ಬೆಳಗಾವಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿದ್ದರೆ ತಪ್ಪು : ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ, ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿದ್ದರೆ ತಪ್ಪು : ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ, ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ

 . ಹೆಬ್ಬಾಳ್ಕರ್ ಹೇಳಿಕೆಗೂ, ಪಕ್ಷಕ್ಕೂ ಸಂಬಂಧವಿಲ್ಲ: ಎಐಸಿಸಿ ಕಾರ್ಯದರ್ಶಿ,ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ ಜಾರಕಿಹೊಳಿ ಬೆಂಗಳೂರು:  ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕದ ವಿರುದ್ಧವಾಗಿ ಮಾತನಾಡಿರುವುದು ತಪ್ಪು, ಅದು ಹೆಬ್ಬಾಳ್ಕರ್ ಅವರ ವೈಯಕ್ತಿಕ ಹೇಳಿಕೆ, ಹೆಬ್ಬಾಳ್ಕರ್ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಶಾಸಕ  ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,  ಬೆಳಗಾವಿ ಎಂದಿದ್ದರೂ ಕರ್ನಾಟಕದ್ದೇ. ಈ ಮಾತನ್ನು ಹಿಂದೆಯೂ  ಈಗಲೂ, ಮುಂದೆಯೂ […]

ಗೋಕಾಕದಲ್ಲಿ ಶಾಸಕ ಸತೀಶ ಜಾರಕಿಹೊಳಿ ಚಿತ್ರಕ್ಕೆ ಕಿಡಿಗೇಡಿಗಳಿಂದ ಕಪ್ಪು ಮಸಿ: ಭುಗಿಲ್ಲೆದ್ದ ಆಕ್ರೋಶ

ಗೋಕಾಕದಲ್ಲಿ ಶಾಸಕ ಸತೀಶ ಜಾರಕಿಹೊಳಿ ಚಿತ್ರಕ್ಕೆ ಕಿಡಿಗೇಡಿಗಳಿಂದ ಕಪ್ಪು ಮಸಿ:  ಭುಗಿಲ್ಲೆದ್ದ ಆಕ್ರೋಶ

ಬೆಳಗಾವಿ:  ಗೋಕಾಕ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಅಟೋ ಸ್ಟ್ಯಾಂಡ್ ಬಳಿಯ ನಾಮಫಲಕದಲ್ಲಿರುವ  ಶಾಸಕ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಬುಧವಾರ ರಾತ್ರಿ ಕಪ್ಪು ಮಸಿ ಸಿಂಪಡಿಸಿದ್ದನ್ನು ಖಂಡಿಸಿ ಧರಣಿ ಪ್ರತಿಭಟನೆಗಳು ಬೆಳಗ್ಗೆಯಿಂದ ನಡೆಯುತ್ತಿದ್ದು, ಅಭಿಮಾನಿಗಳ ಆಕ್ರೋಶ ಭುಗಿಲ್ಲೆದ್ದಿದೆ. ಕರ್ನಾಟಕ ರಕ್ಷಣಾ ವೇದಿಕೆ, ಅಟೋ ಮಾಲಿಕರು ಮತ್ತು ಚಾಲಕರ ಸಂಘ, ಸತೀಶಣ್ಣಾ ಜಾರಕಿಹೊಳಿ ಅಭಿಮಾನಿಗಳ ಬಳಗ ಮತ್ತು ವಿವಿಧ ಸಂಘಟನೆಗಳು, ಘಟನಾ ಸ್ಥಳ ಮತ್ತು ಗೋಕಾಕ ಡಿಎಸ್ಪಿ ಕಚೇರಿ ಎದುರು ಗುರುವಾರ ಬೆಳಗ್ಗೆ ಧರಣಿ […]

ಮಹಾರಾಷ್ಟ್ರ ಪರ ಲಕ್ಷ್ಮೀ ಹೆಬ್ಬಾಳ್ಕರ್ ಬ್ಯಾಟಿಂಗ್: ರಾಜ್ಯಾದ್ಯಂತ ಆಕ್ರೋಶದ ಅಲೆ

ಮಹಾರಾಷ್ಟ್ರ ಪರ ಲಕ್ಷ್ಮೀ ಹೆಬ್ಬಾಳ್ಕರ್ ಬ್ಯಾಟಿಂಗ್: ರಾಜ್ಯಾದ್ಯಂತ ಆಕ್ರೋಶದ ಅಲೆ

ಬೆಳಗಾವಿ: ಗಡಿ ವಿವಾದದ ಕುರಿತು  ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್  ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದ್ದು, ಹೆಬ್ಬಾಳ್ಕರ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಭುಗಿಲ್ಲೆದ್ದಿದೆ. ಬೆಳಗಾವಿ ತಾಲೂಕು ಬಸರಿಕಟ್ಟಿ ಗ್ರಾಮದಲ್ಲಿ ಆ.27ರಂದು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೆಬ್ಬಾಳ್ಕರ್, ಬೆಳಗಾವಿಯನ್ನು  ಮಹಾರಾಷ್ಟ್ರದಲ್ಲಿ ಸೇರ್ಪಡೆ ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದರೆ ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕುತ್ತೇನೆ ಎಂದು ಮರಾಠಿಗರ ಎದುರು ಹೇಳಿದ್ದಾರೆ. ಈ […]

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ‘ಕಳ್ಳ ಕುಟುಂಬ’ ಬಂಧನ

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ‘ಕಳ್ಳ ಕುಟುಂಬ’ ಬಂಧನ

ದಾವಣಗೆರೆ: ಬಸ್ ನಿಲ್ದಾಣಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ದೋಚುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಎಸ್ಪಿ ಯಶೋಧ ವಂಟಗೋಡಿ ತಿಳಿಸಿದರು. ಒಂದೇ ಕುಟುಂಬ ವೆಂಕಟರಮಣಮ್ಮ, ಕವಿತಾ, ಕಲಾವತಿ, ಜ್ಯೋತಿ, ಅಲುವೇಲು ಬಂಧಿತ ಆರೋಪಿಗಳು. ಬಂಧಿತರಿಂದ 21 ಲಕ್ಷ ರೂ ಮೌಲ್ಯದ 700 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮೂಲತ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಎಂ.ಕೆ.ದೊಡ್ಡಿ ಗ್ರಾಮದ ಈ ಎಲ್ಲರೂ ಒಂದೇ ಕುಟುಂಬದವರು. ಈ ಕಳ್ಳರ ಕುಟುಂಬದಲ್ಲಿ ಒಟ್ಟು ಹನ್ನೊಂದು ಮಂದಿ ಇದ್ದು.ಈ ಪೈಕಿ 8 […]

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ: ಬೆಂಗಳೂರಿನಲ್ಲಿ ಮಠಾಧೀಶರು, ಚಿಂತಕರ ಬೃಹತ್ ಸಭೆ ಒತ್ತಾಯ

ಲಿಂಗಾಯತ  ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ: ಬೆಂಗಳೂರಿನಲ್ಲಿ ಮಠಾಧೀಶರು, ಚಿಂತಕರ ಬೃಹತ್ ಸಭೆ ಒತ್ತಾಯ

ಲಿಂಗಾಯತ ಕನ್ನಡದ ಮೊದಲ ಧರ್ಮ: ಬೆಳಗಾವಿ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಪ್ರತಿಪಾದನೆ ಬೆಂಗಳೂರು: ಲಿಂಗಾಯತ ಒಂದು  ಮತ ಅಲ್ಲ.  ಪ್ರತ್ಯೇಕ ಧರ್ಮ.  ಹಿಂದೂ ಧರ್ಮದ ಅನುಯಾಯಿಗಳು ಅಂತಾ ಹೇಳಿಕೊಳ್ಳುವ ಹಂಗು  ಲಿಂಗಾಯತರಿಗೆ ಇಲ್ಲ. ಜೈನ, ಬೌದ್ಧ, ಸಿಖ್‌ರಂತೆ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ ಎಂದು ಪ್ರತಿಪಾದಿಸಿದ  ನಾಡಿನ ಲಿಂಗಾಯತ ಮಠಾಧೀಶರು, ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ಲಿಂಗಾಯತ ಧರ್ಮಕ್ಕೆ  ಸಾಂವಿಧಾನಿಕ ಮಾನ್ಯತೆ ದೊರಕಿಸಲು ರಾಜ್ಯ, ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು. ನಗರದ ಬಸವ […]

ಮುದೂರ ಶಾಲೆ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಪ್ರಕರಣ: ಮುಖ್ಯಗುರು,ಸಹ ಶಿಕ್ಷಕ ಅಮಾನತು, ಅಡುಗೆ ಸಿಬ್ಬಂದಿಗೆ ಗೇಟ್‍ಪಾಸ್

ಮುದೂರ ಶಾಲೆ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಪ್ರಕರಣ: ಮುಖ್ಯಗುರು,ಸಹ ಶಿಕ್ಷಕ ಅಮಾನತು, ಅಡುಗೆ ಸಿಬ್ಬಂದಿಗೆ ಗೇಟ್‍ಪಾಸ್

ಮುದ್ದೇಬಿಹಾಳ : ತಾಲೂಕಿನ ಮುದೂರ ಶಾಲೆಯಲ್ಲಿ ಸುಡುವ ಹಾಲಿನ ಪಾತ್ರೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ ವೀರಣ್ಣ ಪತ್ತಾರ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯತನದ ಆರೋಪದ ಮೇಲೆ ಶಾಲೆಯ ಮುಖ್ಯಗುರು ಎಚ್.ಸಿ.ಭಜಂತ್ರಿ ಹಾಗೂ ಸಹ ಶಿಕ್ಷಕ ಎಸ್.ಎಂ.ಬಿರಾದಾರ ಅವರನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಆ.29 ರಂದು ಆದೇಶಿಸಿದ್ದಾರೆ. ಈ ಕುರಿತು ಅಮಾನತು ಆದೇಶದಲ್ಲಿ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಮಕ್ಕಳಿಗೆ ಹಾಲು ವಿತರಣೆ ಮಾಡುವಾಗ ಮುಖ್ಯೋಪಾಧ್ಯಾರ ಬೇಜವಾಬ್ದಾರಿ ಹಾಗೂ ವರ್ಗ ಶಿಕ್ಷಕರ ನಿರ್ಲಕ್ಷ್ಯತನದಿಂದ ಮತ್ತು […]

ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಶಿವಯೋಗಿ ಕಳಸದ ಅಧಿಕಾರ ಸ್ವೀಕಾರ

ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಶಿವಯೋಗಿ ಕಳಸದ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಶಿವಯೋಗಿ ಕಳಸದ ಅವರು ಬುಧವಾರ ಬೆಳಗ್ಗೆ  ಅಧಿಕಾರ ವಹಿಸಿಕೊಂಡರು. ಈ ಮೊದಲು ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರಾಗಿ ಶಿವಯೋಗಿ ಕಳಸದ ಕಾರ್ಯ ನಿರ್ವಹಿಸುತ್ತಿದ್ದರು. ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ  ಹೆಚ್ಚುವರಿ ಆಯುಕ್ತ ಮಹಾಂತೇಶ ಬೀಳಗಿ, ಗಂಗೂಬಾಯಿ ಮಾನಕರ, ತಹಸೀಲ್ದಾರ ಎ.ಎಸ್.ಅರಳಿಕಟ್ಟಿ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು. udayanadu2016

ಧಾರವಾಡ: ರಸ್ತೆ ಮೇಲೆ ಹೋಗುತ್ತಿದ್ದ ಯುವಕನ ಬರ್ಬರ ಕೊಲೆ

ಧಾರವಾಡ: ರಸ್ತೆ ಮೇಲೆ ಹೋಗುತ್ತಿದ್ದ ಯುವಕನ ಬರ್ಬರ ಕೊಲೆ

ಧಾರವಾಡ:  ಬೆಟಗೇರಿ ಹಾಗೂ ದೊಡವಾಡ ರಸ್ತೆ ಮೇಲೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ. ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಮಂಜುನಾಥ್ ಜೊಗತಿ (27)  ಕೊಲೆಯಾದ ಯುವಕ. ಬೆಟಗೇರಿ ಹಾಗೂ ದೊಡವಾಡ ರಸ್ತೆ ಮೇಲೆ ಹೋಗುತ್ತಿದ್ದ ಯುವಕನನ್ನು ಕೊಲೆ ಮಾಡಿ, ಕೈಕಾಲು ಕಟ್ಟಿ  ದುಷ್ಕರ್ಮಿಗಳು ಎಸೆದಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗಿದೆ.  ಗರಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. udayanadu2016

ಅಪ್ಪುಗೋಳ ಕೋಟೆಗೆ ಬೀಗ : ಗ್ರಾಹಕರ ಪರದಾಟ, ಪ್ರತಿಭಟನೆ ಎಚ್ಚರಿಕೆ

ಅಪ್ಪುಗೋಳ ಕೋಟೆಗೆ ಬೀಗ : ಗ್ರಾಹಕರ ಪರದಾಟ, ಪ್ರತಿಭಟನೆ ಎಚ್ಚರಿಕೆ

ಬೆಳಗಾವಿ: ಆಸ್ತಿ ಮಾರಿಯಾದರು ಗ್ರಾಹಕರಿಗೆ ಹಣ ನೀಡುತ್ತೇನೆ ಎಂದು ಜನರಿಗೆ ಭರವಸೆ ನೀಡಿ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್  ಸೂಸೈಟಿ ಸ್ಥಾಪಿತ ಆನಂದ ಅಪ್ಪುಗೋಳ ತಮ್ಮ ಕೋಟೆಗೆ ಬೀಗ ಹಾಕಿ ತಲೆ ಮರೆಸಿಕೊಂಡಿದ್ದು, ನಮ್ಮ ಹಣ ವಾಪಸ್ ಕೊಡಿಸುವಂತೆ ಗ್ರಾಹಕರು ಬುಧವಾರ ಇಲ್ಲಿನ  ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಎಲ್ಲ ಗ್ರಾಹಕರು ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಭೇಟಿ ಮಾಡಿದ್ದಾರೆ. ಆನಂದ ಅಪ್ಪುಗೋಳ ಅವರಿಗೆ ಸೋಮವಾರ ಸಮಯಾವಕಾಶ ನೀಡಿದ್ದು,  ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಗ್ರಾಹಕರು […]

ಹಿರಿಯ ಗಾಯಕ, ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರಿ ಇನ್ನಿಲ್ಲ

ಹಿರಿಯ ಗಾಯಕ, ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರಿ ಇನ್ನಿಲ್ಲ

        ಬೆಂಗಳೂರು:  ಕಳೆದ ಎರಡು ತಿಂಗಳಿಂದ  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿನ್ನೆಲೆ ಗಾಯಕ ಎಲ್ ಎನ್ ಶಾಸ್ತ್ರಿ (46) ಆ.30 ರಂದು ನಿಧನರಾಗಿದ್ದಾರೆ.    ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಲ್ಎನ್ ಶಾಸ್ತ್ರಿ ಅವರು ಕಳೆದ ಎರಡು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.    ಶಾಸ್ತ್ರೀಯ ಸಂಗೀತದಲ್ಲಿ ಹೆಸರುವಾಸಿಯಾಗಿದ್ದ ಎಲ್ಎನ್ ಶಾಸ್ತ್ರಿ ಅವರು 3 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಕಂಠದಾನ ಮಾಡಿದ್ದಾರೆ. 1996 ರಲ್ಲಿ […]