ನಿಷ್ಠಾವಂತ ಪೊಲೀಸ್‍ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ “ಭಾಗ್ಯ” ಕರುಣಿಸುತ್ತಿದೆ: ಕೆ.ಎಸ್.ಈಶ್ವರಪ್ಪ

ನಿಷ್ಠಾವಂತ ಪೊಲೀಸ್‍ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ “ಭಾಗ್ಯ” ಕರುಣಿಸುತ್ತಿದೆ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ರಾಜ್ಯ ಸರ್ಕಾರ ನಿಷ್ಠವಂತ ಪೊಲೀಸ ಅಧಿಕಾರಿಗಳಿಗೆ ಈಗ ಹೊಸದಾಗಿ ವರ್ಗಾವಣೆ ಭಾಗ್ಯವನ್ನು ಕರುಣಿಸುತ್ತಿದೆ  ಎಂದು  ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹದಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ  ಅಧಿಕಾರಿ ಡಿಐಜಿ ರೂಪಾ ಅವರಿಗೆ ವರ್ಗಾವಣೆ ಮಾಡುವ ಮೂಲಕ  ನಿಷ್ಠಾವಂತ ಅಧಿಕಾರಿಗಳ ಕೈಕಟ್ಟಿ ಹಾಕುತ್ತಿದ್ದಾರೆ.  ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಜನಪರ ಆಡಳಿತ ನೀಡುವಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. Views: 109

ಡಿಜಿಪಿ ರೂಪಾ ವರ್ಗಾವಣೆ ಖಂಡಿಸಿ 19ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಡಿಜಿಪಿ ರೂಪಾ ವರ್ಗಾವಣೆ ಖಂಡಿಸಿ 19ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು:  ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ಕುರಿತು ವರದಿ ನೀಡಿದ ಕಾರಾಗೃಹ ಡಿಜಿಪಿ ಡಿ.ರೂಪಾ ವರ್ಗಾವಣೆ ಖಂಡಿಸಿ ಬಿಜೆಪಿ ರಾಜ್ಯ ಘಟಕ ಜು.19ರಂದು ರಾಜ್ಯದಲ್ಲಿ  ಪ್ರತಿಭಟನೆ ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು, ಪ್ರಮುಖ ನಗರ, ಪಟ್ಟಣಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. Views: 173

ಜು.20ರಂದು ಜಿಲ್ಲಾ ಕೇಂದ್ರಗಳಲ್ಲಿ ಡಾ.ಅಂಬೇಡ್ಕರ್ ತಮಗಿದೋ ನಮನ ಕಾರ್ಯಕ್ರಮ

ಜು.20ರಂದು ಜಿಲ್ಲಾ ಕೇಂದ್ರಗಳಲ್ಲಿ ಡಾ.ಅಂಬೇಡ್ಕರ್ ತಮಗಿದೋ ನಮನ ಕಾರ್ಯಕ್ರಮ

ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126 ನೇ ಜನ್ಮ ವರ್ಷಾಚರಣೆ ನಿಮಿತ್ತ ಜುಲೈ 21ರಿಂದ 23ರವರೆಗೆ  ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಜು.20ರಂದು ಸಂಜೆ 5 ಗಂಟೆಗೆ ರಾಜ್ಯದ  ಜಿಲ್ಲಾ ಕೇಂದ್ರಗಳಲ್ಲಿ “ಡಾ.ಬಿ.ಆರ್. ಅಂಬೇಡ್ಕರ್- 126 ತಮಗಿದೋ ನಮ್ಮ ಗೌರವ ನಮನ” ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು   ಜಿಲ್ಲಾಧಿಕಾರಿ ಡಿ.ರಂದೀಪ್‌ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.  ರಾಜ್ಯದ ಎಲ್ಲಾ ಜಿಲ್ಲೆಗಳ ಕೇಂದ್ರದಲ್ಲಿ ಒಂದೇ ವೇಳೆ ಕಲಾವಿದರಿಂದ ಚರ್ಮವಾದ್ಯ ಮೇಳ ನಡೆಯಲಿದೆ.  ಸಂಜೆ […]

ರಾಜ್ಯಕ್ಕೆ ಪ್ರತ್ಯೇಕ ಧ್ವಜ ಚುನಾವಣೆ ಗಿಮಿಕ್ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯಕ್ಕೆ ಪ್ರತ್ಯೇಕ ಧ್ವಜ ಚುನಾವಣೆ ಗಿಮಿಕ್ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:  ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬುದು ಕನ್ನಡಿಗರ ಬೇಡಿಕೆ. ಕನ್ನಡದ ಧ್ವಜ ರಚಿಸಲು ಸಮಿತಿ ಮಾಡಲಾಗಿದೆಯೇ ಹೊರತು ಚುನಾವಣೆಗಾಗಿ ಸಮಿತಿ ರಚಿಸಿಲ್ಲ. ಅಷ್ಟಕ್ಕೂ ಚುನಾವಣೆ ಈಗ ಬಂದೇ ಬಿಟ್ಟಿದೆಯಾ, ಆದ್ದರಿಂದ ಇದು ಚುನಾವಣೆ ಗಿಮಿಕ್ ಹೇಗಾಗುತ್ತದೆ ಎಂದು   ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ವಿಶ್ವಕನ್ನಡ ಸಮ್ಮೇಳನದ ಪೂರ್ವಭಾವಿ ಸಭೆ ನಂತರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಡ ಎಂದು  ಬಿಜೆಪಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಇಂಥ ವಿಚಾರ […]

ಅಶ್ಲೀಲ ದೃಶ್ಯವುಳ್ಳ ಡಿವಿಡಿ ಮಾರಾಟ, ಒಬ್ಬನಿಗೆ 3 ತಿಂಗಳು ಜೈಲು ಶಿಕ್ಷೆ

ಅಶ್ಲೀಲ ದೃಶ್ಯವುಳ್ಳ ಡಿವಿಡಿ ಮಾರಾಟ, ಒಬ್ಬನಿಗೆ 3 ತಿಂಗಳು ಜೈಲು ಶಿಕ್ಷೆ

ದಾವಣಗೆರೆ: ಚಲನಚಿತ್ರದ ನಕಲಿ ಡಿವಿಡಿ ಮತ್ತು ಅಶ್ಲೀಲ ದೃಶ್ಯಗಳುಳ್ಳ ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ತಿಂಗಳ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಸ್ಥಳೀಯ 3ನೇ ಜೆಎಂಎಫ್‍ಸಿ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಶೇಖರಪ್ಪ ಶಿಕ್ಷೆಗೆ ಗುರಿಯಾದ ಆರೋಪಿ.  2009 ರಲ್ಲಿ ನಗರದ ಕೆ.ಆರ್. ರಸ್ತೆಯಲ್ಲಿ ನಾಗರಾಜ್ ಮತ್ತು ಶೇಖರಪ್ಪ ಎನ್ನುವವರು ನಕಲಿ ಡಿವಿಡಿ ಮತ್ತ  ಅಶ್ಲೀಲ ದೃಶ್ಯವುಳ್ಳ ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದಾಗ ಬಸವನಗರ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ […]

ಜುಲೈ ಕೊನೆಯೊಳಗೆ 10 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ: ಸಚಿವ ತನ್ವೀರ ಸೇಠ್

ಜುಲೈ ಕೊನೆಯೊಳಗೆ 10 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ: ಸಚಿವ ತನ್ವೀರ ಸೇಠ್

ದಾವಣಗೆರೆ: ರಾಜ್ಯದಲ್ಲಿ 10 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸುವ ಕುರಿತು ತಿಂಗಳ ಅಂತ್ಯದೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನದ ಉದ್ಘಾಟನೆಗೂ ಮುನ್ನ ನಗರದ ಮುಸ್ಲಿಂ ಹಾಸ್ಟೆಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಅಸ್ತು ಎಂದಿದ್ದು, ಬಜೆಟ್‍ನಲ್ಲಿ […]

ರಾಜ್ಯದ ವಕ್ಪ್ ಆಸ್ತಿ ರಕ್ಷಣೆಗೆ ವಿಶೇಷ ಗಮನ: ಸಚಿವ ತನ್ವೀರ ಸೇಠ

ರಾಜ್ಯದ ವಕ್ಪ್ ಆಸ್ತಿ ರಕ್ಷಣೆಗೆ ವಿಶೇಷ ಗಮನ: ಸಚಿವ ತನ್ವೀರ ಸೇಠ

ದಾವಣಗೆರೆ: ರಾಜ್ಯದಲ್ಲಿನ ವಕ್ಫ್ ಆಸ್ತಿ ರಕ್ಷಣೆಗೆ ವಿಶೇಷ ಗಮನ ಹರಿಸಲಾಗಿದೆ. ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಸರ್ವೇ ಕಾರ್ಯ ಕೈಗೊಂಡಿದ್ದು, ಈಗಾಗಲೇ ಶೇ. 60ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆಸ್ತಿ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ವಿಶೇಷ ಆಂದೋಲನ ನಡೆಸಲಾಗುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ಪ್ರತಿ ಜಿಲ್ಲೆಗೆ ಇಬ್ಬರು ನಿವೃತ್ತ ನೌಕರರ ಸೇವೆ ಪಡೆಯಲಾಗುತ್ತಿದೆ. ತಕ್ಷಣವೇ ಕ್ರಮ […]

ಕನ್ನಡ ನಾಡ ಧ್ವಜ ವಿನ್ಯಾಸಗೊಳಿಸಲು ಸಮಿತಿ ರಚನೆ

ಕನ್ನಡ ನಾಡ ಧ್ವಜ ವಿನ್ಯಾಸಗೊಳಿಸಲು ಸಮಿತಿ ರಚನೆ

  ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ವಿನ್ಯಾಸ ರಚಿಸಲು 9 ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ.   ಈ ಸಂಬಂಧ ಜೂನ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು, ಈ ಸಮಿತಿಯಲ್ಲಿ ಹಿರಿಯ ಸಾಹಿತಿಗಳು ಹಾಗೂ ಚಿಂತಕರು ಸದಸ್ಯರಾಗಿರಲಿದ್ದಾರೆ.  ಈ ಸಮಿತಿಯು ಅಧ್ಯಯನ ನಡೆಸಿ ಹಾಲಿ ಇರುವ ಧ್ವಜವನ್ನೇ ಅಂಗೀಕರಿಸಬೇಕೆ, ಇಲ್ಲವೇ ಹೊಸದೊಂದು ಧ್ವಜವನ್ನು ಮಾನ್ಯ ಮಾಡಬೇಕೆ ಎಂಬುದರ […]

ಮೈದುಂಬಿಕೊಂಡ ಗೋಕಾಕ ಜಲಪಾತ ಈಗ ಕೈ ಬೀಸಿ ಕರೆಯುತ್ತಿದೆ

ಮೈದುಂಬಿಕೊಂಡ ಗೋಕಾಕ ಜಲಪಾತ ಈಗ ಕೈ ಬೀಸಿ ಕರೆಯುತ್ತಿದೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹಲವೆಡೆ ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳ- ಕೊಳ್ಳ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿರಣ್ಯಕೇಶಿ ನದಿ ಹಿನ್ನೀರಿನಿಂದ  ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಗೋಕಾಕ ಜಲಪಾತದ  ಸೌಂದರ್ಯ ಪುಟಿದೆದ್ದಿದೆ. ಮೈದುಂಬಿಕೊಂಡ ಗೋಕಾಕ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಗೋಕಾಕ ಜಲಪಾತವನ್ನು ಸಮೀಪದಿಂದ ನೋಡಲು ಮತ್ತು ನೀರು ಧುಮ್ಮಿಕ್ಕುವ ಸೊಬಗು ಸವಿಯಲು ಅನುಕೂಲವಾಗುವಂತೆ ಕೊಳ್ಳದಲ್ಲಿ ಇಳಿಯುವ ದಾರಿಯನ್ನು ಹೊಸದಾಗಿ […]

ದಾವಣಗೆರೆ: ಕಾಲೇಜು ವಿದ್ಯಾರ್ಥಿಗಳಿದ್ದ ಆಟೋ ಪಲ್ಟಿ

ದಾವಣಗೆರೆ: ಕಾಲೇಜು ವಿದ್ಯಾರ್ಥಿಗಳಿದ್ದ ಆಟೋ ಪಲ್ಟಿ

ಹದಿನೈದು ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ ದಾವಣೆಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದ ಬಳಿ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೋಗೆಒಮನಿ ಡಿಕ್ಕಿ ಹೊಡೆದ ಪರಿಣಾಮ  ಪಲ್ಟಿಯಾಗಿ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದ ಆಟೋ ಮೆದಿಕೆರೆ ಗ್ರಾಮದಿಂದ ಸಂತೆಬೆನ್ನೂರು  ಗ್ರಾಮದ ಕಾಲೇಜಿಗೆ ತೆರಳುತ್ತಿತ್ತು ಹಿಂದುಗಡೆಯಿಂದ ಓಮಿನಿ ವ್ಯಾನ್ ಡಿಕ್ಕಿ ಹೊಡೆದಿದ್ದರಿಂದ ಆಟೋ ಪಲ್ಟಿಯಾಗಿದೆ.  ಗಾಯಗಳಾದ ವಿದ್ಯಾರ್ಥಿಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.   ಘಟನಾ ಸ್ಥಳಕ್ಕೆ ಸಂತೆಬೆನ್ನೂರು ಠಾಣಾ […]