ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಲ್ಯಾಪ್‍ಟಾಪ್ ವಿತರಣೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಲ್ಯಾಪ್‍ಟಾಪ್ ವಿತರಣೆ

ಪಾಂಡವಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸೋಮವಾರ ಸರ್ಕಾರದ ವತಿಯಿಂದ ಉಚಿತ ಲ್ಯಾಪ್‍ಟಾಪ್ ವಿತರಿಸಲಾಯಿತು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು. ನಂತರ ಮಾತನಾಡಿದ ಅವರು, ಕಂಪ್ಯೂಟರ್, ಮೊಬೈಲ್ ಬಂದ ನಂತರ ವಿದ್ಯಾರ್ಥಿಗಳಲ್ಲಿ ಬರವಣಿಗೆ ಕಡಿಮೆಯಾಗಿದೆ, ಬರವಣಿಗೆ ಮೂಲಕ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದವರು ಈಗ ವಾಟ್ಸಾಪ್, ಕಂಪ್ಯೂಟರ್ ಮೂಲಕ ಕೃತಕವಾಗಿ ತಮ್ಮ ಮನಸ್ಸಿನ ಇಂಗಿತವನ್ನು ಹಂಚಿಕೊಳ್ಳುತ್ತಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು. ಸರ್ಕಾರ […]

ಜೀವ ತೆಗೆಯುವ ಧರ್ಮ, ಜ್ಞಾನ, ನಮಗೆ ಬೇಡ: ಶಾಸಕ ಪುಟ್ಟಣ್ಣಯ್ಯ

ಜೀವ ತೆಗೆಯುವ ಧರ್ಮ, ಜ್ಞಾನ, ನಮಗೆ ಬೇಡ: ಶಾಸಕ ಪುಟ್ಟಣ್ಣಯ್ಯ

ಮಾನವ ಬಂಧುತ್ವ ವೇದಿಕೆಯಿಂದ ಜರುಗಿದ ಕುವೆಂಪು ವಿಶ್ವಮಾನವ ಸಂದೇಶ ಜಾಥಾ ಕಾಯ್ರಕ್ರಮದಲ್ಲಿ ಹೇಳಿಕೆ ಪಾಂಡವಪುರ: ಮನುಷ್ಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಸಮಾಜ ನಿರ್ಮಾಣವಾಗಿದ್ದು, ಜೀವ ತೆಗೆಯುವ ಧರ್ಮವಾಗಲೀ, ಜ್ಞಾನ, ವಿಜ್ಞಾನವಾಗಲಿ ನಮಗೆ ಬೇಡ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ, ಸರ್ಕಾರಿ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕುವೆಂಪು ವಿಶ್ವಮಾನವ ಸಂದೇಶ ಜಾಥಾ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಲೆ […]

ಪಾಂಡವಪುರ ಪ್ರೋ ಕಬಡ್ಡಿ : ಪ್ರಶಸ್ತಿ ಗೆದ್ದ ಬೇಬಿಬೆಟ್ಟ ತಂಡ

ಪಾಂಡವಪುರ ಪ್ರೋ ಕಬಡ್ಡಿ : ಪ್ರಶಸ್ತಿ ಗೆದ್ದ ಬೇಬಿಬೆಟ್ಟ ತಂಡ

• ಆರಂಭಿಕ ಮರ್ಮಾಘಾತ ನೀಡಿದ ಅಲೀಂ ಪಾಷ ಪಾಂಡವಪುರ : ತೀವ್ರ ಕುತೂಹಲ ಕೆರಳಿಸಿದ್ದ ಪಾಂಡವಪುರ ಪ್ರೋ ಕಬಡ್ಡಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸಕ್ಕರೆ ಸೀಮೆ ತಂಡವನ್ನು ಸೋಲಿಸುವುದರ ಮೂಲಕ ಉದ್ಯಮಿ ರವಿ ಭೋಜೇಗೌಡ ಮಾಲಿಕತ್ವದ ಬೇಬಿಬೆಟ್ಟ ತಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಕಪ್ ಗೆದ್ದು ಒಂದು ಲಕ್ಷ ರೂ ನಗದು ಹಾಗೂ ಬೃಹತ್ ಗಾತ್ರದ ಟ್ರೋಫಿಯನ್ನು ಬಹುಮಾನವಾಗಿ ಪಡೆಯಿತು. ಭಾನುವಾರ ರಾತ್ರಿ ನಡೆದ ರೋಚಕ ಫೈನಲ್ ಪಂದ್ಯದ ಮೊದಲ 2 ನಿಮಿಷದ ಆರಂಭದಲ್ಲೆ ಬೇಬಿಬೆಟ್ಟದ ಬೆಸ್ಟ್ […]

ಪಾಂಡವಪುರ ಪ್ರೋ ಕಬಡ್ಡಿ `ಬಾಬಾಜಿ ಕನ್ನಂಬಾಡಿ’ ಸೆಮಿಫೈನಲ್‍ಗೆ

ಪಾಂಡವಪುರ ಪ್ರೋ ಕಬಡ್ಡಿ  `ಬಾಬಾಜಿ ಕನ್ನಂಬಾಡಿ’ ಸೆಮಿಫೈನಲ್‍ಗೆ

ಪಾಂಡವಪುರ: ಇಲ್ಲಿನ ಪಾಂಡವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಂಡವಪುರ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಲೀಗ್ ಮ್ಯಾಚ್‍ನಲ್ಲಿ ಬಾಬಾಜಿ ಕನ್ನಂಬಾಡಿ ತಂಡ ಮುನ್ನಡೆ ಸಾಧಿಸಿದೆ. ಶುಕ್ರವಾರ ರಾತ್ರಿ ನಡೆದ ಲೀಗ್ ಪಂದ್ಯದಲ್ಲಿ ಫ್ರೆಂಚ್‍ರಾಕ್ಸ್ ಮತ್ತು ಕನ್ನಂಬಾಡಿ ತಂಡಗಳು ತೀವ್ರ ಸೆಣೆಸಾಟ ನಡೆಸಿದವು. ಕನ್ನಂಬಾಡಿ-41 ಫ್ರೆಂಚ್‍ರಾಕ್ಸ್-38 ಅಂಕಗಳನ್ನು ಪಡೆದು 3 ಅಂಕಗಳ ಅಂತರದಿಂದ ಕನ್ನಂಬಾಡಿ ತಂಡ ಎದುರಾಳಿ ಫ್ರೆಂಚ್‍ರಾಕ್ಸ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತು. ಕನ್ನಂಬಾಡಿ ತಂಡದ ಮಿಥುನ್‍ಗೌಡ ಉತ್ತಮ ದಾಳಿಗಾರನಾಗಿ, ಫ್ರೆಂಚ್‍ರಾಕ್ಸ್ ತಂಡದ ಜಸ್ವಂತ್ ಉತ್ತಮ ಹಿಡಿತಗಾರನಾಗಿ […]

ಪಾಂಡವಪುರ: ಶಿವಕುಮಾರ್ ಕೊಲೆ ಆರೋಪಿಗಳ ಬಂಧನ

ಪಾಂಡವಪುರ: ಶಿವಕುಮಾರ್ ಕೊಲೆ ಆರೋಪಿಗಳ ಬಂಧನ

ಪಾಂಡವಪುರ : ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಹೆಗಡೆಕೆರೆ ಬಳಿ ಹೊಸ ವರ್ಷಾಚರಣೆ ವೇಳೆ ನಡೆದ ಶಿವಕುಮಾರ್ ಕೊಲೆಯ 8 ಆರೋಪಿಗಳನ್ನು ಪಾಂಡವಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಹೊನಗಾನಹಳ್ಳಿ ಗ್ರಾಮದ ಎಚ್.ಎಸ್. ಪ್ರತಾಪ (21), ಶೇಖರ್(27), ಸೋಮ(21) ಜೀವನ್ ನಾಯಕ (26) ಸಂಜಯ್ (20), ಚಿನಕುರಳಿ ಬಳಿಯ ಕುಂಬಾರಕೊಪ್ಪಲು ಗ್ರಾಮದ ರಾಧಾಕೃಷ್ಣ(27), ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿ ಗ್ರಾಮದ ಎಂ.ಪುನೀತ (20), ಮನು(19), ಬಂಧಿತರು. ಹೊಸ ವರ್ಷಾಚರಣೆ ನೆಪದಲ್ಲಿ ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಹೆಗಡೆಕೆರೆ ಬಳಿ, ಆರೋಪಿಗಳು […]

ಯುವಕರೇ ದೇಶದ ಆಸ್ತಿ: ಶಾಸಕ ಪುಟ್ಟಣಯ್ಯ

ಯುವಕರೇ ದೇಶದ ಆಸ್ತಿ: ಶಾಸಕ ಪುಟ್ಟಣಯ್ಯ

ಪಾಂಡವಪುರ : ಯುವಕರು ದೇಶದ ಆಸ್ತಿಯಾಗಿದ್ದು, ಗ್ರಾಮಗಳ ಅಭಿವೃದ್ಧಿಗಾಗಿ ಹೆಚ್ಚು ಶ್ರಮ ವಹಿಸಬೇಕು ಎಂದು  ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕರೆ ನೀಡಿದರು. ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ  ಆವರಣದಲ್ಲಿ ನಡೆದ ಗ್ರಾಮ ವಿಕಾಸ ಯೋಜನೆಯ ಸಭೆಯಲ್ಲಿ ಮಾತನಾಡಿದ ಅವರು, ಸದೃಢ ಯುವ ಜನಾಂಗ ಇದ್ದರೆ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ, ಯುವಕರು ದುಶ್ಚಟಗಳಿಗೆ ಬಲಿಯಾಗದೆ. ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ತಮ್ಮ ಕಾಣಿಕೆ ನೀಡಬೇಕು ಎಂದರು. ಮಾಣಿಕ್ಯನಹಳ್ಳಿ ಗ್ರಾಮದ […]

ಮಂಡ್ಯದಲ್ಲಿ ಕಬಡ್ಡಿಗೆ ಹೆಚ್ಚು ಪ್ರೋತ್ಸಾಹ ಅಗತ್ಯ : ಬಿ.ವಿ.ನಂದೀಶ್

ಮಂಡ್ಯದಲ್ಲಿ ಕಬಡ್ಡಿಗೆ ಹೆಚ್ಚು ಪ್ರೋತ್ಸಾಹ ಅಗತ್ಯ : ಬಿ.ವಿ.ನಂದೀಶ್

ಪಾಂಡವಪುರ: ಕಬಡ್ಡಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದ ಮಂಡ್ಯ ಜಿಲ್ಲೆ ಇಂದು ಕೇವಲ 23 ಜನ ಕ್ರೀಡಾಪಟುಗಳು ಮಾತ್ರ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿರುವುದು ಬೇಸರದ ಸಂಗತಿಯಾಗಿದ್ದು,  ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಬೇಕಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಪೋಟ್ರ್ಸ್ ಕ್ಲಬ್, ಕರ್ನಾಟಕ ರಾಜ್ಯ ಮತ್ತು ಮಂಡ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ […]

ಲಾರಿ ಟ್ರಾಕ್ಟರ್ ಡಿಕ್ಕಿ; ಕೂಲಿ ಕಾರ್ಮಿಕನ ಸಾವು

ಲಾರಿ ಟ್ರಾಕ್ಟರ್ ಡಿಕ್ಕಿ; ಕೂಲಿ ಕಾರ್ಮಿಕನ ಸಾವು

ಪಾಂಡವಪುರ: ಲಾರಿ ಮತ್ತು ಟ್ರಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಟ್ರೇಲರ್‍ನಲ್ಲಿ ಕುಳಿತಿದ್ದ ಒಬ್ಬ ಕೂಲಿ ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಹೊಸಕೋಟೆ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ತಾಲ್ಲೂಕಿನ ಮೇಲುಕೋಟೆ ಬಳಿಯ ನಾಣಾಪುರ ಗ್ರಾಮದ ಜವರೇಗೌಡ(35) ಮೃತನಾದ ವ್ಯಕ್ತಿ. ಜಮೀನು ಕೆಲಸಕ್ಕೆಂದು ಎಸ್.ಕೊಡಗಳ್ಳಿ ಗ್ರಾಮದ ವಿಜಿಕುಮಾರ ಎಂಬುವರಿಗೆ ಸೇರಿದ ಟ್ರಾಕ್ಟರ್‍ನ ಟ್ರೇಲರ್‍ನಲ್ಲಿ ಕುಳಿತು ಬರುತ್ತಿದ್ದ ವೇಳೆ ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿಯ ಹೊಸಕೋಟೆ ಗೇಟ್ ಬಳಿ ಮೈಸೂರು ಕಡೆಯಿಂದ ನಾಗಮಂಗಲ ಕಡೆ ಹೊರಟಿದ್ದ […]

ಪಾಂಡವಪುರ: ದೀಪಕ್‍ರಾವ್ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಪಾಂಡವಪುರ: ದೀಪಕ್‍ರಾವ್ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಪಾಂಡವಪುರ: ಬಿಜೆಪಿ ಮುಖಂಡ ದೀಪಕ್‍ರಾವ್ ಅವರ ಕೊಲೆಯನ್ನು ಖಂಡಿಸಿ ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲ್ಲೂಕು ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಅಲ್ಲಿ ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತ ಎಂಬ ಬಿಜೆಪಿ ಕಾರ್ಯಕರ್ತನ ಕೊಲೆಯ ಪ್ರಕರಣ ಮಾಸುವ ಮುನ್ನವೇ ದೀಪಕ್‍ರಾವ್ ಕೊಲೆ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಈ […]

ಶಿಕ್ಷಣದಿಂದ ಮಾತ್ರ ಪೌರಕಾರ್ಮಿಕರ ಅಭಿವೃದ್ಧಿ ಸಾಧ್ಯ – ಕೆ.ಟಿ.ರಂಗಯ್ಯ

ಶಿಕ್ಷಣದಿಂದ ಮಾತ್ರ ಪೌರಕಾರ್ಮಿಕರ ಅಭಿವೃದ್ಧಿ ಸಾಧ್ಯ – ಕೆ.ಟಿ.ರಂಗಯ್ಯ

ಪಾಂಡವಪುರ : ದಲಿತರು ದೇಶದ ವಾರಸುದಾರರಾಗಿದ್ದು, ಆರ್ಯರ ಪ್ರವೇಶದ ನಂತರ ದಲಿತರ ದಮನವಾಗಿದೆ ಆದರೆ, ಶಿಕ್ಷಣ ಮಾತ್ರ ದಲಿತ ಪಂಗಡಕ್ಕೆ ಸೇರಿದ ಪೌರಕಾರ್ಮಿಕರನ್ನು ಉದ್ಧಾರ ಮಾಡಬಲ್ಲದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಟಿ.ರಂಗಯ್ಯ ಹೇಳಿದರು. ಪಟ್ಟಣದ ವಿ.ಸಿ.ಕಾಲೂನಿಯಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೌರಕಾರ್ಮಿಕರು ಕುಡಿತದ ಚಟದಿಂದ ಹೊರಬರಬೇಕು, ಮೊದಲು ತಮ್ಮ ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸಬೇಕು ಪೌರಕಾರ್ಮಿಕ ಮಹಿಳೆಯರು ತಮ್ಮ ಮಕ್ಕಳಿಗೆ […]