ಕಾಂಗ್ರೆಸ್ಸಿಗೆ ಅಭಿವೃದ್ಧಿ ಬೇಕಾಗಿಲ್ಲ: ಚಿಕ್ಕೋಡಿಯಲ್ಲಿ ಮೋದಿ ವಾಗ್ದಾಳಿ..!

ಕಾಂಗ್ರೆಸ್ಸಿಗೆ ಅಭಿವೃದ್ಧಿ ಬೇಕಾಗಿಲ್ಲ: ಚಿಕ್ಕೋಡಿಯಲ್ಲಿ ಮೋದಿ ವಾಗ್ದಾಳಿ..!

ಚಿಕ್ಕೋಡಿ: ಕಾಂಗ್ರೆಸ್ ನ ಮಹಾಘಟಬಂಧನ್ ನಮ್ಮ ಸಂಸ್ಕೃತಿಯನ್ನೇ ಹಾಳು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಹಮ್ಮಿಕೊಳ್ಳಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಗುರುವಾರ ಅವರು ಮಾತನಾಡಿದರು. ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಮೋದಿ, ಈ ಭಾಗದಲ್ಲಿ ಆಗಿಹೋಗಿರುವ ಮಹಾತ್ಮಾ ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮೊದಲಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಪ್ರತಿಪಾದಿಸಿದರು. ದೇಶ ರಕ್ಷಿಸುವ ಯೋಧರನ್ನು […]

ಚಿಕ್ಕೋಡಿಗೆ ಮೋದಿ ಆಗಮನ

ಚಿಕ್ಕೋಡಿಗೆ ಮೋದಿ ಆಗಮನ

ಚಿಕ್ಕೋಡಿ: ಮುಂಬರುವ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಚಿಕ್ಕೋಡಿಗೆ ಆಗಮಿಸಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ಬಹಿರಂಗ ಭಾಷಣ ಮಾಡಲಿದ್ದಾರೆ. ಬಾಗಲಕೋಟೆಯಿಂದ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿರುವ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲಿದ್ದಾರೆ. Views: 137

ಮಂಗಳೂರಿನಲ್ಲಿ ಕಾಂಗ್ರೆಸ್ಸಿಗೆ ಹಾಕಿದ ಮತ ಬಿಜೆಪಿಗೆ: ಇವಿಎಂ ಮಷಿನ್ ಗಳ ಬದಲಾವಣೆ

ಮಂಗಳೂರಿನಲ್ಲಿ ಕಾಂಗ್ರೆಸ್ಸಿಗೆ ಹಾಕಿದ ಮತ ಬಿಜೆಪಿಗೆ: ಇವಿಎಂ ಮಷಿನ್ ಗಳ ಬದಲಾವಣೆ

ಮಂಗಳೂರು: ಇವಿಎಂ ಮಷಿನ್ ನಲ್ಲಿ ಮತದಾನಕ್ಕೂ ಮುನ್ನ ಡೆಮೋ ಮತದಾನ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಚಲಾಯಿಸಿದ ಮತಗಳು ಬಿಜೆಪಿಗೆ ವರ್ಗವಾಗಿರುವ ಘಟನೆ ನಡೆದಿದೆ. ಇಲ್ಲಿನ ಒಂಬತ್ತುಕೆರೆಯಲ್ಲಿ ಡೇಮೊ ಮತದಾನ ನಡೆದಾಗ ಇವಿಎಂ ಮಷಿನ್ ಮೂಲಕ ಕಾಂಗ್ರೆಸ್ಸಿಗೆ ಹಾಕಿದ 42 ಮತಗಳು ಬಿಜೆಪಿ ಹೋಗಿವೆ ಎಂದು ಮಾಜಿ ಕೌನ್ಸಿಲರ್ ದಿನೆಶ ರೈ ಆರೋಪಿಸಿದ್ದಾರೆ. ಕಲ್ಲಾಪುದಲ್ಲಿಯೂ ಇಂತಹ ಘಟನೆ ನಡೆದಿದ್ದು ಕಾರ್ಯಕರ್ತರು ಪ್ರಶ್ನಿಸಿದಾಗ ಅಧಿಕಾರಿಗಳು ಉದ್ಧಟತನ ಮಾತುಗಳನ್ನಾಡಿದ್ದಾರೆ. ನಂತರ ಮಷಿನ್ ಗಳನ್ನು ಬದಲಾವಣೆ ಮಾಡಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು […]

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ತೇಜಸ್ವಿ ಸೂರ್ಯ ವಿರುದ್ದ ದೂರು ದಾಖಲು

ಸಾಮಾಜಿಕ ಜಾಲತಾಣದಲ್ಲಿ  ಪ್ರಚಾರ: ತೇಜಸ್ವಿ ಸೂರ್ಯ ವಿರುದ್ದ ದೂರು ದಾಖಲು

ಬೆಂಗಳೂರು: ಚುನಾವಣೆ ನಿಯಮ ಉಲ್ಲಂಘಿಸಿದ ಹಿನ್ನಲೆ ಬೆಂಗಳೂರು ದಕ್ಷಿಣಕ್ಷೇತ್ರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ದ ದೂರು ದಾಖಲಾಗಿದೆ. ಫೇಸ್ ಬುಕ್, ಟ್ವೀಟರ್ ನಲ್ಲಿ ತಮ್ಮ ಪರ ಪ್ರಚಾರ ಮಾಡಿಕೊಂಡಿದ್ದಕ್ಕೆ ಚುನಾವಣಾ ಆಯೋಗದ ಆರ್ ಒ ರಿಂದ ಬೆಂಗಳೂರಿನ ಸಿದ್ದರಾಪೂರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. Views: 56

ಮರಕ್ಕೆ ಸರಕಾರಿ ಬಸ್ ಡಿಕ್ಕಿ: 23 ಮಂದಿಗೆ ಗಾಯ !

ಮರಕ್ಕೆ ಸರಕಾರಿ ಬಸ್ ಡಿಕ್ಕಿ: 23 ಮಂದಿಗೆ ಗಾಯ !

ಬೆಂಗಳೂರು: ಸರಕಾರಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 23 ಮಂದಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕು ಕೆಂಚನಕುಪ್ಪೆ ಗೇಟ್ ಬಳಿ ಸಂಭವಿಸಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಭವಿಸಿರುವ ಈ ದುರಂತದಲ್ಲಿ ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭಿರವಾಗಿದೆ. ಬಸ್ ನ ಸ್ಟೀಯರಿಂಗ್ ಕಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ರಸ್ತೆ ಬದಿಯಲ್ಲಿದ್ದ ಗಿಡಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. Views: 66

ಪ್ರಕಾಶ ಹುಕ್ಕೇರಿಗೆ ಮತ್ತೊಮ್ಮೆ ಗೆಲುವು: ಸತೀಶ ಜಾರಕಿಹೊಳಿ ವಿಶ್ವಾಸ…

ಪ್ರಕಾಶ ಹುಕ್ಕೇರಿಗೆ ಮತ್ತೊಮ್ಮೆ ಗೆಲುವು: ಸತೀಶ ಜಾರಕಿಹೊಳಿ ವಿಶ್ವಾಸ…

ಯಮಕನಮರಡಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ತಮಗೆ ಕಡಿಮೆ ಲೀಡ್ ಬಂದಿರಬಹುದು. ಆದರೆ, ಇತಿಹಾಸ ನಿರ್ಮಾಣವಾಗಿದ್ದು ಸುಳ್ಳಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಚುನಾವಣಾ ಪ್ರಚಾರಾರ್ಥ ಯಮಕಮನಮರಡಿ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಾರದೇ , ಹಣ ಹಂಚದೇ ಗೆಲುವು ಸಾಧಿಸಿರುವುದು ಸಣ್ಣ ಮಾತಲ್ಲ. ಅದು ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರು ನನ್ನ […]

ಗೋಕಾಕದಲ್ಲಿ ನಾಳೆ ಸಿದ್ದರಾಮಯ್ಯ ಭಾಷಣ !

ಗೋಕಾಕದಲ್ಲಿ ನಾಳೆ ಸಿದ್ದರಾಮಯ್ಯ ಭಾಷಣ !

ಬೆಳಗಾವಿ: ಲೋಕಸಭೆ ಚುನಾವಣೆ ಪ್ರಚಾರಾರ್ಥ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ (ಏಪ್ರಿಲ್ 19) ಗೋಕಾಕ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಅವರು ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ಬಹಿರಂಗ ಭಾಷಣ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ. ಎಸ್. ಸಾಧುನವರ, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಬಾಳಕರ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಳ್ಳುವರು. ಅರಬಾವಿ ಮತ್ತು […]

ಬ್ರಾಹ್ಮಣರ ವಿರುದ್ಧ ಮಾತನಾಡಿಲ್ಲ: ಬಹಿರಂಗ ಚರ್ಚೆಗೆ ಸಿದ್ದಎಂದ್ರು ಸತೀಶ ಜಾರಕಿಹೊಳಿ!

ಬ್ರಾಹ್ಮಣರ ವಿರುದ್ಧ ಮಾತನಾಡಿಲ್ಲ: ಬಹಿರಂಗ ಚರ್ಚೆಗೆ ಸಿದ್ದಎಂದ್ರು ಸತೀಶ ಜಾರಕಿಹೊಳಿ!

ಬೆಳಗಾವಿ: ತಾವು ಬ್ರಾಹ್ಮಣರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಯೇ ಇಲ್ಲ. ಸ್ವಾತಂತ್ರ್ಯ ಹೋರಾಟದ ವಿಚಾರಗಳನ್ನೂ ನಾನು ಕಡೋಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಸ್ತಾಪಿಸಿಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ ನಡೆಸಿದ ಮಹನೀಯರ ಬಗ್ಗೆ ನನಗೆ ಗೌರವವಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ದೇಶದ ಗಡಿ ಕಾಯುವವರ ವಿಚಾರವನ್ನು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ. ಗಡಿ ಕಾಯುವವರಲ್ಲಿ ಹಿಂದುಳಿದವರು , ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೇಲ್ವರ್ಗದವರು ಕಮ್ಮಿ ಎಂದು ವಾಸ್ತವ ಸ್ಥಿತಿಯನ್ನು ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಇದನ್ನೇ ತಪ್ಪಾಗಿ […]

ಕುಟುಂಬ ಸಮೇತ ಬಂದು ಮತಚಲಾಯಿಸಿದ ಸಿಎಂ!

ಕುಟುಂಬ ಸಮೇತ ಬಂದು ಮತಚಲಾಯಿಸಿದ ಸಿಎಂ!

ಬಿಡದಿ: 14 ಜಿಲ್ಲೆಗಳಲ್ಲಿ ಇಂದು ಮೊದಲ ಹಂತದ ಮತದಾನ ಬೆಳಗ್ಗೆಯಿಂದ ಆರಂಭವಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿ ಮತ ಚಲಾಯಿಸಿದರು. ಕುಟುಂಬ ಸಮೇತ ಬಂದು ಸಿಎಂ ಮತಚಲಾಯಿಸಿದರು. ಪುತ್ರ ನಿಖಿಲ್ ಹಾಗೂ ಪತ್ನಿ ಅನಿತಾ ಮತಗಟ್ಟೆ 235ರಲ್ಲಿ ಮತ ಚಲಾವಣೆ ಮಾಡಿದರು. ಈ ಕ್ಷೇತ್ರದಿಂದ ಸಂಸದ ಡಿ.ಕೆ ಸುರೇಶ್ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಿಎಂ ಕುಮಾರಸ್ವಾಮಿ, ಪತ್ನಿ, ಪುತ್ರ ಮತಚಲಾಯಿಸಿದ ಬಳಿಕ ಮಾಧ್ಯಗಳಿಗೆ ಪೋಸ್ ನೀಡಿದರು. ಅಭ್ಯರ್ಥಿ ಡಿ.ಕೆ ಸುರೇಶ್ ಕೂಡ […]

ಶ್ರೀರಾಮುಲು ಬಿಜೆಪಿಯಲ್ಲಿ ಯೂಸ್ & ಥ್ರೋ : ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪ

ಶ್ರೀರಾಮುಲು ಬಿಜೆಪಿಯಲ್ಲಿ ಯೂಸ್ & ಥ್ರೋ : ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪ

    ಏ. 19 ಕ್ಕೆ ರಾಯಚೂರಿಗೆ ರಾಹುಲ್ ಗಾಂದಿ, ಸಿರಗುಪ್ಪ ಗೆ ಸಿದ್ದರಾಮಯ್ಯ ಏ. 21 ಕ್ಕೆ ಶ್ರೀ ರಾಮನಗರಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೈ ಅಭ್ಯರ್ಥಿ ಪರಚುನಾವಣಾ ಪ್ರಚಾರಕ್ಕೆ ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಏ. 19 ರಂದು ಸಿರಗುಪ್ಪ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಏ. 21 ರಂದು ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಅವರು ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು […]