ಗೋಕಾಕ: ಹಿಲ್ ಗಾರ್ಡನ ಕಚೇರಿಯಲ್ಲಿ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗೋಕಾಕ: ಹಿಲ್ ಗಾರ್ಡನ ಕಚೇರಿಯಲ್ಲಿ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗೋಕಾಕ:  ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ  72 ನೇಯ ಸ್ವಾತಂತ್ರ್ಯೋತ್ಸವ ನಿಮಿತ್ಯವಾಗಿ ಧ್ವಜಾರೋಹನವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಿಠ್ಠಲ ಪರಸಣ್ಣವರ, ಪ್ರಕಾಶ ಬಸ್ಸಾಪುರೆ, ದಯನ್ನವರ್, ನಾಡಿಗೇರ್, ಎ.ಬಿ.ಖಾಜಿ,  ಸುರೇಶ ಮುಡ್ಡೆ ಪ್ಪಗೋಳ, ರಾಜು ಶಿಂಧೆ, ರಾಜು ಅಂಕಲಗಿ, ಮುತ್ತೆಪ್ಪಾ ತಳವಾರ, ಮಂಜು ಸನದಿ, ಸಂಜು ಶಿಂಧೆ, ತಿಪ್ಪಣ್ಣ ಗೊರಗುದ್ದಿ, ಸೇರಿದಂತೆ   ಇತರರು ಇದ್ದರು. udayanadu2016

ದೇಶಪ್ರೇಮ ಬೆಳೆಸಿಕೊಳ್ಳಲು ಸಿದ್ದಲಿಂಗಣ್ಣ ಆನೆಗುಂದಿ ಕರೆ

ದೇಶಪ್ರೇಮ ಬೆಳೆಸಿಕೊಳ್ಳಲು ಸಿದ್ದಲಿಂಗಣ್ಣ ಆನೆಗುಂದಿ ಕರೆ

ಶಹಾಪುರ:  ದೇಶಕ್ಕಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಇನ್ನೂ ಹಲವಾರು ಮಹಾನ್ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಟ ಮಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು. ಶಹಾಪುರ ಪಟ್ಟಣದ ದೇಶಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ೭೨ ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ವೀರರು ದೇಶಕ್ಕಾಗಿ ಸ್ವಾತಂತ್ರ್ಯ ಪಡೆಯುವ ಸಲುವಾಗಿ ಮಾಡಿದ ಪ್ರಯತ್ನಗಳು […]

ಮಹದಾಯಿ ತೀರ್ಪು ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ಮಹದಾಯಿ ತೀರ್ಪು ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ಬೆಳಗಾವಿ:  ಮಹದಾಯಿ ತೀರ್ಪು ವಿರೋಧಿಸಿ ಹಸಿರು ಕಾಂತ್ರಿ, ರೈತ ಸಂಘಟನೆ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸೇರಿದ ಪದಾಧಿಕಾರಿಗಳು ತುಂತೂರು ಮಳೆಯಲ್ಲಿಯೂ ಟೈರ್ ಗೆ ಬೆಂಕಿ ಹಚ್ಚಿ  ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಮೀತ ಇಂಗಳಗಾಂವಿhttp://udayanadu.com

ಮಹದಾಯಿ ತೀರ್ಪು ರಾಜ್ಯ ಪರ: ಗಜೇಂದ್ರಗಡದಲ್ಲಿ ಸಂಭ್ರಮಾಚರಣೆ

ಮಹದಾಯಿ ತೀರ್ಪು ರಾಜ್ಯ ಪರ: ಗಜೇಂದ್ರಗಡದಲ್ಲಿ ಸಂಭ್ರಮಾಚರಣೆ

ಗಜೇಂದ್ರಗಡ: ಮಹದಾಯಿ ತೀರ್ಪು ಕರ್ನಾಟಕದ ಪರವಾದ ಹಿನ್ನಲೆಯಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಮಂಗಳವಾರ ಸಂಭ್ರಮಿಸಿದರು. ಸಂಘಟನೆ ತಾಲೂಕಾಧ್ಯಕ್ಷ ಭೀಮಣ್ಣ ಇಂಗಳೆ ಮಾತನಾಡಿ, ಮಹದಾಯಿ ನೀರು ಹಂಚಿಕೆ ತೀರ್ಪು ರಾಜ್ಯ ಪರವಾಗಿದ್ದು ಸಂತಸ ತರಿಸಿದೆ. ರಾಜ್ಯಕ್ಕೆ  ಒಟ್ಟು 13.70 ಟಿಎಂಸಿ ನೀರು ಹಂಚಿಕೆ ಮಾಡಿರುವುದು ಉತ್ತರ ಕರ್ನಾಟಕ ಭಾಗದ ಜನರ ನಿರಂತರ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಗೆಲುವಾಗಿದೆ. ಕಳೆದ ಮೂರು ವರ್ಷಕ್ಕೂ ಅಧಿಕ ದಿನಗಳ ಕಾಲ ನರಗುಂದದಲ್ಲಿ […]

ಉಜ್ವಲ ಗ್ಯಾಸ್ ವಿತರಣೆ ಕೇಂದ್ರದ ದೊಡ್ಡ ಮೋಸ : ಕಾಂಗ್ರೆಸ್ ಪ್ರತಿಭಟನೆ

ಉಜ್ವಲ ಗ್ಯಾಸ್ ವಿತರಣೆ ಕೇಂದ್ರದ ದೊಡ್ಡ ಮೋಸ : ಕಾಂಗ್ರೆಸ್ ಪ್ರತಿಭಟನೆ

ಕೊಪ್ಪಳ: ಕೇಂದ್ರದ ಮೋದಿ ನೇತೃತ್ವದ ಸರಕಾರ ಬರೀ ಸುಳ್ಳುಗಳನ್ನು ಹೇಳುತ್ತಿದೆ ಎನ್ನುವದಕ್ಕೆ ಜ್ವಲಂತ ಉದಾಹರಣೆ ಉಜ್ವಲ ಎಲ್‌ಪಿಜಿ ಗ್ಯಾಸ್ ಕಿಟ್ ವಿತರಣೆ ನಾಟಕ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದ್ದಾರೆ ಅವರು ನಗರದ ಸಾಹಿತ್ಯ ಭವನದ ಹತ್ತಿರ ವಿವಿಧ ಕಾಂಗ್ರೆಸ್ ಘಟಕಗಳ ಆಶ್ರಯದಲ್ಲಿ ನಡೆಸಿದ ಸಾಂಕೇತಿಕ ಹೋರಾಟದಲ್ಲಿ ಮಾತನಾಡಿ, ಉಜ್ವಲ ಗ್ಯಾಸ್ ಕಿಟ್ ಹೆಸರಲ್ಲಿ ಫಲಾನುಭವಿಗಳ ಖಾತೆಗೆ ಸುಮಾರು 1830 ರುಪಾಯಿಗಳ ಸಾಲವನ್ನು ಹೊರಿಸಲಾಗಿದೆ, ದೇಶದ ಅನೇಕ ಕೋಟಿ ಜನರು ಎಲ್‌ಪಿಜಿ […]

ಸಂವಿಧಾನ ಸುಟ್ಟ ಕಿಡಿಗೇಡಿಗಳ ಗಡಿಪಾರಿಗೆ ಒತ್ತಾಯ: ಸುರುಪುರದಲ್ಲಿ ಬೃಹತ್ ಪ್ರತಿಭಟನೆ

ಸಂವಿಧಾನ ಸುಟ್ಟ ಕಿಡಿಗೇಡಿಗಳ ಗಡಿಪಾರಿಗೆ ಒತ್ತಾಯ: ಸುರುಪುರದಲ್ಲಿ ಬೃಹತ್ ಪ್ರತಿಭಟನೆ

ಸುರಪುರ: ದಹಲಿಯ ಜಂತರ ಮಂತರ್  ನಲ್ಲಿ ಸಂವಿಧಾನ ಪ್ರತಿ ಸುಟ್ಟ ಕಿಡಿಗೇಡಿಗಳನ್ನು ಗಡಿ ಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ  ವಿವಿಧ ದಲಿತಪರ  ಸಂಘಟನೆಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿ ಕಾರಿ ಬಣದ) ನೇತೃತ್ವದಲ್ಲಿ ಅನೇಕ ದಲಿತ ಹಾಗೂ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ […]

ಸಂವಿಧಾನ ಪ್ರತಿ ಸುಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ 21 ರಂದು ಧರಣಿ

ಸಂವಿಧಾನ ಪ್ರತಿ ಸುಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ 21 ರಂದು ಧರಣಿ

ಕಲಬುರಗಿ: ದೆಹಲಿಯ ಜಂತರ್-ಮಂತರ್ ನಲ್ಲಿ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿರುವ ಮನುವಾದಿಗಳನ್ನು ಕೂಡಲೇ ಬಂಧಿಸಿ ಶಿಕ್ಷಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಎಲ್ಲ ಸಮುದಾಯಗಳು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಆ.21 ರಂದು ಜಿಲ್ಲಾಧಿಕಾರಿ ಕಚೇರಿಯ ಎದುರುಗಡೆ ಬೃಹತ್ ಪ್ರಮಾಣದ ಅನಿರ್ಧಿಷ್ಟಾವದಿ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಿರಿಯ ದಲಿತ ಮುಖಂಡ ಗುರುಶಾಂತ ಪಟ್ಟೇದಾರ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 32 ಕೋಟಿ […]

ಶಹಾಪುರದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಣೆ

ಶಹಾಪುರದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಣೆ

ಶಹಾಪುರ: ಮಾನವ ಬಂಧುತ್ವ ವೇದಿಕೆ ವತಿಯಿಂದ  ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ  ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ಅನಾಥ ಆಶ್ರಮದ ಮಕ್ಕಳಿಗೆ ಹಾಲು-ಹಣ್ಣು ವಿತರಿಸಿ ನಾಗರ ಪಂಚಮಿಯನ್ನು ಬಸವ ಪಂಚಮಿ ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಅಶೋಕ ಹೊಸ್ಮನಿ,  ತಾಲೂಕು ವೈದ್ಯಾಧಿಕಾರಿ ರಮೇಶ ಗುತ್ತೇದಾರ, ಸಂಘಟನೆ ತಾಲೂಕು ಸಂಚಾಲಕ ಧರ್ಮರಾಜ ಬಾಣತಿಹಾಳ, ಮಾನಪ್ಪ ಬಿ. ನಾನಗಟಗಿ, ಸುಭಾಸ ಪೂಜಾರಿ, ರಾಘು ಟೇಲರ ಇತರರು ಇದ್ದರು. ಅಮೀತ ಇಂಗಳಗಾಂವಿhttp://udayanadu.com

ಬಂಡವಾಳಶಾಹಿ ಕಂಪನಿಗಳಿಂದ ನಮ್ಮ ಭಾಷೆಗೂ ಕತ್ತು ಬಂದಿದೆ: ಪ್ರೊ ಮಳಗಿ ವಿಷಾದ

ಗೋಕಾಕ: ಬಂಡವಾಳಶಾಹಿ ಕಂಪನಿಗಳು ನಮ್ಮ ಭೂಮಿಯನ್ನಷ್ಟೇ ಒತ್ತುವರಿ ಮಾಡಿಕೊಂಡಿಲ್ಲ ನಮ್ಮ ಭಾಷೆ, ಸಂಸ್ಕೃತಿಯನ್ನು ಒತ್ತುವರಿ ಮಾಡಿಕೊಂಡಿವೆ ಇದರಿಂದ ನಮ್ಮ ಭಾಷೆಗೆ ಕುತ್ತು ಬಂದೊದಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಚಿಂತಕ ಪ್ರೊ. ಗಂಗಾಧರ ಮಳಗಿ ವಿಷಾದ ವ್ಯಕ್ತಪಡಿಸಿದರು. ನಗರದಲ್ಲಿ ಇತ್ತೀಚಿಗೆ ಚುಟುಕು ಸಾಹಿತ್ಯ ಪರಿಷತ್ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ‘ತಿಂಗಳ ಕವಿ ಸಮಯದ’ ಕವಿ ಕಾವ್ಯ ದರ್ಶನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಆನಂದ ಗೋಟಡಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾವ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ […]

ಗೋಕಾಕ:ಮಮದಾಪೂರ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ

ಗೋಕಾಕ:ಮಮದಾಪೂರ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ

ಗೋಕಾಕ: ತಾಲೂಕಿನ ಮಮದಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ  ಜರುಗಿದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಹಾಗೂ ಉಪಾಧ್ಯಕ್ಷರಾಗಿ ಸಿದ್ರಾಮಪ್ಪ ಲಂಗೋಟಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಸದಸ್ಯರುಗಳಾದ ಚನ್ನಪ್ಪ ಗಾಣಗಿ, ಬಸವರಾಜ ಕಮತ, ಸೂರ್ಯಕಾಂತ ಗುದಗನವರ, ರವೀಂದ್ರ ಕಟಕೋಳ, ಲಕ್ಷ್ಮಣ ಮುರಕುಂಬಿ, ಶಾರದಾ ಮುರಗೋಡ, ಮಹಾದೇವಿ ವಾಲಿ, ಸಿದ್ದಪ್ಪ ಮಾಳಗಿ, ಕೆಂಚಪ್ಪ ಭಜಂತ್ರಿ, ರಮೇಶ ಬನ್ನೂರ ಗ್ರಾಮದ ಮುಖಂಡರಾದ ಶಂಕರಗೌಡ ಪಾಟೀಲ, ಈರಣ್ಣಾ ಕಮತ, ನಾಗೇಶ ಶಿದ್ನಾಳ, ಈರಣ್ಣಾ ಜನ್ಮಟ್ಟಿ, […]