ಚಿಕ್ಕೋಡಿ ಜಿಲ್ಲೆ ವಿರೋಧಿಸುವ ಶಾಸಕರು, ಸಂಸದರ ಅಣುಕು ಶವ ಯಾತ್ರೆ

ಚಿಕ್ಕೋಡಿ ಜಿಲ್ಲೆ ವಿರೋಧಿಸುವ ಶಾಸಕರು, ಸಂಸದರ ಅಣುಕು ಶವ ಯಾತ್ರೆ

ಚಿಕ್ಕೋಡಿ: ಚಿಕ್ಕೋಡಿ ಜಿಲ್ಲಾ ರಚನೆ ಹಿನ್ನಡೆಗೆ ಪರೋಕ್ಷ ಕಾರಣರಾಗಿರುವ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಎಲ್ಲ ಶಾಸಕರು ಹಾಗೂ ಸಂಸದರ ಸರಣಿ ಅಣಕು ಶವಯಾತ್ರೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾ ಹೋರಾಟ ವೇದಿಕೆ ಅಧ್ಯಕ್ಷ ಬಿ.ಆರ್. ಸಂಗಪ್ಪಗೋಳ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧ ಮುಂಭಾಗದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಸರಣಿ ಉಪವಾಸ 48ನೇ ದಿನಕ್ಕೆ ಕಾಲಿಟ್ಟಿದ್ದು, ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ […]

ಪ್ರೀತಿಸುವಂತೆ ಪೀಡಿಸುತ್ತಿದ್ದವನಿಗೆ ಬಿತ್ತು ಸಖತ್ ಗೂಸಾ: ವಿಡಿಯೋ ವೈರಲ್

ಪ್ರೀತಿಸುವಂತೆ ಪೀಡಿಸುತ್ತಿದ್ದವನಿಗೆ ಬಿತ್ತು ಸಖತ್ ಗೂಸಾ: ವಿಡಿಯೋ ವೈರಲ್

ಹುಬ್ಬಳ್ಳಿ: ಅಪ್ರಾಪ್ತ ಯುವತಿಗೆ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದ ಯುವನಿಗೆ ಆಕೆಯ ತಂದೆಯೇ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿದ್ಯಾನಗರ ಮಹಿಳಾ ವಿದ್ಯಾಪೀಠದ ಬಳಿ ರವಿವಾರ ನಡೆದಿದೆ. ಸುನೀಲ್ ಎಂಬಾತ ಅಪ್ರಾಪ್ತ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈತನ ಕಿರುಕುಳದಿಂದ ಬೇಸತ್ತ ಯುವತಿ ತಂದೆಯ ಬಳಿ ಹೇಳಿಕೊಂಡಿದ್ದಳು.  ಇಂದು ನಡು ರಸ್ತೆಯಲ್ಲಿಯೇ ಯುವತಿ ತಂದೆಗೆ ಸಿಕ್ಕಿಬಿದ್ದ ಸುನೀಲ್ ಗೆ ಧರ್ಮದೇಟು ನೀಡಿದ್ದು, ವಿಡಿಯೋ ವೈರಲ್ ಆಗಿದೆ. Views: 157

ಭೀಮಾ ತೀರದ 32 ರೌಡಿಗಳ ಮನೆ ಮೇಲೆ ದಾಳಿ

ಭೀಮಾ ತೀರದ 32 ರೌಡಿಗಳ ಮನೆ ಮೇಲೆ ದಾಳಿ

ವಿಜಯಪುರ:  ಇಂಡಿ ಉಪವಿಭಾಗ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ರವಿವಾರ ಬೆಳಂ ಬೆಳಗ್ಗೆ  ಡಿವೈಎಸ್ಪಿ ರವೀಂದ್ರ ಶಿರೂರ ನೇತೃತ್ವದಲ್ಲಿ ವಿಜಯಪುರ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಇಂಡಿ ನಗರ, ಇಂಡಿ ಗ್ರಾಮೀಣ, ಝಳಕಿ, ಚಡಚಣ, ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ಮತ್ತು ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ  ಒಟ್ಟು 32 ರೌಡಿಗಳ ಮನೆಗಳ ಬೆಳಿಗ್ಗೆ 4 ಗಂಟೆಯಿಂದ 7 ಗಂಟೆಯವರೆಗೆ ದಾಳಿ ನಡೆಸಲಾಗಿದೆ. ದಾಳಿ ವೇಳೆ […]

ಬೇಂದ್ರೆ ಬಸ್ ಚಾಲಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಸಂಚಾರ ಠಾಣೆ ಇನಸ್ಪೆಕ್ಟರ್

ಬೇಂದ್ರೆ ಬಸ್ ಚಾಲಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಸಂಚಾರ ಠಾಣೆ ಇನಸ್ಪೆಕ್ಟರ್

  ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳಲ್ಲಿ ಇನ್ನು ಮುಂದೆ ಬೇಂದ್ರೆ ನಗರ ಸಾರಿಗೆ ವಾಹನ ಚಾಲಕರು ಮನಬಂದಂತೆ ಬಸ್ ಗಳನ್ನು ಚಾಲನೆ ಮಾಡುವಂತಿಲ್ಲ. ಕಳೆದ ಹಲವು ವರ್ಷಗಳಿಂದ ಬೇಂದ್ರೆ ಬಸ್ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದು, ನಗರಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುವಂತಿಲ್ಲ ಎಂದು ಧಾರವಾಡ ಸಂಚಾರ ಠಾಣೆ ಇನಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಬೇಂದ್ರೆ ಬಸ್ ಚಾಲಕರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ನಗರಗಳಲ್ಲಿ ಬೇಂದ್ರೆ ಬಸ್ ಚಾಲಕರು ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದಾರೆ ಎಂಬ ದೂರುಗಳು […]

ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ: ಸಂಸದ ಶ್ರೀರಾಮುಲು ಭರವಸೆ

ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ: ಸಂಸದ ಶ್ರೀರಾಮುಲು ಭರವಸೆ

ರಾಯಬಾಗ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ 24 ಗಂಟೆಯೊಳಗೆ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿನ ಸಾ ಮನ್ನಾ ಮಾಡುತ್ತೇವೆ ಎಂದು ಸಂದಸ ಶ್ರೀರಾಮುಲು ಭರವಸೆ ನೀಡಿದರು. ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ ನಡೆದ ಬಿಜೆಪಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಎಸ್ ವೈ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಯಾರಿಗೂ ಅನ್ಯಾಯವಾಗುವುದಿಲ್ಲ. ಇದನ್ನ ಬೇಕಾದರೆ ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದರು. ಕುಡಚಿ ಶಾಸಕ ಪಿ. ರಾಜೀವ ಇತರರು ಇದ್ದರು. Views: 359

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಡಿಸಿಪಿ ರವಿ.ಡಿ.ಚನ್ನಣ್ಣವರ್ ದಿಢೀರ್ ಭೇಟಿ, ಪರಿಶೀಲನೆ

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಡಿಸಿಪಿ ರವಿ.ಡಿ.ಚನ್ನಣ್ಣವರ್ ದಿಢೀರ್ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚನ್ನಣ್ಣವರ್ ಅವರು ಶನಿವಾರ ತಡರಾತ್ರಿ ವೇಳೆ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲು ನಿಲ್ದಾಣದ  ಆವರಣದಲ್ಲಿ ಭದ್ರತೆ ಬಗ್ಗೆ ತಪಾಸಣೆ ನಡೆಸಿದ ಅವರು, ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ಅನೈತಿಕ ಚುಟುವಟಿಕೆಗಳಿಗೆ ಬ್ರೇಕ್ ಕಾರ್ಯಾಚಾರಣೆ ಆರಂಭಿಸಿದರು. ರೈಲು ನಿಲ್ದಾಣ ಬಳಿ ಪ್ರಯಾಣಿಕರಿಂದ ಸುಲಿಗೆ, ದರೋಡೆ ದೂರುಗಳು ಬಂದಿರುವುದರಿಂದ ಡಿಸಿಪಿ ರವಿ. ಡಿ. ಚನ್ನಣ್ನವರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,   ಪೊಲಿಸರಿಗೂ ಎಚ್ಚರಿಕೆ ನೀಡಿ ಕಿಡಿಗೇಡಿಗಳು, […]

ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ: ಸಿದ್ದು

ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ: ಸಿದ್ದು

ಮೈಸೂರು: ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕ ಬರ್ತೀವಿ ಎಂದು ಸಿ.ಎಂ. ಸಿದ್ಧರಾಮಯ್ಯ ಹೇಳಿದ್ದಾರೆ. ರಾಹುಲ್ ಗಾಂಧಿ ಕಾಯ್ರಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಿಸಿರುವ  ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರ  ಅಲೆ ಇದೆ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರೋದು  ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರಲ್ಲಿ ವಿಶೇಷವೇನೂ ಇಲ್ಲ. ಕೆಲಸ ಮಾಡುವವರಿಗೆ ಜನ ಬೆಂಬಲ ಕೊಟ್ಟೇ ಕೊಡುತ್ತಾರೆ ಎಂದು ಹೇಳಿದ ಸಿದ್ಧರಾಮಯ್ಯ, ಮೋದಿ, ಅಮಿತ ಶಾ ರಾಜ್ಯಕ್ಕೆ ನೂರು ಬಾರಿ ಬಂದರೂ ಏನೂ ವ್ಯತ್ಯಾಸವಾಗುವುದಿಲ್ಲ . ಕಾಂಗ್ರೆಸ್ […]

ಉಪ್ಪಿನ ಬೆಟಗೇರಿಯಲ್ಲಿ ಗಮನಸೆಳೆದ ಬಯಲು ಕುಸ್ತಿಗಳು

ಉಪ್ಪಿನ ಬೆಟಗೇರಿಯಲ್ಲಿ ಗಮನಸೆಳೆದ ಬಯಲು ಕುಸ್ತಿಗಳು

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಜಂಗಿ ನಿಕಾಲಿ ಕುಸ್ತಿಯ ಎರಡನೇ ದಿನವಾದ ಶನಿವಾರ ಬಯಲು ಕುಸ್ತಿಗಳು ಎಲ್ಲರ ಗಮನಸೆಳೆದವು. ಗದಗ, ಹಾವೇರಿ, ಬೈಲಹೊಂಗಲ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿರುವ ಕುಸ್ತಿಪಟುಗಳು ಕುಸ್ತಿಯಲ್ಲಿ ಪಾಲ್ಗೊಂಡು ಎಲ್ಲರ ಗಮನಸೆಳೆದರು. ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷ ಜಾತ್ರೆ ಮುಗಿದ ನಂತರ ಮೂರು ದಿನಗಳ ಕಾಲ ಈ ಕುಸ್ತಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಈ ವರ್ಷವೂ […]

ಖಾಸಗಿ ಆಸ್ಪತ್ರೆಯ ಚರಂಡಿಯಲ್ಲಿ 5 ತಿಂಗಳ ಭ್ರೂಣ ..!

ಖಾಸಗಿ ಆಸ್ಪತ್ರೆಯ ಚರಂಡಿಯಲ್ಲಿ 5 ತಿಂಗಳ ಭ್ರೂಣ ..!

ದೊಡ್ಡಬಳ್ಳಾಪುರ: ಇಲ್ಲಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ 5 ತಿಂಗಳ ಭ್ರೂಣವನ್ನು ಚರಂಡಿಗೆ ಎಸೆದಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಭ್ರೂಣ ಹತ್ಯೆ ನಿಷೇಧ ಇದ್ದರೂ ಸಹ ಕಾನೂನು ಬಾಹಿರವಾಗಿ ವೈದ್ಯರು ಭ್ರೂಣ ಹತ್ಯೆ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ನಗರದ ಮಾನಸ ಎಂಬ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ತ್ಯಾಜ್ಯ ಹೊರ ಹೋಗುವ ಚರಂಡಿಯಲ್ಲಿ ಭ್ರೂಣವನ್ನು ಎಸೆದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸತತ ಒಂದು ಗಂಟೆ ಕಾಲ ಆಸ್ಪತ್ರೆಯ ಸಿಬ್ಬಂದಿ ಜೊತೆ […]

ಕಟ್ಟಡ ಕುಸಿದು ಕಾರ್ಮಿಕ ಸಾವು

ಕಟ್ಟಡ ಕುಸಿದು ಕಾರ್ಮಿಕ ಸಾವು

ಹುಕ್ಕೇರಿ: ಹಳೆ ಕಟ್ಟಡ ತೆರವುಗೊಳಿಸುವಾಗ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ  ನಡೆದಿದೆ. ಗಣಪತಿ ತಮ್ಮಣ್ಣಗೋಳ ಮೃತ ದುರ್ದೈವಿ.  ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಶಿಥಿಲಾ ವ್ಯವಸ್ಥೆಗೆ ತಲುಪಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ತೆರವುಗೊಳಿಸುವ ವೇಳೆ ಕಟ್ಟಡ ಕುಸಿದು ಕಾರ್ಮಿಕನ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಗಣಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ನಡೆದು ಗಂಟೆಗಳೇ ಕಳೆದರು ಕೂಡ ಪೊಲೀಸರು ಸ್ಥಳಕ್ಕೆ  ಬಾರದ ಹಿನ್ನಲೆ ಶವ ಹೊರತೆಗೆಯಲು ವಿಳಂಬವಾಗಿದೆ. ರೊಚ್ಚಿ ಗೆದ್ದ […]