ಡೆಂಗ್ಯೂ, ಚಿಕನ್ ಗೂನ್ಯಾ ರೋಗ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಮಾಜಿ ಸಚಿವ ರಾಮದಾಸ್

ಡೆಂಗ್ಯೂ, ಚಿಕನ್ ಗೂನ್ಯಾ ರೋಗ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಮಾಜಿ ಸಚಿವ ರಾಮದಾಸ್

ಮೈಸೂರು: ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಮತ್ತು ಚಿಕನ್ ಗೂನ್ಯಾ ರೋಗ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಎಸ್. ಎ. ರಾಮದಾಸ್ ಹೇಳಿದರು. ಶುಕ್ರವಾರ ನಗರದ ಮಕ್ಕಳ ಆಸ್ಪತ್ರೆ, ಕೆ.ಆರ್‍. ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಗೆ ಭೇಟಿ  ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಡೆಂಗ್ಯೂ ಹಾಗೂ ಚಿಕನ್ ಗೂನ್ಯಾ ರೋಗದಿಂದ ಬಳಲುತ್ತಿದ್ದಾರೆ. ರೋಗಿಗಳಿಗೆ ವೈಟ್ ಪ್ಲೇಟ್ಲೆಟ್ ಅವಶ್ಯಕತೆಯಿದ್ದು, ಇದಕ್ಕಾಗಿ 200ಕ್ಕೂ ಹೆಚ್ಚು ಯುವಕರು […]

ಚರಂಡಿ ‌ಕಾಮಗಾರಿಗಳನ್ನು ಶೀಘ್ರ ಮುಗಿಸಿ: ಶಾಸಕ ಕೇಶವಮೂರ್ತಿ

ಚರಂಡಿ ‌ಕಾಮಗಾರಿಗಳನ್ನು ಶೀಘ್ರ ಮುಗಿಸಿ: ಶಾಸಕ ಕೇಶವಮೂರ್ತಿ

ನಂಜನಗೂಡು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ರಾಷ್ಟ್ರಪತಿ ರಸ್ತೆ ಮತ್ತು ಎಂಜಿಎಸ್ ರಸ್ತೆಯ ಪಕ್ಕದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಶಾಸಕ ಕಳಲೇ ಕೇಶವ ಮೂರ್ತಿ ಹೇಳಿದರು. ನಂತರ ಮಾತನಾಡಿದ  ಅವರು, ಸಾರ್ವಜನಿಕರಿಗೆ ಸಹಕರಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಈಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂಧರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಪ್ರದೀಪ್,  ಮಂಜುನಾಥ್, ಬಿಜೆಪಿ ಮುಖಂಡ ಕೃಷ್ಣಪ್ಪಗೌಡ, ಹಗಿನವಾಳು ಬಸವಣ್ಣ, ನಗರಸಬಾ, ಆಯುಕ್ತ ವಿಜಯ್ ಇದ್ದರು. Views: 216

ಸಿಗರೇಟ್ ಖರೀದಿ ನೆಪದಲ್ಲಿ ಮಹಿಳೆಯ ಚೈನ್ ಕಿತ್ತು ಪರಾರಿ

ಸಿಗರೇಟ್ ಖರೀದಿ ನೆಪದಲ್ಲಿ ಮಹಿಳೆಯ ಚೈನ್ ಕಿತ್ತು ಪರಾರಿ

ಪಾಂಡವಪುರ : ಕಾರಿನಲ್ಲಿ ಬಂದ ಇಬ್ಬರು ಕಳ್ಳರು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಬಳಿ ಸಿಗರೇಟ್ ಖರೀದಿಸುವ ನೆಪ ಮಾಡಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ತಾಳಿ ಕಸಿದು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಮೈಸೂರು ಕೆ.ಆರ್.ಪೇಟೆ ರಸ್ತೆಯ ಹುಲ್ಕೆರೆ ಗೇಟ್ ಬಳಿ ಮಂಗಳವಾರ ರಾತ್ರಿ ನಡೆದಿದೆ. ಹುಲ್ಕೆರೆ ಗ್ರಾಮದ ರಾಜು ಎಂಬುವರ ಹೆಂಡತಿ ಮಂಜುಳ ಎಂಬ ಮಹಿಳೆಯೇ ಚಿನ್ನದ ತಾಳಿ ಕಳೆದುಕೊಂಡವರಾಗಿದ್ದು, ಮಂಗಳವಾರ ರಾತ್ರಿ ಸುಮಾರು 9.30ಕ್ಕೆ ಹುಲ್ಕೆರೆ ಗೇಟ್ ಬಳಿಯ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಕಾರಿನಲ್ಲಿ […]

ಮೈಸೂರು: ಪಾಲಿಕೆ ಉಪಚುನಾವಣೆಯಲ್ಲಿ ಮುಂದುವರೆದ ಜೆಡಿಎಸ್ ಅಧಿಪತ್ಯ

ಮೈಸೂರು: ಪಾಲಿಕೆ ಉಪಚುನಾವಣೆಯಲ್ಲಿ ಮುಂದುವರೆದ ಜೆಡಿಎಸ್ ಅಧಿಪತ್ಯ

ಮೈಸೂರು: ನಗರಪಾಲಿಕೆಯ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಸ್ ಬಿಎಂ ಮಂಜು ಭರ್ಜರಿ ಗೆಲುವು ಸಾಧಿಸಿದ್ದು ವಾರ್ಡ್ ನಂ 32 ರಲ್ಲಿ ಜೆಡಿಎಸ್ ಅಧಿಪತ್ಯ ಮುಂದುವರೆದಿದೆ. ನಗರದ ವಾರ್ಡ್ ನಂ 32 ರ ಕಾರ್ಪೋರೆಟ್ ಆಗಿದ್ದ ಸಿ. ಮಾದೇಶ ಅವರ ಮೇಲೆ ಇದ್ದ ಹುಣಸೂರು ಜೋಡಿ ಕೊಲೆ ಪ್ರಕರಣ ಆರೋಪ ಸಾಬೀತಾಗಿ  ಜೈಲು ಪಾಲಾಗಿದ್ದಕ್ಕೆ ತೆರವುವಾಗಿದ್ದ ಕಾರ್ಪೊರೆಟರ್ ಸ್ಥಾನ ಈಗ ಮತ್ತೆ ಜೆಡಿಎಸ್ ತೆಕ್ಕೆಗೆ ಒಲಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದು ಕಾಂಗ್ರೆಸ್ ಗೆ ಮೂರನೇ […]

ಮೈಸೂರು:ಆಸ್ಪತ್ರೆ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ವ್ಯಕ್ತಿ ಯತ್ನ

ಮೈಸೂರು: ಇಲ್ಲಿಯ  ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಜಯದೇವ ಆಸ್ಪತ್ರೆಯ ಕಟ್ಟಡದ ಮೇಲಿಂದ ಕೆಳಗೆ ಜಿಗಿದು ವ್ಯಕ್ತಿಯೊಬ್ಬ ಸೋಮವಾರ ಮಧ್ಯಾಹ್ನ ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ದಾರಿಹೋಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಕೆಳಗೆ ಜಿಗಿದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ  ಕೆ.ಆರ್. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವ್ಯಕ್ತಿಯನ್ನು ಮಂಜುನಾಥ್   ಎಂದು ಗುರುತಿಸಲಾಗಿದ್ದು, ಜಯದೇವ ಆಸ್ಪತ್ರೆಯಲ್ಲಿ ಸಂಗೀತಾ ಎಂಬ ಸಂಬಂಧಿಕರನ್ನ ನೋಡಲು ಸೋಮವಾರ ಮಧ್ಯಾಹ್ನ ಈತ ಬಂದಿದ್ದನು. ನೇರವಾಗಿ ಕಟ್ಟಡದ ಮೇಲೆ ಹೋದ  ಆತ ಇದ್ದಕ್ಕಿದ್ದಂತೆ […]

ಮಗಳ ಕಾಲೇಜು ಫೀ ಭರಿಸಲಾಗದೇ ತಂದೆ ನೇಣಿಗೆ ಶರಣು

ಮೈಸೂರು: ಮಗಳ ಕಾಲೇಜು ಫೀ ಭರಿಸಲಾಗದೇ ತಂದೆಯೊಬ್ಬ ಮನನೊಂದು  ನೇಣಿಗೆ ಶರಣಾದ ಘಟನೆ ನಗರದ ಬೃಂದಾವನ ಕಾಲೋನಿಯಲ್ಲಿ ನಡೆದಿದೆ. ಗಂಗಾಧರ್‍(51) ಮೃತ ವ್ಯಕ್ತಿ. ಕಳೆದ ಕೆಲವು ತಿಂಗಳಿನಿಂದ ಬೃಂದಾವನ ಕಾಲೋನಿಯ ಗಣಪತಿ ದೇವಸ್ಥಾನದಲ್ಲಿ ಅಗುಡೆ ಕೆಲಸ ಮಾಡಿಕೊಂಡಿದ್ದ, ಒಬ್ಬಳೇ ಮಗಳ ಜೊತೆ ದೇವಸ್ಥಾನದ ಆವರಣದಲ್ಲಿರುವ ಕೊಠಡಿಯಲ್ಲಿ ವಾಸವಿದ್ದ. ಮಗಳು ಬಿಎಸ್ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು. 12,500 ಕಾಲೇಜು ಫೀ ಕಟ್ಟಲು ಕಡೆಯ ದಿನ ಎಂದು ಹೇಳಿ ಅಜ್ಜಿ ಮನೆಗೆ ತೆರಳಿದ್ದಳು. ಮಗಳು ಬೆಳಗ್ಗೆ ಬಂದು ನೋಡುವುದರಲ್ಲಿ […]

ನಿಯಂತ್ರಣ ತಪ್ಪಿದ ಕಾರು ಕಂಪೌಂಡಿಗೆ ಡಿಕ್ಕಿ: ಯುವ ವೈದ್ಯ ಸಾವು

ನಿಯಂತ್ರಣ ತಪ್ಪಿದ ಕಾರು ಕಂಪೌಂಡಿಗೆ ಡಿಕ್ಕಿ:  ಯುವ ವೈದ್ಯ ಸಾವು

ಮೈಸೂರು: ಇಲ್ಲಿಯ ರಿಂಗ್ ರಸ್ತೆಯ ಅರ್ಬನ್ ಹಾಥ್ ಬಳಿ ಗುರುವಾರ ಬೆಳಗಿನ ಜಾವ 3 ಗಂಟೆಗೆ ನಿಯಂತ್ರಣ ತಪ್ಪಿದ ಕಾರು  ಕಂಪೌಂಡಿಗೆ ಡಿಕ್ಕಿ ಹೊಡೆದು ಯುವ ವೈದ್ಯರೊಬ್ಬರು ಮೃತಪಟ್ಟಿದ್ದಾರೆ. ಆಯುರ್ವೇದ ವೈದ್ಯ ಚೇತನ್ ಕುಮಾರ್(30)  ಮೃತಪಟ್ಟವರು.  ಭಾರತ್ ಕ್ಯಾನ್ಸರ್ ಆಸ್ಪತ್ರೆ ಕಡೆಯಿಂದ ಬೋಗಾದಿ ಕಡೆಗೆ ವೈದ್ಯರು ಕಾರಿನಲ್ಲಿ ಹೊರಟಾಗ ಅರ್ಬನ್ ಹಾಥ್ ಕಾಂಪೌಂಡ್‌ಗೆ ಕಾರು ಗುದ್ದಿದೆ.   ಚೇತನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಅತಿವೇಗದಲ್ಲಿತ್ತು.  ವೈದ್ಯರು ನಿದ್ರೆಯ ಮಂಪರಿನಲ್ಲಿದ್ದರು ಎಂದು ಗೊತ್ತಾಗಿದೆ. ವಿವಾಹಿತರಾಗಿರುವ ವೈದ್ಯ ಚೇತನಕುಮಾರ ಅವರಿಗೆ  ಹೆಂಡತಿ, […]

ಮೈಸೂರು: ಆರಕ್ಷಕರಿಗಾಗಿ ಕಲ್ಪವೃಕ್ಷ ಹೆಸರಿನ ಕ್ಯಾಂಟಿನ್‍ ಚಾಲನೆ

ಮೈಸೂರು: ಆರಕ್ಷಕರಿಗಾಗಿ ಕಲ್ಪವೃಕ್ಷ ಹೆಸರಿನ ಕ್ಯಾಂಟಿನ್‍ ಚಾಲನೆ

ಮೈಸೂರು: ಜ್ಯೋತಿನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಆರಕ್ಷಕರಿಗಾಗಿ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣವರ ಅವರು ಕಲ್ಪವೃಕ್ಷ ಎಂಬ ಹೆಸರಿನ ಪೊಲೀಸ್ ಕ್ಯಾಂಟೀನ್ ಹಾಗೂ ಹಾಪ್‍ಕಾಮ್ಸ್ ಸಂಕೀರ್ಣವನ್ನುಕಲ್ಪಿಸಿದ್ದು, ಮೈಸೂರು ದಕ್ಷಿಣ ವಲಯದ ಐಜಿಪಿ ವಿಫುಲ್‍ಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು. ಆರಕ್ಷಕರಿಗಾಗಿ ಈ  ಕ್ಯಾಂಟಿನ್ ಮತ್ತು ಹಾಪ್‍ಕಾಮ್ಸ್ ಮಳಿಗೆ ತೆರೆದಿದ್ದು, ಕಾಫಿ, ಟೀ 5 ರೂ.ಗೆ ಉಪಹಾರ ಮತ್ತು ಊಟ 20 ರೂ ಗೆ ನಿಗದಿ ಮಾಡಲಾಗಿದೆ ಮತ್ತು ಹಾಪ್ ಕಾಮ್ಸ್ ಮಳಿಗೆಯಲ್ಲಿ ದಿನನಿತ್ಯ ತಾಜಾ […]

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಮೈಸೂರು: ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ 2016-17ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ  ಎಂ ಕೆ ಸೋಮಶೇಖರ್ ಸನ್ಮಾನ ಮಾಡಿದರು. ಮಾಜಿ ಮಹಾಪೌರ  ಪುರುಷೋತ್ತಮ್ ಕಾರ್ಯಕ್ರಮ ಅಧ್ಯಕತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಪಿ ಕೆ ರಾಜಶೇಖರ್ ನಗರಪಾಲಿಕೆ ಸದಸ್ಯ ಜೆ ಎಸ್ ಜಗದೀಶ್ ಇತರರು ಉಪಸ್ಥಿತರಿದ್ದರು. Views: 274

ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ತಾಪಂ ಕಚೇರಿ ಎದುರು ಪ್ರತಿಭಟನೆ

ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ತಾಪಂ ಕಚೇರಿ ಎದುರು ಪ್ರತಿಭಟನೆ

ಪಾಂಡವಪುರ: ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆಗೆ ನಿರ್ಮಿಸಿರುವ ಅಕ್ರಮ ಕಾಂಪೌಂಡ್ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪಟ್ಟಣದ ತಾಪಂ ಕಚೇರಿ ಎದುರು ಅಡುಗೆ ಮಾಡಿ ಊಟಮಾಡುವ ಮೂಲಕ ವಿನೂತವಾಗಿ ಪ್ರತಿಭಟನೆ ನಡೆಸಿದರು. ಪಟ್ಟಣದ ತಾಪಂ ಕಚೇರಿ ಎದುರು  ಕನಗನಮರಡಿ ಗ್ರಾಮಸ್ಥರು, ತಾಪಂ ಇಓ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನಗನಮರಡಿ ಗ್ರಾಮದಲ್ಲಿ ಕೆಂಪಮ್ಮ ಮತ್ತು ಜವರೇಗೌಡ ಎಂಬುವರು ಗ್ರಾಮದ ಡೈರಿಪಕ್ಕದ ಸಾರ್ವಜನಿಕ ರಸ್ತೆಯನ್ನು ಒತ್ತವರಿ ಮಾಡಿಕೊಂಡು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ. ಅಲ್ಲದೆ ರಸ್ತೆ ನಮ್ಮದು […]