ರಾಷ್ಟ್ರದ ಒಳಿತಿಗಾಗಿ ಬಿಜೆಪಿ ಬೆಂಬಲಿಸಿ: ಶಾಸಕ ಸಿದ್ದು ಸವದಿ

ರಾಷ್ಟ್ರದ ಒಳಿತಿಗಾಗಿ ಬಿಜೆಪಿ ಬೆಂಬಲಿಸಿ: ಶಾಸಕ ಸಿದ್ದು ಸವದಿ

ಜಮಖಂಡಿ:ನಮ್ಮ ರಾಷ್ಟ್ರದ ಒಳಿತಿಗಾಗಿ ಎಲ್ಲರು ಬಿಜೆಪಿಯನ್ನು ಬೆಂಬಲಿಸಿ ಜನರ ಪರವಾಗಿ ಹಗಲಿರು ಳು ದುಡಿದು ನಿಮ್ಮ ಸೇವೆಯನ್ನು ಮಾಡಲು ಅನೂಕೂಲ ಮಾಡಬೇಕು ಎಂದು ಜಿಲ್ಲಾ ಅದ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು. ನಗರದ ವಾರ್ಡ ನಂ 1, 2 ಮತ್ತು 3 ರಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಪ್ರಚಾರವನ್ನು ಮಾಡಿ ಮಾತನಾಡಿದ ಅವರು, ನಮ್ಮ ಕೇಂದ್ರ ಸರ್ಕಾರ ರೈತರು, ಶೋಷಿತರು, ಮಹಿಳೆಯರ ಪರವಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತವನ್ನು ನಿಡುತ್ತಿದ್ದಾರೆ ಎಂದರು. […]

ಸರ್ವ ಜನಾಂಗ ನೆಮ್ಮದಿ ಬದುಕು ಸಾಗಿಸಲಿ: ಡಾ.ಮಹಾಂತೇಶ ಶಾಸ್ತ್ರೀ

ಸರ್ವ ಜನಾಂಗ ನೆಮ್ಮದಿ ಬದುಕು ಸಾಗಿಸಲಿ: ಡಾ.ಮಹಾಂತೇಶ ಶಾಸ್ತ್ರೀ

ಬೈಲಹೊಂಗಲ: ಸರ್ವ ಜನಾಂಗದ ಸಕಲ ದೋಷಗಳು ಪರಿಹಾರವಾಗಿ ನೆಮ್ಮದಿಯ ಬದುಕು ಕಾಣಲಿ ಎಂದು ವೇ.ಮೂ. ಡಾ. ಮಹಾಂತೇಶ ಶಾಸ್ತ್ರೀ ಹೇಳಿದರು. ಅವರು ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ದುರ್ಗಾದೇವಿ ದೇವಸ್ಥಾನದ 10 ನೇ ವರ್ಷದ ನವರಾತ್ರಿ ಉತ್ಸವ ಅಂಗವಾಗಿ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ 125 ನೇ ವರ್ಷಾಚರಣೆ, ಶಾಸಕರ, ಪುರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಸನ್ಮಾನ, ಸಾಂಸ್ಕೃತಿಕ ಸಂಭ್ರಮ, ನಗೆಹಬ್ಬ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಸಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಆಗಿ ರೈತನ ಬಾಳಿಗೆ ಒಳ್ಳೆಯದಾಗಲಿ […]

ತೋಂಟದಾರ್ಯ ಶ್ರೀ ಅಗಲಿಕೆಗೆ ಮುದ್ದೇಬ್ಬಿಹಾಳದಲ್ಲಿ ಶೋಕಾಚರಣೆ

ತೋಂಟದಾರ್ಯ  ಶ್ರೀ ಅಗಲಿಕೆಗೆ  ಮುದ್ದೇಬ್ಬಿಹಾಳದಲ್ಲಿ ಶೋಕಾಚರಣೆ

ಮುದ್ದೇಬಿಹಾಳ: ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಶನಿವಾರ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಪಟ್ಟಣದ ಎಂಜಿವಿಸಿ ಬಿಎಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದಿ.ಶಂಕರಪ್ಪ ತಡಸದ ಅವರ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಗಳ ಅಗಲಿಕೆಯ ಸಂದೇಶ ಕಾಲೇಜಿನ ಕಾರ್ಯಾಧ್ಯಕ್ಷ ಅಶೋಕ ತಡಸದ ಅವರಿಗೆ ಮಠದಿಂದ ದೂರವಾಣಿ ಮೂಲಕ ತಲುಪಿತು. ಇದನ್ನು ಕೂಡಲೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]

ಪ್ರಗತಿಪರ ಹಿರಿಯ ಮಠಾಧೀಶ ತೋಂಟದಾರ್ಯ ಶ್ರೀಗಳ ನಿಧನಕ್ಕೆ ಅಶೋಕ ಪೂಜಾರಿ ಸಂತಾಪ

ಪ್ರಗತಿಪರ ಹಿರಿಯ ಮಠಾಧೀಶ ತೋಂಟದಾರ್ಯ ಶ್ರೀಗಳ ನಿಧನಕ್ಕೆ ಅಶೋಕ ಪೂಜಾರಿ ಸಂತಾಪ

ಗೋಕಾಕ: ನಾಡಿನ ಪ್ರಗತಿಪರ ವಿಚಾರಧಾರೆಯ ಹಿರಿಯ ಮಠಾಧೀಶರಾಗಿದ್ದ ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶಿವಾಧೀನರಾಗಿರುವದು ನಾಡಿನ ಜನತೆಗೆ ತುಂಬಲಾರದ ನೋವನ್ನುಂಟುಮಾಡಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವಿಚಾರಧಾರೆಯ ಮೌಲ್ಯಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದ ಶ್ರೀ ಗಳು ಬಸವ ತತ್ವದ ಪ್ರಚಾರಕ್ಕೆ ಆಧ್ಯತೆ ನೀಡಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಹೋರಾಟಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಶ್ರೀಗಳು ಅನೇಕ ಹೋರಾಟಗಳ ಮುಂಚೂನಿಯಲ್ಲಿ ನಿಂತು […]

ಅಭಿವೃದ್ಧಿ ಏನೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ

ಅಭಿವೃದ್ಧಿ ಏನೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ

ಅಂತ್ಯೋದಯ ಬೇಸ್‍ಲೈನ್ ಸರ್ವೇ ಟಾಪ್‍ಟೆನ್ ಪಟ್ಟಿಯಲ್ಲಿ ಅರಭಾವಿ ಕ್ಷೇತ್ರದ 3 ಪಂಚಾಯಿತಿಗಳು ಗೋಕಾಕ : ಕೇಂದ್ರ ಸರ್ಕಾರದ 2018 ರ ಅಂತ್ಯೋದಯ ಬೇಸ್‍ಲೈನ್ ಸರ್ವೆಯಲ್ಲಿ ಅರಭಾವಿ ಕ್ಷೇತ್ರದ ಕುಲಗೋಡ ಗ್ರಾಮ ಪಂಚಾಯತಿಯು ದೇಶದಲ್ಲಿಯೇ ಅಗ್ರ ಸ್ಥಾನಪಡೆದಿರುವ ಹಿನ್ನೆಲೆಯಲ್ಲಿ ಪಂಚಾಯತಿ ಸಮೀತಿಯವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಕುಲಗೋಡ ಗ್ರಾಮ ಪಂಚಾಯತಿಯ ಸರ್ವಾಂಗೀಣ ವಿಕಾಸಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಕುಲಗೋಡ ಗ್ರಾಮವು ದೇಶದಲ್ಲಿಯೇ ಹೆಸರುವಾಸಿಯಾಗಲು ಕಾರಣಿಕರ್ತರಾದ ಬಾಲಚಂದ್ರ ಜಾರಕಿಹೊಳಿ ಅವರು ನೀಡಿರುವ ಕೊಡುಗೆ ಅನನ್ಯ. […]

ತೋಂಟದಾರ್ಯ ಶ್ರೀ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ತೋಂಟದಾರ್ಯ ಶ್ರೀ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ: ಗದಗ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದಾರೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮದೇಯಾದ ವಿಶಿಷ್ಟ ಸೇವೆ ಸಲ್ಲಿಸಿದ್ದ ಶ್ರೀಗಳು ಎಲ್ಲರ ಪ್ರೀತಿಗೆ ಭಾಜನರಾಗಿದ್ದರು. ಶಿಸ್ತಿನ ಹಾಗೂ ಸೌಜನ್ಯದ ಸಾಕಾರ ಮೂರ್ತಿಯಾಗಿದ್ದ ಶ್ರೀಗಳ ಅಗಲಿಕೆಯಿಂದ ನಿಧನದಿಂದ ಕನ್ನಡ ನಾಡು ಬಡವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ಅಮೀತ ಇಂಗಳಗಾಂವಿhttp://udayanadu.com

ವರ್ಷ ಕಳೆದರೂ ಕೊಪ್ಪಳದಲ್ಲಿ ಆರಂಭವಾಗದ ಇಂದಿರಾ ಕ್ಯಾಂಟೀನ್..!

ವರ್ಷ ಕಳೆದರೂ ಕೊಪ್ಪಳದಲ್ಲಿ ಆರಂಭವಾಗದ ಇಂದಿರಾ ಕ್ಯಾಂಟೀನ್..!

ಕೊಪ್ಪಳ, ಗಂಗಾವತಿಯಲ್ಲಿ ಕಟ್ಟಡಗಳಿಗಿಲ್ಲ ಉದ್ಘಾಟನೆ ಭಾಗ್ಯ ಬಗೆಹರಿಯದ ಟೆಂಡರ್ ಗೊಂದಲ  ಜಾಗ ಹುಡುಕಾಟದ ನೆಪ ಕೊಪ್ಪಳ: ಸಿದ್ದರಾಮಯ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾರಂಭಿಸಿದೆ.  ಆದರೆ ಕಳೆದ ವರ್ಷದಿಂದಲೇ ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಿಸಬೇಕಾಗಿದ್ದ ಐದು   ಇಂದಿರಾ ಕ್ಯಾಂಟೀನ್‌ಗಳು ಇದುವರೆಗೂ ಆರಂಭವಾಗಿಲ್ಲ. ಸರಕಾರ ಬಡವರ ಹಸಿವು ನಿಗಿಸಲು ನಗರ, ಪಟ್ಟಣ ಪ್ರದೇಶಗಳಲ್ಲಿನ ಜನರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ನೀಡುವ ಮಹತ್ವದ ಯೋಜನೆ ಇದಾಗಿದ್ದು, ಕಳೆದ […]

ಗ್ರಾಮಾಭಿವೃದ್ಧಿಗೆ ಹಿರಿಯರು, ಕಿರಿಯರು ಟೊಂಕ ಕಟ್ಟಿನಿಲ್ಲಬೇಕಿದೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಗ್ರಾಮಾಭಿವೃದ್ಧಿಗೆ ಹಿರಿಯರು, ಕಿರಿಯರು ಟೊಂಕ ಕಟ್ಟಿನಿಲ್ಲಬೇಕಿದೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ನೂರಾರು ಧರ್ಮ-ಜಾತಿಗಳಿದ್ದರೂ ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡಿರುವ ರಾಷ್ಟ್ರ ಯಾವುದಾದರೂ ಇದ್ದರೆ ಅದು ನಮ್ಮ ಭಾರತ ಇಲ್ಲಿ ಹುಟ್ಟಿದ ನಮಗೆ ಹೆಮ್ಮೆಯಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಗಾದೇವಿ ಮತ್ತು ಮರಗವ್ವದೇವಿ ದೇವಸ್ಥಾನ, ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿ ಬಳಿಕ ಮಾತನಡಿದ ಅವರು, ಪ್ರಪಂಚದಲ್ಲಿ ನಮ್ಮ ದೇಶ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಕಳೆದ ಚುನಾವಣೆಯಲ್ಲಿ ಸತತ […]

ಬೆಳಗಾವಿಯಲ್ಲಿ ಛಾಯಾಚಿತ್ರ ವರದಿಗಾರನ ಮನೆ ದರೋಡೆ

ಬೆಳಗಾವಿಯಲ್ಲಿ ಛಾಯಾಚಿತ್ರ ವರದಿಗಾರನ ಮನೆ ದರೋಡೆ

ಬೆಳಗಾವಿ:  ಛಾಯಾಚಿತ್ರ ವರದಿಗಾರನ ಮನೆಗೆ ಕನ್ನ ಹಾಕಿದ ಖದೀಮರು  ಚಿನ್ನಾಭರಣ ಹಣ ದೋಚಿ ಪರಾರಿಯಾದ ಘಟನೆ ನಗರದ ಹೊರವಲಯದ ಯಮನಾಪುರದಲ್ಲಿ ನಡೆದಿದೆ. ಬೆಳಗಾವಿ  ಪತ್ರಿಕೆಯೊಂದರಲ್ಲಿ ಅರೆಕಾಲಿಕ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಸಂಕಪ್ಪಗೋಳ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿಜಯದಶಮಿ ಹಬ್ಬಕ್ಕೆ ಊರಿಗೆ ತೆರಳಿದಾಗ ಮನೆ ಬೀಗ ಮುರಿದ ದುಷ್ಕರ್ಮಿಗಳು 3.4 ಲಕ್ಷ ಹಣ 60 ಗ್ರಾಂ ಚಿನ್ನಭರಣ ಸೇರಿ ವಿವಿಧ ಗ್ರಹ ಉಪಯೋಗಿ ವಸ್ತುಗಳನ್ನು ದೋಚಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು […]

ಜಮಖಂಡಿ ಉಪಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರ ಪತನ: ಮಹಾಂತೇಶ ಕವಟಗಿಮಠ

ಜಮಖಂಡಿ ಉಪಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರ ಪತನ: ಮಹಾಂತೇಶ ಕವಟಗಿಮಠ

ಜಮಖಂಡಿ: ಜಮಖಂಡಿ ಉಪಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ನಗರದ ಮೈಗೂರ ರಸ್ತೆಯ ಸೋಳಂಕಿ ಕಟ್ಟಡದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯು ಉಪ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡಿದ್ದು 3 ಲೋಕಸಭಾ ಮತ್ತು 2ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಜಯ ಸಿಗಲಿದೆ ಎಂದರು. ಕಳೆದ ಬಾರಿ ಪಕ್ಷದಲ್ಲಿ ಭಿನ್ನಾಭಿಪ್ರಾಯದಿಂದ ಕೂದ¯ಳತೆಯ ಅಂತರದಿಂದ ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಸೋಲು ಅನುಭವಿಸಿದ್ದರು. ಈ ಬಾರಿ […]