ಗದಗ ತೋಂಟದಾರ್ಯ ಶ್ರೀ ಇನ್ನಿಲ್ಲ

ಗದಗ ತೋಂಟದಾರ್ಯ ಶ್ರೀ ಇನ್ನಿಲ್ಲ

ಗದಗ: ಗದುಗಿನ ಪ್ರಸಿದ್ಧ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ಮಾಮೀಜಿ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಶ್ರೀಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ. 1949 ರಲ್ಲಿ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಜನಿಸಿದ್ದ ಶ್ರೀಗಳು ತೋಂಟದಾರ್ಯ ಮಠದ 19 ನೇ ಯತಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. Mahantesh Yallapurmathhttp://Udayanadu.com

ಆ ಮನೆ ಓಪನ್ ಆಗಿದ್ದು ವಿಧವೆಯರಿಂದ ಸ್ವಾಮಿ !!

ಆ ಮನೆ ಓಪನ್ ಆಗಿದ್ದು ವಿಧವೆಯರಿಂದ ಸ್ವಾಮಿ !!

ಚಿಕ್ಕೋಡಿ:ಒಳ್ಳೆ ಕೆಲಸಕ್ಕೆ ಒಳ್ಳೆ ಮನಸ್ಸು ಮುಖ್ಯ. ಮುಹೂರ್ತ ಬೇಕಾಗಿಲ್ಲ. ಈ ಮಾತಿಗೆ ಸಾಕ್ಷಿಯಾಗಿ ಇಲ್ಲೊಬ್ಬರ ವಿಧವೆಯರಿಂದ ಮನೆ ಗೃಹ ಪ್ರವೇಶ ಮಾಡುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಮುತ್ತೈದೆಯರಿಂದ ಶುಭ ಕಾರ್ಯ ಮಾಡಿರುವುದನ್ನು ನೋಡಿದ್ದೇವೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವಾನಸೌದತ್ತಿಯಲ್ಲಿರುವ ರಾಜು ಮರಿನಾಯಿಕ ಎಂಬುವರು ಮೌಢ್ಯಕ್ಕೆ ಸಡ್ಡು ಹೊಡೆದಿದ್ದಾರೆ. ನೂತನವಾಗಿ ನಿರ್ಮಾಣ ಮಾಡಲಾದ ಗೃಹ ಪ್ರವೇಶವನ್ನು 5 ಜನ ವಿಧವೆಯರಿಂದ ವಿಶೇಷ ಪೂಜೆ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಐವರು ವಿಧವೆಯರು ಮಹಾನ್​​ ಪುರುಷರ […]

ಗೋಕಾಕನಲ್ಲಿ ಬೆಳಂ ಬೆಳಗ್ಗೆ ಪತ್ರಕರ್ತ ತಾಯಿಯ ಚಿನ್ನದ ಸರ ಎಗರಿಸಿದ ಖದೀಮರು

ಗೋಕಾಕನಲ್ಲಿ ಬೆಳಂ ಬೆಳಗ್ಗೆ ಪತ್ರಕರ್ತ ತಾಯಿಯ ಚಿನ್ನದ ಸರ ಎಗರಿಸಿದ ಖದೀಮರು

ಗೋಕಾಕ: ಬೆಳಂ ಬೆಳಗ್ಗೆ ಬೈಕ್ ಮೇಲೆ ಬಂದ ಅಪರಿಚಿತರು ಹಿರಿಯ ಪತ್ರಕರ್ತ ದಿಲೀಪ್ ಮಜಲಿಕರ್ ಅವರ ತಾಯಿಯ ಕೊರಳಲ್ಲಿರುವ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ಪತ್ರಕರ್ತ ದಿಲಿಪ್ ಅವರ ತಾಯಿ ಉದಾತಾಯಿ ಅವರು ಬೆಳಗ್ಗೆ 8.30 ಕ್ಕೆ ನಗರದ ಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಮನೆ ಕಡೆ ಮರಳುತ್ತಿರುವಾಗ ಬೈಕ್ ಮೇಲೆ ಬಂದ ಇಬ್ಬರು ಕೊರಳಲ್ಲಿದ್ದ 30 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಗೋಕಾಕ ಶಹರ […]

ಪ್ರತ್ಯೇಕ ಲಿಂಗಾಯತ ಧರ್ಮ ಏಕಪಕ್ಷೀಯ ನಿರ್ಣಯ ಎಂದು ಛೇಡಿಸಿದ್ರು ಡಿಕೆಶಿ !

ಪ್ರತ್ಯೇಕ ಲಿಂಗಾಯತ ಧರ್ಮ ಏಕಪಕ್ಷೀಯ ನಿರ್ಣಯ ಎಂದು ಛೇಡಿಸಿದ್ರು ಡಿಕೆಶಿ !

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿದ್ದು ತಪ್ಪು ಎಂಬ ತಮ್ಮ ಹೇಳಿಕೆಯನ್ನು ಸಚಿವ ಡಿ.ಕೆ. ಶಿವಕುಮಾರ ಸಮರ್ಥಿಸಿಕೊಂಡಿದ್ದಾರೆ. ಪ್ರತ್ಯೇಕ ಧರ್ಮ ರಚನೆಯ ನಿರ್ಣಯ ಏಕಪಕ್ಷೀಯವಾಗಿತ್ತು. ಇದನ್ನು ಸಾಮೂಹಿಕವಾಗಿ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳುವ ಮೂಲಕ ಡಿಕೆಶಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಟಾಂಗ್ ಕೊಟ್ಟಿದ್ದಾರೆ. ಹೋರಾಟದ ಸಂದರ್ಭದಲ್ಲಿ ಇಂತಹ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ನನಗೆ ಆಗಲೂ ಆಸಕ್ತಿ ಇರಲಿಲ್ಲ. ನಾನು ಈಗಲಾದರೂ ಆತ್ಮಸಾಕ್ಷಿಯಿಂದಲೇ ಹೇಳಿದ್ದೇನೆ. ಯಾರು ಏನು ಅಂದುಕೊಂಡರೂ ಪರವಾಗಿಲ್ಲ ಎಂದು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. […]

ಪ್ರತ್ಯೇಕ ಲಿಂಗಾಯತ ಧರ್ಮ: ಡಿಕೆಶಿ ಹೇಳಿಕೆಗೆ ಎಂ.ಬಿ. ಪಾಟೀಲ ತಿರುಗೇಟು

ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬೆಂಬಲ ನೀಡಿದ್ದೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮುಳುವಾಯಿತು ಎನ್ನುವ ಸಚಿವ ಡಿಕೆಶಿ ಹೇಳಿಕೆಗೆ ಮಾಜಿ ಸಚಿವ ಎಂ.ಬಿ. ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧರ್ಮ ವಿಭಜನೆಯ ವಿಚಾರ ಪಕ್ಷಕ್ಕೆ ಹಿನ್ನಡೆಯಾಗಲು ಸಾಧ್ಯವೇ ಇಲ್ಲ. ರಾಜಕಾರಣವೇ ಬೇರೆ, ಧರ್ಮವೇ ಬೇರೆ. ಡಿಕೆಶಿ ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಎಂ.ಬಿ. ಪಾಟೀಲ ಹೇಳಿದರು. ಧರ್ಮ ವಿಭಜನೆಯ ಕಾರಣಕ್ಕಾಗಿ ಹಾಗೊಂದು ವೇಳೆ ಪಕ್ಷಕ್ಕೆ ಹಿನ್ನಡೆಯಾಗಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಡಿಕೆಶಿ ಎಷ್ಟು ಸ್ಥಾನಗಳನ್ನು […]

ಸರಕಾರಿ ಬಸ್ಸುಗಳ ಪೂಜೆಗೆ ಎಷ್ಟು ಹಣ ಬಿಡುಗಡೆಯಾಯ್ತು ಗೊತ್ತಾ??!!

ಸರಕಾರಿ ಬಸ್ಸುಗಳ ಪೂಜೆಗೆ ಎಷ್ಟು ಹಣ ಬಿಡುಗಡೆಯಾಯ್ತು ಗೊತ್ತಾ??!!

ಬೆಂಗಳೂರು: ಆಯುಧ ಪೂಜೆ ಸಂದರ್ಭದಲ್ಲಿ ಸರಕಾರಿ ಬಸ್ಸುಗಳಿಗೆ ಪೂಜೆ ನೆರವೇರಿಸಲು ಸರಕಾರ ಕೊಟ್ಟ ಹಣವೆಷ್ಟು ಎಂಬುದು ಗೊತ್ತಾದರೆ ನಿಮಗೆ ಖಂಡಿತವಾಗಿಯೂ ನಗೆ ಬರುತ್ತದೆ. ಕೆೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ಅಲಂಕಾರಕ್ಕಾಗಿ ಪ್ರತಿ ಬಸ್ಸಿಗೆ ನೂರು ರೂ. ಸರಕಾರ ಬಿಡುಗಡೆ ಮಾಡಿದೆಯಂತೆ !! ಒಂದು ಮಾರು ಹೂವಿನ ದರವೇ ನೂರು ರೂ, ಇರುವ ಕಾಲದಲ್ಲಿ ಇಡೀ ಬಸ್ಸಿನ ಅಲಂಕಾರಕ್ಕೆ ನೂರು ರೂ. ಬಿಡುಗಡೆ ಮಾಡಿರುವ ಸರಕಾರದ ಕ್ರಮಕ್ಕೆ ಚಾಲಕ , ನಿರ್ವಾಹಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. […]

ಕೆಲಸದವಳ ಮೇಲೆ ಅತ್ಯಾಚಾರ: ಮೇಲ್ವಿಚಾರಕ ಅರೆಸ್ಟ್ !

ಕೆಲಸದವಳ ಮೇಲೆ ಅತ್ಯಾಚಾರ: ಮೇಲ್ವಿಚಾರಕ ಅರೆಸ್ಟ್ !

ಬೆಂಗಳೂರು: ಖಾಸಗಿ ಕಂಪನಿಯ ಕೆಲಸದವಳ ಮೇಲೆ  ಅತ್ಯಾಚಾರ ನಡೆಸಿದ ಮೇಲ್ವಿಚಾರಕನನ್ನು ಬೆಂಗಳೂರಿನ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಂಪನಿಯ ಮೇಲ್ವಿಚಾರಕ ಮೋಹನಬಾಬು (27) ಬಂಧಿತ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬಾತ್ ರೂಂ ಕ್ಲೀನ್ ಮಾಡಲು ಕಳಿಸಿ ಆತ ಈ ದುಷ್ಕೃತ್ಯ ಎಸಗಿದ್ದಾನೆ. ಮಾರತ್ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. Mahantesh Yallapurmathhttp://Udayanadu.com

ಖಾಸಗಿ ಬಸ್ ಪಲ್ಟಿ: 15 ಮಂದಿಗೆ ಗಾಯ

ಖಾಸಗಿ ಬಸ್ ಪಲ್ಟಿ: 15 ಮಂದಿಗೆ ಗಾಯ

ಹುಬ್ಬಳ್ಳಿ: ಖಾಸಗಿ ಬಸ್ಸೊಂದು ಪಲ್ಟಿಯಾಗಿ ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಿಂದ ಬೈಲಹೊಂಗಲಕ್ಕೆ ಹೊರಟಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಪಲ್ಟಿಯಾಗಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Mahantesh Yallapurmathhttp://Udayanadu.com

ಕೆರೆಯಲ್ಲಿ ಮುಳುಗಿ ಮೂವರು ಸಾವು

ಕೆರೆಯಲ್ಲಿ ಮುಳುಗಿ ಮೂವರು ಸಾವು

ಚಿಕ್ಕಮಗಳೂರು: ಆಯುಧ ಪೂಜೆಗೆ ಬೈಕ್ ತೊಳೆಯಲೆಂದು ಕೆರೆಗೆ ತೆರಳಿದ್ದ ಮೂವರು ನೀರಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತರೀಕೆರೆ ತಾಲೂಕು ಹುಲಿತಿಮ್ಮಾಪುರ ಬಳಿ ಸಂಭವಿಸಿದೆ. ಮೃತರನ್ನು ಹೇಮಂತ (180 ವಿಜಯ್ (21) ಹಾಗೂ ಶಿವರಾಜ್ (14) ಎಂದು ಗುರುತಿಸಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಒಬ್ಬನನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಸಾವಿಗೀಡಾಗಿದ್ದಾರೆ. ಲಿಂಗದಹಳ್ಳಿ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Mahantesh Yallapurmathhttp://Udayanadu.com

ಲಾರಿ-ಟಿಟಿ ಡಿಕ್ಕಿ: ಮೂವರ ದುರ್ಮರಣ, ಐವರಿಗೆ ಗಾಯ

ಲಾರಿ-ಟಿಟಿ ಡಿಕ್ಕಿ: ಮೂವರ ದುರ್ಮರಣ, ಐವರಿಗೆ ಗಾಯ

ಚಿತ್ರದುರ್ಗ: ಲಾರಿ ಮತ್ತು ಟೆಂಪೋ ಟ್ರಾವೆಲ್ಲರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ದುರ್ಮಣಕ್ಕೀಡಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4 ರ ಮೇಲೆ ಗೊರ್ಲತ್ತು ಗ್ರಾಮದ ಬಳಿ ಸಂಭವಿಸಿದೆ. ತಮಿಳುನಾಡಿನ ಕೇಶವನ್ (35), ಮಂಜುನಾಥ್, ಗುರುಪ್ರಸಾದ ಸಾವಿಗೀಡಾದ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಹಿರಿಯೂರು, ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಿರಿಯೂರು ಠಾಣೆಯ ಸಿಪಿಐ ಗುರುರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Mahantesh Yallapurmathhttp://Udayanadu.com