ಮೆಟ್ರೋ ನಿಲ್ದಾಣದಲ್ಲಿನ ಹಿಂದಿ ಬೋರ್ಡ್ ಗಳಿಗೆ ಮಸಿ ಬಳಿದ ಕರವೇ

ಮೆಟ್ರೋ ನಿಲ್ದಾಣದಲ್ಲಿನ ಹಿಂದಿ ಬೋರ್ಡ್ ಗಳಿಗೆ ಮಸಿ ಬಳಿದ ಕರವೇ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹಿಂದಿ ಹೆರಿಕೆ ವಿಚಾರ ಕೈಬಿಡಬೇಕೆಂದು ಆಗ್ರಹಿಸಿ ಗುರವಾರ ಬೆಳಿಗ್ಗೆ ಕರವೇ ಕಾರ್ಯಕರ್ತರು ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ಬೋರ್ಡ್ ಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಪೀಣ್ಯ, ದೀಪಾಂಜಲಿ ನಗರ, ಹಲಸೂರ ನಿಲ್ದಾಣಗಳಲ್ಲಿ ಕಾರ್ಯಕರ್ತರು ಮಸಿ ಬೆಳೆದಿದ್ದು, ಕೆ.ಆರ್‍. ಮಾರ್ಕೆಟ್‍, ರಾಜಾಜಿನಗರದ  ನಿಲ್ದಾಣಗಳಲ್ಲಿ  ಮಸಿ ಬಳಿಯಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಮ್ಮ ಮೆಟ್ರೋದಲ್ಲಿ ಹಿಂದಿ ಬಾಷೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆ: ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಬರೆದ ಪತ್ರಕ್ಕೆ ಆಕ್ಷೇಪ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಹತ್ಯೆ: ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಬರೆದ ಪತ್ರಕ್ಕೆ ಆಕ್ಷೇಪ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಹತ್ಯೆಗಳನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ರಾಜನಾಥ್ ಸಿಂಗ್‍ಗೆ ಬರೆದ ಪತ್ರ ವಿವಾದ ಸೃಷ್ಟಿಸಿದೆ. ಸಂಘ ಪರಿವಾರದವರನ್ನೇ ಗುರಿಯಾಗಿಟ್ಟುಕೊಂಡು ಹತ್ಯೆಗಳು ನಡೆಯುತ್ತಿವೆ ಎಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವುದು ತೀವ್ರ ವಿವಾದ ಎಬ್ಬಿಸಿದೆ.  ಪತ್ರದಲ್ಲಿ 23 ಮಂದಿ ಹತ್ಯೆಗೀಡಾದವರ ಹೆಸರಿದ್ದು, ಇದರಲ್ಲಿ ಕೊಲೆಯಾದವರು, ಬದುಕಿರುವವರ ಹೆಸರನ್ನೂ ಸೇರಿಸಲಾಗಿದೆ ಎಂದು ಗೊತ್ತಾಗಿದೆ.   ಕೊಲೆಗೀಡಾದವರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಶೋಕ್ ಪೂಜಾರಿ ಹಲ್ಲೆಯಿಂದ ಗಾಯಗೊಂಡು […]

ಮಹದಾಯಿ ಮಾತುಕತೆ ಪ್ರಸ್ತಾವಕ್ಕೆ ಗೋವಾ ಸಚಿವರ ಹೇಳಿಕೆ: ಸಚಿವ ಜಯಚಂದ್ರ ವಿರೋಧ

ಮಹದಾಯಿ ಮಾತುಕತೆ ಪ್ರಸ್ತಾವಕ್ಕೆ ಗೋವಾ ಸಚಿವರ ಹೇಳಿಕೆ: ಸಚಿವ ಜಯಚಂದ್ರ ವಿರೋಧ

ಬೆಂಗಳೂರು: ಮಹದಾಯಿ ಕುಡಿಯುವ ನೀರು ಯೋಜನೆ ಜಾರಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಮುಂದಿಟ್ಟಿರುವ ಮಾತುಕತೆ ಪ್ರಸ್ತಾಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಗೋವಾ ಸರ್ಕಾರದ ನಿಲುವಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ಗಾಂಧಿಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ನೀರಾವರಿ ವಿಷಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವ ಉದಾಹರಣೆಗಳಿವೆ.  ಆದರೆ ಗೋವಾ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದೇ,  ಸಮಸ್ಯೆಯ ಕುರಿತು ಚರ್ಚೆಯೇ ಸಾಧ್ಯವಿಲ್ಲ ಎಂದು ಹೇಳಿರುವುದು […]

ಚಾಲಕನ ಕೈಗೆ ಶೂ ನೀಡಿದ ನೀರಾವರಿ ಅಧಿಕಾರಿ, ವಿಐಪಿ ಸಂಸ್ಕೃತಿ ತಾಂಡವ

ಚಾಲಕನ ಕೈಗೆ ಶೂ ನೀಡಿದ ನೀರಾವರಿ ಅಧಿಕಾರಿ, ವಿಐಪಿ ಸಂಸ್ಕೃತಿ ತಾಂಡವ

ಬೆಳಗಾವಿ: ಇಲ್ಲಿನ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‍  ಕೃಷ್ನೋಜಿ ರಾವ್  ತನ್ನ ಕಾರು ಚಾಲಕನ ಕೈಯಲ್ಲಿ ಶೂ  ಹಿಡಿದುಕೊಳ್ಳಲು ನೀಡಿದ್ದು, ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಬುಧವಾರ ಕಳಸಾ ನಾಲೆಯ ಪರಿಶೀಲನೆ ತೆರಳಿದ್ದಾಗ ಕಳೆದ ಎರಡು ದಿನದಿಂದ ಸುರಿದ ಮಳೆಗೆ ಕೆಸರು ನೀರು ನಿಂತಿತ್ತು. ಈ ವೇಳೆ ಅಧಿಕಾರಿ ಶೂ ಬಿಚ್ಚಿ ತನ್ನ ಕಾರು ಚಾಲಕನ ಕೈಗೆ ಹಿಡಿದುಕೊಳ್ಳಲು ಕೊಟ್ಟಿದ್ದಾರೆ. ಈ ದೃಶ್ಯ ಮಾಧ್ಯಮಗಳಲ್ಲಿ ಸೆರೆಯಾಗಿದೆ. ಅಲ್ಲದೆ ಕಾರು […]

ಬೆಳಗಾವಿ: ಬೆಂಕಿ ಹೊತ್ತಿಕೊಂಡು ಚಲಿಸುವ ಕಾರು ಭಸ್ಮ

ಬೆಳಗಾವಿ:  ಬೆಂಕಿ ಹೊತ್ತಿಕೊಂಡು ಚಲಿಸುವ ಕಾರು ಭಸ್ಮ

ಬೆಳಗಾವಿ: ಇಲ್ಲಿಯ ಕೋಟೆ ಕೆರೆ ಬಳಿ ಚಲಿಸುತ್ತಿದ್ದ ಕಾರಿಗೆ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡು, ಸುಟ್ಟು ಭಸ್ಮವಾಗಿದೆ.      ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಮಾಲಿಕ ಮತ್ತು ಮಾರಿಹಾಳ ಪೊಲೀಸ್ ಠಾಣೆಯ ಮುಖ್ಯ ಪೇದೆ ದಿವಟೆ ಕೆಳಗಿಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯಲ್ಲಿ ಭಸ್ಮವಾದ ಇಂಡಿಕಾ ಕಾರು ಮಾರಿಹಾಳ ಪೊಲೀಸ್ ಠಾಣೆಯ ಮುಖ್ಯ ಪೇದೆ ದಿವಟೆ ಎಂಬುವರಿಗೆ ಸೇರಿದ್ದು ಎಂದು ಗೊತ್ತಾಗಿದೆ.  ಕರ್ತವ್ಯ ಮುಗಿಸಿ ಕಿತ್ತೂರಿನಿಂದ ಬೆಳಗಾವಿಗೆ ವಾಪಸ್ಸಾಗುತ್ತಿದ್ದಾಗ, ಬೆಳಗಾವಿ ಪ್ರವೇಶ ದ್ವಾರದಲ್ಲೇ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ. […]

ರಾಜ್ಯ ಸರ್ಕಾರದ ಏನಿದ್ದರೂ ರಾಷ್ಟ್ರಧ್ವಜಕ್ಕೆ ಮೊದಲ ಆದ್ಯತೆ: ಸಿಎಂ ಸಿದ್ಧರಾಮಯ್ಯ

ರಾಜ್ಯ ಸರ್ಕಾರದ ಏನಿದ್ದರೂ ರಾಷ್ಟ್ರಧ್ವಜಕ್ಕೆ ಮೊದಲ ಆದ್ಯತೆ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಕನ್ನಡ ನಾಡಿನ ಜನರ ಬಹುದಿನಗಳ ಬೇಡಕೆಯಾಗಿದ್ದ ಕರ್ನಾಟಕ ರಾಜ್ಯಕ್ಕಾಗಿ ಪ್ರತ್ಯೇಕ  ಧ್ವಜದ ವಿನ್ಯಾಸಕ್ಕಾಗಿ ಸಮಿತಿಯೊಂದನ್ನು ರಚಿಸಿ ವಿವಾದ ಹುಟ್ಟಿದ ನಂತರ ಮುಖ್ಯಮಂತ್ರಿ  ಸಿದ್ಧರಾಮಯ್ಯ ಅವರು ಸ್ಪಷ್ಟನೆ ನೀಡಿ ರಾಜ್ಯ ಸರ್ಕಾರದ ಏನಿದ್ದರೂ ಮೊದಲ ಆದ್ಯತೆ ರಾಷ್ಟ್ರಧ್ಜಕ್ಕೆ ಇದೆ ಎಂದು ಹೇಳಿದರು.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ  ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಪಕ್ಷದವರು ಸುಖಾ ಸುಮ್ಮನೆ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ.  ಅಸ್ತಿತ್ವದಲ್ಲೇ ಇಲ್ಲದ ಕಾನೂನುಗಳನ್ನು ಪ್ರಸ್ತಾಪ ಮಾಡಿ ಬಿಜೆಪಿ  ಮುಖಂಡರು ಅನಾವಶ್ಯಕವಾಗಿ ವಿವಾದ ಹುಟ್ಟು […]

ಹಿಂಡಲಗಾ ಜೈಲಿನಲ್ಲಿ ಪರಪ್ಪನ ಅಗ್ರಹಾರದ ಕೈದಿ ತೀವ್ರ ಅಸ್ವಸ್ಥ: ಖಾಸಗಿ ಚಿಕಿತ್ಸೆ ನಂತರ ಬೆಂಗಳೂರಿಗೆ ಶಿಪ್ಟ್

ಹಿಂಡಲಗಾ ಜೈಲಿನಲ್ಲಿ ಪರಪ್ಪನ ಅಗ್ರಹಾರದ ಕೈದಿ ತೀವ್ರ ಅಸ್ವಸ್ಥ: ಖಾಸಗಿ ಚಿಕಿತ್ಸೆ ನಂತರ ಬೆಂಗಳೂರಿಗೆ ಶಿಪ್ಟ್

ಬೆಳಗಾವಿ: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತಂದಿದ್ದ ಮೂವರು ಕೈದಿಗಳ ಪೈಕಿ  ಅನಂತಮೂರ್ತಿ ಹೆಸರಿನ ಒಬ್ಬ ಕೈದಿ ಮಂಗಳವಾರ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಪರಪ್ಪನ ಅಗ್ರಹಾರದ ಭ್ರಷ್ಟಾಚಾರದ ಕುರಿತು ಡಿಐಜಿ ಡಿ.ರೂಪಾ ವರದಿ ಸಲ್ಲಿಸಿದ ನಂತರ, ಈ ವರದಿಯ ಪರ ಇದ್ದಾರೆ ಎಂದು ಹಲವು  ಕೈದಿಗಳನ್ನು ಹಿಂಡಲಗಾ ಮತ್ತು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಹಿಂಡಲಗಾ ಜೈಲಿನ ಆವರಣಕ್ಕೆ ಬಂದಿಳಿದ ಕೈದಿಗಳು ಕುಂಟುತ್ತ, ನಡೆಯಲೂ […]

ಕೋಮು ಗಲಭೆಗೆ ಕಾಂಗ್ರೆಸ್ ನೇರ ಕಾರಣ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಮಂಗಳೂರಿನಲ್ಲಿ ಆರ್.ಎಸ್.ಎಸ್.ನ ಮುಖಂಡ ಶರತ್ ಮಡಿವಾಳ ಅವರನ್ನ ಕೊಲೆಗೈದ ಅಪರಾಧಿಗಳನ್ನ ಕೂಡಲೇ ಬಂಧಿಸಬೇಕು, ಪಿ.ಎಫ್.ಐ ಮತ್ತು ಕೆಡಿಎಫ್ ಸಂಘಟನೆಯನ್ನ ನಿಷಧಿಸಬೇಕು,ನಿಷ್ಠಾವಂತ ಪೋಲೀಸರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಇಂದು ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯ ಹಾದಿ ತುಳಿದಿರುವ ಸಿ.ಎಂ.ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿದೆ. ಶರತ್ ಮಡಿವಾಳರ ಹತ್ಯೆ ನಡೆದು 10ದಿನ ಕಳೆದರೂ ಸರ್ಕಾರ ಅಪರಾಧಿಗಳನ್ನು ಹಿಡಿಯುವಲ್ಲಿ ಸಂಪೂರ್ಣವಾಗಿ […]

ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ, ಹಲವೆಡೆ ರಸ್ತೆ ಸಂಚಾರ ಸ್ಥಗಿತ

ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ, ಹಲವೆಡೆ ರಸ್ತೆ ಸಂಚಾರ ಸ್ಥಗಿತ

ಬೆಳಗಾವಿ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು,ಜನ ಜೀವನ ಸಂಪೂರ್ಣ  ಅಸ್ತವ್ಯಸ್ತಗೊಂಡಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಸಂಚಾರಕ್ಕೆ ಭಾರಿ ಅಡೆತಡೆಯಾಗಿದೆ.  ಹಲವೆಡೆ ಮನೆಗಳು, ಕಟ್ಟಡಗಳು ಕುಸಿದಿದ್ದು, ಗಿಡಮರಗಳು ನೆಲಕ್ಕುರುಳಿವೆ. ಘಟ್ಟ ಪ್ರದೇಶಗಳೂ ಸೇರಿ ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಖಾನಾಪೂರ ತಾಲೂಕಿನ ಕಣಕುಂಬಿ  ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಮಳೆಯ ಪ್ರವಾಹದಲ್ಲಿ  ಕೊಚ್ಚಿಹೋಗಿದ್ದು, ರಸ್ತೆಯಲ್ಲಿ ಆಳ ಗುಂಡಿಗಳು ನಿರ್ಮಾಣವಾಗಿವೆ. ಕಣಕುಂಬಿ ಬಳಿ ಪ್ರವಾಹದಲ್ಲಿ ಟೆಂಪೋ ಟ್ರಾಕ್ಸ್ ವಾಹನವೊಂದು ಮಂಗಳವಾರ […]

ಕರ್ನಾಟಕ ಪ್ರತ್ಯೇಕ ಧ್ವಜ ಬೇಡಿಕೆ ಖಂಡನೀಯವಾಗಿದ್ದು, ಗಂಭೀರವಾಗಿ ಪರಿಗಣಿಸಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ

ಕರ್ನಾಟಕ ಪ್ರತ್ಯೇಕ ಧ್ವಜ ಬೇಡಿಕೆ ಖಂಡನೀಯವಾಗಿದ್ದು, ಗಂಭೀರವಾಗಿ ಪರಿಗಣಿಸಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ

      ಸಮಿತಿ ರಚಿಸಿದ ಬೆನ್ನಲ್ಲೆ ಶಿವಸೇನೆ ನಾಯಕರ ಕ್ಯಾತೆ   ಮುಂಬೈ: ಕರ್ನಾಟಕ ರಾಜ್ಯಕ್ಕೆ  ಪ್ರತ್ಯೇಕ  ಧ್ವಜದ ವಿನ್ಯಾಸಕ್ಕಾಗಿ ಮುಖ್ಯಮಂತ್ರ ಸಿದ್ಧರಾಮಯ್ಯ ಸಮಿತಿ ರಚಿಸುವುದನ್ನು ಶಿವಸೇನೆ ವಿರೋಧ ವ್ಯಕ್ತಪಡಿಸಿ  ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದೆ.  ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಶಿವಸೇನೆ ನಾಯಕಿ  ಮನೀಶಾ ಕಾಯಂಡೆ, ಪ್ರತ್ಯೇಕ ಧ್ವಜಕ್ಕೆ ಆಗ್ರಹ ವಿಚಾರ ಖಂಡನೀಯವಾದದ್ದು. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಮಧ್ಯಪ್ರವೇಶ ಮಾಡಬೇಕಿದೆ. ಕರ್ನಾಟಕ ಸರ್ಕಾರಕ್ಕೆ ತಕ್ಕ ಪಾಠ […]