ಎಸ್ ಟಿ ಶೇ 7.5 ಮೀಸಲಾತಿಗಾಗಿ ರಾಹುಲ್ ಗಾಂಧಿಗೆ ಮನವಿ ಸಲ್ಲಿಸಲಾಗುವುದು: ಬೆಲ್ಲಾಹಿ ನಾಯಕ

ಎಸ್ ಟಿ ಶೇ 7.5 ಮೀಸಲಾತಿಗಾಗಿ ರಾಹುಲ್ ಗಾಂಧಿಗೆ ಮನವಿ ಸಲ್ಲಿಸಲಾಗುವುದು: ಬೆಲ್ಲಾಹಿ ನಾಯಕ

ಕೊಪ್ಪಳ: ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿ ಒದಗಿಸುವ ಕುರಿತು ರಾಹುಲ್ ಗಾಂಧಿಯವರಿಗೆ ಮನವಿ ನೀಡಲಾಗುವದು ಎಂದು ಎಐಸಿಸಿ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಬೆಲ್ಲಾಹಿ ನಾಯಕ ಹೇಳಿದರು. ನಗರದ ಶಾದಿ ಮಹಲಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಜಿಲ್ಲಾ ಎಸ್.ಟಿ ವಿಭಾಗದ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕಿರುವ ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡ ಅಭಿವೃದ್ದಿ ಕುಂಠಿತವಾಗುತ್ತಿದ್ದು, ಎಸ್ ಟಿ ಮೀಸಲಾತಿಯನ್ನು  ಶೇ 7.5 ಕ್ಕೆ ಹೆಚ್ಚಿಸಿ ಜನಾಂಗದ ಅಭಿವೃದ್ದಿಗೆ ಹಾಗೂ  ಶಿಕ್ಷಣ, ಉದ್ಯೋಗ ಇನ್ನಿತರ ವಲಯಗಳಲ್ಲಿ ಅವಕಾಶಗಳು […]

ಧಾರವಾಡ: ಸೆಪ್ಟೆಂಬರ್ ,ಅಕ್ಟೋಬರ್ ತಿಂಗಳಲ್ಲಿ 1 ವಾರ ಉದ್ಯಾನವನ ಸ್ಪರ್ಧೆ, ಫಲಪುಷ್ಪ ಪ್ರದರ್ಶನ

ಧಾರವಾಡ: ಸೆಪ್ಟೆಂಬರ್ ,ಅಕ್ಟೋಬರ್ ತಿಂಗಳಲ್ಲಿ 1 ವಾರ ಉದ್ಯಾನವನ ಸ್ಪರ್ಧೆ, ಫಲಪುಷ್ಪ ಪ್ರದರ್ಶನ

ಧಾರವಾಡ: ಬರುವ ಸೆಪ್ಟಂಬರ್‍ನಲ್ಲಿ ಒಂದುವಾರ ಕಾಲ ಹುಬ್ಬಳ್ಳಿ, ಧಾರವಾಡ ಅವಳಿ ನಗರದಲ್ಲಿ ಉದ್ಯಾನವನ ಸ್ಪರ್ಧೆ ಹಾಗೂ ಅಕ್ಟೋಬರ್‍ನಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು. ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಪರಿಸರ ಪ್ರೀತಿ ಹೆಚ್ಚಿಸಲು ಹಾಗೂ ವಾತಾವರಣದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಹಸಿರುಪ್ರಜ್ಞೆ ಮೂಡಿಸುವ ಅಗತ್ಯವಿದೆ. ಪ್ರಸಕ್ತ ಸಾಲಿನಲ್ಲಿ ಸೆಪ್ಟಂಬರ್ 23 ರಿಂದ 25 ರವರೆಗೆ ಹುಬ್ಬಳ್ಳಿಯಲ್ಲಿ ಹಾಗೂ 26 […]

ವಿವಿಧ ಬೇಡಿಕೆ ಈಡೇರಿಕೆಗೆ ಶಿಕ್ಷಕರಿಂದ ಪ್ರತಿಭಟನೆ, ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ

ವಿವಿಧ ಬೇಡಿಕೆ ಈಡೇರಿಕೆಗೆ ಶಿಕ್ಷಕರಿಂದ ಪ್ರತಿಭಟನೆ, ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ

ಧಾರವಾಡ:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಗುರಿಕಾರ ಅವರ ನೇತೃತ್ವದಲ್ಲಿ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಗುರಿಕಾರ, 2004 ರಿಂದ ದೇಶದ ನೌಕರರಿಗೆ ಮತ್ತು ಶಿಕ್ಷಕರಿಗೆ ಜಾರಿಗೆ ತಂದಿರುವ ಹೊಸ ಪಿಂಚಣೆಇ ಯೋಜನೆಯನ್ನು ರದ್ದುಗೊಳಿಸಿ ಹಳೇ […]

ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಯಶಸ್ಸು ಸಾಧ್ಯ: ಜ್ಞಾನೇಶ್ವರ ತುಳಸೀದಾಸ ಶ್ರೀ

ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಯಶಸ್ಸು ಸಾಧ್ಯ: ಜ್ಞಾನೇಶ್ವರ ತುಳಸೀದಾಸ ಶ್ರೀ

ಧಾರವಾಡ: ಸಮಾಜ ಒಗ್ಗಟ್ಟಿನಿಂದ ಇದ್ದರೆ ಮಾತ್ರ ದೇವತಾ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಪಂಡರಪುರದ ನಾಮದೇವ ಮಹಾರಾಜರ 17 ನೇ ವಂಶಜರಾದ ಜ್ಞಾನೇಶ್ವರ ತುಳಸೀದಾಸ ನಾಮದಾಸ ಮಹಾರಾಜ ಹೇಳಿದರು. ನಗರದ ಬಾಳಿಕಾಯಿ ಓಣಿಯ ಹರಿಮಂದಿರದಲ್ಲಿ  ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ 10 ದಿನಗಳವರೆಗೆ ನಡೆದ  ನಾಮದೇವ ಗಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡುವ ಜೊತೆಗೆ  ಧರ್ಮದ ಬಗ್ಗೆ ಕೂಡ ಅರಿವು ಮೂಡಿಸಬೇಕಿಗದೆ. ನೀವು ದುಡಿದ ಹಣದಲ್ಲಿ ಒಂದಿಷ್ಟು ಭಾಗವನ್ನು […]

ಸಾಲಭಾದೆಯಿಂದ ರೈತರು ಧೈರ್ಯ ಕಳೆದುಕೊಳ್ಳಬಾರದು: ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ

ಸಾಲಭಾದೆಯಿಂದ ರೈತರು ಧೈರ್ಯ ಕಳೆದುಕೊಳ್ಳಬಾರದು: ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ

ಚಿಕ್ಕೋಡಿ: ಸಾಲವಾಗಿದೆ ಎಂದು ಧೈರ್ಯ ಕಳೆದುಕಂಡು ರೈತರು ಆತ್ಮಹತ್ಯೆಗೆ ಶರಣಾಗಬಾರದು. ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿಮ್ಮೊಂದಿಗೆ ಇದ್ದೇವೆ. ಸರ್ಕಾರದ ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು. ತಾಲೂಕಿನ ಚಂದೂರ ಗ್ರಾಮದಲ್ಲಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಪ್ರಕಾಶ ಕೋಳಿ ಅವರ  ಕುಟುಂಬ ವರ್ಗದವರಿಗೆ ಕೃಷಿ ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ. ಪರಿಹಾರ ಧನ ಚೆಕ್ ವಿತರಿಸಿ ನಂತರ ಮಾತನಾಡಿದರು ಗ್ರಾಮೀಣ ಪ್ರದೇಶದಲ್ಲಿ […]

ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಮುದ್ದೇಬಿಹಾಳ: ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ, ನಡಹಳ್ಳಿ,  ವನಹಳ್ಳಿ, ಹಂದ್ರಾಳ ಗ್ರಾಮಗಳಿಗೆ  ಸರಿಯಾದ ಬಸ್ ವ್ಯವಸ್ಥೆಇಲ್ಲದೇ ದಿನ ನಿತ್ಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಕೂಡಲೇ ಬಸ್ ಸೌಲಭ್ಯ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪವಿತ್ರಾ ಹೊಸಮನಿ, ಸಾಬವ್ವ ಅರ್ಜಿ, ಸವಿತಾ ಬಸರಕೋಡ, ರೇಣುಕಾ ಬಿರಾದಾರ, ಸುನಂದಾ ತಿಳಗೂಳ, ಲಗಮವ್ವ ವಗ್ಗರ, ಶಶಿಗೌಡ ಮಾಡಗಿ, ವಿನೋದ ಹಿರೇಮಠ, ಗುರಲಿಂಗಯ್ಯ ಹಿರೇಮಠ, ವಿನೋದ […]

ಗಡಿಯಲ್ಲಿ ಕನ್ನಡ ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯ: ಸಾಹಿತಿ ಸನದಿ

ಗಡಿಯಲ್ಲಿ ಕನ್ನಡ ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯ: ಸಾಹಿತಿ ಸನದಿ

ನಿಪ್ಪಾಣಿ: ಗಡಿ ವಿವಾದವು ಮುಗಿದು ಹೋದ ಅಧ್ಯಾಯವಾಗಿದ್ದು,ನಮ್ಮ ನಾಡಿನ ಕಿಂಚಿತ್ತೂ ಜಾಗವು ಸಹ ಎಲ್ಲಿಯೂ ಹೋಗಲು ಸಾಧ್ಯವಿಲ್ಲ,ಆದ್ದರಿಂದ ಗಡಿಯಲ್ಲಿ ಪರಿಣಾಮಕಾರಿಯಾಗಿ ಕನ್ನಡವನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ,ಕನ್ನಡದಲ್ಲಿ ವಿದ್ಯಾಭ್ಯಾಸ, ಉದ್ಯೋಗಗಳ ಸೃಷ್ಠಿ ಹಾಗೂ ಅರ್ಥಪೂರ್ಣ ಕನ್ನಡ ಚಟುವಟಿಕೆಗಳು ಕ್ರೀಯಾಶೀಲಗೊಂಡಲ್ಲಿ ಕನ್ನಡವು ತನ್ನ ಹಿರಿಮೆ-ಗರಿಮೆಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೆಳಗಾವಿಯ ಹಿರಿಯ ಸಾಹಿತಿ ಎ.ಎ.ಸನದಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕೋಡಿ,ಘಟಕ ನಿಪ್ಪಾಣಿ ಹಾಗೂ ಸ್ಥಳೀಯ ಗಡಿನಾಡು ಕನ್ನಡ ಬಳಗದ ಜಂಟಿ ಸಹಯೋಗದೊಂದಿಗೆ ಸರ್ಕಾರಿ ಪೌಢ ಶಾಲೆಯಲ್ಲಿ ಹಮ್ಮಿಕೊಂಡ […]

ವಿಜಯಪುರ: ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ವಿಜಯಪುರ: ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ವಿಜಯಪುರ: ಬೈಕ್ ಸಾವರನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಗೋಲಗೇರಿ  ರಸ್ತೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶ ಮೂಲದ  ಸೂರ್ಯರಾವ್ ಕಾಳಿಶೆಟ್ಟಿ (40) ಮೃತ ಬೈಕ್ ಸವಾರ. ಈತ ಕೌದಿ ಕಸೂತಿದಾರನಾಗಿ ಕೆಸಲ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 142

ಸೇಬು ದರ ಪೈಟೋಟಿ: ಬೆಳಗಾವಿ ಮಾರುಕಟ್ಟೆಯಲ್ಲಿ ಮಾರಾಮಾರಿ, 10 ಜನರಿಗೆ ಗಾಯ

ಸೇಬು ದರ ಪೈಟೋಟಿ: ಬೆಳಗಾವಿ ಮಾರುಕಟ್ಟೆಯಲ್ಲಿ ಮಾರಾಮಾರಿ, 10 ಜನರಿಗೆ ಗಾಯ

ಬೆಳಗಾವಿ: ಇಲ್ಲಿಯ ಗಣಪತಿಗಲ್ಲಿಯಲ್ಲಿ ಸೇಬು ಹಣ್ಣು ಮಾರಾಟಗಾರರ ನಡುವೆ ದರ ಮತ್ತು ಗಾಡಿ ನಿಲ್ಲಿಸುವ ಸಲುವಾಗಿ ಶನಿವಾರ ಬೆಳಗ್ಗೆ  ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಹೊಡೆದಾಟ, ಹಲ್ಲೆ, ಚೂರು ಇರಿತ ನಡೆದಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಸಲೀಮ್ ಶಾಬಾಜ್ ಮತ್ತು ಇತರರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೇಬು ಹಣ್ಣಿನ ದರ ಪೈಪೋಟಿ  ಹಾಗೂ ತಳ್ಳುವ ಗಾಡಿ ನಿಲ್ಲಿಸುವ ಸಂಬಂಧ ವ್ಯಾಪಾರಿಗಳ ನಡುವೆ ಗಲಾಟೆ ಶುರುವಾಗಿದೆ. ಕೆಲವರು ತಕ್ಕಡಿ ಹಾಗು ಕಲ್ಲು ಹಿಡಿದು ಹೊಡೆದಾಟಕ್ಕಿಳಿದರೆ […]

ಅಥಣಿ: ಐನಾಪೂರ ಏತ ನೀರಾವರಿ ಕಾಲುವೆಗಳಿಗೆ ನೀರು, ರೈತರಲ್ಲಿ ಮುಖದಲ್ಲಿ ಮಂದಹಾಸ

ಅಥಣಿ: ಐನಾಪೂರ ಏತ ನೀರಾವರಿ ಕಾಲುವೆಗಳಿಗೆ ನೀರು, ರೈತರಲ್ಲಿ ಮುಖದಲ್ಲಿ ಮಂದಹಾಸ

ಅಥಣಿ: ಐನಾಪೂರ ಏತ ನೀರಾವರಿ ಯೋಜನೆಯಿಂದ ಕವಲಗುಡ್ಡ, ಸಿದ್ದೇವಾಡಿ ಗ್ರಾಮದ ಕಾಲುವೆಳಿಗೆ ನೀರು ಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ  ಶನಿವಾರ ಬೆಳಿಗ್ಗೆ ಗ್ರಾಮದ ಕಾಲವೆಗಳಿಗೆ ನೀರು ಹರಿಸಲಾಗಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಸಂಜಯ ಹೊನಕಾಂಡೆ ಮಾತನಾಡಿ, ಐನಾಪೂರ ಏತ ನೀರಾವರಿ ಯೋಜನೆಯಲ್ಲಿ ಕವಲಗುಡ್ಡ ಹಾಗೂ ಸಿದ್ದೇವಾಡಿ ಗ್ರಾಮದಲ್ಲಿ ಕಾಲುವೆಗಳನ್ನು ನಿರ್ಮಿಸಿ 2 ವರ್ಷ ಪೂರೈಸಿದರು ಕೂಡ ಒಂದು ಬಾರಿಯೂ […]