ಕಾಕತಿ ಬಳಿ ವಾಹನ ಅಪಘಾತ ಚಾಲಕನಿಗೆ ಗಾಯ

ಕಾಕತಿ ಬಳಿ ವಾಹನ ಅಪಘಾತ ಚಾಲಕನಿಗೆ ಗಾಯ

ಬೆಳಗಾವಿ: ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬುಧವಾರ ಬೆಳಗಿನ ಜಾವ  ೩.೩೦ ರ ಸುಮಾರಿಗೆ ಕಾಕತಿಯ ಬಳಿ ಘಟನೆ ನಡೆದಿದೆ. ವಾಹನ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಯಾವುದೇ ಪ್ರಾಣ ಹಾನಿ ಯಾಗಿಲ್ಲ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. udayanadu2016

ದೇವರಿಂದ ಹಾಳಾಗಿದ್ದು ಸಾಕು, ಪರಿವರ್ತನೆಯಾಗಿ ಜೀವನ ಸಾಗಿಸಬೇಕು: ಸಾಹಿತಿ ಯಲ್ಲಪ್ಪ ಹಿಮ್ಮಡಿ ಸಲಹೆ

ದೇವರಿಂದ ಹಾಳಾಗಿದ್ದು ಸಾಕು, ಪರಿವರ್ತನೆಯಾಗಿ ಜೀವನ ಸಾಗಿಸಬೇಕು: ಸಾಹಿತಿ ಯಲ್ಲಪ್ಪ ಹಿಮ್ಮಡಿ ಸಲಹೆ

  ಹಿಡಕಲ್ ಡ್ಯಾಂನಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಮಾವೇಶ ಹಿಡಕಲ್ ಡ್ಯಾಂ:  ದೇವರಿಂದಲೇ ನಾವೆಲ್ಲ ಹಾಳಾಗಿದ್ದೇವೆ. ಇದರಿಂದ ಹೊರಗೆ ಬರಬೇಕು. ಒಡೆದು ಆಳುವ ನೀತಿಯಿಂದ ಸಮಾಜ ಒಂದಾಗಿಲ್ಲ. ಇದಕ್ಕಾಗಿ ಗುಲಾಮರಂತೆ ಜೀವನ ಸಾಗಿಸಬೇಕಾದ ಪ್ರಸಂಗಗಳು ಹಾಗೆಯೇ ಉಳಿದಿವೆ. ಇದರ ಅರ್ಥ ತಿಳಿದು ಪರಿವರ್ತನೆಯಾಗಿ ಜೀವನ ನಡೆಸಬೇಕು ಎಂದು ಸಾಹಿತಿ  ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಹುಕ್ಕೇರಿ ತಾಲೂಕು ಹಿಡಕಲ್ ಡ್ಯಾಂ ಶಿವಾಲಯ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಸಮಾವೇಶದಲ್ಲಿ ಮಂಗಳವಾರ ಮಾತನಾಡಿದರು. […]

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಕಟಿಸಲು ಒತ್ತಾಯ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಕಟಿಸಲು ಒತ್ತಾಯ

ದಾವಣಗೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಿರಂಗಕ್ಕೆ ಒತ್ತಾಯಿಸಿ ಕ್ರಿಯಾಸಮಿತಿ ಆಶ್ರಯದಲ್ಲಿ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆ ನಡೆಯಿತು. ಈ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾರಿಗೆ ಒತ್ತಾಯಿಸಿ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣೆಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು. ಈ ಹೋರಾಟವನ್ನು ತೀವ್ರಗೊಳಿಸುವುದು. ರಾಜ್ಯ ಹೋರಾಟ ಮಾಡುವುದು, ಎಲ್ಲ ವರ್ಗದ ಜನರು ಇದರಲ್ಲಿ ಪಾಲ್ಗೋಳ್ಳುವಂತೆ ಒತ್ತಾಯಿಸುವುದು. ಜನಸಂಖ್ಯಾವಾರು ಮೀಸಲಾತಿ ಪ್ರಮಾಣ ಹೆಚ್ಚಿಸುವುದು, ಹಿಂದುಳಿದ ಆಯೋಗದ ಅಧ್ಯಕ್ಷರ ತೀರ್ಮಾನಗಳಿಗೆ ಸಂವಿಧಾನಿಕ ಸ್ಥಾನಮಾನ ನೀಡಬೇಕು […]

ಕೇಂದ್ರ ಸರ್ಕಾರದ ಆನ್‍ಲೈನ್ ಔಷಧಿ ಮಾರಾಟ ಕ್ರಮ ವಿರೋಧಿಸಿ ತಹಶೀಲ್ದಾರರಿಗೆ ಮನವಿ

ಕೇಂದ್ರ ಸರ್ಕಾರದ  ಆನ್‍ಲೈನ್  ಔಷಧಿ ಮಾರಾಟ ಕ್ರಮ ವಿರೋಧಿಸಿ ತಹಶೀಲ್ದಾರರಿಗೆ ಮನವಿ

ರಾಮದುರ್ಗ: ಕೇಂದ್ರ ಸರಕಾರ ಆನ್‍ಲೈನ್ ಮುಖಾಂತರ ಔಷಧಿ ಮಾರಾಟ ಮಾಡಲು ಹೋರಟ ಕ್ರಮವನ್ನು ವಿರೋಧಿಸಿ ಮೆಡಿಕಲ್ ಶಾಪ್ ಮಾಲಿಕರು ಅಂಗಡಿಗಳನ್ನು ಬಂದ್ ಮಾಡಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಅಂರ್ತಜಾಲದಲ್ಲಿ ಮಾರಾಟ ಮಾಡುವ ಔಷಧಿಗಳು ಕಳಪೆ ಮಟ್ಟದಲ್ಲಿ ಇರುವುದರಿಂದ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿವೆ. ಅಲ್ಲದೇ ಈಗಾಗಲೇ 8 ಲಕ್ಷಕ್ಕೂ ಅಧಿಕ ಔಷದಿ ವ್ಯಾಪಾರಸ್ಥರು ಇದೆ ಉದ್ಯೋಗವನ್ನು ನಂಬಿಕೊಂಡಿದ್ದಾರೆ. ಈಗ ಅವರ ಗತಿ ಏನು. ಅಲ್ಲದೆ ಪಾರ್ಮಾಸಿಸ್ಟ ಹಾಗೂ ಔಷಧ ಪರವಾಣಿಗೆ ನವಿಕರಣದಲ್ಲಿರುವ ಗೊಂದಲವನ್ನು […]

ಪತ್ನಿಯನ್ನು ಕೊಲೆಗೈದ ಪತಿಗೆ ಮರಣ ದಂಡನೆ ಶಿಕ್ಷೆ

ಪತ್ನಿಯನ್ನು ಕೊಲೆಗೈದ ಪತಿಗೆ ಮರಣ ದಂಡನೆ ಶಿಕ್ಷೆ

  ಮಧುಗಿರಿ: ಅನೈತಿಕ ಸಂಭಂಧ ಹೊಂದಿದ್ದಾಳೆಂದು ಭಾವಿಸಿ ಚೂರಿಯಿಂದ ಪತ್ನಿಯ ಕತ್ತು ಕತ್ತರಿಸಿ ಕೊಲೆಮಾಡಿದ್ದ ಪತಿಗೆ ನಾಲ್ಕನೇ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎನ್. ಲಾವಣ್ಯ ಲತಾ ಮರಣ ದಂಡನೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಾವಗಡ ತಾಲೂಕಿನ ತಿರುಮಣಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಗಲ ಮಡಿಕೆ ಸಮೀಪವಿರುವ ವಳ್ಳೂರು  ಗ್ರಾಮದಲ್ಲಿ 2015 ಅಕ್ಟೋಬರ್ 15 ರಂದು ಮೃತ ಲಕ್ಷ್ಮೀದೇವಿಯು ತನ್ನ ಅಕ್ಕನ ಮನೆಯಲ್ಲಿದ್ದಾಗ ಆಂಧ್ರ ಮೂಲದ  ಮದ್ದಲಚೆರವು ಗ್ರಾಮದ ಪತಿ ನಂಜಪ್ಪ  […]

ಕೃಷ್ಣಪುರ ಗ್ರಾಮದಲ್ಲಿ ಆಸ್ತಿ ಜಗಳಕ್ಕೆ ಬೇಸತ್ತು ವೃದ್ಧ ದಂಪತಿ ಆತ್ಮಹತ್ಯೆ ಯತ್ನ

ಕೃಷ್ಣಪುರ ಗ್ರಾಮದಲ್ಲಿ  ಆಸ್ತಿ ಜಗಳಕ್ಕೆ ಬೇಸತ್ತು ವೃದ್ಧ ದಂಪತಿ ಆತ್ಮಹತ್ಯೆ ಯತ್ನ

ಹಾಸನ: ನಾಲ್ಕು ಎಕರೆ ಜಮೀನಿಗೆ ಸಂಬಂಧಿಸಿ ಕುಟುಂಬದಲ್ಲಿ ಇದ್ದ ಜಗಳಕ್ಕೆ ಬೇಸತ್ತು  ಹಾಸನದ ಬೇಲೂರು ತಾಲೂಕಿನ ಕೃಷ್ಣಪುರ ಗ್ರಾಮದಲ್ಲಿ ಇಬ್ಬರು ವೃದ್ಧ ದಂಪತಿ ಮಂಗಳವಾರ ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೌರಮ್ಮ (53) ಹಾಗೂ ಅನಂತರಾಮು (65) ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಸೊಸೆ ಪ್ರೀತಿ (29) ಯೊಂದಿಗೆ ನಾಲ್ಕು  ಎಕರೆ ಜಮೀನಿನ ವಿಚಾರಕ್ಕೆ ಪದೇ ಪದೆ ಜಗಳವಾಗುತ್ತಿತ್ತು.  ಆಸ್ತಿ ವಿಚಾರವಾಗಿ ಸೋಮವಾರ ರಾತ್ರಿಯೂ ಜಗಳವಾಗಿದೆ. ಜಗಳದಲ್ಲಿ ವಯೋವೃದ್ಧ ದಂಪತಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು ಎಂದು ಗೊತ್ತಾಗಿದೆ. ಬೇಸತ್ತ ದಂಪತಿ […]

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಖಚಿತ-ಎಚ್ಡಿಕೆ

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಖಚಿತ-ಎಚ್ಡಿಕೆ

ಬಾಗಲಕೋಟೆ: ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಹೆಚ್ಚು ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ನವನಗರದ ಪತ್ರಿಕಾಭವ ನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ರಾಜ್ಯದ 224 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಈಗಾಗಲೇ ಒಂದನೇ ಪಟ್ಟಿ ಯನ್ನು ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಎಡರಡನೇ ಪಟಿ ್ಟಯನ್ನು ಸಹ ಸಿದ್ಧಪಡಿಸಿ ಬಹಿರಂಗ ಪಡಿಸಲಾಗುವುದು […]

ವಿದ್ಯಾರ್ಥಿ ವಿಕ್ಟರ್ ಥಾಮಸ್ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

ವಿದ್ಯಾರ್ಥಿ ವಿಕ್ಟರ್ ಥಾಮಸ್ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

ದಾವಣಗೆರೆ:ನಗರದ ಶ್ರೀ ವೈಷ್ಣವಿ ಚೇತನ ಪಿಯು ವಿದ್ಯಾಸಂಸ್ಥೆಯ ವಿದ್ಯಾರ್ಥಿ ವಿಕ್ಟರ್ ಥಾಮಸ್ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ಐಎಸ್‍ಎಂಎಚ್ (ವೈದ್ಯಕೀಯ ಹೋಮಿಯೋಪತಿ) ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ನಗರದ ಎಸ್‍ಎಸ್ ಲೇಔಟ್ ನಿವಾಸಿ ಹಾಗೂ ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ವಿವಿಯನ್ ಸ್ಯಾಮ್ಯುಯಲ್ ಹಾಗೂ ಡಾ.ಸ್ಮೈಲಿ ಜಾನ್ಸಿ ದಂಪತಿ ಪುತ್ರನಾದ ವಿಕ್ಟರ್ ಥಾಮಸ್, ಪಿಯುಸಿ ಪರೀಕ್ಷೆಯಲ್ಲಿ 554 ಅಂಕ ಪಡೆದಿದ್ದು, ಈಗ ಸಿಇಟಿಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಈ […]

ದಾವಣಗೆರೆ: ಕುಡಿಯುವ ನೀರು ಪೂರೈಕೆ ಜಿಲ್ಲಾಡಳಿತ ಸಂಪೂರ್ಣ ವಿಫಲ-ಯಶವಂತ ರಾವ್

ದಾವಣಗೆರೆ: ಕುಡಿಯುವ ನೀರು ಪೂರೈಕೆ ಜಿಲ್ಲಾಡಳಿತ ಸಂಪೂರ್ಣ ವಿಫಲ-ಯಶವಂತ ರಾವ್

ದಾವಣಗೆರೆ: ಜಿಲ್ಲೆಗೆ ಸಮರ್ಪಕ ಕುಡಿಯುವ ನೀರು ಒದಗಿಸುವಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ ದೂರಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೆಲ ಬಡಾವಣೆಗಳಲ್ಲಿ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ 39 ಮಂದಿ ಸದಸ್ಯರಿದ್ದರೂ ಜನರ ಸಮಸ್ಯೆಗಳತ್ತ ಯಾರೂ ಸ್ಪಂದಿಸುತ್ತಿಲ್ಲ , ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಂಸದ ಜಿ.ಎಂ. ಸಿದ್ದೇಶ್ವರ್ ಸಮರೋಪಾದಿ ಕೆಲಸ ಪ್ರಾರಂಭಿಸಿದ್ದು, […]