ಯುವತಿಗೆ ಬಲವಂತವಾಗಿ ಕಿಸ್ ಮಾಡಿದ ಯುವಕ: ಮನನೊಂದು ಯುವತಿ ಕಾಲುವೆಗೆ ಹಾರಿ ಆತ್ಮಹತ್ಯೆ

ಯುವತಿಗೆ ಬಲವಂತವಾಗಿ ಕಿಸ್ ಮಾಡಿದ ಯುವಕ:  ಮನನೊಂದು ಯುವತಿ ಕಾಲುವೆಗೆ ಹಾರಿ ಆತ್ಮಹತ್ಯೆ

ಹಾವೇರಿ: ಯುವಕನೊಬ್ಬ  ಯುವತಿಗೆ ಬಲವಂತವಾಗಿ ಕಿಸ್ ಪರಿಣಾಮ ಯುವತಿ ಮನನೊಂದು ಆತ್ಮಹತ್ಯೆ ಗೆ ಶರಣಾದ ಘಟನೆ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹನಮಾಪುರ  ತಾಂಡಾದಲ್ಲಿ ಕಳೆದ ಮೂರು ದಿನ ಹಿಂದೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರೇಷ್ಮಾ ಲಮಾಣಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ.  ಆ 26 ರಂದು  ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಯುವತಿ ತೆರಳಿದ್ದ ವೇಳೆ ಬಲವಂತವಾಗಿ ಕಿಸ್ ಕೊಟ್ಟಿದ್ದಾನೆ.  ರಾತ್ರಿ ಹತ್ತೂವರೆ ಸುಮಾರಿಗೆ ಈ ಘಟನೆ ನಡೆದಿದ್ದು, […]

ಅಭಿವೃದ್ಧಿಯಲ್ಲಿ ಯಮಕನಮರಡಿ ಕ್ಷೇತ್ರ ರಾಜ್ಯದಲ್ಲೇ ನಂ.1: ಶಾಸಕ ಸತೀಶ ಜಾರಕಿಹೊಳಿ ಅಭಿಮತ

ಅಭಿವೃದ್ಧಿಯಲ್ಲಿ ಯಮಕನಮರಡಿ ಕ್ಷೇತ್ರ ರಾಜ್ಯದಲ್ಲೇ ನಂ.1: ಶಾಸಕ ಸತೀಶ ಜಾರಕಿಹೊಳಿ ಅಭಿಮತ

ಬೆಳಗಾವಿ:  ಅಭಿವೃದ್ಧಿ ದೃಷ್ಟಿಯಿಂದ ಯಮಕನಮರಡಿ ಕ್ಷೇತ್ರ ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿದೆ. ಕ್ಷೇತ್ರದಲ್ಲಿ ಕಳೆದ 9 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಈ ಖಚಿತ  ಅಭಿಪ್ರಾಯಕ್ಕೆ ಕಾರಣ ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ಯಮಕನಮರಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಮಂಗಳವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಈಶ್ವರ ಯುವಕ ಮತ್ತು ಕ್ರೀಡಾ ಸಂಘದ ಉದ್ಘಾಟನೆ ವೇದಿಕೆಯಲ್ಲಿ ಅವರು ಮಾತನಾಡಿದರು. ಯಮಕನಮರಡಿ ಕ್ಷೇತ್ರ  ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು […]

ಲಾರಿಗಳ ಮಧ್ಯೆ ಡಿಕ್ಕಿ: ಒಬ್ಬ ಯುವಕ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಲಾರಿಗಳ ಮಧ್ಯೆ ಡಿಕ್ಕಿ: ಒಬ್ಬ ಯುವಕ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗೇಟ್ ಬಳಿ  ರಾಷ್ಟ್ರೀಯ ಹೆದ್ದಾರಿ 150 ಮೇಲೆ ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿರುವ  ‌ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಚಳ್ಳಕೆರೆ ಮೂಲದ ಲೋಕೇಶ್ (25) ಮೃತ ಯುವಕ, ಗಾಯಗೊಂಡ ಮೂವರನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ತಳಕು ಪಿ ಎಸ್ ಐ ಶಿವಕುಮಾರ್ ಭೇಟಿ ನೀಡಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ. Views: 206

ಗುರು-ವಿರಕ್ತರ ಸಮಾಗಮಕ್ಕಾಗಿ ಸೆ.4ರಂದು ಬದಾಮಿಯಲ್ಲಿ ಬೃಹತ್ ಸಮಾವೇಶ: ಅಮರಯ್ಯ ಸಿದ್ದೇಶ್ವರ ಶ್ರೀ

ಗುರು-ವಿರಕ್ತರ ಸಮಾಗಮಕ್ಕಾಗಿ ಸೆ.4ರಂದು ಬದಾಮಿಯಲ್ಲಿ ಬೃಹತ್ ಸಮಾವೇಶ: ಅಮರಯ್ಯ ಸಿದ್ದೇಶ್ವರ ಶ್ರೀ

ರಾಯಚೂರು:  ಗುರು ವಿರಕ್ತರು ಭಾವ ಒಂದೇ ಎಂಬ ಸಂದೇಶ ಸಾರುವ ಉದ್ದೇಶದಿಂದ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಿಯಲ್ಲಿ ಸೆ.4 ರಂದು ವೀರಶೈವ ಲಿಂಗಾಯತ ಸಮನ್ವಯ ಬೃಹತ್  ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಮರಯ್ಯ ಸಿದ್ದೇಶ್ವರ ಸ್ವಾಮಿಗಳು ತಿಳಿಸಿದರು. ನಗದಲ್ಲಿ ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತಿಚಿಗೆ ಕೇಳಿಬರುತ್ತಿರುವ ವೀರಶೈವ ಲಿಂಗಾಯತ ಪ್ರತ್ಯೇಕತೆಯ ಬಗ್ಗೆ ಕೆಲ ವ್ಯಕ್ತಿಗಳು ಗೊಂದಲ ಏರ್ಪಡಿಸುತ್ತಿದ್ದಾರೆ. ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಅವರು ಹೇಳಿದರು. ಸೆ.4 ರಂದು ನಡೆಯುವ ಸಮಾವೇಶವು ಯಾವುದೇ […]

ಸಿಎಂ ಆಕಾಶ ಮಾರ್ಗದಾರಿ-ವಿಶ್ವನಾಥ್ ಟೀಕೆ

ಸಿಎಂ ಆಕಾಶ ಮಾರ್ಗದಾರಿ-ವಿಶ್ವನಾಥ್ ಟೀಕೆ

ರಾಯಚೂರು: 371 ಜೆ ಕಲಂ ಅಡಿಯಲ್ಲಿ ಹೈ-ಕ ಭಾಗದ ಆಕಾಂಕ್ಷಿಗಳಿಗೆ ಎ ಶ್ರೇಣಿಯ ಹುದ್ದೆಗಳನ್ನು ಮಿಸಲಿರಿಸಿಲ್ಲ. ಸ್ಥಳೀಯವಾಗಿ ಶೇ80 ರಷ್ಟು ಹೈ-ಕ ಭಾಗವಲ್ಲದ ಪ್ರದೇಶದಲ್ಲಿ ಶೇ.8ರಷ್ಟು ಹುದ್ದೆಗಳಲ್ಲಿ ಮಿಸಲಾತಿ ನೀಡಬೇಕೆಂಬ ನಿಯಮವಿದೆ. ಆದರೆ ಶೇ.8ರಲ್ಲಿ ಬರುವ ಎ ಶ್ರೇಣಿಯ ಹುದ್ದೆಗಳಾದ ಸಹಾಯಕ ಆಯುಕ್ತರು, ತಹಶೀಲ್ದಾರರ ಪದವಿಗಳಿಗೆ ಹೈ-ಕ ಭಾಗದವರನ್ನು ನಿರ್ಲಕ್ಷಿಸಲಾಗಿದೆ ಎಂದು ಮಾಜಿ ಸಂಸದ ಹಾಗೂ ಜೆಡಿಎಸ್ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್. ವಿಶ್ವನಾಥ್ ಆರೋಪಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ […]

ಬೀಳಗಿ ಕ್ಷೇತ್ರದಿಂದ ಸ್ಪರ್ಧೆ ಖಚಿತ: ರಾಮಾರೂಢ ಶ್ರೀ

ಬೀಳಗಿ ಕ್ಷೇತ್ರದಿಂದ ಸ್ಪರ್ಧೆ ಖಚಿತ: ರಾಮಾರೂಢ ಶ್ರೀ

ಬಾಗಲಕೋಟೆ: ಮಠದ ಭಕ್ತರ ಆಶಯದಂತೆ ಮುಂಬರುವ ವಿಧಾನ ಸಭೆ ಚುನಾವಣೆಗೆ ಬೀಳಗಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ನಾನೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ರಾಮಾರೂಢ ಮಠದ ಪರಮರಾಮಾರೂಢ ಶ್ರೀಗಳು ಹೇಳಿದರು. ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿಯಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಸಲ್ಲಿಸಿರುವೆ. ಮನವಿ ಸಲ್ಲಿಸಿ ಆರು ತಿಂಗಳಗಾಗಿದ್ದು, ಅವರಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಅನೇಕ […]

ಅಮೀತ್ ಶಾಗೆ ತಾಕತ್ತಿದ್ದರೆ ಮುಖ್ಯಮಂತ್ರಿ, ಸಚಿವರ ಭ್ರಷ್ಟಾಚಾರದ ದಾಖಲೆ ಬಹಿರಂಗ ಪಡಿಸಲಿ: ಡಾ. ಜಿ. ಪರಮೇಶ್ವರ್

ಅಮೀತ್ ಶಾಗೆ ತಾಕತ್ತಿದ್ದರೆ ಮುಖ್ಯಮಂತ್ರಿ, ಸಚಿವರ ಭ್ರಷ್ಟಾಚಾರದ ದಾಖಲೆ ಬಹಿರಂಗ ಪಡಿಸಲಿ: ಡಾ. ಜಿ. ಪರಮೇಶ್ವರ್

 ಯಡಿಯೂರಪ್ಪನವರಿಗೆ ನೈತಿಕತೆಯಿದ್ದರೆ ಲೋಕಸಭೆ ಮುತ್ತಿಗೆ ಹಾಕಿ ರೈತರ ಸಾಲ ಮನ್ನಾ ಮಾಡಿಸಲಿ ಹಾವೇರಿ: ಇತ್ತೀಚಿಗೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮೀತ್ ಶಾ ಅವರು ಬಡವರ ಪರವಾದ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಜರಿದಿದ್ದಿರಿ, ನಿಮಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಹಾಗೂ ಸಚಿವರ ಭ್ರಷ್ಟಾಚಾರದ ದಾಖಲೆಗಳನ್ನು ಬಹಿರಂಗ ಪಡಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಬಹಿರಂಗ ಸವಾಲು ಹಾಕಿದರು. ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ  ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬೂತ್ […]

ರಾಹುಲ್ ಗಾಂಧಿಗೆ ದಲಿತ ಕುಟುಂಬದ ಹೆಣ್ಣು ಕೊಡಲು ನಾವ್ ರೆಡಿ: ಮಾಜಿ ಸಚಿವ ಕಾರಜೋಳ

ರಾಹುಲ್ ಗಾಂಧಿಗೆ ದಲಿತ ಕುಟುಂಬದ ಹೆಣ್ಣು ಕೊಡಲು ನಾವ್ ರೆಡಿ: ಮಾಜಿ ಸಚಿವ ಕಾರಜೋಳ

ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅವರಿಗೆ ದಲಿತ ಕುಟುಂಬದ ಹೆಣ್ಣು ಕೊಡಲು ನಾವ್ ರೆಡಿಯಾಗಿದ್ದೇವೆ ಸಂಬಂಧ ಬೆಳೆಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಸಮ್ಮತಿ ಇದೆಯೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಸವಾಲು ಹಾಕಿದರು. ಮಲ್ಲೇಶ್ವರಂನಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸ್ಲಂ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನೂ ಬಾಚುಲರ್ ಆಗಿದ್ದು,  ಸೋನಿಯಾ ಗಾಂಧಿ ಅವರು ದಲಿತರ ಜೊತೆ ಸಂಬಂಧ ಬೆಳಸಿ ಮೇಲ್ ಪಂಕ್ತಿ […]

ರಾಜ್ಯದಲ್ಲಿ 49 ಪಟ್ಟಣಗಳಿಗೆ ತಾಲೂಕು ಭಾಗ್ಯ ನೀಡಲು ಸಂಪುಟ ಒಪ್ಪಿಗೆ

ರಾಜ್ಯದಲ್ಲಿ 49 ಪಟ್ಟಣಗಳಿಗೆ ತಾಲೂಕು ಭಾಗ್ಯ ನೀಡಲು ಸಂಪುಟ ಒಪ್ಪಿಗೆ

ಕುಡಚಿ, ದಾಂಡೇಲಿ, ಅಳ್ನಾವರ, ಬ್ರಹ್ಮಾವರ, ಮೂಡಬಿದರೆ ಸೇರಿ 49 ಪಟ್ಟಣಗಳಿಗೆ ತಾಲೂಕು ಭಾಗ್ಯ ಬೆಂಗಳೂರು: ರಾಜ್ಯದಲ್ಲಿ 49 ಹೊಸ ತಾಲೂಕು ರಚನೆಗೆ  ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಅನುಮೋದನೆ ನೀಡಲಾಗಿದೆ. ಈ ಸಂಬಂಧ ಗಡಿ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ನೋಡಿಕೊಂಡು ಅಧಿಕೃತ ಆದೇಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರಾಜ್ಯದಲ್ಲಿ ನೂತನ 49 ತಾಲ್ಲೂಕು ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.   […]

ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಾವೇಶಕ್ಕೆ ಹರಿದು ಬಂದ ಜನ ಸಾಗರ

ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಾವೇಶಕ್ಕೆ ಹರಿದು ಬಂದ ಜನ ಸಾಗರ

ಹಾವೇರಿ: ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬೂತ್  ಕಮೀಟಿ, ಸದಸ್ಯರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹ್ಮದ, ಜಿಲ್ಲೆಯ ಶಾಸಕರಾದ ಮನೋಹರ ತಹಶೀಲ್ದಾರ್ , ಬಸವರಾಜ ಶಿವಣ್ಣನವರ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಂಸದರಾದ ಮಂಜುನಾಥ ಕುನ್ನೂರು, ಐ.ಜಿ. ಸನದಿ, ಮಾಜಿ ಶಾಸಕ ಬಿ.ಸಿ. ಪಾಟೀಲ, ಜಿಲ್ಲಾ […]