ಪಾಂಡವಪುರ: ಕೋರೆಗಾಂವ್ ದಲಿತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಪಾಂಡವಪುರ: ಕೋರೆಗಾಂವ್ ದಲಿತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಪಾಂಡವಪುರ : ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿದ್ದ ಭೀಮಾ-ಕೋರೆಗಾಂವ್ ವಿಜಯೋತ್ಸವದಲ್ಲಿ ಭಾಗವಹಿಸಲು ತೆರಳುತ್ತಿದ್ದ ದಲಿತರ ಮೇಲೆ ಸಂಘಪರಿವಾದ ಕಾರ್ಯಕರ್ತರು ಕಲ್ಲು ತೂರಾಟ ಮತ್ತು ಹಲ್ಲೆ ನಡೆಸಿದ್ದನ್ನು ಖಂಡಿಸಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ದಲಿತ ಸಂಘರ್ಷ ಸಮಿತಿಯ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಗಳ ನೇತೃತ್ವದಲ್ಲಿ ಪಟ್ಟಣದ ವಾಜೀದ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ತನಕ ಮೆರವಣಿಗೆ ನಡೆಸಿ, ಕೆಲ ಕಾಲ ಶ್ರೀರಂಗಪಟ್ಟಣ ಬೀದರ್ ರಾಜ್ಯ […]

ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಕೆ.ಆರ್.ಪೇಟೆ: ತಾಲೂಕಿನ ಬೀರುವಳ್ಳಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.  ಬೀರುವಳ್ಳಿ ಗ್ರಾಮದ ನಿವಾಸಿ ಬಿ.ಡಿ.ಬೋರೇಗೌಡ(58) ಆತ್ಮಹತ್ಯೆಗೆ ಶರಣಾದ ರೈತ.  ಬುಧವಾರ ರಾತ್ರಿ ಮನೆಯ ಬಳಿ ವಿಶ ಸೇವಿಸಿ ಅಸ್ವಸ್ಥಗೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ಒಂದೂವರೆ ಎಕರೆ ಜಮೀನಿದ್ದು ಮಳೆ ಅಭಾವ ಹಾಗೂ ಹೇಮಾವತಿ ನೀರು ಹರಿಸದ ಹಿನ್ನೆಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಸಾಲಗಾರರ ಕಾಟ ಜಾಸ್ತಿಯಾಗಿ ವಿಷ ಸೇವಿಸಿ […]

ಮಾನವ ಬಂಧುತ್ವ ವೇದಿಕೆಯಿಂದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಮಾನವ ಬಂಧುತ್ವ ವೇದಿಕೆಯಿಂದ  ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಪಾಂಡವಪುರ: ತಾಲ್ಲೂಕು ಮಾನವ ಬಂಧುತ್ವ ವೇದಿಕೆಯಿಂದ ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಪಟ್ಟಣದ ಮಾನವ ಬಂಧತ್ವ ವೇದಿಕೆಯ ಕಚೇರಿಯಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಚಾಲಕ, ವಕೀಲ ನಲ್ಲಹಳ್ಳಿ ಸುರೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ರಾಹ್ಮಣರನ್ನು ಹೊರತುಪಡಿಸಿ ಇನ್ನಿತರ ಶೂದ್ರ ಜನಾಂಗದವರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗಾಗಿ ವಿದ್ಯೆ ನಿರಾಕರಿಸಿದ್ದ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆ ಅವರು […]

ಹರಳಹಳ್ಳಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಶಾಸಕ ಪುಟ್ಟಣಯ್ಯ ಚಾಲನೆ

ಹರಳಹಳ್ಳಿ ಮುಖ್ಯಮಂತ್ರಿ  ಗ್ರಾಮ ವಿಕಾಸ ಯೋಜನೆಗೆ ಶಾಸಕ ಪುಟ್ಟಣಯ್ಯ ಚಾಲನೆ

  ಪಾಂಡವಪುರ: ಮುಖ್ಯಮಂತ್ರಿ ಗ್ರಾಮ ವಿಕಾಶ ಯೋಜನೆಯಡಿ ತಾಲೂಕಿನ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಗ್ರಾಮಕ್ಕೆ 1 ಕೋಟಿ ರೂಗಳಲ್ಲಿ ಇಡಿ ಗ್ರಾಮವನ್ನೇ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು. ತಾಲೂಕಿನ ಕೆನ್ನಾಳು ಪಂಚಾಯಿತಿಯ ಹರಳಹಳ್ಳಿ ಹಾಗೂ ಕೆ.ಬೆಟ್ಟಹಳ್ಳಿ ಪಂಚಾಯಿತಿಯ ಕೆ.ಬೆಟ್ಟಹಳ್ಳಿ ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಈ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ದಿ ಪಡಿಸಲಾಗುತ್ತಿದೆ. ಮೊದಲ ಹಂತವಾಗಿ ಎರಡು ಗ್ರಾಮಗಳಿಗೆ  ಒಂದೊಂದು […]

ಪಾಂಡವಪುರ: ಐದು ದೀಪ ವೃತ್ತದ ಹೆಸರು ಬದಲಿಸಲು ತೀವ್ರ ವಿರೋಧ

ಪಾಂಡವಪುರ: ಐದು ದೀಪ ವೃತ್ತದ ಹೆಸರು ಬದಲಿಸಲು ತೀವ್ರ ವಿರೋಧ

ಪಾಂಡವಪುರ : ಪಟ್ಟಣದ ಐದು ದೀಪದ ವೃತ್ತಕ್ಕೆ ಈ ಹಿಂದೆ ಇದ್ದ ವಾಜಿದ್ ಸ್ಕ್ವೇರ್ ಎಂಬ ಹೆಸರನ್ನು ಬದಲಿಸಲು ಮುಂದಾದ ಪುರಸಭೆ ಕ್ರಮಕ್ಕೆ ತಾಲ್ಲೂಕು ಆಡಳಿತ ತಡೆ ನೀಡಿತು. ಶನಿವಾರ ಬೆಳಿಗ್ಗೆ ಪಟ್ಟಣದ ಪಾರಂಪರಿಕ ವೃತ್ತವಾದ ಐದು ದೀಪದ ವೃತ್ತದಲ್ಲಿದ್ದ (ವಾಜಿದ್ ಸ್ಕ್ವೇರ್) ಐದು ದೀಪದ ಕಂಭ ಮತ್ತು ಹೈಮಾಸ್ಟ್ ದೀಪವನ್ನು ತೆರವುಗೊಳಿಸಿ ಅಲ್ಲಿ ಬಾಲಗಂಗಾಧರಸ್ವಾಮಿಗಳ ಪುತ್ಥಳಿ ಇಟ್ಟು ವೃತ್ತಕ್ಕೆ ಬಿಜಿಎಸ್ ವೃತ್ತ ಎಂದು ಹೆಸರಿಡಲು ಯತ್ನಿಸಲಾಗಿತ್ತು, ಈ ವಿಷಯವನ್ನು ಪಟ್ಟಣದ ಹಲವಾರು ಸಂಘಟನೆಗಳ ಮುಖ್ಯಸ್ಥರು ಉಪ […]

ಕುವೆಂಪು ಸಾಹಿತ್ಯದಲ್ಲಿ ರಾವಣ ಪಾತ್ರವೇ ಅನನ್ಯ: ಪ್ರಾಧ್ಯಾಪಕಿ ಡಿ.ಎಸ್.ಸರಸ್ವತಿ

ಕುವೆಂಪು ಸಾಹಿತ್ಯದಲ್ಲಿ ರಾವಣ ಪಾತ್ರವೇ ಅನನ್ಯ: ಪ್ರಾಧ್ಯಾಪಕಿ ಡಿ.ಎಸ್.ಸರಸ್ವತಿ

ಪಾಂಡವಪುರ : ರಾಮಾಯಣದಲ್ಲಿ ವೈರಿಯಾಗಿದ್ದ ರಾವಣನನ್ನು ಕುವೆಂಪು ತಮ್ಮ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಶಿಲ್ಪಿಯಾಗಿ ಚಿತ್ರಿಸುವುದರ ಮೂಲಕ ಬ್ರಾಹ್ಮಣ್ಯಕ್ಕೆ ಸೆಡ್ಡು ಹೊಡೆದರು ಎಂದು ಉಪನ್ಯಾಸಕಿ ಡಿ.ಎಸ್.ಸರಸ್ವತಿ ಹೇಳಿದರು. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಕುವೆಂಪು ಅವರ 113ನೇ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಶ್ವಮಾನವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ತಮ್ಮ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಸಂಸ್ಕೃತ ಪಾಠಶಾಲೆಯಲ್ಲಿ ಕಲಿಯಲು ಹೋದ ಶೂದ್ರ ಜನಾಂಗ ಕುವೆಂಪು ಅವರಿಗೆ ಅಲ್ಲಿನ ಬ್ರಾಹ್ಮಣ ಶಿಕ್ಷಕರು ಸಂಸ್ಕೃತ […]

ಡಿ.30ಕ್ಕೆ ದಯವಿಟ್ಟು ಗಮನಿಸಿ

ಡಿ.30ಕ್ಕೆ ದಯವಿಟ್ಟು ಗಮನಿಸಿ

ಪಾಂಡವಪುರ : ಇತ್ತೀಚೆಗೆ ಬಿಡುಗಡೆಯಾಗಿ ಅಪಾರ ಪ್ರಶಂಸೆಗೆ ಒಳಗಾದ `ದಯವಿಟ್ಟು ಗಮನಿಸಿ’ ಚಲನ ಚಿತ್ರ ಪ್ರದರ್ಶನವನ್ನು ಡಿ.30 ರಂದು ಪಾಂಡವಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಏರ್ಪಡಿಸಲಾಗಿದೆ. ಶನಿವಾರ ಸಂಜೆ 5.30ಕ್ಕೆ ಚಿತ್ರ ಪ್ರದರ್ಶನ ನಡೆಯಲಿದ್ದು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಕೆ.ಎಸ್.ಅಶೋಕ್, ಕಸಾಪ ಅಧ್ಯಕ್ಷ ಎಂ.ರಮೆಶ್, ಎಚ್.ಎನ್.ಧನ್ಯಕುಮಾರ್, ಚಿತ್ರ ನಿರ್ದೇಶಕ ರೋಹಿತ್ ಪದಕಿ, ನಿರ್ಮಾಪಕ ಕೃಷ್ಣ ಸಾರ್ಥಕ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮುಂತಾದವರು ಚಿತ್ರ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು […]

ಅತ್ಯಾಚಾರಿಗಳಿಗೆ ಗಲ್ಲು, ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಮಾಬಂವೇ ಸೇರಿ ಸಂಘಟನೆಗಳಿಂದ ಭಾರಿ ಪ್ರತಿಭಟನೆ

ಅತ್ಯಾಚಾರಿಗಳಿಗೆ ಗಲ್ಲು,  ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಮಾಬಂವೇ ಸೇರಿ ಸಂಘಟನೆಗಳಿಂದ ಭಾರಿ ಪ್ರತಿಭಟನೆ

    ಪಾಂಡವಪುರ : ರಾಜ್ಯದಲ್ಲಿ ನಡೆಯುತ್ತಿರುವ ದಲಿತ ಮಹಿಳೆಯರ ಮೇಲಿನ ಅತ್ಯಾಚಾರದ ವಿರುದ್ಧ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿತು. ಮಾನವ ಬಂಧುತ್ವ ವೇದಿಕೆ, ಬಹುಜನ ಸಮಾಜ ಪಕ್ಷ, ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ  ಗುರುವಾರ ಆಯೋಜಿಸಿದ್ದ `ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ದಲಿತ ಮಹಿಳೆಯರನ್ನು ರಕ್ಷಿಸಿ’ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು  ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಸುಮಾರು 11 ಗಂಟೆಗೆ ಪಟ್ಟಣದ ವಾಜಿದ್ ಸರ್ಕಲ್‍ನಲ್ಲಿ ಸೇರಿದ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರು ವೃತ್ತದಲ್ಲಿ ಮಾನವ ಸರಪಳಿ […]

ಪ್ರಗತಿಪರ ರೈತ ಕೆ.ಎಸ್.ಕುಮಾರ್‍ಗೆ ರಾಜ್ಯೋತ್ಸವ ವಿಶೇಷ ಪ್ರಶಸ್ತಿ

ಪ್ರಗತಿಪರ ರೈತ ಕೆ.ಎಸ್.ಕುಮಾರ್‍ಗೆ ರಾಜ್ಯೋತ್ಸವ ವಿಶೇಷ ಪ್ರಶಸ್ತಿ

ಪಾಂಡವಪುರ: ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಪ್ರಗತಿಪರ ರೈತ ಹಾಗೂ ಸಮಾಜ ಸೇವಕ ಕೆ.ಎನ್.ಕುಮಾರ್ ಅವರಿಗೆ ರಾಜ್ಯೋತ್ಸವ ವಿಶೇಷ ಪ್ರಶಸ್ತಿ ದೊರಕಿದೆ. ಮಂಡ್ಯಾ ಗಾಂಧಿ ಭವನದಲ್ಲಿ ಇತ್ತೀಚೆಗೆ ನಡೆದ ದಿವ್ಯ ಜ್ಯೋತಿ ಕಲಾ ಮತ್ತು ಸಾಹಿತ್ಯ ವೇದಿಕೆಯ 9ನೇ ರಾಜ್ಯಮಟ್ಟದ ಕವಿಗೋಷ್ಠಿ, ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೆ.ಎಸ್.ಕುಮಾರ್‍ಗೆ ನೀಡಲಾಯಿತು. ಕಣಿವೆ ಕೊಪ್ಪಲು ಗ್ರಾಮದ ಕೆ.ಎಸ್.ಕುಮಾರ್ ಒಬ್ಬ ಪ್ರಗತಿಪರ ರೈತ ಹಾಗೂ ಸಮಾಜ ಸೇವಕ, ಕಳೆದ […]

ಪರೇಶ ಮೇಸ್ತಾ ಕೊಲೆಗೈದ ದುಷ್ಕರ್ಮಿಗಳ ಬಂಧನಕ್ಕೆ ಬಿಜೆಪಿ ಒತ್ತಾಯ

ಪರೇಶ ಮೇಸ್ತಾ ಕೊಲೆಗೈದ ದುಷ್ಕರ್ಮಿಗಳ ಬಂಧನಕ್ಕೆ ಬಿಜೆಪಿ ಒತ್ತಾಯ

ಪಾಂಡವಪುರ: ಇತ್ತೀಚೆಗೆ ನಡೆದ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆ ರಾಜಕೀಯ ಪ್ರೇರಿತವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆದು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಹತ್ಯೆಯಾದ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಮಾಡಿದ ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪರೇಶ ಮೇಸ್ತಾ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕ್ರಮ ಗೊಳ್ಳಬೇಕು ಎಂದರು. ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, […]

1 3 4 5 6 7 17