ಕೆ.ಆರ್.ಪೇಟೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಕೆ.ಆರ್.ಪೇಟೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಕೆ.ಆರ್.ಪೇಟೆ:  ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದಲ್ಲಿ  ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಯುವಕನೊರ್ವ ಸಾವನ್ನಪ್ಪಿದ್ದಾನೆ.  ಗುಡ್ಡೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಅಂದಾನಿಗೌಡರ ಮಗ ದಿನೇಶ್(23) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಟಿ.ಮಂಜು ಮತ್ತು ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ  ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.  ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  Views: 196

ಪೌರ ಕಾರ್ಮಿಕರಿಗೆ ನೂತನ ಮನೆಗಳ ನಿರ್ಮಾಣದ ಭರವಸೆ

ಪೌರ ಕಾರ್ಮಿಕರಿಗೆ ನೂತನ ಮನೆಗಳ ನಿರ್ಮಾಣದ ಭರವಸೆ

ಪಾಂಡವಪುರಕ್ಕೆ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷರ ಭೇಟಿ, ಪರಿಶೀಲನೆ ಪಾಂಡವಪುರ : ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಶನಿವಾರ ಪಾಂಡವಪುರ ಪಟ್ಟಣದ ಪೌರ ಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಪರಿಶೀಲನೆ ನಡೆಸಿದರು. ಆಯೋಗದ ಅಧ್ಯಕ್ಷರು ಭೇಟಿ ಸಂದರ್ಭದಲ್ಲಿ ಸ್ಥಳದಲ್ಲೆ ಹಾಜರಿದ್ದ ಪೌರ ಕಾರ್ಮಿಕರು ಮತ್ತು ಮಹಿಳೆಯರು ತಮ್ಮ ಸಮಸ್ಯೆಗಳನ್ನು ಆಯೋಗದ ಅಧ್ಯಕ್ಷರ ಮುಂದೆ ತೋಡಿಕೊಂಡರು. ಪೌರಕಾರ್ಮಿಕರಿಗೆ ಪುರಸಭೆಯಲ್ಲಿ ಕಳೆದ ಮೂರು ತಿಳಗಳಿಂದ ವೇತನ ನೀಡಿಲ್ಲ, ಪುರಸಭೆಯವರು ಪೌರಕಾರ್ಮಿಕರಿಗೆ ವಾಸಿಸಲು […]

ಯುವಕರು ಕ್ರಿಕೇಟ್ ಬೆಟ್ಟಿಂಗ್‍ನಿಂದ ದೂರವಿರಿ: ಸಿ ಅಶೋಕ್

ಯುವಕರು ಕ್ರಿಕೇಟ್ ಬೆಟ್ಟಿಂಗ್‍ನಿಂದ ದೂರವಿರಿ: ಸಿ ಅಶೋಕ್

ಪಾಂಡವಪುರ: ಗ್ರಾಮೀಣ ಪ್ರದೇಶದ ಯುವಕರು ಕ್ರಿಕೆಟ್ ಬೆಟ್ಟಿಂಗ್‍ ನಂತಹ ಕೃತ್ಯಗಳಿಂದ  ದೂರವಿರಬೇಕು ಎಂದು ಜಿಪಂ ಸದಸ್ಯ ಸಿ.ಅಶೋಕ್ ಹೇಳಿದರು. ತಾಲೂಕಿನ ಹೊಸ ಸಾಯಪನಹಳ್ಳಿ ಗ್ರಾಮದಲ್ಲಿ ಮಾರಮ್ಮ ಹಬ್ಬದ ಪ್ರಯುಕ್ತ ಗ್ರಾಮದ ಸ್ಮೈಲ್ ಬಾಯ್ಸ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಯುವಕರು ಕ್ರಿಕೆಟ್ ಬೆಟ್ಟಿಂಗ್ ನಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡು ಜೀವನ ನಾಶಮಾಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್‍ನಿಂದ […]

ಪಾಂಡವಪುರದಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ : ಬಿ.ರೇವಣ್ಣ

ಪಾಂಡವಪುರದಲ್ಲಿ ರಾಜ್ಯಮಟ್ಟದ  ಉದ್ಯೋಗ ಮೇಳ  : ಬಿ.ರೇವಣ್ಣ

ಪಾಂಡವಪುರ: ತಾಲೂಕಿನಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕಾಗಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು  ನಡೆಸಲಾಗುವುದು ಎಂದು ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಹೇಳಿದರು. ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದಲ್ಲಿ ವಿವಿಧ  ಕ್ಷೇತ್ರದ ಸಾಧಕರಿಗೆ ಅಭಿನಂಧನೆ ಮತ್ತು ಬಿ.ರೇವಣ್ಣ ಅಭಿಮಾನಿಗಳ ಬಳಗದ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಕಷ್ಟು ವಿದ್ಯಾವಂತರು, ಪದವಿಧರರು ಉದ್ಯೋಗವಿಲ್ಲದೆ ನಿರೋದ್ಯೋಗ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ನಿತ್ಯ ವಿದ್ಯಾರ್ಥಿಗಳು, ಪೋಷಕರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮುಂದಿನ ಒಂದು ತಿಂಗಳೊಳಗೆ ತಾಲೂಕಿನಲ್ಲಿ ರಾಜ್ಯಮಟ್ಟದ […]

ಕೆ.ಆರ್. ಪೇಟೆ: 9 ನೇ ತರಗತಿ ವಿದ್ಯಾರ್ಥಿಯ ಬರ್ಭರ ಹತ್ಯೆ,

ಕೆ.ಆರ್. ಪೇಟೆ:  9 ನೇ ತರಗತಿ ವಿದ್ಯಾರ್ಥಿಯ ಬರ್ಭರ ಹತ್ಯೆ,

ಕೆ.ಆರ್.ಪೇಟೆ:  ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯ ಸರ್ಕಾರಿ ನೌಕರರ ಕಾಲೋನಿಯ ಬಳಿ ನಿರ್ಜನ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಯ ಬರ್ಭರ ಹತ್ಯೆ ಮಾಡಲಾಗಿದೆ.  ತೇಗನಹಳ್ಳಿಯ ಆಶೀರ್ವಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಶಾಂಕ್ ಕಗ್ಗೊಲೆಯಾದ ಬಾಲಕ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಸುಜಾತ ಅವರ ಪುತ್ರ. ಕೆ.ಆರ್. ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕೊಲೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ.  Views: 350

ಕೆ.ಆರ್.ಪೇಟೆ: ಸಾಲ ಬಾಧೆ ತಾಳಲಾರದೆ ರೈತ ನೇಣಿಗೆ ಶರಣು

ಕೆ.ಆರ್.ಪೇಟೆ: ಸಾಲ ಬಾಧೆ ತಾಳಲಾರದೆ ರೈತ ನೇಣಿಗೆ ಶರಣು

ಕೆ.ಆರ್. ಪೇಟೆ:  ಸಾಲದ ಬಾಧೆಯನ್ನು ತಾಳಲಾರದೇ ಕೆಆರ್.ಪೇಟೆ ತಾಲೂಕಿನ ಚಿಕ್ಕಸೋಮನಹಳ್ಳಿ ಗ್ರಾಮದ  ರೈತ  ತನ್ನ ಜಮೀನಿನ ಬಳಿ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.  ಈರೆಗೌಡ (50)   ಆತ್ಮಹತ್ಯೆ ಮಾಡಿಕೊಂಡ ರೈತ. ಕೇವಲ ಒಂದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಅಘಲಯ ಗ್ರಾಮದ ನಿಂಗೇಗೌಡರ ಮಗನಾದ ರೈತ ಈರೇಗೌಡರು ಅಘಲಯ ಗ್ರಾಮದ ವಿ.ಎಸ್.ಎಸ್.ಎನ್ ಬ್ಯಾಂಕಿನಲ್ಲಿ 2 ಲಕ್ಷ ರೂ. ಮತ್ತು ಮೈಸೂರು ಬ್ಯಾಂಕಿನಲ್ಲಿ 2 ಲಕ್ಷ ರೂ.  ಸಾಲ ಮಾಡಿದ್ದಾರೆ ಎನ್ನಲಾಗಿದೆ. […]

ಪಾಂಡವಪುರದಲ್ಲಿ ಬೃಹತ್ ಉದ್ಯೋಗ ಮೇಳ : ರೇವಣ್ಣ

ಪಾಂಡವಪುರದಲ್ಲಿ ಬೃಹತ್ ಉದ್ಯೋಗ ಮೇಳ : ರೇವಣ್ಣ

ಪಾಂಡವಪುರ : ತೀವ್ರ ಬರಗಾಲದಿಂದ ತತ್ತರಿಸಿರುವ ಪಾಂಡವಪುರ ತಾಲ್ಲೂಕಿನ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಶೀಘ್ರದಲ್ಲೆ ಪಾಂಡವಪುರದಲ್ಲಿ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 2000 ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಸಮಾಜ ಸೇವಕ ರೇವಣ್ಣ ಭರವಸೆ ನೀಡಿದರು. ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದ ಬಿ.ರೇವಣ್ಣ ಅಭಿಮಾನಿಗಳ ಸಂಘದ ಉದ್ಘಾಟನೆ ಮತ್ತು ಗ್ರಾಮದ ಮುಖಂಡರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಬರಗಾಲದಿಂದ […]

ಸಾರ್ವಜನಿಕ ರಸ್ತೆಗೆ ಬೇಲಿ: ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಮುತ್ತಿಗೆ

ಸಾರ್ವಜನಿಕ ರಸ್ತೆಗೆ ಬೇಲಿ: ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಮುತ್ತಿಗೆ

ಪಾಂಡವಪುರ: ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ವ್ಯಕ್ತಿಯೊಬ್ಬರು ಸಾರ್ವಜನಿಕ  ರಸ್ತೆಗೆ ಬೇಲಿಹಾಕಿರುವ ಹಿನ್ನಲೆ ಸಾರ್ವಜನಿಕರು ತಿರುಗಾಡಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಗ್ರಾಪಂ ಅಧಿಕಾರಿಗಳ ವಿರುದ್ದ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೊಳ್ಳೇಬೆಟ್ಟೇಗೌಡರ ಬೀದಿಗೆ ಬೆಟ್ಟಸ್ವಾಮಿ ಮತ್ತು ಜಯರಾಮು ಎಂಬುವರುಈ ಜಾಗ  ನಮಗೆ ಸೇರಿದ್ದು ಇಲ್ಲಿ ಓಡಾಡಲು ಸಾರ್ವಜನಿಕರಿಗೆ ದಾರಿ ಬಿಡುವುದಿಲ್ಲ ಎಂದು ರಸ್ತೆಗೆ ಬೇಲಿಹಾಕಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊದರೆಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳವಂತೆ ಗ್ರಾಪಂಗೆ […]

ಪಟ್ಟಣಗೆರೆ ಗ್ರಾಮದಲ್ಲಿ ಬುದ್ದ ವಿಹಾರ ಕೇಂದ್ರಕ್ಕೆ ಶಾಸಕ ಸತೀಶ ಚಾಲನೆ

ಪಟ್ಟಣಗೆರೆ ಗ್ರಾಮದಲ್ಲಿ ಬುದ್ದ ವಿಹಾರ ಕೇಂದ್ರಕ್ಕೆ ಶಾಸಕ ಸತೀಶ ಚಾಲನೆ

ಪಾಂಡವಪುರ: ಮನುಷ್ಯ  ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಬುದ್ಧ ವಿಹಾರ ಕೇಂದ್ರಗಳು ಅವಶ್ಯವಾಗಿವೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ತಾಲೂಕಿನ ಪಟ್ಟಣಗೆರೆ ಗ್ರಾಮದ ಹೊರವಲಯದಲ್ಲಿ ಮೈಸೂರಿನ ಗೌತಮ ಮಹಾಬೋಧಿ ಸೇವಾ ಟ್ರಸ್ಟ್ ವತಿಯಿಂದ ಶುಕ್ರವಾರ ನಡೆದ  ಬುದ್ಧ ವಿಹಾರ ಕೇಂದ್ರ ನಿರ್ಮಾಣಕ್ಕೆ  ಶಿಲಾನ್ಯಾಸ  ನೆರವೇರಿಸಿ ಮಾತನಾಡಿದರು. ಬುದ್ಧ ವಿಹಾರ ಕೇಂದ್ರವು ಭವಿಷ್ಯದಲ್ಲಿ ದೇಶದ ಗಮನ ಸೆಳೆಯಲಿದೆ, ಮನುಷ್ಯನು ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಬುದ್ದ ವಿಹಾರ ಕೇಂದ್ರಗಳು ಅವಶ್ಯವಾಗಿ ಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ […]

ಕಬಡ್ಡಿ ಲೀಗ್ ಪಂದ್ಯಾವಳಿ ತರಬೇತಿಗೆ ಚಾಲನೆ

ಕಬಡ್ಡಿ ಲೀಗ್ ಪಂದ್ಯಾವಳಿ ತರಬೇತಿಗೆ ಚಾಲನೆ

ಪಾಂಡವಪುರ : ಕ್ಯಾತನಹಳ್ಳಿ ಗ್ರಾಮದ ವಿವೇಕ ಮಂದಿರದಲ್ಲಿ ಸುಸಜ್ಜಿತ ರಬ್ಬರ್ ಮ್ಯಾಟ್ ಒಳಾಂಗಣ ಕ್ರೀಡಾಂಗಣದಲ್ಲಿ ಪಾಂಡವಪುರ ಗ್ರೀನ್ ಸ್ಟಾರ್  ಕಬಡ್ಡಿ ತಂಡದ ತರಬೇತಿ ಶಿಬಿರಕ್ಕೆ  ತಂಡದ ಮಾಲಿಕರೂ ಆದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ  ಮಂಗಳವಾರ ಚಾಲನೆ ನೀಡಿದರು. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗ್ರೀನ್ ಸ್ಟಾರ್ ಪಾಂಡವಪುರ ತಂಡದ ತರಬೇತಿ ಶಿಬಿರ ನಡೆಯಲಿದೆ. ಬಿಜಿಎಸ್ ಕಪ್ ಪ್ರಿಮಿಯರ್ ಕಬ್ಬಡಿ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಜಿಲ್ಲೆಯ ಫೆವರೇಟ್ ತಂಡವೆನಿಸಿದ ತಾಲೂಕಿನ ಕ್ರೀಡಾ ಗ್ರಾಮವೆಂದೇ ಪ್ರಸಿದ್ದಿ ಪಡೆದಿರುವ ಕ್ಯಾತನಹಳ್ಳಿ ಗ್ರಾಮದಲ್ಲಿ  ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ ಅವರು, […]

1 15 16 17