ಗೋದಾಮಿನಲ್ಲಿ ಅಂಗನವಾಡಿ ಆಹಾರ ಧಾನ್ಯ ಅಕ್ರಮ ಸಂಗ್ರಹ: ಎಸಿ ದಿಢೀರ್ ದಾಳಿ, ಪರಿಶೀಲನೆ

ಗೋದಾಮಿನಲ್ಲಿ  ಅಂಗನವಾಡಿ ಆಹಾರ ಧಾನ್ಯ ಅಕ್ರಮ ಸಂಗ್ರಹ: ಎಸಿ ದಿಢೀರ್ ದಾಳಿ, ಪರಿಶೀಲನೆ

ಪಾಂಡವಪುರ: ಅಕ್ರಮ ಆಹಾರ ಧಾನ್ಯಗಳ ಸಂಗ್ರಹದ ಆರೋಪದ ಮೇಲೆ ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕಿನ  ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವ ಎಂ.ಎಸ್.ಪಿ.ಸಿ. ಗೋದಾಮಿನ ಮೇಲೆ ಪಾಂಡವಪುರ ಉಪ ವಿಭಾಗಾಧಿಕಾರಿಗಳು ಸೋಮವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಪಟ್ಟಣದ ನಾಗಮಂಗಲ ಬೈಪಾಸ್ ರಸ್ತೆಯ ಹಿರೋಡೆ ಕೆರೆ ಬಳಿ ಮತ್ತು ಟಿಎಪಿಸಿಎಂಎಸ್ ರೈಸ್‍ಮಿಲ್ ಆವರಣದಲ್ಲಿ ಎಂ.ಎಸ್.ಪಿ.ಸಿ. ಯವರು ಬಾಡಿಗೆಗೆ ಪಡೆದಿರುವ ಗೋದಾಮಿನ ಮೇಲೆ ಸೋಮವಾರ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಆರ್.ಯಶೋದ ಅವರ […]

ಹರಳಹಳ್ಳಿಯಲ್ಲಿ ಪುಟ್ಟಣ್ಣಯ್ಯ ಸ್ಮರಣೆ, ನೂರಾರು ಸಸಿ ವಿತರಣೆ

ಹರಳಹಳ್ಳಿಯಲ್ಲಿ ಪುಟ್ಟಣ್ಣಯ್ಯ ಸ್ಮರಣೆ, ನೂರಾರು ಸಸಿ ವಿತರಣೆ

ಪಾಂಡವಪುರ: ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೂರಾರು ರೈತರಿಗೆ ಸಸಿ ವಿತರಣೆ ಮಾಡಲಾಯಿತು. `ತಿಥಿ ಬಿಡಿ, ಸಸಿ ನೆಡಿ’ ಧ್ವೇಯವಾಕ್ಯದೊಂದಿಗೆ ಹರಳಹಳ್ಳಿ ಗ್ರಾಮದ ಮುಖಂಡ ಮಹೇಶ್ ನೇತೃತ್ವದಲ್ಲಿ ನಡೆದ ಪುಟ್ಟಣ್ಣಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹರಳಹಳ್ಳಿ ಗ್ರಾಮದ ನೂರಾರು ಜನ ಪುಟ್ಟಣ್ಣಯ್ಯ ಅಭಿಮಾನಿಗಳು ಭಾಗವಹಿಸಿ ಅಗಲಿದ ತಮ್ಮ ನಾಯಕ ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶನಿವಾರ ಬೆಳಿಗ್ಗೆ ಸುಮಾರು 11.00 ಗಂಟೆಗೆ ನಡೆದ ಈ ಕಾರ್ಯಕ್ರಮವನ್ನು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ […]

ಪಾಂಡವಪುರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಘಟಕ ಕಾಮಗಾರಿಗೆ ಚಾಲನೆ

ಪಾಂಡವಪುರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಘಟಕ ಕಾಮಗಾರಿಗೆ ಚಾಲನೆ

ಪಾಂಡವಪುರ: ತಾಲೂಕಿನ ಜಕ್ಕನಹಳ್ಳಿ ಮತ್ತು ಎಲೆಕೆರೆ ಹ್ಯಾಂಡ್‍ಪೋಸ್ಟ್ ನಲ್ಲಿ ಶೀಘ್ರದಲ್ಲೆ ನೂತನ ಕೆಎಸ್‍ಆರ್ ಟಿಸಿ ಬಸ್‍ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ತಿಳಿಸಿದರು. ಪಾಂಡವಪುರ ಕೆಎಸ್‍ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಿಪಿಸಿಎಲ್ ಸಂಸ್ಥೆಯ ಸಹಯೋಗದೊಂದಿಗೆ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಘಟಕ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜಕ್ಕನಹಳ್ಳಿ ಮತ್ತು ಎಲೆಕೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ದಿ. […]

ಗೂಡ್ಸ್ ಆಟೊಗೆ ಡಿಕ್ಕಿ : ಬೈಕ್ ಸವಾರ ಸಾವು

ಗೂಡ್ಸ್ ಆಟೊಗೆ ಡಿಕ್ಕಿ : ಬೈಕ್ ಸವಾರ ಸಾವು

ಪಾಂಡವಪುರ: ಚಲಿಸುತ್ತಿದ್ದ ಗೂಡ್ಸ್ ಆಟೋಗೆ ಹಿಂಬದಿಯಿಂದ  ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಹಾರೋಹಳ್ಳಿ ಗ್ರಾಮದ ಚಿಕ್ಕೇಗೌಡರ ಮಗ ಮಂಜುನಾಥ(40) ಮೃತ ಪಟ್ಟ ದುರ್ದೈವಿ. ಮಂಜುನಾಥ್ ಪಟ್ಟಣದ ಅನಂತರಾಮನ್ ವೃತ್ತದ ಬಳಿಯ ಹೆಚ್‍ಪಿ ಗ್ಯಾಸ್ ಗೋಡೌನ್ ಮುಂಭಾಗ ಕೆಆರ್‍ಎಸ್ ಕಡೆ ಹೋಗುತ್ತಿದ್ದ ಆಫೆ ಗೂಡ್ಸ್ ಆಟೋ ಹಿಂದೆ ಬರುತ್ತಿದ್ದ ವೇಳೆ ಅಕಸ್ಮಾತ್ ಗೂಡ್ಸ್ ಆಟೋ ಚಾಲಕ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಮಂಜುನಾಥನ ಬೈಕ್ ಆಟೋಗೆ ಡಿಕ್ಕಿ ಹೊಡೆಯಿತು […]

ದಿ.ಕೆ.ಎಸ್. ಪುಟ್ಟಣ್ಣಯ್ಯರಿಗೆ ದಲಿತ ಸಂಘಟನೆಗಳಿಂದ ಪುಷ್ಪ ನಮನ

ದಿ.ಕೆ.ಎಸ್. ಪುಟ್ಟಣ್ಣಯ್ಯರಿಗೆ ದಲಿತ ಸಂಘಟನೆಗಳಿಂದ ಪುಷ್ಪ ನಮನ

ಪಾಂಡವಪುರ: ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ರೈತ ನಾಯಕ ಪುಟ್ಟಣ್ಣಯ್ಯ ಸಮಾಧಿಗೆ ಪುಷ್ಪ ನಮನ ಅರ್ಪಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಯುವ ದಲಿತ ಮುಖಂಡ ಹಾರೋಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಸುಮಾರು ಐವತ್ತಕ್ಕೂ ಹೆಚ್ಚು ಮುಖಂಡರು ಮಂಗಳವಾರ ಬೆಳಿಗ್ಗೆ ಕ್ಯಾತನಹಳ್ಳಿ ಗ್ರಾಮಕ್ಕೆ ಪಾಂಡವಪುರದ ಮೂಲಕ ಬೈಕ್ ರ್ಯಾಲಿಯಲ್ಲಿ ತೆರಳಿ ರೈತ ನಾಯಕ ಪುಟ್ಟಣ್ಣಯ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಿದರಲ್ಲದೇ ಪುಟ್ಟಣ್ಣಯ್ಯ ಅವರಂತೆ ಸಮಾನತೆಯ ಹಾದಿ ತುಳಿಯುವ ಪ್ರತಿಜ್ಞೆ ಮಾಡಿದರು. ಇದೇ […]

ಪುಟ್ಟಣ್ಣಯ್ಯ ಸಮಾಧಿಗೆ ರೈತರ ನಮನ ; ಎಲ್ಲೆಲ್ಲೂ ಗುಣಗಾನ

ಪುಟ್ಟಣ್ಣಯ್ಯ ಸಮಾಧಿಗೆ ರೈತರ ನಮನ ; ಎಲ್ಲೆಲ್ಲೂ ಗುಣಗಾನ

ಪಾಂಡವಪುರ : ಗುರುವಾರ ಅಂತ್ಯಸಂಸ್ಕಾರ ಮಾಡಲಾದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ಶುಕ್ರವಾರ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರು ನಮನ ಸಲ್ಲಿಸಿದರು. ಚಾಮರಾಜನಗರ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ರೈತರು ಬಸ್ ಹಾಗೂ ಇತರೆ ವಾಹನಗಳ ಮೂಲಕ ಕ್ಯಾತನಹಳ್ಳಿ ಗ್ರಾಮಕ್ಕೆ ಆಗಮಿಸಿ ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ತೆರಳಿ ನಮಸ್ಕರಿಸಿದ ನಂತರ ಪುಟ್ಟಣ್ಣಯ್ಯ ಜಿಂದಾಬಾದ್. ಪುಟ್ಟಣ್ಣಯ್ಯ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿನ ದಂಟಹಳ್ಳಿ […]

ಪಾಂಡವಪುರ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಾಸಕ ಪುಟ್ಟಣ್ಣಯ್ಯ ಭೂಮಿಪೂಜೆ

ಪಾಂಡವಪುರ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಾಸಕ ಪುಟ್ಟಣ್ಣಯ್ಯ ಭೂಮಿಪೂಜೆ

ಪಾಂಡವಪುರ: ತಾಲೂಕಿನ ಮೇಲುಕೋಟೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಅಂದಾಜು 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಲೇಜು ಕಟ್ಟಡ ಈ ಭಾಗದ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾಗಿತ್ತು. ವಿದ್ಯಾರ್ಥಿಗಳು   ಪದವಿ ವ್ಯಾಸಂಗಕ್ಕಾಗಿ ಪಾಂಡವಪುರ, ಮಂಡ್ಯ, ಮೈಸೂರು ಅಥವಾ ಶ್ರೀರಂಗಪಟ್ಟಣಕ್ಕೆ ಹೋಗಬೇಕಾಗಿತ್ತು.  ನೂತನ ಕಾಲೇಜು ಕಟ್ಟಡ ನಿರ್ಮಾಣದಿಂದ ಮೇಲುಕೋಟೆ ಸುತ್ತಮುತ್ತಲಿನ 25ಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗ್ರಾ.ಪಂ ಅಧ್ಯಕ್ಷ ನಾರಾಯಣ ಭಟ್ಟ, ಕಾಲೇಜು […]

ಪಾಂಡವಪುರ: ಜ.20 ರಂದು ಪರಿವರ್ತನಾ ರ್ಯಾಲಿ

ಪಾಂಡವಪುರ: ಜ.20 ರಂದು ಪರಿವರ್ತನಾ ರ್ಯಾಲಿ

ಪಾಂಡವಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಪರಿವರ್ತನಾ ರ್ಯಾಲಿ ಜ.20 ರಂದು ಪಾಂಡವಪುರಕ್ಕೆ ಆಗಮಿಸಲಿದ್ದು, ರ್ಯಾಲಿ ಸ್ವಾಗತಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ.ಮ.ರಮೆಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು 20ನೇ ರ್ಯಾಲಿಯಾಗಿದ್ದು, ಪಾಂಡವಪುರದಲ್ಲಿ ಸುಮಾರು 5ಸಾವಿರ ಜನ ಸೇರುವ ಸಾಧ್ಯತೆ ಇದೆ, ಪಟ್ಟಣದ ವಾಜಿದ್ ಸರ್ಕಲ್‍ನಿಂದ ಕಾರ್ಯಕ್ರಮ ನಡೆಯುವ ವೇದಿಕೆಗೆ ಯಡಿಯೂರಪ್ಪ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರು. ಇದೇ ಸಂದರ್ಭದಲ್ಲಿ ರೇಖಿ ಚಿಕಿತ್ಸಕ ಬಾಲಕೃಷ್ಣ ಗುರುಜಿ […]

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಲ್ಯಾಪ್‍ಟಾಪ್ ವಿತರಣೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಲ್ಯಾಪ್‍ಟಾಪ್ ವಿತರಣೆ

ಪಾಂಡವಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸೋಮವಾರ ಸರ್ಕಾರದ ವತಿಯಿಂದ ಉಚಿತ ಲ್ಯಾಪ್‍ಟಾಪ್ ವಿತರಿಸಲಾಯಿತು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು. ನಂತರ ಮಾತನಾಡಿದ ಅವರು, ಕಂಪ್ಯೂಟರ್, ಮೊಬೈಲ್ ಬಂದ ನಂತರ ವಿದ್ಯಾರ್ಥಿಗಳಲ್ಲಿ ಬರವಣಿಗೆ ಕಡಿಮೆಯಾಗಿದೆ, ಬರವಣಿಗೆ ಮೂಲಕ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದವರು ಈಗ ವಾಟ್ಸಾಪ್, ಕಂಪ್ಯೂಟರ್ ಮೂಲಕ ಕೃತಕವಾಗಿ ತಮ್ಮ ಮನಸ್ಸಿನ ಇಂಗಿತವನ್ನು ಹಂಚಿಕೊಳ್ಳುತ್ತಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು. ಸರ್ಕಾರ […]

ಜೀವ ತೆಗೆಯುವ ಧರ್ಮ, ಜ್ಞಾನ, ನಮಗೆ ಬೇಡ: ಶಾಸಕ ಪುಟ್ಟಣ್ಣಯ್ಯ

ಜೀವ ತೆಗೆಯುವ ಧರ್ಮ, ಜ್ಞಾನ, ನಮಗೆ ಬೇಡ: ಶಾಸಕ ಪುಟ್ಟಣ್ಣಯ್ಯ

ಮಾನವ ಬಂಧುತ್ವ ವೇದಿಕೆಯಿಂದ ಜರುಗಿದ ಕುವೆಂಪು ವಿಶ್ವಮಾನವ ಸಂದೇಶ ಜಾಥಾ ಕಾಯ್ರಕ್ರಮದಲ್ಲಿ ಹೇಳಿಕೆ ಪಾಂಡವಪುರ: ಮನುಷ್ಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಸಮಾಜ ನಿರ್ಮಾಣವಾಗಿದ್ದು, ಜೀವ ತೆಗೆಯುವ ಧರ್ಮವಾಗಲೀ, ಜ್ಞಾನ, ವಿಜ್ಞಾನವಾಗಲಿ ನಮಗೆ ಬೇಡ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ, ಸರ್ಕಾರಿ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕುವೆಂಪು ವಿಶ್ವಮಾನವ ಸಂದೇಶ ಜಾಥಾ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಲೆ […]