ರಾಜನಹಳ್ಳಿಯ ವಾಲ್ಮೀಕಿ ಮಠಕ್ಕೆ ಮಾಜಿ ಸಚಿವ ಜನಾರ್ದನರೆಡ್ಡಿ ಭೇಟಿ

ರಾಜನಹಳ್ಳಿಯ ವಾಲ್ಮೀಕಿ ಮಠಕ್ಕೆ ಮಾಜಿ ಸಚಿವ ಜನಾರ್ದನರೆಡ್ಡಿ ಭೇಟಿ

ದಾವಣಗೆರೆ:  ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದ ಶ್ರೀಪ್ರಸನ್ನಾನಂದ ಸ್ವಾಮೀಜಿ ಅವರನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರವಿವಾರ ಭೇಟಿ ಮಾಡಿ ಆಶೀರ್ವಾದ ಪಡೆದರು. ದಾವಣಗೆರೆಯಲ್ಲಿ   ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದರು. ಆ ನಂತರ ನಂದಿಗುಡಿ ಬೃಹನ್ಮಠಕ್ಕೆ ಭೇಟಿ ನೀಡಿದ ಜನಾರ್ದನರೆಡ್ಡಿ,  ಸ್ವಾಮೀಜಿ ಜೊತೆ ಸಮಾಲೋಚನೆ ನಡೆಸಿದರು. ಶ್ರೀ ಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ದರ್ಶನ ಪಡೆದು, ಕುಣೆಬೆಳಕೆರೆ ಗ್ರಾಮಕ್ಕೆ ಭೇಟಿ ನೀಡಿದರು.  ಮರಳುಸಿದ್ದೇಶ್ವರ […]

ಐಸಿಸಿ ಮಹಿಳಾ ವಿಶ್ವಕಪ್‌: ಭಾರತ ತಂಡಕ್ಕೆ ಸಿದ್ದರಾಮಯ್ಯ ಶುಭ ಹಾರೈಕೆ

ಐಸಿಸಿ ಮಹಿಳಾ ವಿಶ್ವಕಪ್‌: ಭಾರತ ತಂಡಕ್ಕೆ ಸಿದ್ದರಾಮಯ್ಯ ಶುಭ ಹಾರೈಕೆ

ಬೆಂಗಳೂರು: ಐಸಿಸಿ ಮಹಿಳಾ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮಿಥಾಲಿ ರಾಜ್‌ ನೇತೃತ್ವದ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಶುಭ ಕೋರಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ದೇಶದ ಹೆಮ್ಮೆಯ ಮಹಿಳಾ ತಂಡಕ್ಕೆ ಶುಭಾಶಯ.  ಭಾರತೀಯರ ಶುಭಾಶಯ, ಪ್ರಾರ್ಥನೆ ನಿಮಗಾಗಿ ಇದೆ ಎಂದು ಹೇಳಿದ್ದಾರೆ. Views: 129

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನನ್ನದು ಬೆಂಬಲವಿದೆ: ಬಸವರಾಜ ಹೊರಟ್ಟಿ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನನ್ನದು ಬೆಂಬಲವಿದೆ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಸದ್ಯದ ಪರಿಸ್ಥಿತಿಯಲ್ಲಿ ಅನುಗುಣ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಅದಕ್ಕೆ ನನ್ನದು ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಬುದಕ್ಕೆ ನನ್ನದು ಬೆಂಬಲವಿದೆ. ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಅಲ್ಪಸಂಖ್ಯಾತ ಮನ್ನಣೆ ದೊರೆಯಲಿದೆ. ಇದರಿಂದ ಸಮಾಜದ ಕೆಳ ಸ್ಥರದ ಜನರಿಗೆ ಅನುಕೂಲವಾಗಲಿದ್ದು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ಬೇಡ ಎಂದರು. ನನಗೆ ವೀರಶೈವ ಪದದ ಅರ್ಥ ಗೊತ್ತಿಲ್ಲ, ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಅವರಿಗೆ  ವೀರಶೈವ […]

ಜನ ಔಷಧಿ ಕೇಂದ್ರಕ್ಕೆ ಕನ್ನ: ಹಣದ ಜೊತೆ ದೋಚಿದ್ದೇನು ಗೊತ್ತಾ?

ಜನ ಔಷಧಿ ಕೇಂದ್ರಕ್ಕೆ ಕನ್ನ: ಹಣದ ಜೊತೆ ದೋಚಿದ್ದೇನು ಗೊತ್ತಾ?

ದೇವನಹಳ್ಳಿ: ಇಲ್ಲಿನ  ಸರ್ಕಾರಿ ಆಸ್ಪತ್ರೆ  ಆವರಣದ ಬಳಿ ಇರುವ  ಪ್ರಧಾನಮಂತ್ರಿ ಜನ ಔಷಧ ಕೇಂದ್ರಕ್ಕೆ ಕನ್ನ ಹಾಕಿದ ಕಳ್ಳರು 30 ಸಾವಿರ ಹಣ ಜೊತೆಗೆ ನಿರೋಧ್‍ ಪ್ಯಾಕೆಟ್‍ಗಳನ್ನು ಎಗರಿಸಿದ್ದಾರೆ. ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭದ್ರತಾ ಸಿಬ್ಬಂದಿಗಳು ಇಲ್ಲದೆ ಇರುವುದರಿಂದ ಮೆಡಿಕಲ್ ಶಾಪ್ ಶೆಟರ್ ಮುರಿದು ಒಳನುಗ್ಗಿದ ಕಳ್ಳರು 30 ಸಾವಿರ ರೂ. ನಗದು ಜೊತೆ  ಶಾಪ್‍ನಲ್ಲಿದ್ದ ಎಲ್ಲಾ ನಿರೋಧ್ ಪ್ಯಾಕೆಟ್‌ಗಳನ್ನ ಕಳವು ಮಾಡಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Views: 162

ಪ್ರತ್ಯೇಕ ಘಟನೆ: ಬಸ್ ಪಲ್ಟಿ 25 ಜನರಿಗೆ ಗಂಭೀರ ಗಾಯ, ಲಾರಿ ಅಪಘಾತ ಚಾಲಕ ಸಾವು

ಪ್ರತ್ಯೇಕ ಘಟನೆ: ಬಸ್ ಪಲ್ಟಿ 25 ಜನರಿಗೆ ಗಂಭೀರ ಗಾಯ, ಲಾರಿ ಅಪಘಾತ ಚಾಲಕ ಸಾವು

ಕಾರವಾರ: ಇಲ್ಲಿನ ಕಡಗೇರಿ ಘಾಟ್ ಬಳಿ ಬಸ್‍ ಪಲ್ಟಿಯಾಗಿ 25 ಜನರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಹೊನ್ನಾವರದಿಂದ ಮಾವಿನಕುರ್ವಾಗೆ ಹೊರಟಿದ್ದ ವೇಳೆ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತ್ಯೇಕ ಘಟನೆ: ಉತ್ತರ ಕನ್ನಡದ ಸುಂಕನಾಳ ಬಳಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತ ಚಾಲಕ ತಮಿಳುನಾಡು ಮೂಲದ ಮುರ್ಗನ್(30) ಎಂದು […]

ಚಿಕ್ಕಮಗಳೂರು: ಫೈನ್ ಕಟ್ಟಲು ಹಣ ವಿಲ್ಲದ ಬೈಕ್ ಸವಾರನಿಗೆ ಪೊಲೀಸರಿಂದ ಥಳಿತ

ಚಿಕ್ಕಮಗಳೂರು: ಫೈನ್ ಕಟ್ಟಲು ಹಣ ವಿಲ್ಲದ ಬೈಕ್ ಸವಾರನಿಗೆ ಪೊಲೀಸರಿಂದ ಥಳಿತ

ಚಿಕ್ಕಮಗಳೂರು: ಹೆಲ್ಮೆಟ್ ಧರಿಸದೇ ಬೈಕ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದ ಪೊಲೀಸರು ಫೈನ್  ಕಟ್ಟಲು ಹಣವಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಥಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರ  ಪೊಲೀಸ ಠಾಣೆ ಮುಂಭಾಗದಲ್ಲಿ ನಡೆದಿದೆ. ಆಲೀಂ ಜಾನ್ ಪೊಲೀಸರಿಂದ ಥಳಿತಕ್ಕೊಳಗಾದ ವ್ಯಕ್ತಿ.  ಬೈಕ್‌ನಲ್ಲಿ ತೆರಳುತ್ತಿದ್ದಾಗ ತಡೆದ ಪೊಲೀಸರು ಹೆಲ್ಮೆಟ್ ಎಕೆ ಧರಿಸಿಲ್ಲ ಎಂದು ಪ್ರಶ್ನಿಸಿ ಫೈನ್ ಹಾಕಿದ್ದಾರೆ. ಫೈನ್  ಕಟ್ಟಲು ಹಣವಿಲ್ಲ ಇಲ್ಲ ಮನೆಗೆ ತೆರಳಿ ಹಣ ತರುವುದಾಗಿ ಬೇಡಿಕೊಂಡಿದ್ದಾನೆ. ಇವನ ಬಳಿ ಹಣವಿಲ್ಲ ಎಂದು ಠಾಣೆಯ ಎಎಸ್‌ಐ ಮತ್ತು […]

ಜು. 27ರಂದು ರಾಜ್ಯಾದ್ಯಂತ ಸಾವಿರ ಕಡೆ ಬಸವ ಪಂಚಮಿ: ಶಾಸಕ ಸತೀಶ ಜಾರಕಿಹೊಳಿ

ಜು. 27ರಂದು ರಾಜ್ಯಾದ್ಯಂತ ಸಾವಿರ ಕಡೆ ಬಸವ ಪಂಚಮಿ: ಶಾಸಕ ಸತೀಶ ಜಾರಕಿಹೊಳಿ

  ಬೆಳಗಾವಿ: ಮಾನವ ಬಂಧುತ್ವ ವೇದಿಕೆ ಕರ್ನಾಟಕ ದಿಂದ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜು.27 ರಂದು ಬಸವ ಪಂಚಮಿ ಆಚರಿಸಲಾಗುವುದು ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮತ್ತು ಎಐಸಿಸಿ ಕಾರ್ಯದರ್ಶಿ   ಸತೀಶ ಜಾರಕಿಹೊಳಿ ತಿಳಿಸಿದರು. ಇಲ್ಲಿನ ಸೋಶಿಯಲ್ ಕ್ಲಬ್ ನಲ್ಲಿ ಶನಿವಾರ ಸಂಜೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ನಾಗರ ಪಂಚಮಿ ನೆಪದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಪೋಲು ಮಾಡುವುದನ್ನು ತಪ್ಪಿಸಲು ಮತ್ತು ಕಲ್ಲುಗಳಿಗೆ ಸುರಿಯುವುದನ್ನು ತಡೆಯಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂಗನವಾಡಿ […]

ಶೋಷಣೆ ವಿರುದ್ಧ ಪ್ರತಿಭಟನೆಗೆ ಗಾಂಧಿ ಮಾರ್ಗವೇ ಅತ್ಯುತ್ತಮ: ಮಾರ್ಟಿನ್ ಲೂಥರ್ ಕಿಂಗ್

ಶೋಷಣೆ ವಿರುದ್ಧ ಪ್ರತಿಭಟನೆಗೆ ಗಾಂಧಿ ಮಾರ್ಗವೇ ಅತ್ಯುತ್ತಮ: ಮಾರ್ಟಿನ್ ಲೂಥರ್ ಕಿಂಗ್

ಬೆಂಗಳೂರು: .ಶೋಷಣೆ ವಿರುದ್ಧ ಪ್ರತಿಭಟನೆ ಅತ್ಯಗತ್ಯ. ಆದರೆ ಪ್ರತಿಭಟನೆ ಅಹಿಂಸಾತ್ಮಕವಾಗಿರಬೇಕು. ಹಿಂಸೆಗೆ ಹಿಂಸೆಯೇ ಉತ್ತರವಲ್ಲ. ಈ ವಿಷಯದಲ್ಲಿ ಮಹಾತ್ಮಾ ಗಾಂಧಿ ಅವರ ಮಾರ್ಗ ಅತ್ಯುತ್ತಮ  ಎಂದು ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ 3 ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಶನಿವಾರ ಮಾತನಾಡಿ, ಶೋಷಣೆಯ ವಿರುದ್ಧ ಹೋರಾಟ ಅಗತ್ಯ. ಶೋಷಣೆಯನ್ನು ಅನುಭವಿಸುತ್ತ, ನೋಡುತ್ತ ಕುಳಿತುಕೊಳ್ಳುವುದು ಸರಿಯಾದ ಕ್ರಮ ಅಲ್ಲ. ಪ್ರತಿಭಟನೆ ಬೇಕು. ಆದರೆ ಅದು ಅಹಿಂಸಾತ್ಮಕವಾಗಿರಬೇಕು ಎಂದರು. ದಾಳಿಗೆ ಒಳಗಾದರೆ ವಿರೋಧಿಸಲೇ ಬೇಕು. ವಿರೋಧಕ್ಕೆ ಹಿಂಸೆಯ […]

ಕಲ್ಲು ನಾಗರಕ್ಕೆ ಹಾಲು ಎರೆದು ವ್ಯರ್ಥಮಾಡದೇ ಮಕ್ಕಳಿಗೆ ನೀಡಿ: ಬಸವ ಜಯಮೃತ್ಯುಂಜಯ ಶ್ರೀ

ಕಲ್ಲು ನಾಗರಕ್ಕೆ ಹಾಲು ಎರೆದು ವ್ಯರ್ಥಮಾಡದೇ ಮಕ್ಕಳಿಗೆ ನೀಡಿ: ಬಸವ ಜಯಮೃತ್ಯುಂಜಯ ಶ್ರೀ

ದಾವಣಗೆರೆ : ಸಾರ್ವಜನಿಕರು ಕಲ್ಲು ನಾಗರಕ್ಕೆ ಹಾಲು ಎರೆದು ವ್ಯರ್ಥ ಮಾಡಬಾರದು ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಿವಿಮಾತು ಹೇಳಿದರು. ನಗರದ ಬಿಜೆಎಂ ಸ್ಕೂಲ್‍ನಲ್ಲಿ ಶನಿವಾರ ಪಿಎಲ್‍ಇ ಟ್ರಸ್ಟ್, ಬಿಜಿಎಂ ಸ್ಕೂಲ್ ಮತ್ತು ಬಿಎನ್‍ಬಿ ಪ್ರೌಢಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹದ ಉದ್ಘಾಟನೆ ಹಾಗೂ ಎಸ್‍ಎಸ್‍ಎಲ್‍ಸಿ  ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರವು ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸಲು ಒತ್ತು […]

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಮರ್ಥನೀಯ: ಪ್ರೊ.ಕೆ.ಎಸ್.ಭಗವಾನ್ ಪ್ರತಿಪಾದನೆ

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಮರ್ಥನೀಯ: ಪ್ರೊ.ಕೆ.ಎಸ್.ಭಗವಾನ್ ಪ್ರತಿಪಾದನೆ

ಬೆಂಗಳೂರು: ಬೌದ್ಧ ಧರ್ಮಕ್ಕೆ ಹತ್ತಿರವಾದ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಟ್ಟರೆ ತಪ್ಪೇನಿಲ್ಲ.  ಲಿಂಗಾಯತರು ಪ್ರತ್ಯೇಕ ಧರ್ಮ ಕೇಳುವುದರಲ್ಲಿ ಅರ್ಥ ಇದೆ ಎಂದು ಸಾಹಿತಿ ಪ್ರೊ. ಕೆ. ಎಸ್‌ ಭಗವಾನ್ ಹೇಳಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಸವಣ್ಣನವರ  ವಚನಗಳಲ್ಲಿ ಬುದ್ಧನ ಪಂಚಶೀಲ ತತ್ವಗಳಿವೆ. ಬೌದ್ಧ ಧರ್ಮಕ್ಕೂ, ಲಿಂಗಾಯತ ಧರ್ಮಕ್ಕೂ ಸಾಮ್ಯ ಇದೆ. ಒಂದರ್ಥದಲ್ಲಿ ಎರಡೂ ಒಂದೇ.  ಬಸವಣ್ಣ ಬುದ್ಧನ ತತ್ವಗಳಿಂದ  ಪ್ರಭಾವಿತನಾಗಿದ್ದವರು. ಅವರ ‘ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ’ […]