ಪ್ರಧಾನಿ ಭಾಷಣ ಕಡ್ಡಾಯ: ಯುಜಿಸಿ ನಿಯಮ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪ್ರಧಾನಿ ಭಾಷಣ ಕಡ್ಡಾಯ: ಯುಜಿಸಿ ನಿಯಮ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಕಡ್ಡಾಯವಾಗಿ ವಿವಿ ವಿದ್ಯಾರ್ಥಿಗಳು ಆಲಿಸಬೇಕು ಎಂದು ಯುಜಿಸಿ ಹೊರಡಿಸಿರುವ  ಸುತ್ತೋಲೆಯನ್ನು ಖಂಡಿಸಿ ನಗರದ ಸೆನೆಟ್ ಭವನದಲ್ಲಿ ಸೋಮವಾರ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸ್ವಾಮಿ ವಿವೇಕಾನಂದ ಅವರ ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ನಿಮತ್ತ  ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಅಧ್ಯಾಪಕರು ಕಡ್ಡಾಯವಾಗಿ ಕೇಳಬೇಕೆಂದು ಯುಜಿಸಿಯು ರಾಷ್ಟ್ರ ಎಲ್ಲಾ […]

ಮೈಸೂರು ಮೃಗಾಲಯದಲ್ಲಿನ ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ

ಮೈಸೂರು ಮೃಗಾಲಯದಲ್ಲಿನ ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ

ಮೈಸೂರು: ಹುಬ್ಬಳ್ಳಿ ಕೆಪಿಎಲ್ ತಂಡದ ಆಟಗಾರರು ಬುಧವಾರ ಇಲ್ಲಿನ ಮೃಗಾಲಯಕ್ಕೆ ಭೇಟಿ ನೀಡಿ ಒಂದು ವರ್ಷದ ಅವಧಿಗೆ ಹುಲಿಯೊಂದನ್ನು ದತ್ತು ಸ್ವೀಕರಿಸಿದ್ದಾರೆ. ಬುಧವಾರ ನಡೆದ ಕೆಪಿಎಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಗೆಲುವು ಸಾಧಿಸಿತು. ಇದೇ ಖುಷಿಯಲ್ಲಿ ತಂಡದ ಎಲ್ಲಾ ಆಟಗಾರರು ಗುರುವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಒಂದು ವರ್ಷದ ಅವಧಿಗೆ ಒಂದು ಲಕ್ಷ ರೂ.ಹಣ ನೀಡಿ ಹುಲಿಯನ್ನು ದತ್ತು ಸ್ವೀಕರಿಸಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ತಂಡ ಕಳೆದ ಮೂರು ವರ್ಷದಿಂದ ಮೈಸೂರು […]

ಖಾಸಗಿ ಬಸ್ ಕಾರು ಮುಖಾಮುಖಿ ಡಿಕ್ಕಿ: ಮೂವರು ಗಂಭೀರ ಗಾಯ

ಖಾಸಗಿ ಬಸ್ ಕಾರು ಮುಖಾಮುಖಿ ಡಿಕ್ಕಿ: ಮೂವರು ಗಂಭೀರ ಗಾಯ

ಮೈಸೂರು:ಖಾಸಗಿ ಬಸ್ ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ  ಗಾಯಗೊಂಡ ಘಟನೆ ತಿ.ನರಸೀಪುರ ಕಪಿಲಾ ಸೇತುವೆ ಮೇಲೆ ನಡೆದಿದೆ. ಮಹದೇವಸ್ವಾಮಿ(38) ರತ್ನಮ್ಮ(43), ಹಾಗೂ ಬಾಲಕಿ ದಿಶಾ(8) ಅಪಘಾತದಲ್ಲಿ ಗಾಯಗೊಂಡವರು. ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ  ಮೈಸೂರಿನತ್ತ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ತಿ.ನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಘಟನೆ ನಡೆದ ಬಳಿಕ  ಬಸ್ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ತಿ.ನರಸೀಪುರ […]

ಮೈಸೂರು: ಬೋನಿಗೆ ಬಿದ್ದ 4 ವರ್ಷದ ಗಂಡು ಚಿರತೆ

ಮೈಸೂರು: ಬೋನಿಗೆ ಬಿದ್ದ 4 ವರ್ಷದ ಗಂಡು ಚಿರತೆ

ಮೈಸೂರು: ತಾಲೂಕಿನ ಮೇಗಳಾಪುರ ಹೊಸಹಳ್ಳಿ ಗ್ರಾಮಗಳಲ್ಲಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ  ವೈದರ ತೋಟದ ಮನೆಯಲ್ಲಿ ಬೋನಿಗೆ ಬಿದ್ದಿದ್ದು, ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಜನರು ಅರಣ್ಯ ಇಲಾಖೆಗೆ ಚಿರತೆ ಹಿಡಿದುಕೊಂಡು ಹೋಗುವಂತೆ ಹಲವು ಬಾರಿ ಮನವಿ ಸಲ್ಲಿಸಿದರು.  ವಲಯ ಅರಣ್ಯಾಧಿಕಾರಿ ಪುಟ್ಟರಾಜು ನೇತೃತ್ವದ ಕಾರ್ಯಾಚರಣೆ ನಡೆಸಿ 4 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಮೇಗಳಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. Views: 351

ಮೈಸೂರು: ಹಾಸಿಗೆ ಮೇಲೆ ಮೂತ್ರ ವಿಸರ್ಜನೆ, ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿದ ತಂದೆ

ಮೈಸೂರು: ಹಾಸಿಗೆ ಮೇಲೆ ಮೂತ್ರ ವಿಸರ್ಜನೆ, ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿದ ತಂದೆ

ಮೈಸೂರು:ಹಾಸಿಗೆ  ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಕ್ರೂರಿ ತಂದೆಯೊಬ್ಬ ತನ್ನ ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂಬ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೈಸೂರಿನ ಪಿರಿಯಾಪಟ್ಟಣದ ನಿವಾಸಿ ನಾಗರಾಜ್ ಎಂಬಾತ ತನ್ನ ನಾಲ್ಕು ವರ್ಷದ ಮಗನಿಗೆ ದಿನನಿತ್ಯ ರಾತ್ರಿ ಮಲಗುವ ವೇಳೆ ಮರ್ಮಾಂಗಕ್ಕೆ ರಬ್ಬರ್ ಬ್ಯಾಂಡ್ ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ವ್ಯಕ್ತಿಯೊಬ್ಬರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಕೂಡಲೇ  ಬಾಲಕನಿರುವ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ […]

ಗೃಹಿಣಿ ಅಪಹರಿಸಿ ಮಾರಾಟಕ್ಕೆ ಯತ್ನ: ಮೂವರ ಬಂಧನ

ಗೃಹಿಣಿ ಅಪಹರಿಸಿ ಮಾರಾಟಕ್ಕೆ ಯತ್ನ: ಮೂವರ ಬಂಧನ

ಮೈಸೂರು: ಗೃಹಿಣಿಯೊಬ್ಬಳನ್ನು  ಅಪಹರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಆರೋಪಿಗಳನ್ನು ಪೊಲೀಸರು ಖೆಡ್ಡಾಕೆ ಕೆಡವಿದ್ದಾರೆ. ಹುಣಸೂರು ತಾಲೂಕಿನ ಟಿಪ್ಪುನಗರದ ನಿವಾಸಿ ಸೈಯದ್(32), ಮಧು, ರವಿ ಬಂಧಿತರು.  ಹುಣಸೂರು ತಾಲೂಕಿನ ರಾಮೇನಹಳ್ಳಿ ಗ್ರಾಮದ 25 ವರ್ಷದ ಗೃಹಿಣಿ ತನ್ನ ಮನೆಯ ಆವರಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೂವರು ಕಾರಿನಲ್ಲಿ ಬಂದು  ಮಹಿಳೆಯನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ಪತಿ ಹುಣಸೂರು ಪೊಲೀಸ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವ್ರತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಹುಣಸೂರು […]

ಮನೆ ಕೆಲಸಕ್ಕೆ ಬಂದು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಮನೆ ಕೆಲಸಕ್ಕೆ ಬಂದು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಮೈಸೂರು: ಇಲ್ಲಿಯ ರಾಮಕೃಷ್ಣನಗರದ ಐ ಬ್ಲಾಕ್‌  ಮನೆಯೊಂದಕ್ಕೆ  ಕೆಲಸಕ್ಕೆ ಬರುತ್ತಿದ್ದ ಮಹಿಳೆ ಮಾಲೀಕನ ಮನೆಯಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾಳೆ. ಕಳುವು ಮಾಡುತ್ತಿರುವ ಚಿತ್ರಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನೆ ಮಾಲೀಕ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ರಾಮಕೃಷ್ಣನಗರ ಐ ಬ್ಲಾಕ್‌ನ ರವೀಂದ್ರ ಪಿ.ರಾವ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.  ಕಳೆದ 6 ತಿಂಗಳಿನಿಂದ ಕೆಲಸಕ್ಕೆ ಬರುತ್ತಿರುವ  ಶುಭ ಎಂಬ ಮಹಿಳೆ  ಶುಕ್ರವಾರ ಮನೆ ಕೆಲಸಕ್ಕೆ ಬಂದು ಕಳ್ಳತನ ಮಾಡಿದ್ದಾಳೆ. ಮನೆಯಲ್ಲಿ ಯಾರು […]

ಹಿಟ್‌ ಆ್ಯಂಡ್‌ ರನ್‌: ಎತ್ತು ಸಾವು, ರಸ್ತೆ ಮಧ್ಯೆ ಕುಳಿತು ಬಿಕ್ಕಿಬಿಕ್ಕಿ ಅತ್ತ ರೈತ

ಹಿಟ್‌ ಆ್ಯಂಡ್‌ ರನ್‌:  ಎತ್ತು ಸಾವು, ರಸ್ತೆ ಮಧ್ಯೆ ಕುಳಿತು ಬಿಕ್ಕಿಬಿಕ್ಕಿ ಅತ್ತ ರೈತ

ಮೈಸೂರು: ಅಪರಿಚಿತ ವಾಹನ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಂದು ಎತ್ತು ಸಾವನ್ನಪ್ಪಿದ್ದು, ಇನ್ನೊಂದು ಗಂಭೀರ ಗಾಯಗೊಂಡ ಘಟನೆ ಘಟನೆ ಅಡಕನಹಳ್ಳಿ ಹುಂಡಿ-ಕೆಐಎಡಿಬಿ ರಸ್ತೆಯಲ್ಲಿ  ನಡೆದಿದ್ದು, ಪ್ರೀತಿಯಿಂದ ಸಾಕಿದ ಎತ್ತುಗಳ ಮರುಗುವ ಸ್ಥಿತಿ ಕಂಡು  ರೈತ  ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು. ರೈತ ರವಿವಾರ ಬೆಳಿಗ್ಗೆ ತಾಂಡವಪುರ ಗ್ರಾಮದ ಹೊರವಲಯದ ಜಮೀನನಲ್ಲಿ ಉಳುಮೆ ಮಾಡಿ ಗ್ರಾಮದ ಕಡೆ ತೆರಳುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರೊಂದು ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ […]

ಪತ್ನಿ ಕರೆಯಲು ಅತ್ತೆ ಮನೆಗೆ ಬಂದ ಅಳಿಯ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಪತ್ನಿ ಕರೆಯಲು ಅತ್ತೆ ಮನೆಗೆ ಬಂದ ಅಳಿಯ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಮೈಸೂರು: ಪತ್ನಿಯನ್ನು ಕರೆದುಕೊಂಡು ಹೋಗಲು ಅತ್ತೆ  ಮನೆಗೆ ಬಂದಿದ್ದ ಪತಿ ಸುಟ್ಟ ಸ್ಥಿತಿಯಲ್ಲಿ  ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ನಂಜನಗೂಡಿನಮಾಕನಾಪುರ ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಕೊತನೂರು ಗ್ರಾಮದ ನಿವಾಸಿ ನಾಗರಾಜ ಶೆಟ್ಟಿ(36) ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ. 6 ವರ್ಷದ ಹಿಂದೆ ಮಾಕನಾಪುರ ಗ್ರಾಮದ ಮಣಿ ಎಂಬುವವಳನ್ನ ಮದುವೆಯಾಗಿದ್ದ. ಪತ್ನಿ ಗಂಡನ ಮನೆಯಿಂದ ಜಗಳವಾಡಿ ತವರು ಮನೆ ಸೇರಿದ್ದಳು. ಆಕೆಯನ್ನು ಕರೆದುಕೊಂಡು ಹೋಗಲು ಬಂದಿದ್ದ ಎನ್ನಲಾಗಿದ್ದು. ಮಾಕನಾಪುರ ಗ್ರಾಮದ ಪಕ್ಕದ ಹಳ್ಳಿ ಕುಸುವಿನಹಳ್ಳಿ ಗ್ರಾಮದಲ್ಲಿ […]

ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾತನವೀಯತೆ ಮೆರೆದ ಶಾಸಕ ಸೋಮಶೇಖರ್

ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾತನವೀಯತೆ ಮೆರೆದ ಶಾಸಕ ಸೋಮಶೇಖರ್

ಮೈಸೂರು: ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯ ಮಾರ್ಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದದನ್ನು ಗಮನಿಸಿದ ಕೃಷ್ಣರಾಜ ಕ್ಷೇತ್ರದ ಶಾಸಕ ಎಮ್  ಸೋಮಶೇಖರ್ ಅವರು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬ ರಸ್ತೆ ಬದಿ ಬಿದ್ದಿದ್ದ ಈ ವೇಳೆ ಶಾಸಕ ವಿದ್ಯಾರಣ್ಯಪುರಂನಲ್ಲಿ ಕರುಮಾರಿಯಮ್ಮನ ಕರಗ ಮಹೋತ್ಸವ  ಭಾಗಿಯಾಗಿ ವಾಪಸ್ಸಾಗುತ್ತಿರುವುವಾಗ ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಗಮನಿಸಿ ಕೂಡಲೇ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕೆ.ಆರ್. ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ […]

1 2 3 4