ಕಟ್ಟಡ ಕುಸಿತ ದುರಂತ: ಸತ್ತವರ ಸಂಖ್ಯೆ 9 ಕ್ಕೇರಿಕೆ !

ಕಟ್ಟಡ ಕುಸಿತ ದುರಂತ: ಸತ್ತವರ ಸಂಖ್ಯೆ 9 ಕ್ಕೇರಿಕೆ !

ಧಾರವಾಡ: ಇಲ್ಲಿಯ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಒಂಭತ್ತಕ್ಕೇರಿದೆ ಇಂದು ಬೆಳಗಿನ ಜಾವ ಮತ್ತಿಬ್ಬರನ್ನು ರಕ್ಷಿಸಲಾಗಿದ್ದು , 62 ಜನರು ಬದುಕುಳಿದಿದ್ದಾರೆ. ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಹಾಸನ ಬಿಕ್ಕಟ್ಟು: ಸಿದ್ದರಾಮಯ್ಯ ಮನೆಯ ಸಭೆ ಮುಂದಕ್ಕೆ ಹೋಗಿದ್ದೇಕೆ?

ಹಾಸನ ಬಿಕ್ಕಟ್ಟು: ಸಿದ್ದರಾಮಯ್ಯ ಮನೆಯ ಸಭೆ ಮುಂದಕ್ಕೆ ಹೋಗಿದ್ದೇಕೆ?

ಬೆಂಗಳೂರು:ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕೈ ನಾಯಕರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ನಡೆಯಬೇಕಿದ್ದ ಉಭಯ ಪಕ್ಷಗಳ ಮುಖಂಡರ ಸಭೆ ಹಠಾತ್ತನೇ ರದ್ದಾಗಿದೆ. ಬಿಕ್ಕಟ್ಟು ಬಗೆಹರಿಸಲು ಇಂದು ಕಾಂಗ್ರೆಸ್ -ಜೆಡಿಎಸ್ ನಾಯಕರ ಸಭೆ ಕರೆಯಲಾಗಿತ್ತು. ಸಭೆಗೆ ಸಚಿವ ರೇವಣ್ಣ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿತ್ತು. ಆದರೆ, ಸಚಿವ ರೇವಣ್ಣ ಅಲಭ್ಯತೆ ಕಾರಣದಿಂದ ಇಂದಿನ ಸಭೆಯನ್ನು ಮುಂದೂಡಲಾಗಿದ್ದು, ಮಾರ್ಚ್ 23 ಕ್ಕೆ ಮರುನಿಗದಿಪಡಿಸಲಾಗಿದೆ.

ಕಟ್ಟಡ ಕುಸಿತದಲ್ಲಿ ಸತ್ತವರ ಸಂಖ್ಯೆ 7 ಕ್ಕೆ: ಇಂದು ಸಿಎಂ ಭೇಟಿ !

ಕಟ್ಟಡ ಕುಸಿತದಲ್ಲಿ ಸತ್ತವರ ಸಂಖ್ಯೆ 7 ಕ್ಕೆ: ಇಂದು ಸಿಎಂ ಭೇಟಿ !

2 minutes ಧಾರವಾಡ: ಇಲ್ಲಿಯ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಏಳಕ್ಕೇರಿದೆ. 60 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಏತನ್ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಲಿದ್ದಾರೆ.

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ನಾಳೆ

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ನಾಳೆ

ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಅಜ್ಜ, ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರು ಬಿಟ್ಟು ಕೊಟ್ಟಿರುವ ಕ್ಷೇತ್ರದಲ್ಲಿ ಬೆಳಗ್ಗೆ ಮೆರವಣಿಗೆ ಮೂಲಕ ತೆರಳಿ ಪ್ರಜ್ವಲ್ , ಮಧ್ಯಾಹ್ನ 12. 05 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.

ನನಗೆ ರಾಜಕೀಯದ ಎಬಿಸಿಡಿ ಗೊತ್ತಿಲ್ಲ ಎಂದ್ರು ಸುಮಲತಾ !

ನನಗೆ ರಾಜಕೀಯದ ಎಬಿಸಿಡಿ ಗೊತ್ತಿಲ್ಲ ಎಂದ್ರು ಸುಮಲತಾ !

ಮಂಡ್ಯ: “ನನಗೆ ರಾಜಕೀಯದ ಎಬಿಸಿಡಿ ಗೊತ್ತಿಲ್ಲ, ಹೆಸರು ಮಾಡಲು ನಾನು ರಾಜಕೀಯಕ್ಕೆ ಬರಬೇಕಾದ ಅಗತ್ಯವಿಲ್ಲ. ಅತ್ಯಂತ ಪ್ರೀತಿ, ಕಾಳಜಿ ತೋರಿಸಿರುವ ಮಂಡ್ಯದ ಜನತೆಯ ಸಲುವಾಗಿ ನಾನಿಲ್ಲಿಗೆ ಬಂದಿದ್ದೇನೆ…” ಹೀಗೆಂದು ಭಾವುಕರಾಗಿ ಹೇಳಿದವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ! ಸಾವಿರಾರು ಅಭಿಮಾನಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸಿಲ್ಲರ್ ಜುಬ್ಲಿ ಪಾರ್ಕ ವರೆಗೆ ಅದ್ಧೂರಿ ಮೆರವಣಿಗೆಯಲ್ಲಿ ಬಂದಿಳಿದ ಸುಮಲತಾ ಅಲ್ಲಿ, ಸಾರ್ವಜನಿಕರನ್ನು ದ್ದೇಶಿಸಿ ಮಾತನಾಡಿದರು. ಅಂಬರೀಷ ಅಗಲಿದ ಸಂದರ್ಭದಲ್ಲಿ ಝಂಗಾಬಲವೇ ಉಡುಗಿಹೋಗಿತ್ತು. […]

ಧಾರವಾಡ: ಕಟ್ಟಡ ಕುಸಿತದಲ್ಲಿ ಸತ್ತವರ ಸಂಖ್ಯೆ 5 ಕ್ಕೇರಿಕೆ

ಧಾರವಾಡ: ಕಟ್ಟಡ ಕುಸಿತದಲ್ಲಿ ಸತ್ತವರ ಸಂಖ್ಯೆ 5 ಕ್ಕೇರಿಕೆ

ಧಾರವಾಡ : ಇಲ್ಲಿಯ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ ದುರಂತದಲ್ಲಿ ಸತ್ತವರ ಸಂಖ್ಯೆ ಐದಕ್ಕೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗೋವಾ: ಬಹುಮತ ಸಾಬೀತುಪಡಿಸಿದ ನೂತನ ಸಿಎಂ ಪ್ರಮೋದ ಸಾವಂತ !

ಪಣಜಿ (ಗೋವಾ): ಗೋವಾದ ನೂತನ ಮುಖ್ಯಮಂತ್ರಿ ಪ್ರಮೋದ ಸಾವಂತ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ 11, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಮತ್ತು ಗೋವಾ ಫಾರ್ವರ್ಡ ಪಾರ್ಟಿಯ ತಲಾ ಮೂವರು ಹಾಗೂ ಪಕ್ಷೇತರರು ಸೇರಿ ಒಟ್ಟು 20 ಶಾಸಕರು ಪ್ರಮೋದ ಪರವಾಗಿ ಮತ ಚಲಾಯಿಸಿದರು. ಮನೋಹರ ಪರಿಕ್ಕರ್ ನಿಧನಹೊಂದಿದ ನಂತರ ತೆರವಾಗಿದ್ದ ಸ್ಥಾನದಲ್ಲಿ ಪ್ರಮೋದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪ್ರಮೋದ ಅವರ ಜತೆಗೆ ಎಂಜಿಪಿಯ ಸುಧೀನ್ ಧಾವಳೀಕರ, ಜಿಎಫ್ ಪಿಯ ವಿಜಯ ಸರದೇಸಾಯಿ ಹಾಗೂ ಬಿಜೆಪಿಯ ವಿಶ್ವಜೀತ್ […]

ಸುಮಲತಾ ಪರ ಪುನೀತ್ ಪ್ರಚಾರ ಮಾಡಲ್ವಂತೆ !

ಸುಮಲತಾ ಪರ ಪುನೀತ್ ಪ್ರಚಾರ ಮಾಡಲ್ವಂತೆ !

ಬೆಂಗಳುರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಸುಮಲತಾ ಅಂಬರೀಷ್ ಪರ ತಾವು ಪ್ರಚಾರಕ್ಕೆ ಹೋಗುವುದಿಲ್ಲ ಎಂದು ನಟ ಪುನೀತ್ ಹೇಳಿಕೊಂಡಿದ್ದಾರೆ. ನಟ ಪುನೀತ್ ಕೂಡ ಸುಮಲತಾ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಹೇಳಿಕೆ ನೀಡಿದ್ದ ರಾಕ್ ಲೈನ್ ವೆಂಕಟೇಶ ಗೆ ಆಪ್ತರ ಮೂಲಕ ಉತ್ತರ ನೀಡಿರುವ ಪುನೀತ್ , ತಾವು ಯಾವತ್ತೂ ರಾಜಕೀಯದತ್ತ ಸುಳಿದವನಲ್ಲ ಎಂದು ಹೇಳಿಕೊಂಡಿದ್ದಾರೆ. ಯಾರ ಚುನಾವಣಾ ಪ್ರಚಾರಕ್ಕೂ ತಾನು ಹೋಗಿಲ್ಲ. ಅಂಬರೀಷ್ ನಿಂತಾಗಲೂ ಪ್ರಚಾರ ಮಾಡಿಲ್ಲ. ಗೀತಾ ಶಿವರಾಜಕುಮಾರ್ ಚುನಾವಣೆಯಲ್ಲೂ […]

ಮೋದಿ ದೇಶ ಕಂಡ ಮಹಾನ್ ಸುಳ್ಳುಗಾರ: ಸತೀಶ ಜಾರಕಿಹೊಳಿ ಟೀಕೆ !

ಮೋದಿ ದೇಶ ಕಂಡ ಮಹಾನ್ ಸುಳ್ಳುಗಾರ: ಸತೀಶ ಜಾರಕಿಹೊಳಿ ಟೀಕೆ !

ಸವದತ್ತಿ: ಪ್ರಧಾನಿ ನರೇಂದ್ರ ಮೋದಿ ಈ ದೇಶ ಕಂಡ ಮಹಾನ್ ಸುಳ್ಳುಗಾರ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಬಣ್ಣಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸವದತ್ತಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿ ನೀಡಿದ್ದ ಯಾವ ಭರವಸೆಗಳೂ ಈಡೇರಿಲ್ಲ ಎಂದು ಟೀಕಿಸಿದರು. ನೋಟು ನಿಷೇಧದ ನಂತರ ಕಪ್ಪು ಹಣ ವಾಪಸ್ ಬರುತ್ತದೆ ಎಂಬ ಮೋದಿ ಹೇಳಿಕೆ ಸಂಪೂರ್ಣ ಸುಳ್ಳಾಗಿ ಹೋಯಿತು. ವರ್ಷಕ್ಕೆ ಎರಡು ಕೋಟಿಯಂತೆ […]

ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿದ ಸುಮಲತಾ!

ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿದ ಸುಮಲತಾ!

ಮಂಡ್ಯ:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಟಿ ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಹಿಂದ ನಾಯಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸುಮಲತಾ , ಅವರ ಅನುಮೋದನೆಯೊಂದಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಡಿಸಿ ಕಚೇರಿಯಿಂದ ಸಿಲ್ವರ್ ಜುಬಿಲಿ ವೃತ್ತದವರೆಗೆ ರೋಡ್ ಶೋ ನಡೆಸುತ್ತಿದ್ದು , ಸಾವಿರಾರು ಅಭಿಮಾನಿಗಳು ಸಾಥ್ ನೀಡಿದ್ದಾರೆ.

1 2 3 935