ ಸಂಸ್ಥೆಯ ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಅವರ 85ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ವ್ಯಾಪ್ತಿಯ ಸುಮಾರು 5 ಕಡೆ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಮೈಸೂರಿನ ಜೀವಧಾರ ಬ್ಲಡ್‍ಬ್ಯಾಂಕ್, ಲಯನ್ಸ್ ಬ್ಲಡ್‍ಬ್ಯಾಂಕ್, ಸ್ವಾಮಿ ವಿವೇಕಾನಂದ ಬ್ಲಡ್‍ಬ್ಯಾಂಕ್, ಜೀವ ರಕ್ಷಾ ಬ್ಲಡ್‍ಬ್ಯಾಂಕ್ ಸಹಯೋಗದಲ್ಲಿ ಬುದವಾರ ಮುಂಜಾನೆ 6 ಗಂಟೆಗೆ ಪ್ರಾರಂಭವಾದ ರಕ್ತದಾನ ಶಿಬಿರದಲ್ಲಿ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು, […]

ಚಿಕ್ಕಾಡೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ನಾಲ್ಕು ಮೇಕೆ ಕೊಂದು ಒಂದನ್ನು ಹೊತ್ತೊಯ್ದ ಚಿರತೆ

ಚಿಕ್ಕಾಡೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ:  ನಾಲ್ಕು ಮೇಕೆ ಕೊಂದು ಒಂದನ್ನು ಹೊತ್ತೊಯ್ದ ಚಿರತೆ

ಪಾಂಡವಪುರ : ಮನೆ ಮುಂದೆ ಕಟ್ಟಿಹಾಕಿದ್ದ ಮೇಕೆಗಳ ಮೇಲೆ ದಾಳಿ ಮಾಡಿದ ಚಿರತೆ ನಾಲ್ಕು ಮೇಕೆಗಳನ್ನು ಕೊಂದು ಒಂದನ್ನು ಹೊತ್ತೊಯ್ದ ಘಟನೆ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಚಿಕ್ಕಾಡೆ ಗ್ರಾಮದ ಹೊರವಲಯದಲ್ಲಿರುವ ಮಹೇಶ್ ಎಂಬುವರ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬದವರು ಭಯಭೀತರಾಗಿದ್ದಾರೆ. ಸೋಮವಾರ ರಾತ್ರಿ ಮಹೇಶ್ ಎಂದಿನಂತೆ ತಮ್ಮ ಮನೆಯ ಮುಂದೆ ಮೇಕೆಗಳನ್ನು ಕಟ್ಟಿ ಹಾಕಿದ್ದರು. ಊಟ ಮುಗಿಸಿ ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವುದಾಗಿತ್ತು. ಈ ವೇಳೆ ವಿದ್ಯುತ್ ಹೋದ ಕಾರಣ ಕತ್ತಲಾಗಿತ್ತು. […]

ಹಿರೋಡೆ ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ

ಹಿರೋಡೆ ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ

ಪಾಂಡವಪುರ : ಪಟ್ಟಣದ ಹಿರೋಡೆ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 40-45 ವರ್ಷ ವಯಸ್ಸಿನ ಈ ವ್ಯಕ್ತಿಯ ಶವ ಸಂಪೂರ್ಣ ಕೊಳೆತು ಹೋಗಿ ಕೆರೆಯಲ್ಲಿ ತೇಲುತ್ತಿತ್ತು. ಮಾಸಲು ಬಣ್ಣದ ನಿಕ್ಕರ್, ನೀಲಿ ಲುಂಗಿ ಮತ್ತು ಬಿಳಿ ಶರ್ಟ್ ಧರಿಸಿದ್ದ ಈ ವ್ಯಕ್ತಿ ಬಹಿರ್ದಸೆಯ ನಂತರ ನೀರಿಗಿಳಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಸತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. udayanadu2016

ತಾಳಶಾಸನದಲ್ಲಿ ದಲಿತ ಯುವಕನ ಮೇಲೆ ಹಲ್ಲೆ

ತಾಳಶಾಸನದಲ್ಲಿ ದಲಿತ ಯುವಕನ ಮೇಲೆ ಹಲ್ಲೆ

ಪಾಂಡವಪುರ : ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದನ್ನು ಪ್ರಶ್ನಿಸಿದ ದಲಿತ ಯುವಕನ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ತಾಳಶಾಸನ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಜವರಪ್ಪ ಎಂಬುವರ ಮಗ ಅಭಿಷೇಕ್ ಹಲ್ಲೆಗೊಳಗಾದ(21) ಯುವಕ. ಸೋಮವಾರ ಸಂಜೆ ಅಭಿಷೇಕ್ ತಮ್ಮ ಜಮೀನಿನ ಬಳಿ ಹೋಗಿದ್ದ ವೇಳೆ ಇದೇ ಗ್ರಾಮದ ಪ್ರಶಾಂತ ಮತ್ತು ಹರೀಶ ಎಂಬುವರು ಅಭಿಷೇಕ್ ಜಮೀನಿನಲ್ಲಿ ಅಕ್ರಮವಾಗಿ ಮರಳು ತೆಗೆದಿದ್ದರು. ಗ್ರಾಮದ ಹುಚ್ಚಮ್ಮನ ದೇವಾಲಯದ ಮುಂದೆ ಇದನ್ನು ಪ್ರಶ್ನಿಸಿದ ಅಭಿಷೇಕ್ ಮೇಲೆ […]

ದುಷ್ಕರ್ಮಿಗಳಿಂದ ತೋಟಕ್ಕೆ ಬೆಂಕಿ : ಲಕ್ಷಾಂತರ ರೂ. ನಷ್ಟ

ದುಷ್ಕರ್ಮಿಗಳಿಂದ ತೋಟಕ್ಕೆ ಬೆಂಕಿ : ಲಕ್ಷಾಂತರ ರೂ. ನಷ್ಟ

ಪಾಂಡವಪುರ: ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ ಬೆಲೆ ಬಾಳುವ ನೂರಾರು ಮರಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ತಾಲ್ಲೂಕಿನ ಚಿಕ್ಕಭೋಗನಹಳ್ಳಿ ಗ್ರಾಮದ ಬಳಿ ನಡೆದಿದೆ. ಚಿನಕುರಳಿ ಗ್ರಾಮದ ಪಿಳ್ಳಪ್ಪರ ಚಲುವೇಗೌಡ ಎಂಬುವರಿಗೆ ಸೇರಿದ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ತೋಟದಲ್ಲಿ 30 ವರ್ಷದ 40 ಮಾವಿನ ಮರಗಳು, 10 ವರ್ಷದ 700 ತೇಗದ ಮರ, 7ವರ್ಷದ 50 ಸಪೋಟ, 15ವರ್ಷದ 700 ಅಕೇಶಿಯಾ, 20 ತೆಂಗು, 500 ಸಿಲ್ವರ್ ಮತ್ತು 25 […]

1 2 3 16